Latest Updates
-
ಬೆಲೆ ಏರಿಕೆಯ ಬಿಸಿ: ಜೂನ್ CPI ವರದಿ ಮತ್ತು ನಿಮ್ಮ ಕಿಚನ್ ಬಜೆಟ್ ಉಳಿಸುವ ಸ್ಮಾರ್ಟ್ ಟಿಪ್ಸ್ -
ಸ್ವಿಗ್ಗಿ ಇನ್ಸ್ಟಾಮಾರ್ಟ್ ಗ್ರಾಹಕರಿಗೆ ಎಚ್ಚರಿಕೆ: ಹಾಲು, ಮೊಟ್ಟೆ ಖರೀದಿಸುವಾಗ ಈ ತಪ್ಪು ಮಾಡಬೇಡಿ! -
4-0 ಸೋಲಿನ ಆಘಾತದಲ್ಲಿ ಭಾರತೀಯ ಫ್ಯಾನ್ಸ್: ಏಕದಿನ ಸರಣಿಗೆ ಕಮ್ಬ್ಯಾಕ್ ಸಾಧ್ಯವೇ? ಇಲ್ಲಿದೆ ಪಂದ್ಯಗಳ ವೇಳಾಪಟ್ಟಿ ಮತ್ತು ಹೆಲ್ತ್ ಟಿಪ್ಸ್! -
ಮಾಸಿಕ ಶಿವರಾತ್ರಿ ಉಪವಾಸ: ಸುಸ್ತಾಗದಂತೆ ಇರಲು 6 ನಿಮಿಷದ ಸರಳ ವ್ಯಾಯಾಮ ಮತ್ತು ಟಿಪ್ಸ್ -
ಮನೆಯವರ ವಿರೋಧದ ನಡುವೆ ಮದುವೆ: ಅಲಹಾಬಾದ್ ಹೈಕೋರ್ಟ್ನಿಂದ ಜೋಡಿಗಳಿಗೆ ಸಿಕ್ಕಿತು ಭರ್ಜರಿ ರಕ್ಷಣೆ! -
ಮಳೆ ನಂತರ ದೆಹಲಿ-ಎನ್ಸಿಆರ್ನಲ್ಲಿ ಶುದ್ಧ ಗಾಳಿ: ನಿಮ್ಮ ಮನೆಯನ್ನು ಫ್ರೆಶ್ ಆಗಿಡಲು ಈ ಸರಳ ಟಿಪ್ಸ್ ಪಾಲಿಸಿ! -
ಯೋಗಿನಿ ಏಕಾದಶಿ: ಮಧುಮೇಹಿಗಳು ಉಪವಾಸ ಮಾಡುವಾಗ ಈ ಆರೋಗ್ಯ ಟಿಪ್ಸ್ ಮರೆಯದಿರಿ! -
ವಿಶ್ವ ಜನಸಂಖ್ಯಾ ದಿನ: ಉಚಿತ ಗರ್ಭನಿರೋಧಕಗಳು ಮತ್ತು ನಿಮ್ಮ ಗೌಪ್ಯತೆ ಬಗ್ಗೆ ತಿಳಿಯಲೇಬೇಕಾದ ಸತ್ಯಗಳು -
ಭಾರತ-ಇಂಗ್ಲೆಂಡ್ ಟಿ20 ಪಂದ್ಯದ ರೋಚಕತೆ ನಡುವೆ ಫಿಟ್ ಆಗಿರಲು ಈ 7 ನಿಮಿಷದ ಟಿಪ್ಸ್ ಮಿಸ್ ಮಾಡ್ಬೇಡಿ! -
ಮಳೆಗಾಲದ ಡೇಟಿಂಗ್: ಬಜೆಟ್ ಸ್ನೇಹಿ ಐಡಿಯಾಗಳು ಮತ್ತು ಸುರಕ್ಷಿತವಾಗಿರಲು ಇಲ್ಲಿವೆ ಬೆಸ್ಟ್ ಟಿಪ್ಸ್!
