Latest Updates
-
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ವಿಚ್ಛೇದನ, ಕಸ್ಟಡಿ ಸಮಸ್ಯೆಗಳಿಗೆ ಇಲ್ಲಿದೆ ಸುಲಭ ಪರಿಹಾರ! -
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ? -
ಓಣಂ ಸದ್ಯದ ಸಂಭ್ರಮ: ಬೆಲೆ ಏರಿಕೆ ಮತ್ತು ಆರೋಗ್ಯದ ಚಿಂತೆಯಿಲ್ಲದೆ ಹಬ್ಬ ಆಚರಿಸುವುದು ಹೇಗೆ? -
ಆಗಸ್ಟ್ 2026 ಏಕಾದಶಿ: ಸ್ಮಾರ್ತ vs ವೈಷ್ಣವ ವ್ರತದ ದಿನಾಂಕಗಳ ಗೊಂದಲವೇ? ಮಧುಮೇಹಿಗಳಿಗೆ ಇಲ್ಲಿದೆ ಉಪವಾಸದ ಸೂತ್ರ! -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ನಿಮ್ಮ ಮಕ್ಕಳೊಂದಿಗೆ ಚಂದ್ರನ ರಹಸ್ಯಗಳನ್ನು ಅನ್ವೇಷಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಓಣಂ ಹಬ್ಬದ ಸಂಭ್ರಮ: ಮಳೆಯಲ್ಲೂ ಸ್ಟೈಲಿಶ್ ಆಗಿ ಕಾಣಲು ₹1,200 ರೊಳಗೆ ಬೆಸ್ಟ್ ಫ್ಯಾಷನ್ ಟಿಪ್ಸ್! -
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್!
1 ವರ್ಷ ಇಡಬಹುದು ಈ ಶುಗರ್‌ಲೆಸ್ ಉಪ್ಪಿನಕಾಯಿ: ಮಾಡೋದು ಹೇಗೆ ನೋಡಿ!
ಊಟದ ಜೊತೆಗೆ ನೀವು ಸವಿಯಲು ಉಪ್ಪಿನಕಾಯಿ ಬಳಸುವುದು ಸಾಮಾನ್ಯ. ಅದ್ರಲ್ಲೂ ಮಳೆಗಾಲದಲ್ಲಿ ಊಟದ ಜೊತೆಗೆ ಉಪ್ಪಿನಕಾಯಿ ಸವಿಯುವುದು ಅಂದ್ರೆ ಎಲ್ಲರಿಗೂ ಇಷ್ಟವಾಗುತ್ತೆ. ಈಗ ಹತ್ತಾರು ರೀತಿಯ ಉಪ್ಪಿನಕಾಯಿಗಳು ಮಾರುಕಟ್ಟೆಯಲ್ಲಿ ಸಿಗುವುದು ನೋಡಬಹುದು. ಅದ್ರಲ್ಲೂ ವಿಶೇಷವಾಗಿ ಮಾವಿನಕಾಯಿ ಉಪ್ಪಿನಕಾಯಿ, ನಿಂಬೆಕಾಯಿ ಉಪ್ಪಿನಕಾಯಿ ಕೂಡ ಸವಿಯುವುದು ನೋಡಬಹುದು.
ನಿಂಬೆಕಾಯಿಯ ಉಪ್ಪಿನಕಾಯಿ ಅಂದರೆ ಎಲ್ಲರಿಗೂ ಬಹಳ ಇಷ್ಟವಾಗುತ್ತೆ. ಊಟದ ಜೊತೆಗೆ ಈ ಉಪ್ಪಿನಕಾಯಿ ಸವಿಯಲು ಬಹಳ ರುಚಿ ನೀಡಲಿದೆ. ಅದ್ರಲ್ಲೂ ಉಪ್ಪಿನಕಾಯಿ ಆರೋಗ್ಯದ ದೃಷ್ಟಿಯಿಂದಲೂ ಬಹಳ ಉತ್ತಮ ಅನ್ನೋದನ್ನು ನೀವು ಕೂಡ ತಿಳಿದಿರಬಹುದು. ಏಕೆಂದರೆ ಉಪ್ಪಿನಕಾಯಿಗೆ ಹಲವು ರೀತಿಯ ವಸ್ತುಗಳ ಬಳಕೆ ಮಾಡುವುದು ನೋಡಬಹುದು.

