Latest Updates
-
ಸಖತ್ ರುಚಿ ನೀಡುವ ಸುಲಭದ ಧನಿಯಾ ರಸಂ: ಸೂಪ್ನಂತೆ ಕುಡಿಯಬಹುದು! -
Weekly Horoscope: ಮಾರ್ಚ್ 15 ರಿಂದ ಮಾರ್ಚ್ 22ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 15 ರಿಂದ ಮಾರ್ಚ್ 22ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಗ್ಯಾಸ್ ಹಚ್ಚೋದೆ ಬೇಡ; ಸುಲಭವಾಗಿ ಮಾಡಿ ಈ ಅದ್ಭುತ ರುಚಿಯ ಸ್ವೀಟ್! -
ಕೆಲಸ ಮಾಡಲು ದೇಹಕ್ಕೆ ಬಲಬೇಕಾದರೆ ಈ ಹೆಸರುಕಾಳಿನ ಸೂಪರ್ಫುಡ್ ತಿನ್ನಿ! ವಾರಕ್ಕೊಂದು ಉಂಡೆ ಸಾಕು! -
ಅರ್ಧದಷ್ಟು ಭಾರತೀಯರಲ್ಲಿ 6 ಗಂಟೆಗೂ ಕಡಿಮೆ ನಿದ್ರೆ: ಸಮೀಕ್ಷೆಯಲ್ಲಿದೆ ಆತಂಕಕಾರಿ ವಿಚಾರ! -
ವಿವಾಹ ಯೋಗ ಕೂಡುವ ಸಾಧ್ಯತೆ ಇದೆ! ಸಂಗಾತಿಗೆ ಗಿಫ್ಸ್ ನೀಡಬಹುದು -
ಮಹಿಳೆಯರು ಕಾಲುಂಗುರ ಏಕೆ ಧರಿಸಬೇಕು? ಎಷ್ಟು ಸುತ್ತು ನಿಮ್ಗೆ ಯಶಸ್ಸು ತರುತ್ತೆ? ರಹಸ್ಯ ತಿಳಿಯಿರಿ -
March 14 Horoscope: ಪ್ರಯಾಣಗಳ ಮಾಡುವ ದಿನವಾಗಲಿದೆ! -
ಸಿಲಿಂಡರ್ 3 ತಿಂಗಳು ಬರಬೇಕೆ? ಇನ್ಮುಂದೆ ಗ್ಯಾಸ್ ಚಿಂತೆ ಬೇಡ.. LPG ಉಳಿಸಲು ಇಲ್ಲಿದೆ 5 ಸ್ಮಾರ್ಟ್ ಟಿಪ್ಸ್
ಸ್ವೀಟ್ ಪ್ರಿಯರು ಒಮ್ಮೆ ಟ್ರೈ ಮಾಡಿ, ಈ ಹಾಲಿನಪುಡಿಯ ಬರ್ಫಿ
Recipes
oi-Shreeraksha
Posted By: Shreeraksha
ಬರ್ಫಿ ಎಲ್ಲರಿಗೂ ಇಷ್ಟವಾಗುವಂತಹ ಒಂದು ಪಾಕವಿಧಾನ. ನಾನಾ ಬರ್ಫಿಗಳು ಮಾರುಕಟ್ಟೆಯಲ್ಲಿ ಲಭ್ಯವಿದ್ದರೂ, ಮನೆಯಲ್ಲಿ ಮಾಡುವ ಬರ್ಫಿಗೆ ತುಸು ರುಚಿ ಜಾಸ್ತಿ ಎಂದರೆ ತಪ್ಪಾಗಲ್ಲ. ಅದರಲ್ಲೂ ಹಾಲಿನ ಪುಡಿಯ ಬರ್ಫಿ ಒಮ್ಮೆ ಸವಿದರೆ, ಮತ್ತೆ ಮತ್ತೆ ಬೇಕೆನೆಸುವ ರುಚಿ. ಏಕೆಂದರೆ, ಹೆಚ್ಚಿನವರಿಗೆ ಹಾಲಿನಪುಡಿ ಎಂದರೆ ಅಚ್ಚುಮೆಚ್ಚು, ಅದನ್ನು ಹಾಗೆಯೇ ಸೇವಿಸುವವರೂ ಬಹಳಷ್ಟು ಮಂದಿ ಇದ್ದಾರೆ. ಇಂತಹ ಹಾಲಿನ ಪುಡಿಯಿಂದ ಆರೋಗ್ಯಕರ ಬರ್ಫಿ ತಯಾರಿಸಿದರೆ, ಯಾರಿಗೆ ಇಷ್ಟವಾಗುವುದಿಲ್ಲ ಹೇಳಿ?. ಇನ್ನೇಕೆ ತಡ, ಹಾಲಿನ ಪುಡಿಯ ಬರ್ಫಿ ಮಾಡುವ ವಿಧಾನ ನೋಡೋಣ ಬನ್ನಿ.

