Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ತಮಿಳುನಾಡು ಶೈಲಿಯ ಅವರೆಕಾಳು ಕಿಚಡಿ ಮಾಡಿ! ಎಷ್ಟು ರುಚಿಕರ ಖಾದ್ಯ ಅನ್ನೋದು ಗೊತ್ತಾ?
ನೀವು ಬೆಳಗ್ಗೆ ತಿಂಡಿಗೆ ರುಚಿ ರುಚಿಯಾದ ಖಾದ್ಯಗಳ ಮಾಡಿ ಸವಿಯೋದು ಕಾಮನ್. ಎಲ್ಲರಿಗೂ ಇಷ್ಟವಾಗುವಂತಹ ರುಚಿ ರುಚಿಯ ಖಾದ್ಯಗಳ್ನು ಮಾಡುವ ನಿಮ್ಮ ಬಯಕೆಯನ್ನು ಎಲ್ಲರು ಹೊಂದಿರುತ್ತಾರೆ, ಅದ್ರಲ್ಲೂ ಕಿಚಡಿ ಖಾದ್ಯ ಸವಿಯೋದು ಅಂದ್ರೆ ನಿಮಗೂ ಇಷ್ಟವಾಗಬಹುದು. ಹಾಗೆ ಕಿಚಡಿಯನ್ನು ಹಲವು ಬಗೆಯಲ್ಲಿ ಮಾಡಿ ಸವಿಯಬಹುದು. ನಾವಿಂದು ಸುಲಭವಾಗಿ ಮನೆಯಲ್ಲೇ ಅತ್ಯಂತ ರುಚಿಕರ ಕಿಚಡಿ ಮಾಡುವ ಕುರಿತು ತಿಳಿದುಕೊಳ್ಳೋಣ.
ನೀವು ಸಹ ಮನೆಯಲ್ಲಿ ಕಿಚಡಿ ಮಾಡಿ ಸವಿದಿರಬಹುದು. ಅದರಲ್ಲೂ ಹಲವು ರೀತಿಯ ಬಗೆಗಳಿವೆ. ಆದ್ರೆ ನಾವಿಂದು ತಮಿಳುನಾಡು ಶೈಲಿ ಮಸಾಲೆ ಕಿಚಡಿ ಮಾಡಿ ಸವಿಯುವ ಕುರಿತು ತಿಳಿಯೋಣ. ಈ ಕಿಚಡಿಯನ್ನು ಹತ್ತಾರು ಬಗೆಯಲ್ಲಿ ಮಾಡಬಹುದು. ಸಮಯ ಉಳಿತಾಯ ಮಾಡಲು ಕೂಡ ಇದು ಅತ್ಯುತ್ತಮ ಖಾದ್ಯ, ಅದ್ಭುತವಾಗಿ ರುಚಿಯಲ್ಲಿ ಬಿಸಿ ಬಿಸಿಯಾದ ಕಿಚಡಿ ಒಮ್ಮೆ ಸವಿದರೆ ಮತ್ತೆ ಮತ್ತೆ ಸವಿಯೋದು ಖಚಿತ.

ಹೀಗಾಗಿ ನಾವಿಂದು ಸುಲಭವಾಗಿ ಸಖತ್ ಟೇಸ್ಟ್ ನೀಡುವಂತಹ ರುಚಿಯ ಕಿಚಡಿ ಮಾಡುವ ಕುರಿತು ತಿಳಿದುಕೊಳ್ಳೋಣ. ಕಿಚಡಿಯು ಬೆಳಗ್ಗೆ ಬ್ರೇಕ್ ಫಾಸ್ಟ್‌ಗೆ ಸವಿದರೆ ಅತ್ಯುತ್ತಮ. ಹಾಗಾದ್ರೆ ಈ ತಮಿಳುನಾಡು ಶೈಲಿಯ ಕಿಚಡಿ ಮಾಡಲು ಯಾವೆಲ್ಲಾ ವಸ್ತುಗಳು ಬೇಕು? ಮಾಡುವ ವಿಧಾನವೇನು? ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಲ್ಲಿ ತಿಳಿದುಕೊಳ್ಳೋಣ.
ತಮಿಳುನಾಡು ಶೈಲಿಯ ರುಚಿಕರ ಕಿಚಡಿ ಮಾಡಲು ಯಾವೆಲ್ಲಾ ವಸ್ತುಗಳು ಬೇಕು?
