Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಸವಿರುಚಿಯ ಚಿಕನ್ ಚಿಲ್ಲಿ ರೆಸಿಪಿ
ಚಿಕನ್ ನಿಂದ ಸಾರು, ಗ್ರೇವಿ, ಸ್ಟ್ಯಾಕ್ಸ್ ಐಟಮ್ , ಬಿರಿಯಾನಿ ಹೀಗೆ ಅನೇಕ ಬಗೆಯ ಅಡುಗೆಗಳನ್ನು ತಯಾರಿಸಬಹುದು. ಚಿಕನ್ ನಿಂದ ವಿಧ-ವಿಧದದ ಸ್ಟ್ರಾಟರ್ಸ್ ತಯಾರಿಸಬಹುದು.
ಅವುಗಳಲ್ಲಿ ಚಿಕನ್ ಚಿಲ್ಲಿ ತುಂಬಾ ಜನಪ್ರಿಯವಾದ ನಾನ್ ವೆಜೆಟೇರಿಯನ್ ಸ್ನ್ಯಾಕ್ಸ್ ಐಟಮ್ ವಾಗಿದೆ. ಈ ಚಿಕನ್ ಚಿಲ್ಲಿಯನ್ನು ಮನೆಯಲ್ಲಿಯೇ ತಯಾರಿಸಬಹುದುದು. ನೀವು ಈ ಚಿಕನ್ ಚಿಲ್ಲಿ ಮಾಡಬಯಸುವುದಾದರೆ ರೆಸಿಪಿ ನೋಡಿ ಇಲ್ಲಿದೆ.

ಬೇಕಾಗುವ ಸಾಮಾಗ್ರಿಗಳು
ಅರ್ಧ ಕೆಜಿ ಬೋನ್ ಲೆಸ್ ಚಿಕನ್
2 ಚಮಚ ಸೋಯಾ
ಮೊಟ್ಟೆ 2
2 ಚಮಚ ಜೋಳದ ಹಿಟ್ಟು
2 ಈರುಳ್ಳಿ
ಹಸಿ ಮೆಣಸು (ಖಾರಕ್ಕೆ ತಕ್ಕಷ್ಟು)
1. ದುಂಡು ಮೆಣಸಿನ ಕಾಯಿ 1
1 ಚಮಚ ಬೆಳ್ಳುಳ್ಳಿ ಪೇಸ್ಟ್
ರುಚಿಗೆ ತಕ್ಕ ಉಪ್ಪು
ಅರ್ಧ ಚಮಚ ಕರಿ ಮೆಣಸಿನ ಪುಡಿ
1 ಚಮಚ ಸಕ್ಕರೆ
ಚಿಟಿಕೆಯಷ್ಟು ಅಜ್ವೈನ್
1 ಚಮಚ ಎಣ್ಣೆ
ಎಣ್ಣೆ (ಫ್ರೈ ಮಾಡಲು)
ನಿಂಬೆ ರಸ 1 ಚಮಚ
ತಯಾರಿಸುವ ವಿಧಾನ:
1. ಒಂದು ಬಟಲಿನಲ್ಲಿ ಸೋಯಾ ಸಾಸ್, 1 ಚಮಚ ಜೋಳದ ಹಿಟ್ಟು, ಉಪ್ಪು, ಮೊಟ್ಟೆ ಹಾಕಿ ಚೆನ್ನಾಗಿ ಕದಡಿ ಅದರಲ್ಲಿ ಕ್ಲೀನ್ ಮಾಡಿದ ಚಿಕನ್ ತುಂಡುಗಳನ್ನು ಹಾಕಿ 10-15 ನಿಮಿಷ ಕಾಲ ಇಡಬೇಕು.
2. ಬಾಣಲೆಯಯಲ್ಲಿ ಎಣ್ಣೆಯನ್ನು ಹಾಕಿ ಎಣ್ಣೆ ಕುದಿ ಬರುವಾಗ ಅದರಲ್ಲಿ ಚಿಕನ್ ಹಾಕಿ ಕಂದು ಬಣ್ಣ ಬರುವವರೆಗೆ ಕರಿಯಬೇಕು. ನಂತರ ಅವುಗಳನ್ನು ತೆಗದು ಒಂದು ಬಟ್ಟಲಿನಲ್ಲಿ ಹಾಕಿಡಿ.
3. ಈಗ ಪಾತ್ರೆಯನ್ನು ಉರಿ ಮೇಲೆ ಇಟ್ಟು ಅದಕ್ಕೆ 1 ಚಮಚ ಎಣ್ಣೆ ಹಾಕಿ , ಎಣ್ಣೆ ಬಿಸಿಯಾದಾಗ ಕತ್ತರಿಸಿದ ಈರುಳ್ಳಿ ಹಾಕಿ ಕಂದು ಬಣ್ಣ ಬರುವವರೆಗೆ ಹುರಿಯಬೇಕು. ನಂತರ ಕತ್ತರಿಸಿದ ದುಂಡು ಮೆಣಸಿನ ಕಾಯಿ ಹಾಕಿ, ಹಸಿ ಮೆಣಸಿನ ಕಾಯಿ ಮತ್ತು ಬೆಳ್ಳುಳ್ಳಿ ಪೇಸ್ಟ್ ಹಾಗೂ ಚಿಟಿಕೆಯಷ್ಟು ಅಜ್ವೈನ್, 1 ಚಮಚ ಜೋಳದ ಹಿಟ್ಟು, ರುಚಿಗೆ ತಕ್ಕ ಉಪ್ಪು ಹಾಕಿ 2-3 ನಿಮಿಷ ಚೆನ್ನಾಗಿ ಹುರಿಯಬೇಕು, ನಂತರ ಸೋಯಾ ಸಾಸ್ , ಕರಿ ಮೆಣಸಿನ ಪುಡಿ ಹಾಕಿ ಅರ್ಧ ಕಪ್ ನೀರು ಸೇರಸಿ ಕುದಿಸಿ.
4. ಮಿಶ್ರಣ ಸ್ವಲ್ಪ ಗಟ್ಟಿಯಾದಾಗ ಫ್ರೈ ಮಾಡಿದ ಚಿಕನ್ ತುಂಡುಗಳನ್ನು ಹಾಕಿ ಮಿಕ್ಸ್ ಮಾಡಿ 2 ನಿಮಿಷ ಬಿಸಿ ಮಾಡಿ ನಂತರ ನಿಂಬೆ ರಸ ಹಿಂಡಿದರೆ ಸವಿರುಚಿಯ ಚಿಕನ್ ಚಿಲ್ಲಿ ರೆಡಿ.



Click it and Unblock the Notifications
