Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ನಾಲಿಗೆ ರುಚಿ ಹೆಚ್ಚಿಸುವ ಖಾರ ಚಟ್ನಿ ಮಾಡಿ..! 5 ನಿಮಿಷ ಸಾಕು..!
ನೀವು ಊಟ, ತಿಂಡಿಗೆ ಒಂದು ಪಲ್ಯ ಅಥವಾ ಚಟ್ನಿ ಮಾಡುವ ಅಭ್ಯಾಸ ಇಟ್ಟುಕೊಂಡಿರುತ್ತೀರಿ. ಬೆಳಗ್ಗೆ ತಿಂಡಿಗೆ ಚಟ್ನಿ ಇದ್ದರೆ ರುಚಿ ದುಪ್ಪಟ್ಟಾಗುತ್ತೆ. ಹಾಗೆ ಯಾವುದೇ ತಿಂಡಿಯೊಂದಿಗೆ ನಾಲಗೆ ರುಚಿ ಹೆಚ್ಚಿಸುವ ಒಂದು ಖಾರ ಖಾರವಾದ ಚಟ್ಬಿ ಇದ್ದರೇನೆ ಅದ್ಭುತ. ಅದರಲ್ಲೂ ಕಡಿಮೆ ವಸ್ತುಗಳ ಬಳಸಿ, ಕಡಿಮೆ ಸಮಯದಲ್ಲಿ ಮಾಡಬಹುದಾದ ಚಟ್ನಿಯನ್ನೇ ಮಾಡಲು ನೀವು ಮುಂದಾಗುತ್ತೀರಿ.
ಆದರೆ ಕಡಿಮೆ ಸಮಯದಲ್ಲಿ ರುಚಿಕರವಾಗಿ ಯಾವ ಚಟ್ನಿ ಮಾಡಬಹುದು ಎಂಬುದು ನಿಮಗೆ ಗೊತ್ತಿದ್ಯಾ?, ಕಡಿಮೆ ಸಮಯದಲ್ಲಿ ಖಾರ ಖಾರವಾಗಿ ನಿಮ್ಮ ತಿಂಡಿಗೆ ಮತ್ತಷ್ಟು ರುಚಿ ತರುವ ಖಾರ ಚಟ್ನ ಮಾಡುವುದನ್ನು ನಾವಿಂದು ತಿಳಿದುಕೊಳ್ಳೋಣ. ಈ ಚಟ್ನಿ ಮಾಡಿದ್ರೆ ತಿಂಡಿ ಮಾತ್ರವಲ್ಲ ಊಟಕ್ಕೂ ಕೂಡ ರುಚಿ ತರಲಿದೆ.

ನೀವು ನಿತ್ಯ ಒಂದೇ ರೀತಿ ಚಟ್ನಿ ಮಾಡಿ ಸವಿದು ಬೇಸರ ತರಿಸಿದ್ದರೆ ಈ ಖಾರ ಚಟ್ನಿಯನ್ನು ನೀವು ಕೂಡ ಒಮ್ಮೆ ಟ್ರೈ ಮಾಡಿ ನೋಡಿ. ನಿಮ್ಮ ನಾಲಿಗೆ ರುಚಿ ಹೆಚ್ಚಿಸುವ ಖಾರ ಚಟ್ನಿ ಮಾಡುವ ಕುರಿತು ನಾವಿಂದು ತಿಳಿದುಕೊಳ್ಳೋಣ. ಈ ಖಾರ ಚಟ್ನಿ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?, ಮಾಡುವ ವಿಧಾನವೇನು? ಮಾಡಲು ಎಷ್ಟು ಸಮಯ ಹಿಡಿಯಲಿ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಖಾರ ಚಟ್ನಿ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?
- ಟೊಮೆಟೊ -4
- ತೆಂಗಿನಕಾಯಿ
- ಈರುಳ್ಳಿ-2
- ಬೆಳ್ಳುಳ್ಳಿ
- ಜೀರಿಗೆ
- ಹುಣಸೆ ಹಣ್ಣು
- ಒಣ ಮೆಣಸು
- ಬ್ಯಾಡಗಿ ಮೆಣಸು
- ಕೊತ್ತಂಬರಿ
- ಎಣ್ಣೆ
- ಕರಿವೇವು
- ಉಪ್ಪು
- ಸಾಸಿವೆ
ಖಾರ ಚಟ್ನಿ ಮಾಡುವ ವಿಧಾನವೇನು?