- ಅವರೆಕಾಳು - 1 ಕಪ್
- ಅಕ್ಕಿ - 1/2 ಗ್ಲಾಸ್
- ಮಸೂರ್ ದಾಲ್ ಅಥವಾ ಕೆಂಪು ಬೇಳೆ
- ಟೊಮೆಟೊ
- ಈರುಳ್ಳಿ - 1
- ಲವಂಗ
- ಅರಿಶಿನ ಪುಡಿ
- ಕಾಳು ಮೆಣಸಿನ ಪುಡಿ
- ಗರಂ ಮಸಾಲ ಪುಡಿ
- ಧನಿಯಾ ಪುಡಿ
- ಕರಿಬೇವು
- ಶುಂಠಿ ಬೆಳ್ಳುಳ್ಳಿ ಪೇಸ್ಟ್
- ದಾಲ್ಚಿನ್ನಿ
- ಸಾಸಿವೆ
- ಜೀರಿಗೆ
- ಕೊತ್ತಂಬರಿ ಸೊಪ್ಪು
- ಅಡುಗೆ ಎಣ್ಣೆ
- ರುಚಿಗೆ ತಕ್ಕಷ್ಟು ಉಪ್ಪು
ತಮಿಳುನಾಡು ಶೈಲಿಯ ರುಚಿಕರ ಕಿಚಡಿ ಮಾಡುವುದು ಹೇಗೆ?
ಮೊದಲಿಗೆ ಒಂದು ಕುಕ್ಕರ್ ಒಲೆ ಮೇಲೆ ಇಟ್ಟು ಎಣ್ಣೆ ಹಾಕಿ ಬಿಸಿಯಾಗಲು ಬಿಡಿ. ಎಣ್ಣೆ ಬಸಿಯಾದ ಬಳಿಕ ಅದಕ್ಕೆ ಸಾಸಿವೆ, ಪಲಾವ್ ಎಲೆ, ಲವಂಗ, ಏಲಕ್ಕಿ, ಚಕ್ಕೆ ಹಾಕಿ. ನಂತರ ಚಿಕ್ಕದಾಗಿ ಕತ್ತರಿಸಿದ ಈರುಳ್ಳಿ, ಹಸಿ ಮೆಣಸು, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಕರಿಬೇವು ಹಾಕಿ 1 ನಿಮಿಷ ಫ್ರೈ ಮಾಡಿ.
ಅನಂತರ ಒಂದು ಟೊಮೆಟೋ ಹಾಕಿ ಮಿಕ್ಸ್ ಮಾಡುತ್ತಾ ಇರಿ. ಈಗ ಅವರೆಕಾಳನ್ನು ಇದಕ್ಕೆ ಹಾಕಿಕೊಂಡು ಬಳಿಕ ಅರಶಿಣ, ಖಾರದ ಪುಡಿ, ಗರಂ ಮಸಾಲ, ಧನಿಯಾ ಪುಡಿ, ಉಪ್ಪ ಸಹ ಹಾಕಿ ಮಿಕ್ಸ್ ಮಾಡಿಕೊಳ್ಳಬೇಕು.
ಈಗ ಮೊದಲು ಅಳತೆ ಮಾಡಿ ಕೊಂಡು ತೊಳೆದುಕೊಂಡಿರುವ ಅಕ್ಕಿ ಹಾಗೂ ಬೇಳೆಯನ್ನು ಇದಕ್ಕೆ ಹಾಕಿ 1 ಗ್ಲಾಸ್ ಅಕ್ಕಿ ಹಾಗೂ ಬೇಳೆ ಹಾಕಿಕೊಳ್ಳಿ. ನಂತರ ಚೆನ್ನಾಗಿ 1 ನಿಮಿಷ ಹುರಿದುಕೊಳ್ಳಿ.
ಈಗ ಅಳತೆಗೆ ತಕ್ಕಂತೆ 7 ಲೋಟ ನೀರು ಹಾಕಿಕೊಳ್ಳಿ. ನಂತರ ಉಪ್ಪು ಹಾಕಿ ಮಿಕ್ಸ್ ಮಾಡಿಕೊಂಡು ಮುಚ್ಚಳ ಮುಚ್ಚಿ 5 ಸೀಟಿ ಹೊಡೆಯಲು ಬಿಡಬೇಕು. ಅನಂತರ ಮುಚ್ಚಳ ತೆಗೆದುಕೊಳ್ಳಿ. ಒಂದು ವೇಳೆ ಇದು ಗಟ್ಟಿಯಾಗಿದ್ದರೆ ನೀರು ಹಾಕಿ ಮತ್ತೆ ಕುದಿಸಿಕೊಳ್ಳಬಹುದು. ತೆಳುವಾಗಿದ್ದರೆ ನೀರು ಹಾಕದೆ ಕುದಿಸಿಕೊಳ್ಳಿ. ಇದಕ್ಕೆ ತಣ್ಣೀರಿಗಿಂತ ಬಿಸಿ ನೀರು ಹಾಕಿ ಕುದಿಸಿಕೊಳ್ಳುವುದು ಉತ್ತಮ.
ಇಷ್ಟಾದ ನಂತರ ಒಂದು ಸಾಮಾನ್ಯ ಒಗ್ಗರಣೆ ಹಾಕಿಕೊಂಡರೆ ನಿಮ್ಮ ಮುಂದೆ ಈ ರುಚಿ ರುಚಿಯಾದ ಕಿಚಡಿ ಸಿದ್ದವಾಗುತ್ತೆ. ನೀವು ಕೂಡ ಇದನ್ನು ಮನೆಯಲ್ಲಿ ಮಾಡಿ ಸವಿದು ನೋಡಿ.



Click it and Unblock the Notifications
