Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ರಸಗುಲ್ಲಾವನ್ನು ಮೀರಿಸೋ ಜೈನರಿ ಸಿಹಿ
ಸಿಹಿತಿನಿಸು ಅಂದಾಕ್ಷಣ ಬಾಯಲ್ಲಿ ನೀರು ಬರುತ್ತೆ. ಸ್ವೀಟ್ ತಿನ್ನೋಣ ಅಂದರೆ ಈ ಲಾಕ್ ಡೌನ್ ಸಮಯದಲ್ಲಿ ಎಲ್ಲಾ ಬೇಕರಿ ಅಂಗಡಿಗಳು ಬಾಗಿಲು ಮುಚ್ಚಿವೆ. ಮಕ್ಕಳೋ ಆಗಾಗ ಏನಾದ್ರು ಕೊಡಮ್ಮ ಅಂತ ದುಂಬಾಲು ಬೀಳುತ್ತವೆ. ಹೀಗಿರುವಾಗ ರುಚಿರುಚಿ ಸಿಹಿತಿನಿಸು ಮಾಡೋದಕ್ಕೆ ನಿಮಗೆ ಐಡಿಯಾ ಹೊಳೆಯುತ್ತಿಲ್ಲವೇ? ಚಿಂತಿಸಬೇಡಿ. ನಿಮ್ಮ ಸಹಾಯಕ್ಕೆ ನಾವಿದ್ದೇವೆ.

ಇಲ್ಲೊಂದು ರುಚಿರುಚಿಯಾದ ಫಟಾಫಟ್ ಸಿಹಿತಿಂಡಿಯನ್ನು ಮಾಡುವ ವಿಧಾನ ತಿಳಿಸಿಕೊಡುತ್ತಿದ್ದೇವೆ. ಅದುವೇ ಜೈನರಿ. ನೋಡುವುದಕ್ಕೆ ರಸಗುಲ್ಲಾದಂತೆ ಕಂಡರೂ ಇದು ರಸಗುಲ್ಲಾ ಅಲ್ಲ. ಸಕ್ಕರೆ ಪಾಕವಿದ್ದರೂ ಜಾಮೂನಲ್ಲ. ಹಾಗಾದ್ರೆ ಹೇಗೆ ಮಾಡುವುದು ಈ ಜೈನರಿ ಎಂಬುದನ್ನು ತಿಳಿದುಕೊಳ್ಳಬೇಕೇ? ಮುಂದೆ ಓದಿ.
Recipe By: Sushma
Recipe Type: Sweet
Serves: 4
-
ಬೇಕಾಗುವ ಸಾಮಗ್ರಿಗಳು
. ಉದ್ದಿನ ಬೇಳೆ - ಒಂದುವರೆ ಕಪ್
. ಅಕ್ಕಿ- ಮುಕ್ಕಾಲುಕಪ್
. ಸಕ್ಕರೆ - ನಾಲ್ಕು ಕಪ್
. ಕೇಸರಿ - 10 ದಳಗಳು
. ಏಲಕ್ಕಿ - ನಾಲ್ಕು
. ಉಪ್ಪು- ರುಚಿಗೆ ತಕ್ಕಷ್ಟು
. ಅಡುಗೆ ಎಣ್ಣೆ- ನಾಲ್ಕರಿಂದ ಐದು ಕಪ್
-
ಮಾಡುವ ವಿಧಾನ -
ಉದ್ದಿನ ಬೇಳೆ ಮತ್ತು ಅಕ್ಕಿಯನ್ನು ಸುಮಾರು ಎರಡು ಘಂಟೆಗಳ ಕಾಲ ನೀರಿನಲ್ಲಿ ನೆನೆಸಿಡಿ.
