Latest Updates
-
ಪ್ರೈಡ್ ಮಂತ್ 2026: ಮನೆಯವರ ಮುಂದೆ ನಿಮ್ಮ ನಿಜವಾದ ವ್ಯಕ್ತಿತ್ವವನ್ನು ಹೇಳಿಕೊಳ್ಳಲು ಹೆದರುತ್ತಿದ್ದೀರಾ? ಈ ಸಲಹೆಗಳು ನಿಮಗಾಗಿ! -
ಮಳೆಗಾಲದ ಮೊದಲ ಮಳೆ ಬಂತು: ನಿಮ್ಮ ಮನೆಯನ್ನು ದುಬಾರಿ ರಿಪೇರಿಯಿಂದ ರಕ್ಷಿಸಲು ಈ ಸಣ್ಣ ಕೆಲಸಗಳನ್ನು ಇಂದೇ ಮಾಡಿ! -
ಮಳೆಗಾಲದಲ್ಲಿ ಪದೇ ಪದೇ ಕಾಯಿಲೆ ಬೀಳ್ತಿದ್ದೀರಾ? ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ, ವೈರಲ್ ಜ್ವರದಿಂದ ದೂರವಿರಿ! -
ಆರ್ಸಿಬಿ ಗೆಲುವಿನ ಅಬ್ಬರ: ಬೆಂಗಳೂರಿನಲ್ಲಿ ವಿರಾಟ್-ಅನುಷ್ಕಾ ಸಂಭ್ರಮದ ವಿಡಿಯೋ ವೈರಲ್, ನೀವು ನೋಡಲೇಬೇಕಾದ ದೃಶ್ಯಗಳಿವು! -
ಮಳೆಗಾಲದಲ್ಲಿ ವ್ಯಾಯಾಮ ಮಾಡ್ತೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ! -
ಪ್ರೈಡ್ ಮಂತ್ 2026: ಕ್ವೀರ್ ಜೋಡಿಗಳ ಭವಿಷ್ಯ ಭದ್ರಪಡಿಸಲು ಮತ್ತು ಕುಟುಂಬದ ಮನವೊಲಿಸಲು ಇಲ್ಲಿದೆ ವಿಶೇಷ ಮಾರ್ಗದರ್ಶಿ! -
ಮಳೆಗಾಲ ಶುರುವಾಗುವ ಮುನ್ನವೇ ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ: ದುಬಾರಿ ರಿಪೇರಿ ತಪ್ಪಿಸಲು ಇಲ್ಲಿವೆ ಸರಳ ಟಿಪ್ಸ್! -
ಬಿಸಿಲು-ಮಳೆಯ ಆಟದಲ್ಲಿ ಸುಸ್ತಾಗಿದ್ದೀರಾ? ಆರೋಗ್ಯ ಕಾಪಾಡಿಕೊಳ್ಳಲು ಈ ಸರಳ ಆಹಾರ ಕ್ರಮಗಳನ್ನು ಮಿಸ್ ಮಾಡಬೇಡಿ! -
ದಿಢೀರ್ ಮಳೆಗೆ ರೆಡಿಯಾಗಿದ್ದೀರಾ? ಸ್ಟೈಲಿಶ್ ಆಗಿ ಕಾಣಲು ಮತ್ತು ಮಳೆಯಿಂದ ಪಾರಾಗಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಹವಾಮಾನ ಬದಲಾಗಿದೆ, ನಿಮ್ಮ ವರ್ಕೌಟ್ ಪ್ಲಾನ್ ಬದಲಾಯಿಸಿದ್ದೀರಾ? ಇಲ್ಲದಿದ್ದರೆ ಈ ಎಚ್ಚರಿಕೆ ನಿಮಗಾಗಿ!
ಮಳೆಗಾಲಕ್ಕೆ ಬೆಸ್ಟ್ ಚಿಕನ್ ಗಸಿ ಮಾಡೋದು ಹೇಗೆ? ಬಾಯಲ್ಲಿ ನೀರು ತರಿಸುವ ರೆಸಿಪಿ!
