Latest Updates
-
ಕೋಲ್ಕತ್ತಾದಲ್ಲಿ ಕಳಪೆ ಗಾಳಿ: ವಾಕಿಂಗ್ ಹೋಗುವ ಮುನ್ನ ಈ ಸುರಕ್ಷಿತ ಸಮಯ ಮತ್ತು ಮಾರ್ಗಗಳನ್ನು ತಪ್ಪದೇ ತಿಳಿಯಿರಿ -
ಎಆರ್ ರಹಮಾನ್ ಬೆಂಗಳೂರು ಕಾನ್ಸರ್ಟ್: ಮೆಟ್ರೋ ಟೈಮಿಂಗ್ಸ್ ಮತ್ತು ಸುರಕ್ಷಿತವಾಗಿ ಮನೆ ಸೇರಲು ಇಲ್ಲಿದೆ ಪಕ್ಕಾ ಪ್ಲಾನ್! -
ಮುಂಬೈನಲ್ಲಿ 10% ನೀರು ಕಡಿತ: ನೀರಿನ ಅಭಾವ ಎದುರಿಸಲು ಮತ್ತು ಉಳಿತಾಯ ಮಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಹಬ್ಬದ ಸಿಹಿ ಖರೀದಿಸುವ ಮುನ್ನ ಎಚ್ಚರ! FSSAI ದಾಳಿ: ಕಳಪೆ ಖೋವಾ, ಪನ್ನೀರ್ ಪತ್ತೆ ಹೇಗೆ? -
ಭಾರತ vs ಪಾಕಿಸ್ತಾನ ಏಷ್ಯನ್ ಗೇಮ್ಸ್ ಫೈನಲ್: ಹೈ-ವೋಲ್ಟೇಜ್ ಕದನಕ್ಕೆ ಸಜ್ಜಾಗಿ, ಲೈವ್ ವೀಕ್ಷಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ಮುಂಬೈನಲ್ಲಿ ಕಲುಷಿತ ಗಾಳಿ: ವಾಕಿಂಗ್ ಹೋಗುವ ಮುನ್ನ ಈ ಎಚ್ಚರಿಕೆ ವಹಿಸಿ, ಇಲ್ಲದಿದ್ದರೆ ಆರೋಗ್ಯಕ್ಕೆ ಕುತ್ತು! -
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ!
ಬ್ರೇಕ್‌ಫಾಸ್ಟ್‌ಗೆ ಮಸಾಲೆ ವಾಂಗೀಬಾತ್ ಮಾಡಿ: ಇಲ್ಲಿದೆ ಸುಲಭದ ವಿಧಾನ
ಬೆಳಗ್ಗೆ ತಿಂಡಿಯ ಸಮಯದಲ್ಲಿ ಸುಲಭವಾಗಿ ನೀವು ಯಾವುದಾದರು ಖಾದ್ಯ ಮಾಡಿ ಸವಿಯುವ ಬಯಕೆ ಹೊಂದಿರಬಹುದು. ಅದ್ರಲ್ಲೂ ರೈಸ್‌ನಿಂದ ಮಾಡುವ ಖಾದ್ಯಗಳು ಹಲವರಿಗೆ ಇಷ್ಟವಾಗುತ್ತೆ. ಬಹುತೇಕರು ಅನ್ನದಿಂದ ಮಾಡುವ ಪಲಾವ್, ರೈಸ್ ಬಾತ್, ಪುಳಿಯೋಗರೆ ಸೇರಿದಂತೆ ಹಲವು ರೀತಿಯ ಖಾದ್ಯಗಳು ಅಂದ್ರೆ ಬಾಯಲ್ಲಿ ನೀರುಬರಬಹುದು. ಇನ್ನು ಸುಲಭವಾಗಿ ಮಾಡುವ ಚಿತ್ರಾನ್ನ, ಹುಳಿ ಅನ್ನ, ವಾಂಗೀಬಾತ್ ಸಹ ಬಹುತೇಕರ ಇಷ್ಟದ ಖಾದ್ಯ.