ಸ್ವೀಟ್ ಪ್ರಿಯರು ಒಮ್ಮೆ ಟ್ರೈ ಮಾಡಿ, ಈ
ಹಾಲಿನಪುಡಿಯ ಬರ್ಫಿ
ಸ್ವೀಟ್ ಪ್ರಿಯರು ಒಮ್ಮೆ ಟ್ರೈ
ಮಾಡಿ, ಈ ಹಾಲಿನಪುಡಿಯ ಬರ್ಫಿ
Prep Time
15 Mins
Cook Time
2M
Total Time
17 Mins
Recipe By: Shreeraksha
Recipe Type: Vegetarian
Serves: 2
Ingredients
-
ಬೇಕಾಗುವ ಪದಾರ್ಥಗಳು:
¼ ಕಪ್ ತುಪ್ಪ
¾ ಕಪ್ ಹಾಲು
2½ ಕಪ್ ಹಾಲಿನ ಪುಡಿ
½ ಕಪ್ ಸಕ್ಕರೆ
¼ ಟೀಸ್ಪೂನ್ ಏಲಕ್ಕಿ ಪುಡಿ
2 ಚಮಚ ಬಾದಾಮಿ (ಕತ್ತರಿಸಿದ)
2 ಚಮಚ ಪಿಸ್ತಾ (ಕತ್ತರಿಸಿದ)
How to Prepare
-
ತಯಾರಿಸುವ ವಿಧಾನ:
- ಮೊದಲನೆಯದಾಗಿ, ದೊಡ್ಡ ಕಡಾಯಿಯಲ್ಲಿ ¼ ಕಪ್ ತುಪ್ಪ ಮತ್ತು ¾ ಕಪ್ ಹಾಲು ಹಾಕಿ, ಇದಕ್ಕೆ 2½ ಕಪ್ ಹಾಲಿನ ಪುಡಿ, ½ ಕಪ್ ಸಕ್ಕರೆಯನ್ನು ಸೇರಿಸಿ. ಫ್ಲೇಮ್ ಕಡಿಮೆಯಲ್ಲಿರಲಿ.
- ಎಲ್ಲವನ್ನೂ ಚೆನ್ನಾಗಿ ಯಾವುದೇ ಉಂಡೆಗಳಾಗದಂತೆ, ನಿರಂತರವಾಗಿ ಬೆರೆಸಿ.
- ಸ್ವಲ್ಪ ಸಮಯದ ಬಳಿಕ ಹಿಟ್ಟು ನಿರ್ಮಾಣವಾಗಿ, ಪ್ಯಾನ್‌ನಿಂದ ಬೇರ್ಪಡುತ್ತದೆ.
- ಈಗ ಇದಕ್ಕೆ ¼ ಟೀಸ್ಪೂನ್ ಏಲಕ್ಕಿ ಪುಡಿ ಸೇರಿಸಿ, ಚೆನ್ನಾಗಿ ಮಿಕ್ಸ್ ಮಾಡಿ.
- ತಯಾರಾದ ಹಿಟ್ಟನ್ನು ಬೇಕಿಂಗ್ ಪೇಪರ್ ಹಾಕಿದ ಪ್ಲೇಟ್‌ಗೆ ವರ್ಗಾಯಿಸಿ, ಚೆನ್ನಾಗಿ ಹೊಂದಿಸಿ.
- ಈಗ ಸ್ವಲ್ಪ ಕತ್ತರಿಸಿದ ಬಾದಾಮಿ ಮತ್ತು ಪಿಸ್ತಾಗಳೊಂದಿಗೆ ಮೇಲ್ಭಾಗದಲ್ಲಿ ಹಾಕಿ, ಸ್ವಲ್ಪ ಒತ್ತಿರಿ.
- ಇದನ್ನು 2 ಗಂಟೆಗಳ ಕಾಲ ಹಾಗೆಯೇ ಬಿಟ್ಟು, ನಂತರ ತುಂಡುಗಳಾಗಿ ಕತ್ತರಿಸಿ.
- ಈಗ ಹಾಲಿನ ಪುಡಿಯ ಬರ್ಫಿ ಸವಿಯಲು ಸಿದ್ಧ.
Instructions
Nutritional Information
- People - 2
- ಕ್ಯಾಲೋರಿ - 468kcl
- ಕೊಬ್ಬು - 164g
- ಪ್ರೋಟೀನ್ - 13g
- ಕಾರ್ಬ್ಸ್ - 291g
Comments
[ 5 of 5 - 85 Users]



Click it and Unblock the Notifications