Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ಬೆಲ್ಲದಿಂದ ಮಾಡುವ ರುಚಿ ರುಚಿಯ ಪ್ರಸಾದ ಮಾಡಿ..! ಮಕ್ಕಳ ಬಾಯಲ್ಲಿ ನೀರು ಬರೋದು ಖಚಿತ!
ಹಬ್ಬದ ಸಮಯದಲ್ಲಿ ಮನೆಯಲ್ಲಿ ನೀವು ಕೂಡ ಹಲವು ರೀತಿಯ ಸಿಹಿ ಮಾಡುತ್ತೀರಿ. ಅದ್ರಲ್ಲೂ ಹಬ್ಬದ ಸಮಯದಲ್ಲಿ ದೇವರಿಗೆ ನೈವೇದ್ಯ ಮಾಡಲು, ಪ್ರಸಾದವಾಗಿ ನೀಡಲು, ಹಾಗೆ ಮನೆ ಮಂದಿ ಎಲ್ಲ ಕುಳಿತು ಸವಿಯಲು ಈ ಪ್ರಸಾದ ಮಾಡಿ ಸವಿದು ನೋಡಿ. ಆದ್ರೆ ಗಣೇಶನ ಹಬ್ಬದಲ್ಲಿ ದೇವಾಲಯಗಳಲ್ಲಿ ಬಹಳ ರುಚಿಯಾದ ವಿಶೇಷ ರುಚಿ ನೀಡುವ ಪ್ರಸಾದ ನೀವು ಕೂಡ ಸವಿದಿರುತ್ತೀರಿ.
ಈ ಪ್ರಸಾದ ಹೇಗೆ ಮಾಡುತ್ತಾರೆ ಅನ್ನೋದು ನಿಮಗೆ ಗೊತ್ತಾ?, ಹಲ್ವಾದಂತಹ ರುಚಿ ಇರುವ ಈ ಪ್ರಸಾದ ಒಮ್ಮೆ ನೀವು ಸವಿದರೆ ಪದೇ ಪದೇ ಸವಿಯಲು ಮುಂದಾಗುತ್ತೀರಿ. ಈ ಪ್ರಸಾದ ಮನೆ ಮಂದಿಗೆಲ್ಲಾ ಇಷ್ಟವಾಗುತ್ತೆ. ಹಾಗೆ ಪೂಜೆಯ ಸಮಯದಲ್ಲಿ, ಶುಭ ಸಮಾರಂಭದಲ್ಲಿ, ಮನೆಯಲ್ಲಿ ಯಾವುದಾದರು ಪೂಜೆಗಳು ಇದ್ದಾಗ ಮಾಡಿ ಸವಿಯಬಹುದು.

ಹಾಗಾದ್ರೆ ನಾವಿಂದು ಗಣೇಶನ ಹಬ್ಬದಲ್ಲಿ ಮಾಡಿ ಸವಿಯಬಹುದಾದ ರುಚಿ ರುಚಿಯ ಪ್ರಸಾದವನ್ನು ಮಾಡುವುದು ಹೇಗೆ ಅನ್ನೋದನ್ನು ತಿಳಿದುಕೊಳ್ಳೋಣ. ಈ ಪ್ರಸಾದ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡಲು ಎಷ್ಟು ಸಮಯ ಹಿಡಿಯಲಿದೆ? ಮಾಡುವ ಸರಿಯಾದ ಹಾಗೆ ಸುಲಭದ ವಿಧಾನವೇನು ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ.
ಬೆಲ್ಲದಿಂದ ಮಾಡುವ ಈ ಪ್ರಸಾದಕ್ಕೆ ಯಾವೆಲ್ಲಾ ವಸ್ತು ಬಳಸಬೇಕು?
ಹೆಸರು ಬೇಳೆ
ಬೆಲ್ಲ
ಗೋಡಂಬಿ
ದ್ರಾಕ್ಷಿ
ಉಪ್ಪು
ತುಪ್ಪ
ಲವಂಗ
ಬೆಲ್ಲದಿಂದ ಪ್ರಸಾದ ಮಾಡುವುದು ಹೇಗೆ?
