For Quick Alerts
ALLOW NOTIFICATIONS  
For Daily Alerts

ಕರಾವಳಿ ಸ್ಪೆಷಲ್: ಚಿಕನ್ ಸುಕ್ಕಾಗೆ ಒಳ್ಳೆ ಕಾಂಬಿನೇಷನ್ ಈ ಕಪ್ಪರೊಟ್ಟಿ/ಓಡುದೋಸೆ ರೆಸಿಪಿ

Posted By:
|

ಕರಾವಳಿಯ ತಿಂಡಿ -ತಿನಿಸುಗಳೇ ವಿಭಿನ್ನ. ಅವುಗಳಲ್ಲಿ ಒಂದು ಈ ಓಡುದೋಸೆಯೂ ಒಂದು. ದೋಸೆ ಒಂದೇ ಆದರೂ ಇದಕ್ಕೆ ಹೆಸರುಗಳು ತರಾವರಿ, ಕೆಲವರು, ಕಪ್ಪರೊಟ್ಟಿ ಎಂದರೆ, ಮತ್ತೆ ಕೆಲವರು ಉಪ್ಪುದೋಸೆ ಎನ್ನುತ್ತಾರೆ, ಇನ್ನೂ ಕೆಲವರು ಸಿಂಗೊಳ್ಳಿ ಎಂದು ಕರೆಯುತ್ತಾರೆ. ಯಾವುದೇ ಎಣ್ಣೆ ಬಳಸದೇ, ಮಣ್ಣಿನ ಹೆಂಚು ಅಥವಾ ಕಾವಲಿಯ ಮೇಲೆ ಮಾಡುವ ಈ ದೋಸೆ, ಮಂಗಳೂರು ಶೈಲಿಯ ಚಿಕನ್ ಸುಕ್ಕಾಕ್ಕೆ ಒಳ್ಳೆ ಕಾಂಬಿನೇಷನ್. ಹಾಗಾದ್ರೆ ಇದನ್ನ ಮಾಡೋದು ಹೇಗೆ ಎಂಬುದನ್ನು ಇಲ್ಲಿ ನೋಡೋಣ.

Odu Dosa Recipe | Kappa Roti Recipe in kannada | Hanchina Dose Recipe
ಕರಾವಳಿ ಸ್ಪೆಷಲ್: ಚಿಕನ್ ಸುಕ್ಕಾಗೆ ಒಳ್ಳೆ ಕಾಂಬಿನೇಷನ್ ಈ ಕಪ್ಪರೊಟ್ಟಿ/ಓಡುದೋಸೆ ರೆಸಿಪಿ
ಕರಾವಳಿ ಸ್ಪೆಷಲ್: ಚಿಕನ್ ಸುಕ್ಕಾಗೆ ಒಳ್ಳೆ ಕಾಂಬಿನೇಷನ್ ಈ ಕಪ್ಪರೊಟ್ಟಿ/ಓಡುದೋಸೆ ರೆಸಿಪಿ
Prep Time
5 Mins
Cook Time
10M
Total Time
15 Mins

Recipe By: Shreeraksha

Recipe Type: Vegetarian

Serves: 3

Ingredients
  • ಬೇಕಾಗಿರುವ ಪದಾರ್ಥಗಳು:

    ದೋಸೆ ಅಕ್ಕಿ ಅಕ್ಕಿ - 3 ಕಪ್

    ತೆಂಗಿನಕಾಯಿ - 1.5 ಕಪ್

    ಉಪ್ಪು - ರುಚಿಗೆ

Red Rice Kanda Poha
How to Prepare
  • ತಯಾರಿಸುವ ವಿಧಾನ:

    ಅಕ್ಕಿಯನ್ನು 5 ರಿಂದ 6 ಗಂಟೆಗಳ ಕಾಲ ನೆನೆಸಿಡಿ ಅಥವಾ ರಾತ್ರಿ ನೆನೆಸಿಟ್ಟು ಬೆಳಗ್ಗೆ ಮಾಡಿದರೆ ಉತ್ತಮ.

    ನೆನೆಸಿಟ್ಟ ಅಕ್ಕಿಯನ್ನು ಚೆನ್ನಾಗಿ ತೊಳೆದು, ಮಿಕ್ಸಿ ಜಾರ್ ಗೆ ವರ್ಗಾಯಿಸಿ, ಅಕ್ಕಿ ರುಬ್ಬುವಾಗ 1.5 ಕಪ್ ತಾಜಾ ಚೂರುಚೂರು ತೆಂಗಿನಕಾಯಿ ಸೇರಿಸಿ. ರುಚಿಗೆ ತಕ್ಕಂತೆ ಉಪ್ಪನ್ನು ಸೇರಿಸಿ, ಚೆನ್ನಾಗಿ ರುಬ್ಬಿಕೊಳ್ಳಿ.