ನಾನ್‌ವೆಜ್ ಪ್ರಿಯರಿಗೆ ಮಾಂಸದೂಟ ಅಂದ್ರೆ ಸಾಕು ಬಾಯಲ್ಲಿ ನೀರು ಬರುತ್ತೆ. ಅದ್ರಲ್ಲೂ ಚಿಕನ್‌ನಿಂದ ಮಾಡುವಂತಹ ವಿಶೇಷ ಬಗೆಯ ಖಾದ್ಯಗಳ ಸವಿಯುವುದು ಎಲ್ಲರಿಗೂ ಇಷ್ಟವಾಗುತ್ತೆ. ಚಿಕನ್‌ನಿಂದ ಮಾಡುವ ಹಲವು ಬಗೆಯ ಖಾದ್ಯಗಳು ಎಲ್ಲರಿಗೂ ಇಷ್ಟವಾಗುತ್ತೆ. ಚಿಕನ್ ಸಾರು, ಚಿಕನ್ ಸುಕ್ಕ, ಚಿಕನ್ ಬಿರಿಯಾನಿ, ಚಿಕನ್ ಗ್ರೇವಿ, ಚಿಕನ್ ಫ್ರೈ, ಸೇರಿ ಹೋಟೆಲ್‌ಗಳಲ್ಲಿ ಮಾಡುವ ಹತ್ತು ಹಲವು ಬಗೆಯ ಚಿಕನ್ ಖಾದ್ಯಗಳು ಅಂದ್ರೆ ಎಲ್ಲರ ಬಾಯಲ್ಲೂ ನೀರು ಬರುವುದು ಖಚಿತ.
ಚಿಕನ್ ಪ್ರಿಯರು ಮನೆಯಲ್ಲಿ ಹೆಚ್ಚಾಗಿ ಫ್ರೈ ಇಲ್ಲವೆ ಸಾರು ಮಾಡಿ ಸವಿಯುವುದು ನೋಡಬಹುದು. ಊಟದ ಜೊತೆಗೆ ಹಾಗೆ ಯಾವುದೇ ತಿಂಡಿಗೆ ಚಿಕನ್‌ನಿಂದ ಮಾಡುವ ಎಲ್ಲಾ ಖಾದ್ಯಗಳು ರುಚಿ ನೀಡಲಿವೆ. ಹಾಗಾದ್ರೆ ನಾನ್ ವೆಜ್ ಪ್ರಿಯರಿಗೆ ಇಷ್ಟವಾಗುವಂತಹ ಚಿಕಬ್ ಗಸಿ ಮಾಡುವ ಕುರಿತು ನಾವಿಂದು ತಿಳಿದುಕೊಳ್ಳೋಣ.

ಚಿಕನ್ ಗಸಿ ಊಟದ ಜೊತೆಗೆ ಹಾಗೆ ತಿಂಡಿಯೊಂದಿಗೆ ಅದ್ಭುತ ರುಚಿ ನೀಡಲಿದೆ. ಈ ಗಸಿ ಸುವಾಸನೆಯು ಬಾಯಲ್ಲಿ ನೀರು ತರಿಸಲಿದೆ. ಹಾಗಾದ್ರೆ ಈ ಚಿಕನ್ ಗಸಿ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?, ಮಾಡುವ ವಿಧಾನವೇನು?, ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಚಿಕನ್ ಗಸಿ ಮಾಡಲು ಯಾವೆಲ್ಲಾ ವಸ್ತುಗಳು ಬೇಕು?
- ಚಿಕನ್- 1 ಕೆ.ಜಿ
- ಅರಶಿಣ
- ತೆಂಗಿನಕಾಯಿ
- ಕೊತ್ತಂಬರಿ ಕಾಳು
- ಕಾಳು ಮೆಣಸು
- ಎಣ್ಣೆ
- ತುಪ್ಪ
- ಚಕ್ಕೆ
- ಏಲಕ್ಕಿ
- ಬೆಳ್ಳುಳ್ಳಿ
- ಈರುಳ್ಳಿ
- ಕರಿಬೇವು
- ಸಾಸಿವೆ
- ಉಪ್ಪು
ಚಿಕನ್ ಗಸಿ ಮಾಡುವ ವಿಧಾನ ಇಲ್ಲಿದೆ
ಮೊದಲು ಒಲೆ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿಕೊಂಡು ಬಳಿಕ ಇದಕ್ಕೆ ಒಣ ಮೆಣಸು ಹಾಕಿ ಹುರಿದುಕೊಳ್ಳಿ. ಮೆಣಸು ಹುರಿದು ತೆಗೆದಿಟ್ಟುಕೊಂಡು ಮತ್ತೆ ಬಾಣಲೆಗೆ ಎಣ್ಣೆ ಹಾಕಿ, ಕಾಳು ಮೆಣಸು, ಕೊತ್ತಂಬರಿ ಕಾಳು, ಚಕ್ಕೆ, ಏಲಕ್ಕಿ ಹಾಕಿಕೊಂಡು ಹುರಿದುಕೊಳ್ಳಿ. ನಂತರ ಈ ವಸ್ತುಗಳನ್ನು ಕೂಡ ಎತ್ತಿಟ್ಟುಕೊಳ್ಳಿ.
