Latest Updates
-
ಸಖತ್ ರುಚಿ ನೀಡುವ ಸುಲಭದ ಧನಿಯಾ ರಸಂ: ಸೂಪ್ನಂತೆ ಕುಡಿಯಬಹುದು! -
Weekly Horoscope: ಮಾರ್ಚ್ 15 ರಿಂದ ಮಾರ್ಚ್ 22ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 15 ರಿಂದ ಮಾರ್ಚ್ 22ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಗ್ಯಾಸ್ ಹಚ್ಚೋದೆ ಬೇಡ; ಸುಲಭವಾಗಿ ಮಾಡಿ ಈ ಅದ್ಭುತ ರುಚಿಯ ಸ್ವೀಟ್! -
ಕೆಲಸ ಮಾಡಲು ದೇಹಕ್ಕೆ ಬಲಬೇಕಾದರೆ ಈ ಹೆಸರುಕಾಳಿನ ಸೂಪರ್ಫುಡ್ ತಿನ್ನಿ! ವಾರಕ್ಕೊಂದು ಉಂಡೆ ಸಾಕು! -
ಅರ್ಧದಷ್ಟು ಭಾರತೀಯರಲ್ಲಿ 6 ಗಂಟೆಗೂ ಕಡಿಮೆ ನಿದ್ರೆ: ಸಮೀಕ್ಷೆಯಲ್ಲಿದೆ ಆತಂಕಕಾರಿ ವಿಚಾರ! -
ವಿವಾಹ ಯೋಗ ಕೂಡುವ ಸಾಧ್ಯತೆ ಇದೆ! ಸಂಗಾತಿಗೆ ಗಿಫ್ಸ್ ನೀಡಬಹುದು -
ಮಹಿಳೆಯರು ಕಾಲುಂಗುರ ಏಕೆ ಧರಿಸಬೇಕು? ಎಷ್ಟು ಸುತ್ತು ನಿಮ್ಗೆ ಯಶಸ್ಸು ತರುತ್ತೆ? ರಹಸ್ಯ ತಿಳಿಯಿರಿ -
March 14 Horoscope: ಪ್ರಯಾಣಗಳ ಮಾಡುವ ದಿನವಾಗಲಿದೆ! -
ಸಿಲಿಂಡರ್ 3 ತಿಂಗಳು ಬರಬೇಕೆ? ಇನ್ಮುಂದೆ ಗ್ಯಾಸ್ ಚಿಂತೆ ಬೇಡ.. LPG ಉಳಿಸಲು ಇಲ್ಲಿದೆ 5 ಸ್ಮಾರ್ಟ್ ಟಿಪ್ಸ್
ಈ ಸಲದ ಸಂಕ್ರಾಂತಿ ಹಬ್ಬಕ್ಕೆ ಹೆಸರುಕಾಳಿನ ಲಡ್ಡು ಟ್ರೈ ಮಾಡಿ
ಹಬ್ಬ ಅಂದ್ರೆ, ಸಿಹಿತಿಂಡಿ ಇರಲೇಬೇಕು. ಇಲ್ಲವಾದಲ್ಲಿ ಹಬ್ಬ ಅಪೂರ್ಣ ಎನಿಸಿಕೊಳ್ಳುವುದು. ಆ ಸಿಹಿತಿಂಡಿಗಳನ್ನು ಹೊರಗಿನಿಂದ ತರುವುದಕ್ಕಿಂತ ನಾವೇ ಸ್ವತಃ ಮನೆಯಲ್ಲಿಯೇ ತಯಾರಿಸಿದರೆ, ಹಬ್ಬದ ಸಂಭ್ರಮ ಮತ್ತಷ್ಟು ಹೆಚ್ಚಾಗುವುದು. ಅದಕ್ಕಾಗಿ ನಾವಿಂದು ಬಹಳ ಸುಲಭ ಹಾಗೂ ಬೇಗನೇ ತಯಾರಿಸಬಹುದಾದಂತಹ ಲಡ್ಡು ಮಾಡುವ ವಿಧಾನವನ್ನು ತಿಳಿಸಲಿದ್ದೇವೆ. ಇನ್ನೇನು ಕೆಲವೇ ದಿನಗಳಲ್ಲಿ ಮಕರಸಂಕ್ರಾಂತಿ ಬೇರೆ ಇದೆ. ಆ ದಿನದಂದು ಈ ಹೆಸರುಬೇಳೆಯ ಲಡ್ಡು ತಯಾರಿಸಿ, ನಿಮ್ಮ ಮನೆಯವರಿಗೆ ಬಡಿಸಿ.