ಹಾಗೆ ನಾವಿಂದು ಮಸಾಲೆ ಭರಿತ ಸುಲಭವಾಗಿ ಮಾಡುವಂತಹ ವಾಂಗೀಬಾತ್ ಮಾಡುವ ಕುರಿತು ತಿಳಿಯೋಣ. ಅದ್ರಲ್ಲೂ ಈ ಬದನೆಕಾಯಿ ಹಾಕಿ ಮಾಡುವಂತಹ ವಾಂಗೀಬಾತ್ ಅಂದ್ರೆ ಎಲ್ಲರಿಗೂ ಇಷ್ಟವಾಗುತ್ತೆ. ಹೋಟೆಲ್‌ಗಳಲ್ಲಿ ನೀಡುವಂತಹ ಈ ವಾಂಗೀಬಾತ್ ವಿಶೇಷ ರುಚಿಯಲ್ಲಿ ಕೂಡಿರಲಿದೆ. ಹಾಗಾದ್ರೆ ನಾವಿಂದು ಮನೆಯಲ್ಲೇ ಈ ಮಸಾಲೆ ಭರಿತ ವಾಂಗೀಬಾತ್ ಮಾಡುವ ಕುರಿತಾಗಿ ತಿಳಿದುಕೊಳ್ಳೋಣ.
ಮಸಾಲೆ ವಾಂಗೀಬಾತ್ ಮಾಡಲು ಯಾವೆಲ್ಲಾ ವಸ್ತುಗಳು ಬೇಕು? ಮಾಡುವ ವಿಧಾನವೇನು? ಎಷ್ಟು ಸಮಯ ಹಿಡಿಯಲಿದೆ ಎಂಬೆಲ್ಲಾ ಕುರಿತಾದ ಮಾಹಿತಿಯನ್ನು ನಾವಿಲ್ಲಿ ತಿಳಿದುಕೊಳ್ಳೋಣ.
ಮಸಾಲೆ ವಾಂಗೀಬಾತ್ ಮಾಡಲು ಅಗತ್ಯ ವಸ್ತುಗಳು
- ಅಕ್ಕಿ
- ಬದನೆಕಾಯಿ - 3
- ಈರುಳ್ಳಿ - 3
- ಹುಣಸೆಹಣ್ಣು
- ಟೊಮೆಟೋ - 1
- ಜೀರಿಗೆ
- ಕರಿಬೇವು
- ಸಾಸಿವೆ
- ಹಸಿರು ಮೆಣಸಿನಕಾಯಿ
- ಶುಂಠಿ ಬೆಳ್ಳುಳ್ಳಿ ಪೇಸ್ಟ್
- ಕೆಂಪು ಮೆಣಸಿನ ಪುಡಿ
- ಅರಿಶಿನ ಪುಡಿ
- ವಾಂಗಿ ಬಾತ್ ಪೌಡರ್
- ಕೊತ್ತಂಬರಿ ಸೊಪ್ಪು
- ಅಡುಗೆ ಎಣ್ಣೆ
- ರುಚಿಗೆ ತಕ್ಕಷ್ಟು ಉಪ್ಪು
ಮಸಾಲೆ ವಾಂಗೀಬಾತ್ ಮಾಡುವ ವಿಧಾನವೇನು?
