Latest Updates
-
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ವಿಚ್ಛೇದನ, ಕಸ್ಟಡಿ ಸಮಸ್ಯೆಗಳಿಗೆ ಇಲ್ಲಿದೆ ಸುಲಭ ಪರಿಹಾರ! -
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ? -
ಓಣಂ ಸದ್ಯದ ಸಂಭ್ರಮ: ಬೆಲೆ ಏರಿಕೆ ಮತ್ತು ಆರೋಗ್ಯದ ಚಿಂತೆಯಿಲ್ಲದೆ ಹಬ್ಬ ಆಚರಿಸುವುದು ಹೇಗೆ? -
ಆಗಸ್ಟ್ 2026 ಏಕಾದಶಿ: ಸ್ಮಾರ್ತ vs ವೈಷ್ಣವ ವ್ರತದ ದಿನಾಂಕಗಳ ಗೊಂದಲವೇ? ಮಧುಮೇಹಿಗಳಿಗೆ ಇಲ್ಲಿದೆ ಉಪವಾಸದ ಸೂತ್ರ! -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ನಿಮ್ಮ ಮಕ್ಕಳೊಂದಿಗೆ ಚಂದ್ರನ ರಹಸ್ಯಗಳನ್ನು ಅನ್ವೇಷಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಓಣಂ ಹಬ್ಬದ ಸಂಭ್ರಮ: ಮಳೆಯಲ್ಲೂ ಸ್ಟೈಲಿಶ್ ಆಗಿ ಕಾಣಲು ₹1,200 ರೊಳಗೆ ಬೆಸ್ಟ್ ಫ್ಯಾಷನ್ ಟಿಪ್ಸ್! -
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್!
ಉಡುಪಿ ಹೋಟೆಲ್ ಮಾದರಿಯ ಘಮಘಮಿಸುವ ಬಿಸಿ ಬೇಳೆ ಬಾತ್...!! ಮಾಡೋದು ಹೇಗೆ?
ಬ್ರೇಕ್‌ಫಾಸ್ಟ್‌ಗೆ ನೀವು ರುಚಿ ರುಚಿಯ ಬಾಯಿ ರುಚಿಯ ತಿಂಡಿ ಮಾಡುವುದನ್ನೆ ಹೆಚ್ಚಾಗಿ ಇಷ್ಟಪಡುತ್ತಾರೆ. ಏಕೆಂದರೆ ಬೆಳಗಿನ ಆರಂಭ ರುಚಿಕರ ತಿಂಡಿಯಿಂದ ಆದರೆ ಇಡೀ ದಿನ ಅದ್ಭುತವಾಗಿರುತ್ತೆ. ಹೀಗಾಗಿ ಮಸಾಲೆ ಭರಿತ ಪಲಾವ್, ರೈಸ್ ಬಾತ್, ವಾಂಗಿಬಾತ್ ಸವಿಯಲು ಹಲವು ಇಷ್ಟಪಡುತ್ತಾರೆ. ರೈಸ್‌ನಿಂದ ಮಾಡಿದ ಯಾವುದೇ ಖಾದ್ಯ ಬೆಳಗ್ಗಿನ ಉಪಹಾರದ ಫಸ್ಟ್ ಚಾಯ್ಸ್ ಆಗಿರುತ್ತೆ.
ಅದೇ ರೀತಿ ಬೆಳಗ್ಗೆ ನಾವು ಬಿಸಿ ಬೇಳೆ ಬಾತ್ ಸಹ ಸವಿಯಲು ಇಷ್ಟಪಡುತ್ತೇವೆ. ಸಾಮಾನ್ಯವಾಗಿ ಹೋಟೆಲ್‌ಗಳಲ್ಲಿ ನೀಡುವ ಬಿಸಿ ಬೇಳೆ ಬಾತ್ ಅದ್ಭುತ ರುಚಿಯಲ್ಲಿರುತ್ತೆ. ಅದರ ಮಸಾಲೆ ಪರಿಮಳಕ್ಕೆ ಕೆಲವರಿಗೆ ಬಾಯಲ್ಲಿ ನೀರು ಬರುತ್ತೆ. ಆದರಲ್ಲೂ ಉಡುಪಿ ಹೋಟೆಲ್ ಸ್ಟೈಲ್‌ನಲ್ಲಿ ಮಾಡುವಂತಹ ಬಿಸಿ ಬೇಳೆ ಬಾತ್ ಎಲ್ಲರಿಗೂ ಇಷ್ಟವಾಗುತ್ತೆ.