ಮೊದಲು ಕುಕ್ಕರ್ಗೆ ಅರ್ಧ ಕಪ್ ಹೆಸರು ಬೇಳೆ ಹಾಕಿ ನೀರಿನಿಂದ ಚೆನ್ನಾಗಿ ತೊಳದು ಬಳಿಕ ನೀರು ಸೋಸಿ ಅದಕ್ಕೆ 1 ಸ್ಪೂನ್ ತುಪ್ಪ ಹಾಕಿ 3 ನಿಮಿಷ ಹುರಿದುಕೊಳ್ಳಿ. ಕಂದು ಬಣ್ಣ ತಿರುಗಿದ ಬಳಿಕ ಇದಕ್ಕೆ ತೊಳೆದುಕೊಂಡಿರುವ 1 ಕಪ್ ಅಕ್ಕಿಯನ್ನು ಇದಕ್ಕೆ ಹಾಕಿಕೊಳ್ಳಿ. ಅಕ್ಕಿಯನ್ನು ಚೆನ್ನಾಗಿ ತೊಳೆದಿರಬೇಕು.
ಅಕ್ಕಿ ಹಾಕಿ ಮಿಕ್ಸ್ ಮಾಡಿಕೊಂಡ ಬಳಿಕ 4ರಿಂದ 5 ಲವಂಗ ಹಾಕಿ ಬಳಿಕ 1 ಸ್ಪೂನ್ ತುಪ್ಪ ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. 1 ನಿಮಿಷ ಹುರಿದ ಬಳಿಕ 3 ಕಪ್ ನೀರು ಹಾಕಿಕೊಂಡು ಮಿಕ್ಸ್ ಮಾಡಿ. ಹಾಗೆ ಉಪ್ಪು ಕೂಡ ಹಾಕಿ (ಚಿಟಿಕೆ ಉಪ್ಪು ಹಾಕಿಕೊಳ್ಳಿ) ಈಗ ಕುಕ್ಕರ್ ಮುಚ್ಚಳ ಮುಚ್ಚಿ 3ರಿಂದ 4 ಸೀಟಿ ಹೊಡೆಯಲು ಬಿಡಿ.
ಅನಂತರ ಕುಕ್ಕರ್ ತಣ್ಣಗಾಗಲು ಬಿಡಿ. ನಂತರ ತೆಗೆದು ಒಮ್ಮೆ ಮಿಕ್ಸ್ ಮಾಡಿ ಇಲ್ಲವೆ ಸ್ವಲ್ಪ ಪುಡಿ ಮಾಡುವಂತೆ ಹಾಗೆ ಮಾಡಿ. ಬಳಿಕ ಈಗ ಒಲೆ ಮೇಲೆ ಒಂದು ಪಾತ್ರೆ ಇಟ್ಟು ಅದಕ್ಕೆ 2 ಕಪ್ ಬೆಲ್ಲ ಹಾಗೂ 1 ಕಪ್ ನೀರು ಹಾಕಿ ಕರಗಲು ಬಿಡಿ. ಕುದಿಯಲು ಬಿಟ್ಟು ಒಂದು ಎಳೆ ಪಾಕ ಆಗಲು ಬಿಡಿ. ಈಗ ಅಕ್ಕಿ ಹಾಗೂ ಹೆಸರು ಬೇಳೆಯನ್ನು ಹಾಕಿ ಮಿಕ್ಸ್ ಮಾಡಿಕೊಳ್ಳಿ. ಹಾಗೆ ಕುದಿಯಲು ಬಿಡಿ.
ಆಗಾಗ ಮಿಕ್ಸ್ ಮಾಡುತ್ತಾ ಇರಿ. ಇದು ದಪ್ಪವಾಗುವವರೆಗೂ ಮಿಶ್ರಣ ಮಾಡುತ್ತಾ ಇರಿ. ಗಟ್ಟಿ ಮೊಸರನ್ನದ ಹದಕ್ಕೆ ಬಂದಾಗ ಉರಿ ಸಣ್ಣ ಮಾಡಿಕೊಂಡು ಗೋಡಂಬಿ ಹಾಗೂ ದ್ರಾಕ್ಷಿಯನ್ನು ತುಪ್ಪದಲ್ಲಿ ಹುರಿದು ಇದಕ್ಕೆ ಹಾಕಿಕೊಂಡು ಮತ್ತೆ ಮಿಕ್ಸ್ ಮಾಡಿಕೊಂಡರೆ ನಿಮ್ಮ ಮುಂದೆ ರುಚಿ ರುಚಿಯ ಪ್ರಸಾದ ರೆಡಿಯಾಗುತ್ತದೆ. ಇದರ ರುಚಿ ಸವಿದರೆ ನೀವು ಕೂಡ ಪದೇ ಪದೇ ಮಾಡಿ ಸವಿಯುತ್ತೀರಿ. ನೀವು ಕೂಡ ಮನೆಯಲ್ಲಿ ಇದನ್ನೊಮ್ಮೆ ಟ್ರೈ ಮಾಡಿ ಸವಿದು ನೋಡಿ.



Click it and Unblock the Notifications
