Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ದೇವಸ್ಥಾನದಲ್ಲಿ ಮಾಡುವ ಹೀರೆಕಾಯಿ ಸಾಂಬಾರ್ ಮಾಡಿ ನೋಡಿ..!
ನಾವು ಊಟದ ಜೊತೆಗೆ ಹಲವು ಬಗೆಯ ಸಾಂಬಾರ್ ಮಾಡಿ ಸವಿಯುತ್ತೇವೆ, ಊಟಕ್ಕೆ ಯಾವುದಾದರು ತರಕಾರಿ ಸಾಂಬಾರ್ ಇದ್ದರೆ ಅದರ ರುಚಿ ದುಪ್ಪಟ್ಟಾಗೋದು ಖಚಿತ. ಹಾಗೆ ನಾವು ಹಲವು ತರಕಾರಿಗಳ ಬಳಸಿಕೊಂಡು ಸಾಂಬಾರ್ ಮಾಡಿ ಸವಿಯೋದು ಕಾಮನ್. ಹಾಗೆ ನಾವಿಂದು ತರಕಾರಿಯಲ್ಲಿ ಅದ್ಭುತ ರುಚಿ ನೀಡುವ ಹೀರೆಕಾಯಿ ಸಾಂಬಾರ್ ಮಾಡುವ ಕುರಿತು ತಿಳಿಯೋಣ.
ಆದ್ರೆ ಒಂದೇ ರೀತಿಯ ಹೀರೆಕಾಯಿ ಸಾಂಬಾರ್ ಮಾಡಿ ನಿಮಗೂ ಬೇಜಾರ್ ಆಗಿರಬಹುದು. ಆದ್ರೆ ನೀವು ಎಲ್ಲಾದರು ದೇವಾಲಯಕ್ಕೆ ಹೋದಾಗ ಅಲ್ಲಿ ಮಾಡುವಂತಹ ಹೀರೆಕಾಯಿ ಸಾಂಬಾರ್ ಅದ್ಭುತ ರುಚಿಯಲ್ಲಿ ಇರುತ್ತೆ. ಅದರ ಸುವಾಸನೆ ನಿಮ್ಮ ಬಾಯಲ್ಲಿ ನೀರು ತರಿಸುವಂತೆ ಇರುತ್ತೆ. ಈ ರೀತಿ ಸುವಾಸನೆಯುಕ್ತ ಹೀರೆಕಾಯಿ ಸಾಂಬಾರ್ ಮಾಡೋದು ಹೇಗೆ?

ದೇವಾಲಯದಲ್ಲಿ ಒಂದಿಷ್ಟು ವಸ್ತುಗಳ ಹೆಚ್ಚಿಗೆ ಬಳಸಿ ಇದನ್ನು ಮಾಡುತ್ತಾರೆ. ಹಾಗಾದ್ರೆ ನಾವಿಂದು ದೇವಸ್ಥಾನದಲ್ಲಿ ಮಾಡುವಂತೆಯೇ ಮನೆಯಲ್ಲಿ ಈ ಹೀರೆಕಾಯಿ ಸಾಂಬಾರ್ ಮಾಡುವುದನ್ನು ತಿಳಿದುಕೊಳ್ಳೋಣ. ಹೀರೆಕಾಯಿ ಸಾಂಬಾರ್ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?, ಹೀರೆಕಾಯಿ ಸಾಂಬಾರ್ ಮಾಡುವ ವಿಧಾನವೇನು? ದೇವಸ್ಥಾನದಲ್ಲಿ ಯಾವೆಲ್ಲಾ ವಸ್ತು ಹಾಕಿ ಈ ಸಾಂಬಾರ್ ಮಾಡುತ್ತಾರೆ ಎನ್ನುವುದನ್ನು ನಾವಿಂದು ತಿಳಿದಕೊಳ್ಳೋಣ.
ಹೀರೆಕಾಯಿ ಸಾಂಬಾರ್ ಮಾಡಲು ಬೇಕಾಗುವ ಪದಾರ್ಥಗಳು
- ಹೀರೆಕಾಯಿ
- ಗರಂ ಮಸಾಲೆ
- ಖಾರದ ಪುಡಿ
- ಸಾಂಬಾರ್ ಪುಡಿ
- ತೊಗರಿ ಬೇಳೆ
- ಟೊಮೆಟೋ
- ಈರುಳ್ಳಿ
- ಸಾಸಿವೆ
- ಜೀರಿಗೆ
- ಅರಶಿಣ
- ಉಪ್ಪು
- ಎಣ್ಣೆ
- ಹುಣಸೆ ಹುಳಿ
ಹೀರೆಕಾಯಿ ಸಾಂಬಾರ್ ಮಾಡುವ ವಿಧಾನವೇನು?
