Latest Updates
-
ಅರ್ಧದಷ್ಟು ಭಾರತೀಯರಲ್ಲಿ 6 ಗಂಟೆಗೂ ಕಡಿಮೆ ನಿದ್ರೆ: ಸಮೀಕ್ಷೆಯಲ್ಲಿದೆ ಆತಂಕಕಾರಿ ವಿಚಾರ! -
ವಿವಾಹ ಯೋಗ ಕೂಡುವ ಸಾಧ್ಯತೆ ಇದೆ! ಸಂಗಾತಿಗೆ ಗಿಫ್ಸ್ ನೀಡಬಹುದು -
ಮಹಿಳೆಯರು ಕಾಲುಂಗುರ ಏಕೆ ಧರಿಸಬೇಕು? ಎಷ್ಟು ಸುತ್ತು ನಿಮ್ಗೆ ಯಶಸ್ಸು ತರುತ್ತೆ? ರಹಸ್ಯ ತಿಳಿಯಿರಿ -
March 14 Horoscope: ಪ್ರಯಾಣಗಳ ಮಾಡುವ ದಿನವಾಗಲಿದೆ! -
ಸಿಲಿಂಡರ್ 3 ತಿಂಗಳು ಬರಬೇಕೆ? ಇನ್ಮುಂದೆ ಗ್ಯಾಸ್ ಚಿಂತೆ ಬೇಡ.. LPG ಉಳಿಸಲು ಇಲ್ಲಿದೆ 5 ಸ್ಮಾರ್ಟ್ ಟಿಪ್ಸ್ -
ಅಕ್ಕಿ ಬೇಡ, ಉದ್ದಿನಬೇಳೆ ಬೇಡ.. 15 ನಿಮಿಷದ ಹೆಸರು ಬೇಳೆ-ತರಕಾರಿ ಇಡ್ಲಿ! ಉಳಿದ ಇಡ್ಲಿ ಫ್ರೆಶ್ ಆಗಿಡೋದು ಹೇಗೆ? -
ಗ್ಯಾಸ್ ಇಲ್ವಾ? ಚಿಂತೆ ಬೇಡ.. ಒಲೆ ಹಚ್ಚದೇ ಮಾಡುವ 5 ಆರೋಗ್ಯಕರ ಊಟಗಳಿವು! -
ಮಿಕ್ಸಿಯಲ್ಲೇ ಮಾಡಿ ಕಬ್ಬಿನ ಹಾಲು! ಕಬ್ಬು ಇಲ್ಲದೆಯೇ ಶುದ್ಧವಾದ ಹಾಲು ಮಾಡೋದು ಹೇಗೆ? ರಸ್ತೆ ಬದಿಗಿಂತ ರುಚಿ -
ಮಘಾ ನಕ್ಷತ್ರಕ್ಕೆ ಕೇತು.. ಈ ಎಲ್ಲಾ ರಾಶಿಯವರ ಜೀವನದಲ್ಲಿ ಭಾರಿ ಬದಲಾವಣೆ! ಯಾರಿಗೆ ಶುಭ? ಯಾರಿಗೆ ಸಮಸ್ಯೆ? -
10 ನಿಮಿಷಗಳ ಅಪ್ಪೆ.. ಹೆಸರುಕಾಳು ಮತ್ತು ಬಟಾಣಿ ಬಳಸಿ ಮಾಡುವ ರೆಸಿಪಿ! ಮೃದುವಾಗಿ ಮಾಡೋದು ಹೇಗೆ ಗೊತ್ತಾ?
ತಮಾಷೆ ಮಾತಲ್ಲ.! ಆನ್ಲೈನ್ನಲ್ಲಿ ಮಾನವರನ್ನೇ ಆರ್ಡರ್ ಮಾಡಿ..10 ನಿಮಿಷದಲ್ಲಿ ಡೆಲಿವರಿ!