ಮೊದಲು ಒಲೆ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿಕೊಂಡು ಎಣ್ಣೆ ಕಾದ ಬಳಿಕ ಸಾಸಿವೆ, ಬೆಳ್ಳುಳ್ಳಿ, ಜೀರಿಗೆ ಒಣ ಮೆಣಸು ಹಾಕಿಕೊಂಡು ಫ್ರೈ ಮಾಡಿಕೊಳ್ಳಿ. ಬ್ಯಾಡಗಿ ಮೆಣಸು ಇದ್ದರೆ ಹಾಕಿಕೊಳ್ಳಿ ಒಳ್ಳೆಯ ಕಲರ್ ಬರುತ್ತದೆ. ಈಗ ಈರುಳ್ಳಿ ಹಾಕಿಕೊಂಡು ಫ್ರೈ ಮಾಡಿಕೊಳ್ಳಿ. 2 ನಿಮಿಷ ಫ್ರೈ ಮಾಡಿಕೊಳ್ಳಬೇಕು.
ಈಗ ಇದಕ್ಕೆ ಸಣ್ಣದಾಗಿ ಹೆಚ್ಚಿಕೊಂಡಿರುವ ಟೊಮೆಟೋ ಅನ್ನು ಹಾಕಿಕೊಂಡು ಮತ್ತೆ ಮಿಕ್ಸ್ ಮಾಡಿಕೊಳ್ಳಿ. ನಂತರ ಸಣ್ಣದಾಗಿ ಹೆಚ್ಚಿಕೊಂಡ ತೆಂಗಿನ ಕಾಯಿ, ಹುಣಸೆ ಹಣ್ಣು ಕೂಡ ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ. ಮತ್ತೆ 2 ನಿಮಿಷ ಚೆನ್ನಾಗಿ ಫ್ರೈ ಮಾಡಿಕೊಳ್ಳಿ. ಅನಂತರ ಇದಕ್ಕೆ ಕೊತ್ತಂಬರಿ ಸೊಪ್ಪು ಹಾಕಿ 1 ನಿಮಿಷ ಬಿಟ್ಟು ಒಲೆ ಆಫ್ ಮಾಡಿಕೊಳ್ಳಿ.
ಹಾಗೆ ಈ ಎಲ್ಲಾ ವಸ್ತುಗಳನ್ನು ತಣ್ಣಗಾಗಲು ಬಿಡಿ, ಅನಂತರ ಒಂದು ಮಿಕ್ಸಿ ಜಾರ್‌ಗೆ ಎಲ್ಲಾ ಮಸಾಲೆಗಳು ಹಾಗೂ ರುಚಿಗೆ ತಕ್ಕಷ್ಟು ಉಪ್ಪು ಹಾಗೂ ಸ್ವಲ್ಪವೇ ನೀರು ಹಾಕಿಕೊಂಡು ರುಬ್ಬಿಕೊಳ್ಳಬೇಕು. ತುಂಬಾ ತರಿತರಿಯಾಗಿ ಹಾಗೆ ತುಂಬಾ ನುಣ್ಣಗೆ ರುಬ್ಬಿಕೊಳ್ಳಬೇಡಿ. ಮಧ್ಯಮವಾಗಿ ರುಬ್ಬಿಕೊಂಡು ಒಂದು ಬೌಲ್‌ಗೆ ಹಾಕಿಟ್ಟುಕೊಳ್ಳಿ.
ಈಗ ಒಂದು ಬಾಣಲೆಯಲ್ಲಿ ಒಗ್ಗರಣೆ ಹಾಕಿ ಎಣ್ಣೆ ಹಾಕಿ ಅದಕ್ಕೆ ಸಾಸಿವೆ, ಜೀರಿಗೆ, ಒಣ ಮೆಣಸು, ಕರಿಬೇವು ಹಾಕಿ ಒಗ್ಗರಣೆ ಮಾಡಿ ಅದನ್ನು ಚಟ್ನಿಗೆ ಹಾಕಿ ಮಿಕ್ಸ್ ಮಾಡಿಕೊಳ್ಳಿ. ಇಷ್ಟಾದರೆ ನಿಮ್ಮ ನಾಲಗೆ ರುಚಿ ಹೆಚ್ಚಿಸುವ ಖಾರ ಚಟ್ನಿ ರೆಡಿಯಾಗುತ್ತದೆ. ಇದನ್ನು ನೀವು ಕೂಡ ಮಾಡಿ ನೋಡಿ. ಇದು ಇಡ್ಲಿ, ದೋಸೆ, ಚಿತ್ರಾನ್ನ, ಊಟಕ್ಕೂ ಕೂಡ ರುಚಿ ಹೆಚ್ಚಿಸಲಿದೆ.



Click it and Unblock the Notifications
