Latest Updates
-
ಮಳೆಯ ನಡುವೆ ಯುಜಿಸಿ ನೆಟ್ ಪರೀಕ್ಷೆ: ಸಂಗಾತಿಯ ಈ ಸಣ್ಣ ಬೆಂಬಲವೇ ಯಶಸ್ಸಿನ ಗುಟ್ಟು -
ಮಳೆಗಾಲದಲ್ಲಿ ಮನೆಯ ಪೀಠೋಪಕರಣ ಹಾಳಾಗುತ್ತಿದೆಯೇ? ಬೂಸು ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಮುಂಬೈ ಆರೆಂಜ್ ಅಲರ್ಟ್: ಮಳೆಯಲ್ಲಿ ಆಫೀಸ್ ಹೋಗುವವರೇ, ಈ 'ನೋ-ಕುಕ್' ಪ್ರೋಟೀನ್ ಮೀಲ್ಸ್ ಮಿಸ್ ಮಾಡ್ಬೇಡಿ! -
ಅಮೆಜಾನ್ ಪ್ರೈಮ್ ಡೇ ಸೇಲ್: ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಈ ಸ್ಮಾರ್ಟ್ ಟ್ರಿಕ್ಸ್ ಮಿಸ್ ಮಾಡ್ಬೇಡಿ! -
ಯೋಗದ ನಂತರ ಮೈಕೈ ನೋವು ಕಾಡುತ್ತಿದೆಯೇ? ಕಚೇರಿಯಲ್ಲಿ ಕೆಲಸ ಮಾಡುವಾಗ ಈ 12 ನಿಮಿಷದ ಟಿಪ್ಸ್ ಪಾಲಿಸಿ -
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು! -
10ನೇ ಅಂತರಾಷ್ಟ್ರೀಯ ಯೋಗ ದಿನ: ಮಳೆಯನ್ನೂ ಮೀರಿ ಕೋಲ್ಕತ್ತಾದಲ್ಲಿ ಯೋಗ ಸಂಭ್ರಮ, ಮನೆಯಲ್ಲೇ ಅಭ್ಯಾಸ ಮಾಡಲು ಇಲ್ಲಿದೆ ಸರಳ ಟಿಪ್ಸ್!
ಬ್ರೇಕ್ಫಾಸ್ಟ್ಗೆ ಮೆಂತ್ಯ ರೈಸ್ ಬಾತ್: ಮಾಡುವ ಸಿಂಪಲ್ ವಿಧಾನ ಇಲ್ಲಿದೆ
ಬೆಳಗ್ಗೆ ತಿಂಡಿಗೆ ರೈಸ್ ಬಾತ್ ಮಾಡಿ ಸವಿಯುವುದು ಅಂದ್ರೆ ಎಲ್ಲರಿಗೂ ಇಷ್ಟವಾಗುತ್ತೆ. ಅದ್ರಲ್ಲೂ ಸುಲಭವಾಗಿ ಮಾಡಬಹುದಾದ ಹಾಗೆ ಬಹಳ ಕಡಿಮೆ ಸಮಯದಲ್ಲಿ ಮಾಡಿ ಮುಗಿಸಬಹುದಾದ ರೈಸ್ ಬಾತ್ ಕಡೆಗೆ ಜನರ ಒಲುವು ಇರಲಿದೆ. ಬೆಳಗ್ಗೆ ಸಮಯದಲ್ಲಿ ಬೇಗ ಅಡುಗೆ ಕೆಲಸಗಳ ಮುಗಿಸಲು ಎಲ್ಲರು ಬಯಸುತ್ತಿರುತ್ತಾರೆ. ಹಾಗೆ ಸುಲಭವಾಗಿ ಮಾಡಬಹುದಾದ ರೈಸ್ ಬಾತ್ಗಳಲ್ಲಿ ನಾವಿಂದು ವಿಶೇಷ ರುಚಿ ನೀಡುವಂತಹ ಮೆಂತ್ಯ ರೈಸ್ ಮಾಡುವ ಕುರಿತಾಗಿ ತಿಳಿದುಕೊಳ್ಳೋಣ.
ನೀವು ಮೆಂತ್ಯದಿಂದ ಮಾಡುವ ಹಲವು ಖಾದ್ಯಗಳ ಸವಿದಿರುತ್ತೀರಿ. ಅದರ ಆರೋಗ್ಯಕರ ಲಾಭಗಳ ಕುರಿತಾಗಿಯೂ ನಿಮಗೆ ತಿಳಿದಿರಬಹುದು. ಹಾಗೆ ಮೆಂತ್ಯ ಅನ್ನ, ಮೆಂತ್ಯ ಸೊಪ್ಪಿನ ಖಾದ್ಯಗಳು ಅಂದ್ರೆ ಎಲ್ಲರಿಗೂ ಇಷ್ಟವಾಗುತ್ತೆ. ಇನ್ನು ನಾವಿಂದು ಈ ಮೆಂತ್ಯ ರೈಸ್ ಬಾತ್ ಮಾಡುವ ಕುರಿತಾಗಿ ತಿಳಿದುಕೊಳ್ಳೋಣ.

