Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ನಂಜು ತೆಗೆಯೋ ಕೂಟಜ ಕಡ್ಡಿ ಪಲ್ಯ
ವೈದ್ಯಕೀಯದಲ್ಲಿ ಆಯುರ್ವೇದಕ್ಕಿರೋ ಶಕ್ತಿ ಬಹಳ ಮಹತ್ವದ್ದು. ಆದರೆ ಮನುಷ್ಯ ಬಹಳ ಸ್ವಾರ್ಥಿ. ತನಗೆ ಅಗತ್ಯವಿದ್ದಾಗ ಮಾತ್ರವೇ ಬಳಸಬೇಕಾಗಿರುವ ಕೆಲವು ವಸ್ತುಗಳನ್ನು ಹಣದ ಆಸೆಗೆ ಬಿದ್ದು ದುರ್ಬಳಕೆ ಮಾಡುತ್ತಾನೆ. ಪ್ರಕೃತಿ ದತ್ತವಾಗಿ ಸಿಗುವ ಕೆಲವು ವಸ್ತುಗಳನ್ನು ನಿರ್ನಾಮ ಮಾಡುವುದಕ್ಕೂ ಮನುಷ್ಯ ಹೇಸಲಾರ.
ಪ್ರಕೃತಿಯಲ್ಲಿ ಕಾಲಕ್ಕೆ ಅನುಗುಣವಾಗಿ, ಪ್ರಾದೇಶಿಕವಾಗಿ ಸಿಗುವ ಕೆಲವು ವಸ್ತುಗಳು ಆಯಾ ಕಾಲಕ್ಕೆ ಸೇವನೆ ಮಾಡುವುದರಿಂದ ಬಹಳ ಲಾಭವುಂಟು. ಅಂತಹ ವಸ್ತುಗಳಲ್ಲಿ ಕೂಟಜ ಕಡ್ಡಿಗಳೂ ಕೂಡ ಒಂದು.

ಅರಣ್ಯದಲ್ಲಿ ತಾನಾಗಿಯೇ ಬೆಳೆದಿರುವ ಈ ಸಸ್ಯದಿಂದ ಅನೇಕ ರೀತಿಯ ಲಾಭಗಳಿವೆ. ಸದ್ಯಕ್ಕೆ ಹೆಚ್ಚಿನವರಿಗೆ ಇದರ ಪ್ರಯೋಜನದ ಅರಿವಿಲ್ಲದೆ ಇರುವುದರಿಂದ ಮಾರುಕಟ್ಟೆಯಲ್ಲಿ ಹಸಿ ಕಡ್ಡಿಗಳ ಲಭ್ಯತೆ ಇರುವುದಿಲ್ಲ. ಆದರೆ ಇದರ ಹೂವುಗಳು, ಒಣಗಿಸಿದ ಮರದ ತೊಗಟೆಯ ಪುಡಿ ಸಿಗುತ್ತದೆ. ಔಷಧೀಯ ಗುಣವಿರುವ ಇದು ಬಹಳ ದುಬಾರಿಯೂ ಹೌದು.

ಸಾಮಾನ್ಯವಾಗಿ ಜೂನ್,ಜುಲೈ ತಿಂಗಳಲ್ಲಿ ದಟ್ಟಾರಣ್ಯದ ಮಡುವಿನಲ್ಲಿ ಕಾಣಸಿಗುವ ಕೂಟಜ ಗಿಡಗಳಲ್ಲಿ ಕಡ್ಡಿಯಂತೆ ಕಾಣುವ ಕಾಯಿಗಳು ಬಿಡುತ್ತದೆ. ಎಪ್ರಿಲ್,ಮೇ ತಿಂಗಳಲ್ಲಿ ಇದೇ ಗಿಡದಲ್ಲಿ ಮಲ್ಲಿಗೆಯಂತೆ ಕಾಣುವ ಹೂವುಗಳು ಬಿಡುತ್ತದೆ. ಈ ಹೂವುಗಳಿಂದಲೂ ಅಡುಗೆ ತಯಾರಿಸಬಹುದು. ಕಹಿಯಾಗಿರುವ ಈ ಮರದ ತೊಗಟೆಯೂ ಕೂಡ ಔಷಧೀಯ ಗುಣಗಳನ್ನು ಹೊಂದಿದೆ.

ಇದರಲ್ಲಿ ಬಿಡುವ ಕಡ್ಡಿಯಂತಹ ಕಾಯಿಗಳು ಹಾಗಲಕಾಯಿಯಂತೆಯೇ ಕಹಿಯಾಗಿರುತ್ತದೆ. ಆದರೆ ಹಾಗಲಕಾಯಿಯಂತೆಯೇ ಅಡುಗೆಗೆ ಪ್ರಶಸ್ತವಾಗಿದ್ದು ನಿಮ್ಮ ದೇಹದ ಟಾಕ್ಸಿಕ್ ಅಂಶದ ನಿವಾರಣೆಗೆ ಸಹಕಾರಿ.

