Latest Updates
-
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ!
ಗೋಧಿ ಹಿಟ್ಟಿನ ಪೇಡಾ ಮಾಡಿದ್ರೆ ಮನೆಯವ್ರೆಲ್ಲಾ ಇಷ್ಟ ಪಡ್ತಾರೆ!
ಗೋಧಿ ಹಿಟ್ಟಿನಿಂದ ಹಲವು ರೀತಿಯ ತಿಂಡಿಗಳ ಮಾಡಿ ಸವಿಯಬಹುದು ಎಂಬುದು ನಿಮಗೂ ತಿಳಿದಿದೆ. ಅದ್ರಲ್ಲೂ ಹೆಚ್ಚಾಗಿ ಗೋಧಿಯಿಂದ ಚಪಾತಿ ಹಿಟ್ಟಿನಿಂದ ಚಪಾತಿ ಹಾಗೂ ಪೂರಿಯನ್ನು ಎಲ್ಲರ ಮನೆಯಲ್ಲೂ ಮಾಡಿ ಸವಿಯೋದು ಕಾಮನ್. ಹಾಗೆ ಇದು ಆರೋಗ್ಯದ ದೃಷ್ಟಿಯಲ್ಲೂ ಬಹಳ ಉತ್ತಮ ಖಾದ್ಯ ಎಂಬುದಾಗಿ ಪರಿಗಣಿಸಲಾಗುತ್ತದೆ.
ಹಾಗೆ ಗೋಧಿಯಿಂದ ಹಲವು ಬಗೆಯ ಸಿಹಿ ತಿಂಡಿಯನ್ನ ಮಾಡಬಹುದು. ಅದ್ರಲ್ಲೂ ಉತ್ತರ ಕರ್ನಾಟಕ ಶೈಲಿಯಲ್ಲಿ ಅದರಲ್ಲೂ ಧಾರವಾಡದ ಸ್ಪೆಷಲ್ ಪೇಡಾದಂತೆ ಗೋಧಿ ಹಿಟ್ಟಿನಲ್ಲೂ ಸಿಹಿಯಾದ ಪೇಡಾ ಮಾಡಬಹುದು. ಈ ರುಚಿಯ ಪೇಡಾ ಒಮ್ಮೆ ನೀವು ಸವಿದರೆ ಯಾವಾಗಲು ಇದೇ ಸಿಹಿ ತಿಂಡಿ ಮಾಡಿ ಸವಿಯಲು ಮುಂದಾಗೋದು ಖಚಿತ.

ಹಾಗೆ ಈ ಗೋದಿ ಹಿಟ್ಟಿನ ಪೇಡಾ ಮಾಡೋಕೆ ಹೆಚ್ಚು ವಸ್ತುಗಳ ಅಗತ್ಯವಿಲ್ಲ. ಸುಲಭವಾಗಿ ಮನೆ ಮಂದಿಗೆಲ್ಲಾ ಇಷ್ಟವಾಗುವಂತಹ ರುಚಿಯಲ್ಲಿ ಇದನ್ನು ಮಾಡಿ ಮುಗಿಸಬಹುದು. ಹಾಗೆ ನಿಮ್ಮ ಮನೆಯಲ್ಲಿ ಮಕ್ಕಳಿದ್ದರೆ ಈ ಸಿಹಿ ಅವರ ಬಾಯಲ್ಲಿ ನೀರು ತರಲಿದೆ. ಹಾಗಾದ್ರೆ ಗೋಧಿ ಹಿಟ್ಟಿನಿಂದ ಸುಲಭವಾಗಿ ಪೇಡಾ ಮಾಡಿ ಸವಿಯುವ ಕುರಿತು ತಿಳಿದುಕೊಳ್ಳೋಣ.
ಗೋಧಿ ಹಿಟ್ಟಿನ ಪೇಡಾ ಮಾಡಲು ಯಾವೆಲ್ಲಾ ವಸ್ತುಗಳು ಬೇಕು? ಮಾಡಲು ಎಷ್ಟು ಸಮಯ ಹಿಡಿಯಲಿದೆ? ವಿಧಾನವೇನು ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.
ಗೋಧಿ ಹಿಟ್ಟಿನ ಪೇಡಾ ಮಾಡಲು ಬೇಕಾಗುವ ವಸ್ತುಗಳು
- ಗೋಧಿ ಹಿಟ್ಟು
- ಎಣ್ಣೆ ಅಥವಾ ತುಪ್ಪ
- ಹಾಲಿನ ಪುಡಿ
- ಸಕ್ಕರೆ ಪುಡಿ
ಗೋಧಿ ಹಿಟ್ಟಿನ ಪೇಡಾ ಮಾಡುವ ವಿಧಾನವೇನು?