    ತಯಾರಾದ ಮಿಶ್ರಣವನ್ನು ಒಂದು ಪಾತ್ರೆಗೆ ಸೇರಿಸಿ, ನೀರನ್ನು ಸೇರಿಸಿ. ಹಿಟ್ಟು ನೀರಿರಬೇಕು ಆದರೆ ನಿರುದೋಸೆ ಮಾಡುವಷ್ಟು ತೆಳುವಾದ ಹಿಟ್ಟಿನ ಮಿಶ್ರಣ ಬೇಡ.

    ಬ್ಯಾಟರ್ ಸಿದ್ಧವಾದ ನಂತರ, ಓಡು (ಮಣ್ಣಿನ ತವಾ) ಒಲೆಯ ಮೇಲೆ ಇರಿಸಿ, ಹೈ ಫ್ಲೇಮ್ ನಲ್ಲಿಡಿ. ಹೀಗಿಟ್ಟಾಗ ಮಾತ್ರ ಓಡು ದೋಸೆ ಗರಿಗರಿಯಾದ ಅಂಚಿನೊಂದಿಗೆ ಮೃದುವಾಗಿ ಬರಲು ಸಾಧ್ಯ.

    ಹಂಚು ಬಿಸಿಯಾದ ನಂತರ, ಅದಕ್ಕೆ ಹಿಟ್ಟನ್ನು ಸುರಿಯಿರಿ, ಅದನ್ನು ಮಸಾಲೆದೋಸೆಯಂತೆ ಅಗಲ ಮಾಡಲು ಅಥವಾ ಹರಡಲು ಹೋಗಬೇಡಿ. ಕೇವಲ ಒಂದು ಅಥವಾ 2 ಸೌಟ್ ಹಿಟ್ಟನ್ನು ತವಾ ಮಧ್ಯದಲ್ಲಿ ಹಾಕಿ. ತಕ್ಷಣ ಅದನ್ನು ಮುಚ್ಚಳದಿಂದ ಮುಚ್ಚಿ. ಫ್ಲೇಮ್ ಹೆಚ್ಚೇ ಇರಲಿ.

    ನೆನಪಿಡಿ, ಈ ದೋಸೆ ಮಾಡುವಾಗ ಎಣ್ಣೆಯನ್ನು ಬಳಸುವುದಿಲ್ಲ. ಆದ್ದರಿಂದ ದೋಸೆ ತವಾಕ್ಕೆ ಅಂಟಿಕೊಳ್ಳುವ ಸಾಧ್ಯತೆಯಿದೆ. ಅದಕ್ಕೆ ಮುಚ್ಚಳದ ಸುತ್ತ ನೀರನ್ನು ಸಿಂಪಡಿಸಿ. ಇದು ದೋಸೆ ಸುಲಭವಾಗಿ ತೆಗೆಯಲು ಸಹಾಯ ಮಾಡುವುದು.

    ಸುಮಾರು ಒಂದು ನಿಮಿಷದ ನಂತರ ಅಥವಾ ಮುಚ್ಚಳವನ್ನು ತೆರೆಯಿರಿ ಮತ್ತು ನೀವು ಸುಲಭವಾಗಿ ದೋಸೆಯನ್ನು ತೆಗೆದುಹಾಕಬಹುದೇ ಎಂದು ನೋಡಿ. ಫ್ಲೇಮ್ ಹೆಚ್ಚು ಇಟ್ಟುಕೊಂಡಿರುವುದರಿಂದ, ಈ ದೋಸೆಯನ್ನು ಬೇಯಿಸಲು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ.ಅಲ್ಲದೆ ಇನ್ನೊಂದು ಬದಿಗೆ ತಿರುವಿ ಹಾಕುವ ಅಗತ್ಯವೂ ಇಲ್ಲ.

    ನೇರವಾಗಿ ಸರ್ವಿಂಗ್ ಪ್ಲೇಟ್‌ಗೆ ದೋಸೆಯನ್ನು ವರ್ಗಾಯಿಸಿ ಮತ್ತು ಮುಂದಿನ ದೋಸೆ ತಯಾರಿಸಲು ಬ್ಯಾಟರ್ ಸುರಿಯುವ ಮೊದಲು ಹೆಂಚನ್ನು ಒದ್ದೆಯಾದ ಮತ್ತು ಸ್ವಚ್ಛವಾದ ಬಟ್ಟೆಯಿಂದ ಒರೆಸಿಕೊಳ್ಳಿ.

    ಈ ಓಡು ಅಥವಾ ಕಪ್ಪ ರೊಟ್ಟಿಯನ್ನು ಚಿಕನ್ ಸುಕ್ಕಾದೊಂದಿಗೆ ಸವಿಯಲು ಉತ್ತಮವಾಗಿದೆ.

Instructions
Nutritional Information
  • People - 3
  • ಎನರ್ಜಿ - 133ಕ್ಯಾ
  • ಕೊಬ್ಬು - 5.2ಗ್ರಾ
  • ಪ್ರೋಟೀನ್ - 2.7ಗ್ರಾ
  • ಕಾರ್ಬೋಹೈಡ್ರೇಟ್ - 18.8ಗ್ರಾ
  • ಫೈಬರ್ - 1.1ಗ್ರಾ
[ 5 of 5 - 38 Users]
X
Desktop Bottom Promotion