ಈ ಗಿಡವನ್ನು ಬೇರೆಬೇರೆ ಭಾಷೆಗಳಲ್ಲಿ ಏನನ್ನುತ್ತಾರೆ ತಿಳಿಯೋಣ.
ಇಂಗ್ಲೀಷ್ - ಕುರ್ಚಿ,ಕೊನೆಸ್ಸಿ ಮರ,ಕೊನೆಸ್ಸಿಬಾರ್ಕ್
ಹಿಂದಿ – ಕುಡ,ಕುಡೈಯ
ತೆಲುಗು – ಕೊಡಿಸೆಪಾಲ,ಕೊಡಗ
ಬೆಂಗಾಳಿ- ಕರಚಿ,ಕುರಚಿ
ಮರಾಠಿ – ಕುಡ
ಗುಜರಾತಿ – ಕುಡೋ
ತಮಿಳು - ವೆಪ್ಪಾಲೈ
ಕನ್ನಡ – ಕೊರಚಿ,ಕೊಡ್ಸ
ಮಳಯಾಳಂ – ಕೊಡಪಾಲ
ಉರ್ದು – ಖೆರ್ವಾ
ಪಂಜಾಬಿ – ಕೆನರಾ
Recipe By: Sushma
Recipe Type: Veg
Serves: 4
-
ಬೇಕಾಗಿರುವ ಸಾಮಗ್ರಿಗಳು:
ಕೂಟಜ ಕಡ್ಡಿಗಳು- ಅರ್ಧ ಕೆಜಿ
ಕಡಲೆಬೇಳೆ- 5ಸ್ಪೂನ್
ಉದ್ದಿನಬೇಳೆ- 5 ಸ್ಪೂನ್
ಕೊತ್ತುಂಬರಿ- 1 ಸ್ಪೂನ್
ಜೀರಿಗೆ- 1ಸ್ಪೂನ್
ಬೇವಿನಸೊಪ್ಪು -10 ಎಸಳು
ಕಾಯಿ- ಒಂದು ಸಣ್ಣ ಬೌಲ್
ಹುಣಸೆಹುಳಿ- ಎರಡು ಅಡಿಕೆ ಗಾತ್ರ
ಉಪ್ಪು- ರುಚಿಗೆ ತಕ್ಕಷ್ಟು
ಬೆಲ್ಲ- 50ಗ್ರಾಂ
ಎಣ್ಣೆ- ಆರರಿಂದ ಏಳು ಸ್ಪೂನ್
ಸಾಸಿವೆ- ಒಂದು ಸ್ಪೂನ್
ಅರಿಶಿನಪುಡಿ- ಚಿಟಿಕೆ
ಮೆಣಸಿನಪುಡಿ- ಎರಡು ಸ್ಪೂನ್
-
ಮಾಡುವ ವಿಧಾನ-
ಕೂಟಜ ಅಥವಾ ಕೊಡಸದ ಕಡ್ಡಿಯನ್ನು ಸಣ್ಣದಾಗಿ ಹೆಚ್ಚಿಕೊಳ್ಳಿ.
ಅಡುಗೆ ಎಣ್ಣೆಗೆ ಸಾಸಿವೆ ಹಾಕಿ ಚಟಿಪಟಿ ಅಂದಾಗ ಬೇವಿನಸೊಪ್ಪು, ಅರಿಶಿನ ಹಾಕಿ.
ಅದಕ್ಕೆ ಹೆಚ್ಚಿದ ಕಡ್ಡಿಗಳನ್ನು ಹಾಕಿ ಫ್ರೈ ಮಾಡಿ. ( ಕಹಿ ಕಡ್ಡಿಗಳಾಗಿರುವುದರಿಂದಾಗಿ ಹಾಗಲಕಾಯಿಗೆ ಅನುಸರಿಸುವ ವಿಧಾನವನ್ನೇ ಅನುಸರಿಸಬೇಕಾಗುತ್ತದೆ)
ಫ್ರೈ ಮಾಡಿದ ನಂತರ ಹುಣಸೆ ರಸವನ್ನು ಹಾಕಿ ಬೇಯಿಸಿ.
ರುಚಿಗೆ ತಕ್ಕಷ್ಟು ಉಪ್ಪು ಹಾಕಿ.
5 ನಿಮಿಷ ಹೀಗೆ ಬೇಯಿಸಿದ ನಂತರ ಬೆಲ್ಲ ಹಾಕಿ.
ಬೆಲ್ಲ ಆರಿ ಸ್ವಲ್ಪ ಪಾಕ ಬಂದ ನಂತರ ಕಾಯಿ ತುರಿಯನ್ನು ಮತ್ತು ಮೆಣಸಿನಪುಡಿಯನ್ನು ಹಾಕಿ ಬೇಯಲು ಬಿಡಿ.
ಇನ್ನೊಂದೆಡೆ ಕಡಲೆಬೇಳೆ, ಉದ್ದಿನಬೇಳೆ, ಜೀರಿಗೆ, ಕೊತ್ತುಂಬರಿ ಬೀಜಗಳನ್ನು ಎರಡು ಸ್ಪೂನ್‌ಎಣ್ಣೆ ಹಾಕಿ ಚೆನ್ನಾಗಿ ಕೆಂಬಣ್ಣಕ್ಕೆ ಬರುವಂತೆ ಹುರಿದು ಮಿಕ್ಸಿಯಲ್ಲಿ ಪುಡಿ ಮಾಡಿಕೊಳ್ಳಿ.
ಪುಡಿ ಮಾಡಿದ ಮಿಶ್ರಣವನ್ನು ಬೇಯಿಸಿದ ಮಿಶ್ರಣಕ್ಕೆ ಸೇರಿಸಿ ಚೆನ್ನಾಗಿ ಕಲಸಿ. ಎರಡು ನಿಮಿಷ ಕುದಿಸಿ ನೀರು ಆವಿಯಾಗುವವರೆಗೆ ಕಾಯಿರಿ..
ಇದನ್ನು ಅನ್ನಕ್ಕೆ ಕಲಸಿ ಸೇವಿಸಬಹುದು.
- ನೋಡುವುದಕ್ಕೆ ಪುಳಿಗೋಯರೆ ಗೊಜ್ಜಿನಂತೆ ಕಾಣುತ್ತದೆ. ಅನ್ನದ ಜತೆ ಕಲಸಿ ತಿನನ್ಲು ಸಹ ಬಹ: ರುಚಿಯಾಗಿರುತ್ತದೆ''.



Click it and Unblock the Notifications