For Quick Alerts
ALLOW NOTIFICATIONS  
For Daily Alerts

ರೆಸಿಪಿ: ಬಂಗುಡೆ ಮೀನಿನ ಸಾರು

|

ಮೀನಿನ ಸಾರು ಮಾಡುವುದರಲ್ಲಿ ಮಂಗಳೂರಿನವರು ಹಾಗೂ ಕೇರಳದವರು ಎತ್ತಿದ ಕೈ. ಈ ಕಡೆ ಸಿಗುವ ಮೀನು ಸಾರಿನ ರುಚಿಯೇ ಭಿನ್ನವಾಗಿರುತ್ತೆ. ನಾವು ಇಲ್ಲಿ ಬಂಗುಡೆ ಮೀನಿನ ಸಾರಿನ ರೆಸಿಪಿ ನೀಡಿದ್ದೇವೆ.

ಬಂಗುಡೆ ಮೀನನ್ನು ನೀವು ತೆಂಗಿನಕಾಯಿ ಹಾಕದೆ ಸ್ವಲ್ಪ ಗ್ರೇವಿ ಟೇಸ್ಟ್‌ನಲ್ಲಿ ಮಾಡ ಬಯಸುವುದಾದರೆ ಈ ರೆಸಿಪಿ ನಿಮಗಾಗಿ. ಸುಲಭವಾಗಿ ಮಾಡಬಹುದಾದ ಮೀನಿನ ಸಾರಿನ ರೆಸಿಪಿ ಇದಾಗಿದ್ದು, ಕಾಚಂಪುಳಿ ಹಾಕಿ ಮಾಡಿದರೆ ಈ ಮೀನು ಸಾರು ತುಂಬಾ ರುಚಿಯಾಗಿರುತ್ತೆ.

Mackerel Fish Curry Recipe

ನಾವಿಲ್ಲಿ ಕಾಚಂಪುಳಿ ಹಾಕಿ ಮಾಡುವ ಬಂಗುಡೆ ಮೀನಿನ ಸಾರಿನ ರೆಸಿಪಿ ನೀಡಿದ್ದೇವೆ ನೋಡಿ:

Mackerel Fish Curry Recipe, ಬಂಗುಡೆ ಮೀನಿನ ಸಾರಿನ ರೆಸಿಪಿ
Mackerel Fish Curry Recipe, ಬಂಗುಡೆ ಮೀನಿನ ಸಾರಿನ ರೆಸಿಪಿ
Prep Time
15 Mins
Cook Time
20M
Total Time
35 Mins

Recipe By: Reena TK

Recipe Type: Curry

Serves: 4

Ingredients
  • ಬೇಕಾಗುವ ಸಾಮಗ್ರಿ

    ಬಂಗುಡೆ (Mackerel Fish) ಅರ್ಧ ಕೆಜಿ

    ಕಾಚಂಪುಳಿ (ತುಳುವಿನಲ್ಲಿ ಮಂತ್ ಪುಳಿ, ಇಂಗ್ಲಿಷ್‌ನಲ್ಲಿ gamboge)

    (ಇದು ಇಲ್ಲದಿದ್ದರೆ ಹುಣಸೆಹಣ್ಣು ಬಳಸುಬಹುದು)

    ತೆಂಗಿನೆಣ್ಣೆ 2 ಚಮಚ

    ಶುಂಠಿ (1 ಇಂಚಿನಷ್ಟು ದೊಡ್ಡದ್ದು, ಚಿಕ್ಕದಾಗಿ ಕತ್ತರಿಸಿದ್ದು)

    ಬೆಳ್ಳುಳ್ಳಿ 4 ಎಸಳು

    ಚಿಕ್ಕ ಈರುಳ್ಳಿ 4-5

    ಹಸಿ ಮೆಣಸಿನಕಾಯಿ 2

    ಸ್ವಲ್ಪ ಕರಿಬೇವು

    ಖಾರದ ಪುಡಿ 3 ಚಮಚ (ನಿಮ್ಮ ಖಾರಕ್ಕೆ ತಕ್ಕಷ್ಟು)

    ಕೊತ್ತಂಬರಿ ಪುಡಿ 1 ಚಮಚ

    ಅರಿಶಿಣ ಪುಡಿ ಅರ್ಧ ಚಮಚ

    ಮೆಂತೆ ಪುರಿ 1/4 ಚಮಚ

    ಕಾಳುಮೆಣಸಿನ ಪುಡಿ ಅರ್ಧ ಚಮಚ

    ರುಚಿಗೆ ತಕ್ಕ ಉಪ್ಪು

    ನೀರು ( ನಿಮ್ಮ ಗ್ರೇವಿ ಟೇಸ್ಟ್‌ಗೆ ತಕ್ಕಂತೆ)

    ಸ್ವಲ್ಪ ಕರಿಬೇವು

Red Rice Kanda Poha
How to Prepare
  • ಮಾಡುವ ವಿಧಾನ:

    * ಎಲ್ಲಾ ಮಸಾಲೆಯನ್ನು 1 ಕಪ್‌ಗೆ ಹಾಕಿ ಅದಕ್ಕೆ 1 ಚಮಚ ನೀರು ಹಾಕಿ ಪೇಸ್ಟ್ ಮಾಡಿ ಬದಿಯಲ್ಲಿ ತೆಗೆದಿಡಿ.