ಈಗ ಮತ್ತೆ ಬಾಣಲೆಗೆ ಈರುಳ್ಳಿ, ಬೆಳ್ಳುಳ್ಳಿ, ಕರಿಬೇವು ಸಹ ಹಾಕಿಕೊಂಡು ಎಣ್ಣೆಯ ಜೊತೆಗೆ ಫ್ರೈ ಮಾಡಿಕೊಳ್ಳಿ. ಈಗ ಎಲ್ಲಾ ಪದಾರ್ಥಗಳನ್ನು ಕೂಡ ಸ್ವಲ್ಪ ತಣ್ಣಗಾಗಲು ಬಿಟ್ಟು ಎಲ್ಲಾ ವಸ್ತುಗಳನ್ನು ಒಂದು ಮಿಕ್ಸಿ ಜಾರ್‌ಗೆ ಹಾಕಿಕೊಳ್ಳಿ. ಹಾಗೆ ಬಾಣಲೆಯಲ್ಲಿ ಮತ್ತೆ ತೆಂಗಿನಕಾಯಿ ತುರಿ ಹಾಕಿ ಮತ್ತೆ ಹುರಿದುಕೊಳ್ಳಿ. 3 ನಿಮಿಷ ಹುರಿದುಕೊಂಡು ಅದನ್ನು ಕೂಡ ಮಿಕ್ಸಿ ಜಾರ್‌ಗೆ ಹಾಕಿಕೊಳ್ಳಿ.
ತೆಂಗಿನ ತುರಿಯನ್ನು ಅನಂತರ ರುಬ್ಬಿಕೊಂಡರೂ ನಡೆಯಲಿದೆ. ಮಿಕ್ಸಿ ಜಾರ್‌ಗೆ ಸ್ವಲ್ಪವೇ ಸ್ವಲ್ಪ ನೀರು ಹಾಕಿಕೊಂಡು ಚೆನ್ನಾಗಿ ರುಬ್ಬಬೇಕು. ಎಲ್ಲಾ ಪದಾರ್ಥಗಳ ರುಬ್ಬಿ ಒಂದು ಪಾತ್ರೆಗೆ ಹಾಕಿಟ್ಟುಕೊಳ್ಳಿ. ಈ ಒಲೆ ಮೇಲೆ ಮತ್ತೊಂದು ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿಕೊಳ್ಳಿ. ಹಾಗೆ ಇದಕ್ಕೆ 1 ಸ್ಪೂನ್ ತುಪ್ಪು ಸಹ ಹಾಕಿ. ಬಳಿಕ ಸಾಸಿವೆ, ಕರಿಬೇವು, ಹೆಚ್ಚಿರುವ ಈರುಳ್ಳಿ ಸಹ ಹಾಕಿಕೊಂಡು ಫ್ರೈ ಮಾಡಿಕೊಳ್ಳಿ.
2 ನಿಮಿಷಗಳ ಬಳಿಕ ಇದಕ್ಕೆ ತೊಳೆದುಕೊಂಡಿರುವ ಚಿಕನ್ ಅನ್ನು ಸಹ ಹಾಕಿಕೊಂಡು ಬೇಯಿಸಿಕೊಳ್ಳಿ. ಇದಕ್ಕೆ ಅರಶಿಣ ಪುಡಿ, ಉಪ್ಪು ಹಾಕಿ ಬೇಯಲು ಬಿಡಿ. 5 ನಿಮಿಷ ಬೇಯಲು ಬಿಟ್ಟು ಅನಂತರ ಮಿಕ್ಸಿಯಲ್ಲಿ ರುಬ್ಬಿಕೊಂಡಿದ್ದ ಮಸಾಲೆಯನ್ನು ಇದಕ್ಕೆ ಹಾಕಿ ಜಾರ್‌ಗೆ ನೀರು ಹಾಕಿ ತೊಳೆದು ಆ ನೀರನ್ನು ಕೂಡ ಇದಕ್ಕೆ ಹಾಕಿಕೊಳ್ಳಿ.
ಈಗ ಚೆನ್ನಾಗಿ ಮಿಕ್ಸ್ ಮಾಡಿಕೊಂಡು ಕುದಿಬರಲು ಬಿಡಬೇಕು. ಮುಚ್ಚಳ ಮುಚ್ಚಿ ಕುದಿಬರಲು ಬಿಡಿ. ಕೊನೆಯಲ್ಲಿ ಇದಕ್ಕೆ ಕೊತ್ತಂಬರಿ ಸೊಪ್ಪು ಹಾಕಿಕೊಂಡರೆ ನಿಮ್ಮ ಮುಂದೆ ಚಿಕನ್ ಗಸಿ ರೆಡಿಯಾಗುತ್ತದೆ. ಗಸಿ ದಪ್ಪವಾಗಿರಲಿ, ಬಹಳ ತೆಳುವಾಗಿ ಮಾಡಬೇಡಿ. ಇದನ್ನು ಊಟಕ್ಕೆ, ತಿಂಡಿಯ ಜೊತೆಗೆ ಸವಿಯಲು ಬಡಿಸಿದರೆ ರುಚಿಗೆ ಫಿದಾ ಆಗುತ್ತಾರೆ.



Click it and Unblock the Notifications