ಮೊದಲಿಗೆ ಬಾಣಲೆಗೆ 1 ಕಪ್ ಗೋಧಿ ಹಿಟ್ಟು ಹಾಕಿಕೊಂಡು ಚೆನ್ನಾಗಿ ಹುರಿದುಕೊಳ್ಳಬೇಕು. ಕಡಿಮೆ ಉರಿಯಲ್ಲಿ ಇಟ್ಟುಕೊಂಡು ನಿಧಾನವಾಗಿ ಹುರಿದುಕೊಳ್ಳಬೇಕು. 5ರಿಂದ 6 ನಿಮಷ ಫ್ರೈ ಮಾಡಿಕೊಂಡರೆ ಸಾಕಾಗುತ್ತದೆ. ಇದಾದ ಬಳಿಕ 2 ಸ್ಪೂನ್ ಎಣ್ಣೆ ಅಥವಾ ತುಪ್ಪ ಕೂಡ ಹಾಕಿಕೊಂಡು ಮತ್ತೆ ಫ್ರೈ ಮಾಡಬೇಕು. 1 ನಿಮಿಷ ಬಿಟ್ಟು ಮತ್ತೆ 2 ಸ್ಪೂನ್ ಎಣ್ಣೆ ಹಾಕಿಕೊಂಡು ಮಿಕ್ಸ್ ಮಾಡಿ. ಇದು ಬ್ರೌನ್ ಕಲರ್ಗೆ ಬರುವವರೆಗೂ ಹುರಿಯಬೇಕು.
ಒಟ್ಟಾರೆ 6ರಿಂದ 7 ಸ್ಪೂನ್ ಎಣ್ಣೆ ಹಾಕಿಕೊಳ್ಳಬೇಕಾಗುತ್ತೆ. ಈ ಹಿಟ್ಟು ಮೃದುವಾಗಿ ಉಂಡೆ ಮಾಡಲು ಬರುವಂತಹ ಹದಕ್ಕೆ ಬರಬೇಕು. ನುಣ್ಣಗೆ ಬಂದ ಬಳಿಕ ಒಲೆ ಆಫ್ ಮಾಡಿಕೊಳ್ಳಿ. ಈಗ 4ರಿಂದ 5 ಸ್ಪೂನ್ ಹಾಲಿನ ಪುಡಿ ಹಾಕಬೇಕು. ಹಾಗೆ ಎನ್ನಾಗಿ ಮಿಕ್ಸ್ ಮಾಡಿ. ಗಂಟುಗಳು ಇಲ್ಲದಂತೆ ಮಿಕ್ಸ್ ಮಾಡಿ. ನಂತರ 1 ಕಪ್ ಸಕ್ಕರೆ ಪುಡಿ ಹಾಕಿಕೊಂಡು ಕೈಯಿಂದ ಮಿಕ್ಸ್ ಮಾಡಿ.
ಸಕ್ಕರೆಯನ್ನು ಮಿಕ್ಸಿ ಜಾರ್ಗೆ ಹಾಕಿ ಪುಡಿ ಮಾಡಬಹುದು, ಇಲ್ಲವೆ ಅಂಗಡಿಯಲ್ಲೂ ಇದು ಸಿಗಲಿದೆ. ಈಗ ಕೈಯಿಂದ ಒತ್ತಿಕೊಳ್ಳುತ್ತಾ ಉಂಡೆ ಕಟ್ಟಿಕೊಳ್ಳಬೇಕು. ನಂತರ ಈ ಉಂಡೆಯನ್ನು ಸಕ್ಕರೆ ಪುಡಿಯಲ್ಲಿ ಒಮ್ಮೆ ಹೊರಳಿಸಬೇಕು. ಅದರ ತುಂಬಿ ಬಿಳಿ ಬಿಳಿಯಾಗಿ ಸಕ್ಕರೆ ಪುಡಿ ಹಿಡಿಯಬೇಕು. ಇದೇ ವಿಧಾನವಾಗಿ ಎಲ್ಲಾ ಉಂಡೆಗಳನ್ನು ಮಾಡಿಕೊಳ್ಳಿ.
ಇಷ್ಟಾದರೆ ನಿಮ್ಮ ಮುಂದೆ ಸವಿಯಲು ಗೋಧಿ ಪೇಡಾ ಸಿದ್ದವಾಗುತ್ತೆ. ಇದರ ರುಚಿ ಒಮ್ಮೆ ಸವಿದು ನೋಡಿದ್ರೆ ಪದೇ ಪದೇ ಸವಿಯಲು ಮುಂದಾಗೋದು ಖಚಿತ. ಹಾಗೆ ಎಲ್ಲ ಹಬ್ಬದಲ್ಲೂ ಇದನ್ನು ಮಾಡಿ ಸವಿಯಲು ನೀವು ಮನಸ್ಸು ಮಾಡುತ್ತೀರಿ. ಹಾಗೆ ಮನೆಗೆ ಯಾರಾದರು ಸ್ನೇಹಿತರು, ಅತಿಥಿಗಳು ಬಂದಾಗಲಂತು ಇದನ್ನೇ ಮಾಡಿ ನೀಡಲು ಮುಂದಾಗುತ್ತೀರಿ. ಹಾಗೆ ಇದನ್ನು ಮಾಡೋದು ಕೂಡ ಬಹಳ ಸುಲಭ.



Click it and Unblock the Notifications
