Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ಸವಿದಷ್ಟು ರುಚಿ ಹೆಚ್ಚಿಸುವ ಮಸಾಲ ಕುಷ್ಕ ಮಾಡಿದ್ದೀರಾ? ಇಲ್ಲಿದೆ ಮಾಡುವ ವಿಧಾನ!
ನೀವು ವೆಜ್ ಹಾಗೂ ನಾನ್ ಪ್ರಿಯರು ಯಾರೆ ಆಗಿದ್ದೂ ಕುಷ್ಕ ರೆಸಿಪಿಯನ್ನ ಸವಿಯಲು ಇಷ್ಟಪಡುತ್ತೀರಿ, ಏಕೆಂದರೆ ಕುಷ್ಕ ಎಲ್ಲರ ಮೆಚ್ಚಿನ ಖಾದ್ಯದಲ್ಲಿ ಒಂದಾಗಿದೆ. ಬಗೆ ಬಗೆಯ ಮಸಾಲೆಗಳು ಇದರ ರುಚಿ ಹೆಚ್ಚಿಸುವ ಜೊತೆಗೆ ಅದ್ಭುತ ಸುವಾಸನೆಯ ಕಾರಣ ಎಲ್ಲರಿಗೂ ಇಷ್ಟವಾಗುತ್ತೆ. ಅದ್ರಲ್ಲೂ ನೀವು ಪಲಾವ್, ರೈಸ್ ಬಾತ್, ವೆಜ್ ಬಿರಿಯಾನಿ ಪ್ರಿಯರಾಗಿದ್ದರೆ ಈ ಕುಷ್ಕ ನಿಮಗೆ ಹೇಳಿ ಮಾಡಿಸಿದ ಖಾದ್ಯ ಆಗಿರಲಿದೆ.
ಕೆಲವು ಮಸಾಲೆಗಳ ಹಾಕಿ ಮಾಡಿದ್ರೆ ಹೋಟೆಲ್ ರುಚಿಯಲ್ಲಿ ಸವಿಯುವಂತೆ ಈ ಕುಷ್ಕ ಮಾಡಬಹುದು. ಕುಷ್ಕದ ರುಚಿಯಲ್ಲಿ ನೀವು ಬೇರೊಂದು ರೈಸ್ ಸವಿಯಲು ಸಾಧ್ಯವಿಲ್ಲ. ಇದಕ್ಕೆ ಬಳಸುವಂತಹ ಮಸಾಲೆಗಳು ಈ ಖಾದ್ಯದ ರುಚಿ ದುಪ್ಪಟ್ಟಾಗಿಸುತ್ತೆ. ನಾವಿಂದು ಈ ಮಸಾಲೆ ಭರಿತ ಕುಷ್ಕ ಮಾಡುವುದು ಹೇಗೆ ಅನ್ನೋದನ್ನು ತಿಳಿದುಕೊಳ್ಳೋಣ.

ಹೋಟೆಲ್, ಡಾಬಾ ಶೈಲಿಯಲ್ಲೇ ಈ ಕುಷ್ಕವನ್ನು ಮನೆಯಲ್ಲೇ ಮಾಡಿ ಸವಿಯುವುದು ಹೇಗೆ ಅನ್ನೋದನ್ನು ನಾವಿಂದು ತಿಳಿದುಕೊಳ್ಳೋಣ. ಅದರಲ್ಲೂ ಈ ರುಚಿಯ ಕುಷ್ಕ ನೀವು ಮನೆಯಲ್ಲಿ ಮಾಡಿದ್ರೆ ಅದರ ರುಚಿ ಮತ್ತಷ್ಟು ಹೆಚ್ಚಾಗೋದು ಖಚಿತ. ಹಾಗಾದ್ರೆ ಈ ಸ್ಪೆಷಲ್ ಕುಷ್ಕ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?, ಮಾಡುವ ವಿಧಾನವೇನು? ಯಾವೆಲ್ಲಾ ಮಸಾಲೆ ಬಳಸಬೇಕು ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಮಸಾಲೆ ಕುಷ್ಕ ಮಾಡಲು ಯಾವೆಲ್ಲಾ ವಸ್ತುಗಳು ಬೇಕು?
- ಅಕ್ಕಿ- ಒಂದೂವರೆ ಲೋಟ
- ಚಕ್ಕೆ
- ಲವಂಗ
- ಈರುಳ್ಳಿ
- ಟೊಮಟೋ
- ಕೊತ್ತಂಬರಿ ಸೊಪ್ಪು
- ಪುದಿನ
- ಏಲಕ್ಕಿ
- ಗರಂ ಮಸಾಲೆ
- ಹಸಿ ಮೆಣಸು
- ಶುಂಠಿ ಬೆಳ್ಳುಳ್ಳಿ
- ಮೊಸರು
- ತುಪ್ಪ
- ಎಣ್ಣೆ
- ಉಪ್ಪು
ಮಸಾಲೆ ಕುಷ್ಕ ಮಾಡುವುದು ಹೇಗೆ?