ನಾವೀಗೆ ಡಿಜಿಟಲ್ ಯುಗದಲ್ಲಿದ್ದೇವೆ. ಕುಳಿತಲ್ಲೇ ಪ್ರತಿಯೊಂದು ವಸ್ತುಗಳನ್ನು ನಾವು ತರಿಸಿಕೊಳ್ಳಬಹುದು. ನಿಮಿಷದಲ್ಲಿ ನಿಮಗೆ ಬೇಕಾದ ವಸ್ತು ಮನೆ ಬಾಗಿಲಿಗೆ ಬರುತ್ತದೆ. ಜೆಪ್ಟೋ, ಜೊಮೆಟೋ, ಸ್ವಿಗ್ಗಿ, ಬ್ಲಿಂಕ್ ಇಟ್ ಹೀಗೆ ಹತ್ತಾರು ಕಂಪನಿಗಳು ನಿಮಿಷದಲ್ಲಿ ನಿಮ್ಮ ವಸ್ತುಗಳ ಡೆಲಿವರಿ ಮಾಡುತ್ತವೆ. ದೊಡ್ಡ ದೊಡ್ಡ ಸಿಟಿಯಲ್ಲಿ ನೀವು ಆಫೀಸ್ ತಲುಪಿಸಲು ಕೂಡ ರಾಪಿಡೋ, ಓಲಾ, ಊಬರ್ನಂತಹ ಸಂಸ್ಥೆಗಳಿವೆ.
ಹೀಗಾಗಿ ನೀವಿಗ ಕೈ ಬೆರಳ ತುದಿಯಲ್ಲಿ ಆರ್ಡರ್ ಮಾಡಿದ ವಸ್ತು ನಿಮಿಷದಲ್ಲಿ ಕಣ್ಣ ಮುಂದೆ ಬಂದಿರುತ್ತದೆ. ಆದ್ರೆ ಈಗೊಂದು ಸಂಸ್ಥೆ ಹೊಸ ಸಾಹಸಕ್ಕೆ ಕೈ ಹಾಕಿದ್ದು ನೀವು 10 ನಿಮಿಷದಲ್ಲಿ ಮನುಷ್ಯರನ್ನೇ ಆರ್ಡರ್ ಮಾಡಬಹುದು. ಹೌದು ನಿಮಗೆ ಅಚ್ಚರಿ ಎನಿಸುತ್ತಿದ್ದರೂ ಇದು ಸತ್ಯ. ಆನ್ಲೈನ್ನಲ್ಲಿ ಆರ್ಡರ್ ಮಾಡಿದ ವ್ಯಕ್ತಿ ನಿಮ್ಮ ನೆರವಿಗೆ ನಿಮಿಷದಲ್ಲಿ ಧಾವಿಸುವ ಹೊಸ ಆಲೋಚನೆ ಇದು.

Topmate.io ಎಂಬ ಸಂಸ್ಥೆ ಈ ಹೊಸ ಅಚ್ಚರಿಗೆ ಕಾರಣವಾಗಿದೆ. ಈ ಸಂಸ್ಥೆಯ ಮಾರ್ಕೆಟಿಂಗ್ ಲೀಡ್ ಆಗಿರುವ ನಿಮಿಷಾ ಚಂದಾ ಎಂಬಾಕೆ ತನ್ನ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಈ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ. ಇನ್ನು ಮುಂದೆ ಊಹೆಯಲ್ಲ, ಇನ್ನು ಗೂಗಲ್ ಹುಡುಕಾಟ ಬೇಕಿಲ್ಲ. ಇಲ್ಲಿರುವ ತಜ್ಞರೊಂದಿಗೆ ನೀವೆ ಮಾತನಾಡಿ ಎಂದು ಆವರು ಬರೆದುಕೊಂಡಿದ್ದಾರೆ.
ಚಂದಾ ತಮ್ಮ ವೆಬ್ಸೈಟ್ ಲಿಂಕ್ ಅನ್ನು ಸಹ ಹಂಚಿಕೊಂಡಿದ್ದಾರೆ. ಇದು ಬಳಕೆದಾರರು ಪ್ರತಿದಿನ ಸಂಜೆ 6 ರಿಂದ ರಾತ್ರಿ 10 ರ ನಡುವೆ ನೇರವಾಗಿ ಉದ್ಯಮ ತಜ್ಞರಿಗೆ ಕರೆ ಮಾಡಲು ಅನುವು ಮಾಡಿಕೊಡುತ್ತದೆ. ಈ ಸೇವೆಯು ಉನ್ನತ ಕಂಪನಿಗಳು ಮತ್ತು ಡೊಮೇನ್ಗಳಿಂದ ವೃತ್ತಿಪರರ ಬೇಡಿಕೆಯನ್ನು ತ್ವರಿತವಾಗಿ ನಿರ್ವಹಿಸಲಿದೆ ಎಂದಿದೆ. ಅಂದರೆ ನಿಮ್ಮ ವ್ಯವಹಾರ ಸಂಬಂಧಿ ಸಮಸ್ಯೆಗಳ, ಕಂಪನಿಗಳಲ್ಲಿ ಟೆಕ್ನಿಕಲ್ ಸಮಸ್ಯೆಗಳ ನಿವಾರಣೆ ಒಂದು ದೊಡ್ಡ ತಂಡವೇ ಅವರ ಬಳಿ ಇದೆಯಂತೆ.