    * ದಪ್ಪ ತಳವಿರುವ ಪ್ಯಾನ್‌ (ಮಣ್ಣಿನ ಮಡಕೆಯಾದರೆ ತುಂಬಾ ಒಳ್ಳೆಯದು)ಎಣ್ಣೆಯನ್ನು ಬಿಸಿ ಮಾಡಿ ಅದಕ್ಕೆ ಎಣ್ಣೆ ಹಾಕಿ, ಎಣ್ಣೆ ಬಿಸಿಯಾದಾಗ ಕತ್ತರಿಸಿದ ಶುಂಠಿ, ಬೆಳ್ಳುಳ್ಳಿ, ಈರುಳ್ಳಿ, ಹಸಿ ಮೆಣಸಿನಕಾಯಿ, ಕರಿಬೇವು ಹಾಕಿ ಫ್ರೈ ಮಾಡಿ.

    * ಈರುಳ್ಳಿ ಫ್ರೈಯಾಗಿ ಕಂದು ಬಣ್ಣಕ್ಕೆ ತಿರುಗುವಾಗ ಪೇಸ್ಟ್‌ ಮಾಡಿಟ್ಟ ಮಸಾಲೆ ಹಾಕಿ ಅದರ ಹಸಿ ವಾಸನೆ ಹೋಗಲು 2-3 ನಿಮಿಷ ಫ್ರೈ ಮಾಡಿ, ನಂತರ ನೀರು ಹಾಕಿ ರುಚಿಗೆ ತಕ್ಕ ಉಪ್ಪು ಸೇರಿಸಿ. ಈಗ ನೀರಿನಲ್ಲಿ ನೆನೆಸಿಟ್ಟ ಕಾಚಂಪುಳಿ ಹಾಕಿ (ಕಾಚಂಪುಳಿ ಇಲ್ಲದಿದ್ದರೆ ಎರಡು ನಿಂಬೆ ಹಣ್ಣಿನ ಗಾತ್ರ ಹುಣಸೆಹಣ್ಣಿನ ರಸ ಹಾಕಿ) ಮಿಶ್ರ ಮಾಡಿ ಕುದಿಸಿ.

    * ಮಿಶ್ರಣ ಕುದಿ ಬರಲಾರಂಭಿಸಿದಾಗ ಮೀನನ್ನು ಹಾಕಿ ಸಾಧರಣ ಉರಿಯಲ್ಲಿ 10 ನಿಮಿಷ ಬೇಯಿಸಿ (ತುಂಬಾ ಬೇಯಿಸಿದ್ದರೆ ಮೀನಿನ ಮಾಂಸ ಮುಳ್ಳಿನಿಂದ ಬೇರ್ಪಡುವುದು).

    * ಈಗ 1 ಚಮಚ ತೆಂಗಿನೆಣ್ಣೆ ಹಾಕಿ, ಉರಿಯಿಂದ ಇಳಿಸಿ ಇಡಿ.

Instructions
  • * ಮೀನನ್ನು ಹಾಕಿದ ಮೇಲೆ ಪಾತ್ರೆಯ ಬಾಯಿ ಮುಚ್ಚದೆ ಬೇಯಿಸಿ * ಗ್ರೇವಿ ಗಟ್ಟಿಯಾಗಿ ಬೇಕಿದ್ದರೆ ಗ್ರೇವಿ ಸ್ವಲ್ಪ ಗಟ್ಟಿಯಾದ ಬಳಿಕವಷ್ಟೇ ಮೀನು ಹಾಕಿ ಬೇಯಿಸಿ, ಇಲ್ಲದಿದ್ದರೆ ಮೀನು ತುಂಬಾ ಬೆಂದು ಹೋಗುವುದು. * ಮೀನನ್ನು ಹಾಕಿದ ಬಳಿಕ ಆಗಗ ಸೌಟ್‌ನಿಂದ ತಿರುಗಿಸಬೇಡಿ. ಒಂದು ಅಥವಾ ಎರಡು ಬಾರಿ ಮೆಲ್ಲನೆ ತಿರುಗಿಸಿದರೆ ಸಾಕು. * ರೆಡಿಯಾದ ಮೀನಿನ ಸಾರು ಮರಗೆಣಸು ಬೇಯಿಸಿದ್ದು ಅಥವಾ ಅನ್ನದ ಜೊತೆ ಸವಿಯಲು ರುಚಿಯಾಗಿರುತ್ತೆ.
Nutritional Information
  • ಸರ್ವ್ - ಅರ್ಧ ಕೆಜಿ
  • ಕ್ಯಾಲೋರಿ: - 115ಕ್ಯಾ
  • ಕೊಬ್ಬು - 140ಗ್ರಾಂ
  • ಪ್ರೊಟೀನ್ - 89ಗ್ರಾಂ
  • ಕಾರ್ಬ್ಸ್: - 0
[ 4.5 of 5 - 28 Users]
X
Desktop Bottom Promotion