Latest Updates
-
ಸಮಲಿಂಗಿ ಜೋಡಿಗಳೇ ಎಚ್ಚರ: ಗಿಫ್ಟ್ ಟ್ಯಾಕ್ಸ್ನಿಂದ ಪಾರಾಗಲು ಈ ದಾಖಲೆಗಳು ಕಡ್ಡಾಯ! -
ಅಡುಗೆ ಎಣ್ಣೆ ಬೆಲೆ ಏರಿಕೆ: ಬಜೆಟ್ ಮತ್ತು ಆರೋಗ್ಯ ಕಾಪಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಯುಪಿಐನಲ್ಲಿ ಎಐ ಕ್ರಾಂತಿ: ಇನ್ಮುಂದೆ ನಿಮ್ಮ ಬಿಲ್ ಪಾವತಿಗಳನ್ನು ಡಿಜಿಟಲ್ ಏಜೆಂಟ್ ನೋಡಿಕೊಳ್ಳಲಿದೆ! -
ಉತ್ತರಾಖಂಡದಲ್ಲಿ ಆರೆಂಜ್ ಅಲರ್ಟ್: ಹೋಟೆಲ್ ರೂಮ್ನಲ್ಲೇ ಫಿಟ್ ಆಗಿರಲು ಈ ಸರಳ ವ್ಯಾಯಾಮಗಳನ್ನು ಮಾಡಿ! -
UGC-NET ಪರೀಕ್ಷೆಯ ಗೊಂದಲ: ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಪೋಷಕರಿಗೆ ಇಲ್ಲಿದೆ 48 ಗಂಟೆಗಳ ಸ್ಟಡಿ-ರಿಸೆಟ್ ಪ್ಲಾನ್! -
ದೆಹಲಿ ಮಳೆ: ಗುಡುಗು-ಮಿಂಚಿನಿಂದ ನಿಮ್ಮ ಎಲೆಕ್ಟ್ರಾನಿಕ್ ವಸ್ತುಗಳನ್ನು ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಎನರ್ಜಿ ಡ್ರಿಂಕ್ಸ್ ಕುಡಿಯುವ ಮುನ್ನ ಎಚ್ಚರ! FSSAI ಹೊಸ ನಿಯಮ ಮತ್ತು ಆರೋಗ್ಯಕರ ಪರ್ಯಾಯಗಳು -
ಗುರುಗ್ರಾಮದಲ್ಲಿ ವರುಣನ ಆರ್ಭಟ: ಕಚೇರಿಗೆ ಹೋಗ್ಬೇಡಿ, ಮನೆಯಿಂದಲೇ ಕೆಲಸ ಮಾಡಿ - ಪೊಲೀಸರ ಮಹತ್ವದ ಸೂಚನೆ -
ಮಳೆಗಾಲದ ಜಡತ್ವಕ್ಕೆ ಗುಡ್ ಬೈ: ಮುಂಬೈ-ಪುಣೆ ಜನರಿಗಾಗಿ 10 ನಿಮಿಷದ ಸರಳ ವ್ಯಾಯಾಮಗಳು -
ಮುಂಬೈ ಮಳೆ ಆರ್ಭಟ: ಸಂಗಾತಿಯ ಸುರಕ್ಷತೆಗಾಗಿ ನೀವು ಮಾಡಬೇಕಾದ ಪ್ರಮುಖ ಕೆಲಸಗಳಿವು!
ಕಾಯಿ ಟೊಮೆಟೋ ಚಟ್ನಿ ಹೀಗೆ ಮಾಡಿ..! ತಿಂಗಳ ಕಾಲ ಇಟ್ಟರೂ ಹಾಳಾಗಲ್ಲ..!
ನೀವು ನಿತ್ಯ ಬೆಳಗ್ಗೆ ತಿಂಡಿಗೆ ಒಂದಲ್ಲಾ ಒಂದು ಚಟ್ನಿ, ಪಲ್ಯ ಮಾಡಿ ಬೇಸರ ಬಂದಿರಬಹುದು. ಏಕೆಂದರೆ ತಿಂಡಿಯ ಜೊತೆಗೆ ಯಾವುದಾದರೊಂದು ಚಟ್ನಿ ಅಥವಾ ಪಲ್ಯ ಮಾಡಿದ್ದರೇನೆ ಆ ದಿನದ ತಿಂಡಿಗೆ ರುಚಿ ಬರುತ್ತೆ. ಹಾಗೆ ಎಲ್ಲರಿಗೂ ಬ್ರೇಕ್ಫಾಸ್ಟ್ಗೆ ಒಂದು ಖಾದ್ಯ ಇರಲೇಬೇಕು. ಹಾಗೆ ಕೆಲವು ದಿನಗಳ ಕಾಲ ಬ್ರೇಕ್ಫಾಸ್ಟ್ ಜೊತೆಗೆ ಸವಿಯಲು ಒಂದು ಖಾದ್ಯ ಬೇಕು ಎನಿಸಿರುತ್ತದೆ.