ನಾವಿಂದು ಉಡುಪಿ ಹೋಟೆಲ್ ಸ್ಟೈಲ್‌ನ ಬಿಸಿ ಬೇಳೆ ಬಾತ್ ಮಾಡುವ ಕುರಿತು ತಿಳಿಯೋಣ. ಈ ಖಾದ್ಯ ಬೆಳಗಿನ ಉಪಹಾರಕ್ಕೆ ಹೇಳಿ ಮಾಡಿಸಿದ ಬ್ರೇಕ್ ಫಾಸ್ಟ್ ಆಗಿರಲಿದೆ. ಯಾರು ಕೂಡ ಬೇಡ ಅಂತ ಹೇಳೋಕೆ ಸಾಧ್ಯನೇ ಇಲ್ಲ. ಹಾಗಾದ್ರೆ ಈ ಉಡುಪಿ ಹೋಟೆಲ್ ಶೈಲಿಯ ವಿಭಿನ್ನ ಬಿಸಿ ಬೇಳೆ ಬಾತ್ ಮಾಡುವುದು ಹೇಗೆ? ಇದನ್ನು ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವ ವಿಧಾನವೇನು ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಉಡುಪಿ ಹೋಟೆಲ್ ಸ್ಟೈಲ್‌ನ ಬಿಸಿ ಬೇಳೆ ಬಾತ್ ಮಾಡಲು ಬೇಕಾಗುವ ವಸ್ತುಗಳು
- ತೊಗರಿ ಬೇಳೆ
- ಹಸಿ ಬಟಾಣಿ
- ಗೆಡ್ಡ ಕೋಸು
- ಕ್ಯಾರೆಟ್
- ಬೀನ್ಸ್
- ಟೊಮೆಟೋ
- ಅವಲಕ್ಕಿ - ಅರ್ಧ ಕಪ್
- ಸಾಸಿವೆ
- ಜೀರಿಗೆ
- ಕಡಲೆ ಬೀಜ
- ಒಣ ಮೆಣಸು
- ಈರುಳ್ಳಿ
- ಕರಿಬೇವು
- ಕ್ಯಾಪ್ಸಿಕಂ
- ಹುಣಸೆ ಹುಳಿ
- ಅರಿಶಿನ ಪುಡಿ
- ಖಾರದ ಪುಡಿ
- ಬಿಸಿ ಬೇಳೆಬಾತ್ ಪುಡಿ
- ಕೊತ್ತಂಬರಿ ಸೊಪ್ಪು
- ಅಡುಗೆ ಎಣ್ಣೆ
- ರುಚಿಗೆ ತಕ್ಕಷ್ಟು ಉಪ್ಪು
ಉಡುಪಿ ಹೋಟೆಲ್ ಸ್ಟೈಲ್‌ನ ಬಿಸಿ ಬೇಳೆ ಬಾತ್ ಮಾಡುವ ವಿಧಾನ
ಒಲೆ ಮೇಲೆ ಒಂದು ಕುಕ್ಕರ್ ಇಟ್ಟು ಅದಕ್ಕೆ ಅರ್ಧ ಕಪ್ ತೊಗರಿ ಬೇಳೆಯನ್ನು ತೊಳೆದುಕೊಂಡು ಹಾಕಿಕೊಳ್ಳಿ. ನಂತರ ಇದಕ್ಕೆ ನೆನೆಸಿಟ್ಟ ಹಸಿ ಬಟಾಣಿಯನ್ನು ಹಾಕಿ. ನಂತರ ಸಣ್ಣದಾಗಿ ಹೆಚ್ಚಿರುಕೊಂಡಿರುವ ಗೆಡ್ಡೆಕೋಸು, ಕ್ಯಾರೆಟ್, ಬೀನ್ಸ್ ಹಾಕಿ. ನಂತರ ಸಾಂಬಾರ್‌ಗೆ ಹೆಚ್ಚುವಂತೆ ಟೊಮೆಟೋ ಹೆಚ್ಚಿಕೊಂಡು ಇದಕ್ಕೆ ಹಾಕಿ ತರಕಾರಿ ಮುಳುಗುವಷ್ಟು ನೀರು ಹಾಕಿ ಮುಚ್ಚಳ ಮುಚ್ಚಿ 2 ಸೀಟಿ ಹೊಡೆಯಲು ಬಿಡಿ.