ಅವರನ್ನು ನೀವು ಆಯ್ಕೆ ಮಾಡಿದ ತಕ್ಷಣ ನೀವು ಇರುವ ಕಡೆ ಅಥವಾ ಆನ್ಲೈನ್ ಮೂಲಕ ಸಮಸ್ಯೆ ಬಗೆಹರಿಸುವ ಪ್ರಕ್ರಿಯೆ ಇದಾಗಿದೆ. ಈಗಾಗಲೇ ಈ ಆಪ್ಗೆ 4.9 ಸ್ಟಾರ್ ರೇಟಿಂಗ್ ಇದೆ. ಹಾಗೆ 1 ಮಿಲಿಯನ್ಗೂ ಅಧಿಕ ಬಳಕೆದಾರರು ಇದ್ದಾರೆ. ಹಾಗೆ ಇದರಲ್ಲಿ 3 ಲಕ್ಷಕ್ಕೂ ಅಧಿಕ ವೃತ್ತಿಪರರು ಅವರ ಬಳಿ ಇದ್ದಾರಂತೆ. ಅವರ ವೆಬ್ಸೈಟ್ಗೆ ಭೇಟಿ ನೀಡಿದರೆ ಅವರ ನಿಮ್ಮ ಬೇಡಿಕೆಗೆ ಅನುಗುಣವಾಗಿ ಯಾರ ಸೇವೆ ಬೇಕು ಎಂಬುದನ್ನು ಆಯ್ಕೆ ಮಾಡಿಕೊಂಡು ಮೊಬೈಲ್ ನಂಬರ್ ನಮೂದಿಸಿದರೆ ಅವರಿಂದ ಸಲಹೆ ನೇರವಾಗಿ ಪಡೆಯಬಹುದು.
It’s OVER for Blinkit, Zepto, and Instamart.
— Nimisha Chanda (@NimishaChanda) February 7, 2025
Because we’re not just delivering groceries in 10 minutes—we’re delivering humans.
Humans who can:
- Answer every question you throw at them
- Help you land your dream job
- Be your ultimate growth partners
Try here -… pic.twitter.com/FK9ULELHHX
ಗಂಟೆಗಳ ಲೆಕ್ಕದಲ್ಲಿ ಸಾವಿರಾರು ಕರೆಗಳನ್ನು ಅವರು ಸ್ವೀಕರಿಸುತ್ತಿದ್ದಾರಂತೆ. ಈ ಸೇವೆ ಪಡೆದಿರುವ ಮಂದಿ ಅದ್ಭುತ ರಿವೀವ್ ನೀಡಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ಸದ್ಯ ಈ ವಿಭಿನ್ನ ಆಲೋಚನೆ ನೆಟ್ಟಿಗರಲ್ಲಿ ಅಚ್ಚರಿ ಮೂಡಿಸಿದೆ. ಹಾಗೆ ಇನ್ಮುಂದೆ ಯಾವೆಲ್ಲಾ ರೀತಿಯ ಡಿಜಿಟಲ್ ಆಲೋಚನೆಗಳು ನಮ್ಮನ್ನು ಆಳಬಹುದು ಎಂಬ ಕುತೂಹಲ ಮೂಡಿಸಿದೆ. ಮುಂದಿನ ದಿನದಲ್ಲಿ ಈ ಆಲೋಚನೆಯಲ್ಲಿ ಮತ್ತಷ್ಟು ಹೊಸತನಗಳು ನೋಡಬಹುದಿದೆ.



Click it and Unblock the Notifications