ಮೊದಲು ಬಾಣಲೆ ಒಲೆ ಮೇಲೆ ಇಟ್ಟು ಅದಕ್ಕೆ ತುಪ್ಪ ಹಾಗೂ ಎಣ್ಣೆ ಹಾಕಿಕೊಂಡು ಪಲಾವ್ ಎಲೆ, ಏಲಕ್ಕಿ, ಲವಂಗ, ಚಕ್ಕೆ ಹಾಕಿಕೊಳ್ಳಿ ಹಾಗೆ ಈರುಳ್ಳಿ ಕೂಡ ಹಾಕಿಕೊಂಡು ಫ್ರೈ ಮಾಡಿಕೊಳ್ಳಿ. 3 ನಿಮಿಷ ಈರುಳ್ಳಿ ಫ್ರೈ ಆದ ಬಳಿಕ ಹಸಿ ಮೆಣಸು, ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ 1 ನಿಮಿಷ ಫ್ರೈ ಮಾಡಿಕೊಳ್ಳಿ. ನಂತರ ಇದಕ್ಕೆ ಟೊಮೆಟೋ, ಕೊತ್ತಂಬರಿ ಸೊಪ್ಪು ಹಾಗೂ ಪುದಿನ ಹಾಕಿ ಒಂದು ನಿಮಿಷ ಫ್ರೈ ಮಾಡಿ.
ಈಗ ಗಟ್ಟಿ ಮೊಸರನ್ನು ಕೂಡ ಹಾಕಿ, ನಂತರ ಗರಂ ಮಸಾಲೆ, ಖಾರದ ಪುಡಿ, ಉಪ್ಪು ಸೇರಿಸಿಕೊಂಡು ಮಿಕ್ಸ್ ಮಾಡುತ್ತಾ 5 ನಿಮಿಷ ಫ್ರೈ ಮಾಡಬೇಕು. ಇದು ಗೊಜ್ಜಿನ ರೀತಿ ಹದಕ್ಕೆ ಬರಬೇಕು. ಈಗ ಅಳತೆ ಲೋಟದಲ್ಲಿ ಮೂರು ಲೋಟ ನೀರು ಹಾಕಿಕೊಳ್ಳಿ. ನೀರು ಕುದಿಬರಲು ಬಿಡಬೇಕು. ಕುಕ್ಕರ್ನಲ್ಲಿ ಮಾಡುವುದಾದರೆ 2 ಸೀಟಿ ಹೊಡೆಯಲು ಬಿಡಬೇಕು.
ನೀರು ಕುದಿಯಲು ಆರಂಭಿಸಿದಾಗ ಚೆನ್ನಾಗಿ ತೊಳೆದುಕೊಂಡಿರುವ ಅಕ್ಕಿಯನ್ನು ಇದಕ್ಕೆ ಹಾಕಿ. ಇದಕ್ಕೆ ಹಾಕುವ ಮುನ್ನ ಅಕ್ಕಿಯನ್ನು ನೀರಿನಲ್ಲಿ ನೆನೆಸಿಟ್ಟರೆ ಉತ್ತಮ 15 ನಿಮಿಷ ನೆನೆಯಲು ಬಿಡಬೇಕು. ಈಗ ಅಕ್ಕಿಯನ್ನು ಹಾಕಿ ಮಿಶ್ರಣ ಮಾಡಿ ಬೇಯಲು ಬಿಡಿ. ಮುಕ್ಕಾಲು ಭಾಗ ಅಕ್ಕಿ ಬೆಂದಿದೆ, ನೀರು ಒಣಗುತ್ತಿದೆ ಎಂಬ ಸಮಯದಲ್ಲಿ ಉರಿ ಸಣ್ಣ ಮಾಡಿ ಮುಚ್ಚಳ ಮುಚ್ಚಿ ಹಾಗೆಯೇ ಬಿಡಿ.
3ರಿಂದ 5 ನಿಮಿಷ ಹಾಗೆ ಬಿಟ್ಟರೆ ಸರಿಯಾದ ಹದಕ್ಕೆ ಬೇಯುತ್ತದೆ. ಇಷ್ಟಾದರೆ ನಿಮ್ಮ ಮುಂದೆ ಮಸಾಲ ಕುಷ್ಕ ರೆಡಿಯಾಗುತ್ತೆ. ನೀವು ಕೂಡ ಮಾಡಿ ನೋಡಿ ಸುಲಭವಾಗಿ ಮನೆಯಲ್ಲೇ ಅದ್ಭುತ ರುಚಿಯಲ್ಲಿ ಇದನ್ನು ಸವಿಯಬಹುದು. ಇದಕ್ಕೆ ಮೊಸರು ಬಜ್ಜಿ ಅಥವಾ ನಾನ್ವೆಜ್ನ ಯಾವುದೇ ಖಾದ್ಯ ಇದ್ದರೂ ರುಚಿ ದುಪ್ಪಟ್ಟಾಗುತ್ತೆ.



Click it and Unblock the Notifications