ಆದ್ರೆ ಉಪ್ಪಿನಕಾಯಿಯನ್ನು ಕೂಡ ಶುಗರ್ ಲೆಸ್ ಆಗಿ ಮಾಡಬಹುದು ಎಂಬುದು ನಿಮಗೆ ಗೊತ್ತಾ? ಹೌದು ಮಧುಮೇಹಿಗಳು ಕೂಡ ಸವಿಯಬಹುದಾದದಂತಹ ಶುಗರ್ ಲೆಸ್ ಉಪ್ಪಿನಕಾಯಿ ಸಹ ಮಾಡಬಹುದು. ಹಾಗಾದ್ರೆ ನಾವಿಂದು ಶುಗರ್ ಲೆಸ್ ಉಪ್ಪಿನಕಾಯಿ ಮಾಡುವ ಕುರಿತಾಗಿ ತಿಳಿದುಕೊಳ್ಳೋಣ. ಅದ್ರಲ್ಲೂ ಶುಗರ್ ಲೆಸ್ ನಿಂಬೆಕಾಯಿ ಉಪ್ಪಿನಕಾಯಿ ಮಾಡುವುದು ಹೇಗೆ ತಿಳಿದುಕೊಳ್ಳಿ.
ಶುಗರ್ ಲೆಸ್ ನಿಂಬೆಕಾಯಿ ಉಪ್ಪಿನಕಾಯಿ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವ ವಿಧಾನವೇನು?, ಮಾಡಲು ಎಷ್ಟು ಸಮಯ ಹಿಡಿಯಲಿದೆ ಅನ್ನೋದನ್ನು ನಾವಿಂದು ತಿಳಿದುಕೊಳ್ಳೋಣ.
ಶುಗರ್ ಲೆಸ್ ನಿಂಬೆಕಾಯಿ ಉಪ್ಪಿನಕಾಯಿ ಮಾಡಲು ಬೇಕಾಗುವ ವಸ್ತುಗಳು
- ನಿಂಬೆಕಾಯಿ
- ಖಾರದ ಪುಡಿ
- ಬೆಲ್ಲ
- ಎಣ್ಣೆ
- ಕಾಳು ಮೆಣಸು
- ಮೆಂತ್ಯ
- ಇಂಗು
- ಉಪ್ಪು
ಶುಗರ್ ಲೆಸ್ ನಿಂಬೆಕಾಯಿ ಉಪ್ಪಿನಕಾಯಿ ಮಾಡುವುದು ಹೇಗೆ?
ಮೊದಲಿಗೆ ನಿಂಬೆಕಾಯಿಗಳ ಚೆನ್ನಾಗಿ ತೊಳೆದುಕೊಳ್ಳಿ. ನಂತರ ಒಂದು ಕಾಟನ್ ಬಟ್ಟೆಯಲ್ಲಿ ಚೆನ್ನಾಗಿ ಒರೆಸಿಕೊಳ್ಳಿ. ಸ್ವಲ್ಪವೂ ನೀರು ಇರದಂತೆ ನೋಡಿಕೊಳ್ಳಬೇಕು. ಹಾಗೆ ನಂತರ ಸ್ವಲ್ಪ ಡ್ರೈ ಆಗಲು ಬಿಡಬೇಕು. ನಂತರ ನಿಂಬೆ ಕಾಯಿಯನ್ನು ಎರಡು ಹೋಳುಗಳಾಗಿ ಕತ್ತರಿಸಿಕೊಳ್ಳಿ. ಅನಂತರ ಅದರಲ್ಲಿನ ಬೀಜಗಳು ಉಳಿದಂತೆ ತೆಗೆದುಕೊಳ್ಳಿ. ಬೀಜಗಳಿಂದ ಉಪ್ಪಿನಕಾಯಿ ಕಹಿಯಾಗುತ್ತದೆ.