ಈಗ ಒಂದು ಬೌಲ್‌ಗೆ 1 ಕಪ್ ದಪ್ಪ ಅವಲಕ್ಕಿ ಹಾಕಿ ತೊಳೆದುಕೊಂಡು ತೆಗೆದು ಒಂದು ಬೌಲ್‌ಗೆ ಹಾಕಿಟ್ಟುಕೊಳ್ಳಿ. ಈಗ ಒಲೆ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಅಥವಾ ತುಪ್ಪ ಹಾಕಿಕೊಳ್ಳಿ ಎಣ್ಣೆ ಸ್ವಲ್ಪ ಹೆಚ್ಚಿಗೆ ಹಾಕಿಕೊಳ್ಳಿ. ನಂತರ ಇದಕ್ಕೆ ಸಾಸಿವೆ, ಜೀರಿಗೆ, ಕಡಲೆ ಬೀಜ, ಒಣ ಮೆಣಸು, ಈರುಳ್ಳಿ, ಕ್ಯಾಪ್ಸಿಕಂ, ಕರಿಬೇವು ಹಾಕಿ 3 ನಿಮಿಷ ಫ್ರೈ ಮಾಡಿ.
ಈಗ 1 ಕಪ್ ಹುಣಸೆ ಹುಳಿಯ ನೀರು ಹಾಕಿಕೊಳ್ಳಿ. ಹಾಗೆ ಖಾರದ ಪುಡಿ, ಅರಶಿಣ ಪುಡಿ, ಬಿಸಿ ಬೇಳೆ ಬಾತ್ ಪೌಡರ್ 2 ಸ್ಪೂನ್ ಹಾಕಿ, ಹಾಗೆ ಉಪ್ಪು ಕೂಡ ಹಾಕಿಕೊಂಡು 2 ನಿಮಿಷ ಕುದಿಯಲು ಬಿಡಿ. ಈಗ ಬೇಯಿಸಿಕೊಂಡಿರುವ ಬೇಳೆ ತರಕಾರಿ ಕೂಡ ಇದಕ್ಕೆ ಹಾಕಿ ಮಿಕ್ಸ್ ಮಾಡಿಕೊಳ್ಳಿ, ಅನಂತರ ಬೌಲ್‌ನಲ್ಲಿರುವ ಅವಲಕ್ಕಿಯನ್ನು ಕೂಡ ಇದಕ್ಕೆ ಹಾಕಿ ಮಿಕ್ಸ್ ಮಾಡಿ ಕುದಿಯಲು ಬಿಡಿ. ನೀರು ಕಡಿಮೆ ಇದ್ದರೆ ಸ್ವಲ್ಪ ನೀರು ಹಾಕಿಕೊಳ್ಳಿ. ಹೀಗೆ 5 ನಿಮಿಷ ಕುದಿಯಲು ಬಿಟ್ಟರೆ ಸಾಕಾಗುತ್ತದೆ. ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಹಾಕಿ ಒಲೆ ಆಫ್ ಮಾಡಿಕೊಳ್ಳಿ.
ಇಷ್ಟಾದರೆ ಬಿಸಿ ಬೇಳೆ ಬಾತ್ ರೆಡಿಯಾಗುತ್ತದೆ. ಬಿಸಿ ಬಿಸಿ ಇದ್ದಾಗಲೇ ಸವಿಯಲು ನೀಡಿದರೆ ಅದರ ರುಚಿ ದುಪ್ಪಟ್ಟಾಗುತ್ತದೆ. ಇದರ ಮೇಲೆ ಖಾರ ಹಾಕಿಕೊಂಡು ಸವಿಯಲು ನೀಡಿದರೆ ರುಚಿಗೆ ಎಲ್ಲರು ಫಿದಾ ಆಗುತ್ತಾರೆ.



Click it and Unblock the Notifications