ಹೀಗಾಗಿ ಇದಕ್ಕೆ ಪೂರಕ ಎನ್ನುವಂತೆ ನಾವಿಂದು ಹಸಿ ಟೊಮೆಟೋದಿಂದ ಮಾಡುವಂತಹ ಅದ್ಭುತ ರುಚಿ ಚಟ್ನಿ ಕುರಿತು ತಿಳಿದುಕೊಳ್ಳೋಣ. ಕಾಯಿ ಟೊಮೆಟೋ ಬಹಳ ಹುಳಿಯಾಗಿರುತ್ತೆ. ಹೀಗಾಗಿ ಇದರ ಖಾದ್ಯ ಮಾಡುವಾಗ ಬಹಳ ಎಚ್ಚರಿಕೆ ಇಡಬೇಕು. ಸರಿಯಾದ ಪ್ರಮಾಣದ ವಸ್ತುಗಳ ಹಾಕಿ ಮಾಡಬೇಕಾಗುತ್ತದೆ. ಆದ್ರೆ ಈ ಚಟ್ನಿಯನ್ನು ನೀವು ಎಷ್ಟು ದಿನಗಳ ವರೆಗೆ ಬೇಕಾದರೂ ಇಟ್ಟು ಸವಿಯಬಹುದು. ಬಹುಬೇಗ ಇದು ಹಾಳಾಗುವುದಿಲ್ಲ.

ಈ ಕಾಯಿ ಟೊಮೆಟೋ ಚಟ್ನಿಯನ್ನು ನೀವು ಚಪಾತಿ, ದೋಸೆ, ಇಡ್ಲಿ ಹಾಗೆ ಊಟದ ಜೊತೆಗೂ ಸವಿಯಬಹುದು, ಅಷ್ಟೊಂದು ರುಚಿಕರವಾಗಿರುತ್ತೆ. ಹಾಗಾದ್ರೆ ಈ ಕಾಯಿ ಟೊಮೆಟೋ ಚಟ್ನಿ ಮಾಡೋದು ಹೇಗೆ? ಇದಕ್ಕೆ ಯಾವೆಲ್ಲಾ ಪದಾರ್ಥಗಳ ಹಾಕಬೇಕು? ಮಾಡುವ ವಿಧಾನವೇನು?, ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಕಾಯಿ ಟೊಮೆಟೋ ಚಟ್ನಿ ಮಾಡಲು ಬೇಕಾಗುವ ವಸ್ತುಗಳು
- ಕಾಯಿ ಟೊಮೇಟೊ
- ಜೀರಿಗೆ
- ಸಾಸಿವೆ
- ಹಸಿ ಮೆಣಸು
- ಒಣ ಮೆಣಸು
- ಬೆಳ್ಳುಳ್ಳಿ
- ಕರಿಬೇವು
- ಈರುಳ್ಳಿ
- ಎಣ್ಣೆ
- ಅರಿಶಿನ ಪುಡಿ
- ಕೊತ್ತಂಬರಿ ಸೊಪ್ಪು
- ಬೆಲ್ಲ
- ಉಪ್ಪು
ಕಾಯಿ ಟೊಮೆಟೋ ಚಟ್ನಿ ಮಾಡುವ ವಿಧಾನವೇನು?
ಮೊದಲು ಬಾಣಲೆ ಒಲೆ ಮೇಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿಕೊಂಡು ಎಣ್ಣೆ ಕಾದ ಬಳಿಕ ಇದಕ್ಕೆ ಸಾಸಿವೆ, ಜೀರಿಗೆ ಹಾಕಿಕೊಳ್ಳಿ. ನಂತರ ಇದಕ್ಕೆ ಹಸಿ ಮೆಣಸು, ಬೆಳ್ಳುಳ್ಳಿ, ಕರಿಬೇವು ಒಂದಾದ ಮೇಲೆ ಒಂದು ಹಾಕಿ ಫ್ರೈ ಮಾಡಿ. ಈಗ ಇದಕ್ಕೆ ಸಣ್ಣದಾಗಿ ಹೆಚ್ಚಿಕೊಂಡ ಈರುಳ್ಳಿ ಸಹ ಹಾಕಿ 1 ನಿಮಿಷ ಫ್ರೈ ಮಾಡಿಕೊಳ್ಳಿ.