ಮೊದಲು ನಿಮಗೆ ಯಾವ ಗಾತ್ರಕ್ಕೆ ಬೇಕೋ ಆ ಗಾತ್ರಕ್ಕೆ ಆ ಆಕಾರಕ್ಕೆ ಹೀರೆಕಾಯಿಯನ್ನು ಕತ್ತರಿಸಿಕೊಂಡು ನೀರಿಗೆ ಹಾಕಿಡಿ. ಹೀರೆಕಾಯಿ ಬೆಳೆದಿದ್ದರೆ ಮಾತ್ರ ಮಧ್ಯದಲ್ಲಿರುವ ಬಿಳಿಯ ಅಂಶ ತೆಗೆದುಹಾಕಿ. ಹೀರೆಕಾಯಿ ಎಳೆಯದಾಗಿದ್ದರೆ ಈ ಬಿಳಿ ಅಂಶ ಹಾಗೆ ಇರಲಿ. ಈಗ ಒಂದು ಕುಕ್ಕರ್ ತೆಗೆದುಕೊಂಡು ಸಾಂಬಾರ್ಗೆ ಬೇಕಾಗುವಷ್ಟು ತೊಗರಿ ಬೇಳೆ ತೆಗೆದುಕೊಂಡು ನೀರು, ಉಪ್ಪು, ಒಂದು ಟೊಮೆಟೋ, ಅರಶಿಣ ಹಾಕಿಕೊಂಡು 2 ಸೀಟಿ ಹೊಡೆಸಿಕೊಳ್ಳಿ.
ಈಗ ಒಂದು ಬಾಣಲೆ ಒಲೆ ಮೇಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿಕೊಂಡು ಬಳಿಕ ಇದಕ್ಕೆ ಕತ್ತರಿಸಿಕೊಂಡಿರುವ ಹೀರೆಕಾಯಿ, ಚಿಟಿಕೆ ಉಪ್ಪು ಹಾಕಿಕೊಂಡು ಫ್ರೈ ಮಾಡಿಕೊಳ್ಳಿ. ಸ್ವಲ್ಪ ನೀರು ಹಾಕಿ 3 ನಿಮಿಷ ಬೇಯಲು ಬಿಡಿ. ಒಂದು ಕುದಿ ಬರುವಂತೆ ಮಾಡಿ. ಈಗ ಕುಕ್ಕರ್ನಲ್ಲಿ ಬೇಯಿಸಿಕೊಂಡಿರುವ ಬೇಳೆಯನ್ನು ಸ್ವಲ್ಪ ಸ್ಮ್ಯಾಶ್ ಮಾಡಿ ಇದಕ್ಕೆ ಹಾಕಿಕೊಳ್ಳಿ.
ನಂತರ ಇದಕ್ಕೆ ಹುಣಸೆ ಹುಳಿ, ಖಾರದ ಪುಡಿ, ಸಾಂಬಾರ್ ಪುಡಿ, ಚಿಟಿಕೆಯಷ್ಟು ಗರಂ ಮಸಾಲೆ ಹಾಕಿ, ಉಪ್ಪು ಕೂಡ ಹಾಕಿಕೊಂಡು ಕುದಿಯಲು ಬಿಡಿ. ಹಾಗೆ ಚನ್ನಾಗಿ ತಿರುಗಿಸಿಕೊಂಡು ಮುಚ್ಚಳ ಮುಚ್ಚಿ 5 ನಿಮಿಷ ಕುದಿಯಲು ಬಿಡಿ. ಈಗ ಒಂದು ಕಡೆ ಒಗ್ಗರಣೆ ಮಾಡಲು ಮುಂದಾಗಿ.
ಒಂದು ಬಾಣಲೆಗೆ ಎಣ್ಣೆ ಹಾಕಿ ಅದಕ್ಕೆ ಸಾಸಿವೆ, ಈರುಳ್ಳಿ, ಜೀರಿಗೆ, ಕರಿಬೇವು, ಒಂದೆರಡು ಒಣ ಮೆಣಸು ಬೇಕಿದ್ದರೆ ಹಾಕಿಕೊಂಡು ಫ್ರೈ ಮಾಡಿ ಈ ಸಾಂಬಾರ್ಗೆ ಹಾಕಿಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ರುಚಿ ರುಚಿಯ ಹೀರೆಕಾಯಿ ಸಾಂಬಾರ್ ರೆಡಿಯಾಗುತ್ತದೆ. ಮನೆಯಲ್ಲಿ ಈ ರೀತಿ ಸಾಂಬಾರ್ ಮಾಡಿ ನೋಡಿ.



Click it and Unblock the Notifications