ರೆಸಿಪಿ: ಆಹಾ ಎಂಥ ರುಚಿ ಈ ಹೈದರಾಬಾದ್ ಟೊಮೆಟೊ ಚಟ್ನಿ, ನೀವೂ ಟ್ರೈ ಮಾಡಿ
ನೀವು ಹೈದರಾಬಾದ್ ಶೈಲಿಯ ಟೊಮೆಟೊ ಚಟ್ನಿ ಟೇಸ್ಟ್ ಮಾಡಿದ್ದೀರಾ? ಅದರ ಕೆಂಪು ಬಣ್ಣ ನೋಡುವಾಗಲೇ ಬಾಯಲ್ಲಿ ನೀರು ಬರುತ್ತದೆ, ಅಷ್ಟು ಚೆನ್ನಾಗಿರುತ್ತದೆ, ಅದರಲ್ಲೂ ಆ ಖಾರ ಚಟ್ನಿ ಎಷ್ಟೊಂದು ರುಚಿಯಾಗಿರುತ್ತದೆ. ನೀವು ಖಾರ ಹೆಚ್ಚು ತಿನ್ನುವುದಿಲ್ಲ ಎಂದಾದರೆ ನಿಮ್ಮ ರುಚಿಗೆ ತಕ್ಕಂತೆ ಮೆಣಸು ಹಾಕಿ. ಆದರೆ ಈ ಚಟ್ನಯನ್ನು ಹೈದರಾಬಾದ್ ಶೈಲಿಯಲ್ಲಿಯೇ ಸವಿಯಬೇಕೆಂದರೆ ನೀವು ಖಾರ ಚಟ್ನಿ ಮಾಡಿದರೆ ರುಚಿ. ಬನ್ನಿ ಇದನ್ನು ಮಾಡುವುದು ಹೇಗೆ ಎಂದು ನೋಡೋಣ

ಬೇಕಾಗುವ ಸಾಮಗ್ರಿ
ಹಣ್ಣಾದ ಟೊಮೆಟೊ 4 (ಕತ್ತರಿಸಿದ್ದು)
ಈರುಳ್ಳಿ 1 (ಕತ್ತರಿಸಿದ್ದ)
2 ಬೆಳ್ಳುಳ್ಳಿ
1 ಇಂಚಿನಷ್ಟು ದೊಡ್ಡದಾಗಿರುವ ಶುಂಠಿ
1/2 ಚಮಚ ಅರಿಶಿಣ ಪುಡಿ
ಖಾರದ ಪುಡಿ 1 ಚಮಚ
ರುಚಿಗೆ ತಕ್ಕ ಉಪ್ಪು
ಎಣ್ಣೆ 2 ಚಮಚ
ಸಾಸಿವೆ 1 ಚಮಚ
ಸ್ವಲ್ಪ ಕರಿಬೇವು
ಮಾಡುವುದು ಹೇಗೆ
ಸ್ಟೆಪ್ 1
ಪ್ಯಾನ್‌ಗೆ ಎಣ್ಣೆ ಹಾಕಿ ಎಣ್ಣೆ ಬಿಸಿಯಾದಾಗ ಕತ್ತರಿಸಿದ ಈರುಳ್ಳಿ ಹಾಕಿ ಕಂದು
ಬಣ್ಣ ಬರುವವರೆಗೆ ಫ್ರೈ ಮಾಡಿ.
' ಸ್ಟೆಪ್ 2
ಟೊಮೆಟೊ, ಶುಂಠಿ, ಬೆಳ್ಳುಳ್ಳಿ, ಹಸಿ ಮೆಣಸು ಹಾಕಿ ಟೊಮೆಟೊ ಮೆತ್ತಗಾಗುವವರೆಗೆ
ಫ್ರೈ ಮಾಡುತ್ತಾ ಬೇಯಿಸಿ.
ಸ್ಟೆಪ್ 3
ನಂತರ ಅರಿಶಿಣ ಪುಡಿ, ಖಾರದ ಪುಡಿ, ರುಚಿಗೆ ತಕ್ಕ ಉಪ್ಪು ಹಾಕಿ ಇನ್ನೂ ಸ್ವಲ್ಪ
ಹೊತ್ತು ಬೇಯಿಸಿ.
ಸ್ಟೆಪ್ 4
ನಂತರ ಉರಿಯಿಂದ ಇಳಿಸಿ ತಣ್ಣಗಾಗಲು ಬಿಡಿ, ನಂತರ ಸೌಟ್‌ನಿಂದ ಒತ್ತಿ ಪೇಸ್ಟ್ ರೀತಿ
ಮಾಡಿ
ಸ್ಟೆಪ್ 5
* ಈಗ ಅದೇ ಪ್ಯಾನ್‌ಗೆ 2 ಚಮಚ ಎಣ್ಣೆ ಹಾಕಿ ಅದಕ್ಕೆ ಸಾಸಿವೆ ಹಾಕಿ, ಸಾಸಿವೆ
ಚಟ್‌ಪಟ್ ಶಬ್ದ ಮಾಡುವಾಗ ಕರಿಬೇವು ಹಾಕಿ, ನಂತರ ಪೇಸ್ಟ್ ಹಾಕಿ.
ಈಗ ಈ ಟಚ್ನಿಯನ್ನುಯನ್ನು ದೋಸೆ, ಇಡ್ಲಿ ಜೊತೆ ಸರ್ವ್ ಮಾಡಿ, ರುಚಿಗೆ ಯಾವತ್ತು
ತಿನ್ನುವುದಕ್ಕಿಂತಲೂ ಸ್ವಲ್ಪ ಜಾಸ್ತಿ ತಿನ್ನುವಿರಿ.
ಟಿಪ್ಸ್:
ಹಸಿ ಮೆಣಸು, ಖಾರದ ಪುಡಿಯನ್ನು ನಿಮ್ಮ ಬಾಯಿ ರುಚಿಗೆ ತಕ್ಕಂತೆ ಬಳಸಿ
* ಸರ್ವ್ ಮಾಡುವ ಮುನ್ನ ಸ್ವಲ್ಪ ನಿಂಬೆರಸ ಹಿಂಡಿ
* ಈ ಚಟ್ನಿಯನ್ನು ನೀವು ಒಮ್ಮೆ ತಯಾರಿಸಿ, ಫ್ರಿಡ್ಜ್‌ನಲ್ಲಿಟ್ಟರೆ ವಾರದವರೆಗೂ
ಬಳಸಬೇಡಿ.
* ಸ್ಯಾಂಡ್‌ವಿಚ್‌ಗೆ ಬೇಕಾದರೂ ಹಕಿ ಸವಿಯಬಹುದು.
ಟೊಮೆಟೊ ಗೊಜ್ಜು ಅಲ್ಲ... ಇದು ಟೊಮೆಟೊ ಚಟ್ನಿ ಸೂಪರೋ ಸೂಪರ್...



Click it and Unblock the Notifications