ಮೊದಲು ಒಲೆ ಮೇಲೆ ಕುಕ್ಕರ್ ಇಟ್ಟು ಎಣ್ಣೆ ಹಾಕಿಕೊಂಡು ಬಳಿಕ ಜೀರಿಗೆ, ಸಾಸಿವೆ, ಈರುಳ್ಳಿ, ಕಡಲೆ ಬೇಳೆ, ಕರಿಬೇವು, ಹಸಿ ಮೆಣಸು ಹಾಕಿ ಫ್ರೈ ಮಾಡಿಕೊಳ್ಳಿ. ಇದಕ್ಕೆ ಶುಂಠಿ ಬೆಳ್ಳುಳ್ಳಿ ಪೇಸ್ಟ್, ಟೊಮೆಟೋ ಹಾಕಿ ಚೆನ್ನಾಗಿ ಫ್ರೈ ಮಾಡಿಕೊಳ್ಳಿ. ಈ ರೆಸಿಪಿ ಆರಂಭಿಸುವ ಮುನ್ನವೆ ಅಳತೆ ಕಪ್‌ನಲ್ಲಿ ಅಕ್ಕಿಯನ್ನು ತೊಳೆದು ನೆನೆಸಿಟ್ಟುಕೊಳ್ಳಿ. ಹಾಗೆ ಮೈಸೂರು ಬದನೆಯನ್ನು ಕತ್ತರಿಸಿಕೊಂಡು ನೀರಿನಲ್ಲ ಹಾಕಿಟ್ಟುಕೊಳ್ಳಿ.
ಈಗ ಕುಕ್ಕರ್‌ಗೆ ಹೆಚ್ಚಿಕೊಂಡಿರುವ ಬದನೆಕಾಯಿಯನ್ನು ಹಾಕಿಕೊಳ್ಳಿ. ಹಾಗೆ ಇದಕ್ಕೆ ಅರಶಿಣ ಪುಡಿ, ಖಾರದ ಪುಡಿ ಸಹ ಹಾಕಿಕೊಳ್ಳಿ. ಉಪ್ಪು ಕೂಡ ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿ. ಈಗ ವಾಂಗೀಬಾತ್ ಪುಡಿ ಸಹ ಹಾಕಿ ಮಿಶ್ರಣ ಮಾಡುತ್ತಾ ಇರಿ. ಇದು ಗೊಜ್ಜು ರೀತಿ ಬರಬೇಕು. ಈಗ ಇದಕ್ಕೆ ಒಂದು ಸಣ್ಣ ಉಂಡೆಯ ಹುಣಸೆ ಹುಳಿಯ ನೀರನ್ನು ಸಹ ಹಾಕಿಕೊಳ್ಳಬೇಕು.
ಈಗ ಅಳತೆ ಕಪ್‌ನಲ್ಲಿಯೇ ನೀರು ಹಾಕಿಕೊಳ್ಳಿ. ಅಕ್ಕಿಯ ಅಳತೆಯ ಪ್ರಕಾರ ಎರಡರಷ್ಟು ನೀರನ್ನು ಇದಕ್ಕೆ ಹಾಕಿಕೊಳ್ಳಿ. ಕುದಿಬರಲು ಬಿಟ್ಟು ನಂತರ ನೆನೆಸಿಟ್ಟಿರುವ ಅಕ್ಕಿಯನ್ನು ಹಾಕಿ ಮಿಶ್ರಣ ಮಾಡಿ, ನಿಧಾನಕ್ಕೆ ಕುದಿಬರಲು ಬಿಡಿ. ಇದು ಕುದಿಬರಲು ಆರಂಭಿಸಿದಾಗ ಕುಕ್ಕರ್ ಮುಚ್ಚಳ ಮುಚ್ಚಿ 2 ಸೀಟಿ ಹೊಡೆಯಲು ಬಿಡಿ. ಕೊನಯೆಲ್ಲಿ ಮುಚ್ಚಳ ತೆಗೆದು ಒಮ್ಮೆ ಮಿಕ್ಸ್ ಮಾಡಿಕೊಂಡರೆ ನಿಮ್ಮ ಮುಂದೆ ರುಚಿ ರುಚಿಯಾದ ಮಸಾಲೆ ವಾಂಗೀಬಾತ್ ಸಿದ್ದವಾಗುತ್ತೆ. ನೀವು ಸಹ ಮಾಡಿ ಸವಿದು ನೋಡಿ.



Click it and Unblock the Notifications