ಈಗ 4 ಕಾಯಿ ಟೊಮೆಟೋ ವನ್ನ 1ರಲ್ಲಿ 4 ಭಾಗ ಮಾಡಿ ಕತ್ತರಿಸಿಕೊಂಡು ಇದಕ್ಕೆ ಹಾಕಿಕೊಂಡು ಫ್ರೈ ಮಾಡಿಕೊಳ್ಳಿ. ಹಾಗೆ ಇದಕ್ಕೆ ಕೊತ್ತಂಬರಿ ಸೊಪ್ಪು ಕೂಡ ಹಾಕಿಕೊಂಡು ಫ್ರೈ ಮಾಡಿ. 2 ನಿಮಿಷ ಫ್ರೈ ಮಾಡಿದ ಬಳಿಕ ಒಲೆ ಆಫ್ ಮಾಡಿಕೊಳ್ಳಿ. ನಂತರ ಈ ಮಸಾಲೆಗಳು ತಣ್ಣಗಾಗಲು ಬಿಡಿ. ಈ ಮಸಾಲೆಗಳು ತಣ್ಣಗಾದ ಬಳಿಕ ಒಂದು ಮಿಕ್ಸಿ ಜಾರ್ ತೆಗೆದುಕೊಂಡು ಅದಕ್ಕೆ ಈ ಎಲ್ಲಾ ಪದಾರ್ಥಗಳ ಹಾಕಿಕೊಳ್ಳಿ.
ನಂತರ ನೀರು ಹಾಕಿಕೊಳ್ಳದೆ ಈ ಎಲ್ಲಾ ಮಸಾಲೆಗಳನ್ನು ರುಬ್ಬಿಕೊಳ್ಳಿ. ನುಣ್ಣಗೆ ಅಲ್ಲದೆ ತರಿತರಿಯಾಗಿ ಎಲ್ಲಾ ವಸ್ತುಗಳನ್ನು ಒಂದೇ ಬಾರಿಗೆ ಹಾಕಿ ರುಬ್ಬಿಕೊಳ್ಳಿ ರುಬ್ಬುವಾಗ ರುಚಿಗೆ ತಕ್ಕಷ್ಟು ಉಪ್ಪು ಕೂಡ ಹಾಕಿಕೊಳ್ಳಿ. ಹಾಗೆ ಇದಕ್ಕೆ ಬೆಲ್ಲದ ಪುಡಿ ಕೂಡ ಹಾಕಿ ರುಬ್ಬಿಕೊಳ್ಳಿ. ನಂತರ ಇದನ್ನು ತೆಗೆದು ಒಂದು ಬೌಲ್ಗೆ ಹಾಕಿಟ್ಟುಕೊಳ್ಳಿ.
ಈಗ ಒಂದು ಬಾಣಲೆಗೆ ಮತ್ತೆ ಎಣ್ಣೆ ಹಾಕಿ ಅದಕ್ಕೆ ಜೀರಿಗೆ, ಸಾಸಿವೆ, ಒಣಮೆಣಸು ಹಾಕಿ ಫ್ರೈ ಮಾಡಿ. ನಂತರ ಕರಿಬೇವು ಹಾಕಿಕೊಂಡು ಈಗ ಬೌಲ್ನಲ್ಲಿರುವ ಚಟ್ನಿಯನ್ನು ಒಗ್ಗರಣೆ ಇರುವ ಬಾಣೆಲೆಗೆ ಹಾಕಿಕೊಂಡು ಮಿಕ್ಸ್ ಮಾಡಿ ಹಾಗೆ ಬಿಡಿ. 1 ನಿಮಿಷದ ಬಳಿಕ ಒಲೆ ಆಫ್ ಮಾಡಿಕೊಂಡರೆ ನಿಮ್ಮ ಮುಂದೆ ಕಾಯಿ ಟಮೆಟೋ ಚಟ್ನಿ ರೆಡಿಯಾಗುತ್ತೆ. ಇದರ ರುಚಿ ನೀವು ಕೂಡ ಸವಿದು ನೋಡಿ.



Click it and Unblock the Notifications