ನಂತರ ಚಿಟಿಕೆ ಉಪ್ಪು ಸೇರಿಸಿ ಉದ್ದಿನ ಬೇಳೆ ಮತ್ತು ಅಕ್ಕಿಯನ್ನು ರುಬ್ಬಿಕೊಳ್ಳಿ.( ನೀರು ಸೇರಿಸುವುದು ಬೇಡ)
. ಒಂದು ಪಾತ್ರೆಯಲ್ಲಿ ಸಕ್ಕರೆಗೆ ನೀರು ಹಾಕಿ, ಕೇಸರಿ ದಳಗಳನ್ನು ಸೇರಿಸಿ ಪಾಕ ಮಾಡಿಕೊಳ್ಳಿ. ಜಾಮೂನು ತಯಾರಿಸುವುದಕ್ಕೆ ಸಕ್ಕರೆ ಪಾಕ ಮಾಡಿದಂತೆಯೇ ಮಾಡಿಕೊಳ್ಳಬೇಕು.
. ಪಾಕ ತಯಾರಾಗುತ್ತಿದ್ದಂತೆ ಏಲಕ್ಕಿ ಪುಡಿಯನ್ನು ಸೇರಿಸಿ ಇನ್ನೊಂದೆರಡು ಬಾರಿ ಕುದಿಸಿ. ಬಿಸಿ ಬಿಸಿ ಸಕ್ಕರೆ ಪಾಕ ತಯಾರಿಸಿಕೊಳ್ಳಿ.
. ಈಗಾಗಲೇ ರುಬ್ಬಿಕೊಂಡಿರುವ ಮಿಶ್ರಣವನ್ನು ಅಡುಗೆ ಎಣ್ಣೆಯಲ್ಲಿ ಸಣ್ಣಸಣ್ಣ ಉಂಡೆಗಾತ್ರ ಬರುವಂತೆ ಬಿಟ್ಟು ಕರಿಯಿರಿ. ಉದ್ದಿನ ವಡೆ ತಯಾರಿಸುವಾಗ ಕರಿಯುವಂತೆಯೇ ಕರಿಯಬೇಕು. ಹೆಚ್ಚು ಕೆಂಬಣ್ಣ ಮಾಡಬೇಡಿ. ಸಣ್ಣ ಉರಿಯಲ್ಲಿ ಕರಿಯುವುದು ಒಳ್ಳೆಯದು.
. ಕರಿದ ಉಂಡೆಯನ್ನು ಬಿಸಿಬಿಸಿ ಸಕ್ಕರೆ ಪಾಕಕ್ಕೆ ಹಾಕಿ.
.ಒಂದರ್ಧ ಘಂಟೆ ನೆನೆಯಲು ಬಿಡಿ.
. ಸಕ್ಕರೆ ಪಾಕದಲ್ಲಿ ನೆನೆದ ಉಂಡೆಗಳನ್ನು ಸಕ್ಕರೆ ಪಾಕದ ಜೊತೆಗೆ ಸರ್ವ್ ಮಾಡಿದರೆ ಜೈನರಿ ಸಿದ್ಧ.
- ಉದ್ದು ಮತ್ತು ಅಕ್ಕಿ ಮಿಶ್ರಿತ ಸಿಹಿಯಾಗಿರುವುದರಿಂದ ಕಾರ್ಬೋಹೈಡ್ರೇಟ್ಸ್ ನಿಮ್ಮ ದೇಹಕ್ಕೆ ಲಭ್ಯವಾಗುತ್ತದೆ . ಕೇಸರಿ ದಳಗಳನ್ನು ಸೇರಿಸಿರುವ ಸಿಹಿಯಾಗಿರುವುದರಿಂದ ಬಸುರಿ ಮಹಿಳೆಯರಿಗೂ ಕೂಡ ಒಳ್ಳೆಯದು. . ರಸಗುಲ್ಲಾದಲ್ಲಿರುವಂತೆ ಇದರಲ್ಲಿ ಕೊಬ್ಬಿನಂಶ ಇರುವುದಿಲ್ಲ. ಕಡಿಮೆ ಕೊಬ್ಬಿನಂಶ ಇರುವ ಸಿಹಿ ತಿನಿಸಾಗಿದೆ.



Click it and Unblock the Notifications