ಹೆಸರುಕಾಳಿನ ಲಡ್ಡು ತಯಾರಿಸುವ ವಿಧಾನವನ್ನು ಈ ಕೆಳಗೆ ನೀಡಲಾಗಿದೆ:
Recipe By: Shreeraksha
Recipe Type: Snacks
Serves: 2
-
ಬೇಕಾಗುವ ಪದಾರ್ಥಗಳು:
1 ಕಪ್ ಹೆಸರುಬೇಳೆ
¼ ಕಪ್ ತುಪ್ಪ
½ ಕಪ್ ಸಕ್ಕರೆ
3 ಏಲಕ್ಕಿ
2 ಚಮಚ ಗೋಡಂಬಿ
2 ಚಮಚ ಬಾದಾಮಿ
7 ಪಿಸ್ತಾ
-
ತಯಾರಿಸುವ ವಿಧಾನ:
ಮೊದಲನೆಯದಾಗಿ, ಬಾಣಲೆಯಲ್ಲಿ 1 ಕಪ್ ಹೆಸರುಬೇಳೆಯನ್ನು ಕಡಿಮೆ ಉರಿಯಲ್ಲಿ ಹುರಿದುಕೊಳ್ಳಿ.
ಹಸಿವಾಸನೆ ಹೋಗುವವರೆಗೂ ಹುರಿದುಕೊಂಡು, ಸಂಪೂರ್ಣವಾಗಿ ತಣ್ಣಗಾಗಿಸಿ, ಉತ್ತಮವಾಗಿ ಪುಡಿ ಮಾಡಿ.
ಇದನ್ನು ಒಂದು ಕಡಾಯಿಗೆ ಹಾಕಿ, ಅದಕ್ಕೆ ¼ ಕಪ್ ತುಪ್ಪ ಸೇರಿಸಿ, ಲೋ ಫ್ಲೇಮ್ನಲ್ಲಿ ಗೋಲ್ಡನ್ ಬ್ರೌನ್ ಆಗುವವರೆಗೆ ಹುರಿಯಿರಿ. ಇದು ಸುಮಾರು 10 ನಿಮಿಷಗಳನ್ನು ತೆಗೆದುಕೊಳ್ಳಬಹುದು.
ಇದನ್ನು ಒಂದು ಬಟ್ಟಲಿಗೆ ಹಾಕಿ, ಸ್ವಲ್ಪ ತಣ್ಣಗಾಗಲು ಬಿಡಿ.
ಈಗ ½ ಕಪ್ ಸಕ್ಕರೆ ಮತ್ತು 3 ಏಲಕ್ಕಿಯನ್ನು ಪುಡಿ ಮಾಡಿಕೊಳ್ಳಿ.
ಇದನ್ನು ಹೆಸರುಕಾಳಿನ ಮಿಶ್ರಣಕ್ಕೆ ಹಾಕಿ, ಚೆನ್ನಾಗಿ ಮಿಶ್ರಣ ಮಾಡಿ, ಇದರಿಂದ ಉಂಡೆ ಕಟ್ಟಿ, ಪಿಸ್ತಾದಿಂದ ಅಲಂಕರಿಸಿದರೆ, ಲಡ್ಡು ಸವಿಯಲು ಸಿದ್ಧ.
- People - 2
- ಕ್ಯಾಲೋರಿ - 136ಗ್ರಾ
- ಕೊಬ್ಬು - 5ಗ್ರಾ
- ಪ್ರೋಟೀನ್ - 2ಗ್ರಾ
- ಕಾರ್ಬ್ಸ್ - 21ಗ್ರಾ



Click it and Unblock the Notifications