ಇಷ್ಟು ಮಾಡಿಕೊಂಡ ಬಳಿಕ ಒಂದು ದೊಡ್ಡ ಬೆಲ್ಲವನ್ನು ಕುಟ್ಟಿ ಪುಡಿ ಮಾಡಿಕೊಳ್ಳಿ. ಅಥವಾ ಹೆಚ್ಚಿಕೊಂಡು ಪುಡಿ ಪುಡಿ ಮಾಡಿಕೊಳ್ಳಿ. ಸುಮಾರು ಅರ್ಧ ಕೆ.ಜಿಗೂ ಅಧಿಕ ಬೆಲ್ಲ ತೆಗೆದುಕೊಳ್ಳಿ. ಒಂದು ಬೌಲ್‌ನ ನಿಂಬೆಕಾಯಿಗೆ ಮುಕ್ಕಾಲು ಬೌಲ್ ಬೆಲ್ಲದ ಅಳತೆ ಮಾಡಿಕೊಂಡು ತೆಗೆದುಕೊಳ್ಳಬೇಕು. ಬಳಿಕ ಬೆಲ್ಲ ಹಾಗೂ ಈ ನಿಂಬೆಕಾಯಿಯನ್ನು ಚೆನ್ನಾಗಿ ಮಿಕ್ಸ್ ಮಾಡಿಕೊಂಡು ಒಂದು ಮುಚ್ಚಳ ಮುಚ್ಚಿ 1 ರಾತ್ರಿ ಪೂರ್ತಿ ಹಾಗೆಯೇ ಬಿಡಿ.
ಮಾರನೆ ದಿನ ಅದು ಬೆಲ್ಲ ಕರಗಿ ನೀರಿನಲ್ಲಿ ಇರುವಂತೆ ಕಾಣಲಿದೆ. ಈಗ ಗ್ಯಾಸ್ ಮೇಲೆ ಇಟ್ಟು ಮಧ್ಯಮ ಉರಿಯಲ್ಲಿ ಕುದಿಬರಲು ಬಿಡಿ. ಒಂದು ಕುದಿಬಂದಾಗ ಒಲೆ ಆಫ್ ಮಾಡಿಕೊಂಡು ತಣ್ಣಗಾಗಲು ಬಿಡಿ. ಸುಮಾರು 3 ಗಂಟೆಯಾದರು ಹಾಗೆಯೇ ಬಿಡಿ. ಆ ನಡುವೆ ಈಗ ಒಂದು ಬಾಣಲೆ ಇಟ್ಟು ಅದಕ್ಕೆ 2 ಸ್ಪೂನ್ ಎಣ್ಣೆ, ಕಾಳು ಮೆಣಸು ಫ್ರೈ ಮಾಡಿ ತೆಗೆದಿಡಿ. ಹಾಗೆ ಅರ್ಧ ಚಮಚ ಮೆಂತ್ಯ ಕೂಡ ಹಾಕಿ ಹುರಿದುಕೊಳ್ಳಿ. ನಂತರ ಚಿಟಿಕೆ ಇಂಗು ಹಾಕಿ ಮಿಕ್ಸ್ ಮಾಡಿ ಗ್ಯಾಸ್ ಆಫ್ ಮಾಡಿಕೊಂಡು ತಣ್ಣಗಾಗಲು ಬಿಡಿ.
ಈಗ ಈ ಮಸಾಲೆಯನ್ನು ಮಿಕ್ಸ್ ಜಾರ್‌ನಲ್ಲಿ ಹಾಕಿ ಒಂದು ಸುತ್ತು ರುಬ್ಬಿಕೊಂಡು ಇಟ್ಟುಕೊಳ್ಳಿ. ಈಗ ತಣ್ಣಗಾಗಲು ಇಟ್ಟ ನಿಂಬೆಗೆ ಉಪ್ಪು ಹಾಕಿಕೊಂಡು ಬಳಿಕ ಖಾರದ ಪುಡಿ, ಹುರಿದ ಕಾಳು ಮೆಣಸು, ಹಾಗೆ ರುಬ್ಬಿದ ಪುಡಿಗಳನ್ನು ಸಹ ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ. ಮಿಕ್ಸ್ ಮಾಡಿದ ಬಳಿಕ ಮುಚ್ಚಳ ಮುಚ್ಚಿ ಒಂದು ವಾರಗಳ ಕಾಲ ಹಾಗೆ ಇಡಬೇಕು. ವಾರದ ನಡುವೆ ನಿತ್ಯವೂ ಒಮ್ಮೆ ಮಿಕ್ಸ್ ಮಾಡಬೇಕು. ಒಂದು ವಾರದ ಬಳಿಕ ಇದನ್ನು ಗಾಜಿನ ಅಥವಾ ಭರಣಿಗಳಲ್ಲಿ ಹಾಕಿ ಇಟ್ಟುಕೊಂಡರೆ 1 ವರ್ಷ ಬೇಕಾದರೆ ಇಡಬಹುದು. ನೀವು ಸಹ ಈ ರೀತಿ ಶುಗರ್ ಲೆಸ್ ಉಪ್ಪಿನಕಾಯಿ ಮಾಡಿ ನೋಡಿ.



Click it and Unblock the Notifications