ಈ ಮೆಂತ್ಯ ರೈಸ್ ಬಾತ್ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?, ಮಾಡುವ
ವಿಧಾನವೇನು?, ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು
ನಾವಿಂದು ತಿಳಿದುಕೊಳ್ಳೋಣ.
ಮೆಂತ್ಯ ಸೊಪ್ಪಿನ ರೈಸ್ ಬಾತ್ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?
- ಅಕ್ಕಿ
- ಮೆಂತ್ಯ ಸೊಪ್ಪು
- ಕೊತ್ತಂಬರಿ ಸೊಪ್ಪು
- ಪುದೀನ ಸೊಪ್ಪು
- ಬೆಳ್ಳುಳ್ಳಿ
- ಶುಂಠಿ
- ತೆಂಗಿನಕಾಯಿ
- ಈರುಳ್ಳಿ
- ಹಸಿ ಮೆಣಸಿನಕಾಯಿ
- ದಾಲ್ಚಿನ್ನಿ
- ಲವಂಗ
- ಕರಿಬೇವು
- ಏಲಕ್ಕಿ
- ಚಕ್ರಮೊಗ್ಗು
- ಸೋಂಪುಕಾಳು
- ಹಸಿ ಬಟಾಣಿ
- ಟೊಮೆಟೊ
- ಎಣ್ಣೆ
- ತುಪ್ಪ
- ಉಪ್ಪು
ಮೆಂತ್ಯ ಸೊಪ್ಪಿನ ರೈಸ್ ಬಾತ್ ಮಾಡುವ ವಿಧಾನವೇನು?
ಮೊದಲು ಅಕ್ಕಿಯನ್ನು ಒಂದು ಗ್ಲಾಸ್ನಲ್ಲಿ ತೆಗೆದುಕೊಂಡು ಒಂದು ಪಾತ್ರೆಯಲ್ಲಿ ನೆನೆಸಿಡಿ. ಈಗ ಮಿಕ್ಸಿ ಜಾರ್ ತೆಗೆದುಕೊಂಡು ಅದಕ್ಕೆ ಕೊತ್ತಂಬರಿ ಸೊಪ್ಪು, ಈರುಳ್ಳಿ, ಶುಂಠಿ, ಹಸಿ ಮೆಣಸು, ಪುದಿನ ಸೊಪ್ಪು, ಸೋಂಪು ಕಾಳು, ಏಲಕ್ಕಿ, ಚಕ್ಕೆ, ಬೆಳ್ಳುಳ್ಳಿ, ತೆಂಗಿನಕಾಯಿ ಹಾಕಿಕೊಳ್ಳಿ. ಹಾಗೆ ಇದನ್ನು ರುಬ್ಬಲು ಸ್ವಲ್ಪ ನೀರು ಸಹ ಹಾಕಿಕೊಳ್ಳಿ. ಹಾಗೆ ನುಣ್ಣಗೆ ರುಬ್ಬಿಕೊಳ್ಳಿ.
ಈಗ ಒಲೆ ಮೇಲೆ ಕುಕ್ಕರ್ ಇಟ್ಟು ನಂತರ ಅದಕ್ಕೆ 2 ಸ್ಪೂನ್ ತುಪ್ಪ ಅಥವಾ ಎಣ್ಣೆ ಹಾಕಿಕೊಳ್ಳಿ. ಹಾಗೆ ಬಳಿಕ ಇದಕ್ಕೆ ಸೋಂಪು ಕಾಳು, ಏಲಕ್ಕಿ, ಚಕ್ಕೆ, ಲವಂಗ, ಚಕ್ರಮೊಗ್ಗು, ಪಲಾವ್ ಎಲೆ ಹಾಕಿಕೊಳ್ಳಿ. ಹಾಗೆ ಇದಕ್ಕೆ ಒಂದು ಈರುಳ್ಳಿ, ಹಸಿ ಬಟಾಣಿ ಸಹ ಇದ್ದರೆ ಹಾಕಿಕೊಳ್ಳಿ. ಚೆನ್ನಾಗಿ 2 ನಿಮಿಷ ಫ್ರೈ ಮಾಡಿಕೊಂಡ ಬಳಿಕ ಇದಕ್ಕೆ 1 ಕಪ್ ಮೆಂತ್ಯ ಸೊಪ್ಪು ಹಾಕಿಕೊಳ್ಳಿ.
ಮೆಂತ್ಯ ಸೊಪ್ಪಿ ಚೆನ್ನಾಗಿ ಬಾಡಿಕೊಳ್ಳಬೇಕು. ಹಾಗೆ ಫ್ರೈ ಮಾಡಿಕೊಂಡು ಟೊಮೆಟೋ ಹಾಕಿ ಈಗ ಮೊದಲು ರುಬ್ಬಿಕೊಂಡಿದ್ದ ಮಸಾಲೆಯನ್ನು ಕೂಡ ಇದಕ್ಕೆ ಹಾಕಿಕೊಳ್ಳಿ. ನೀರು ಹಾಕಿಕೊಳ್ಳದೆ 2 ನಿಮಿಷ ಫ್ರೈ ಮಾಡಿ. ನಂತರ ಉಪ್ಪು ಹಾಕಿ ಸ್ವಲ್ಪ ನೀರು ಹಾಕಿ ಮಿಕ್ಸ್ ಮಾಡಿಕೊಳ್ಳಿ. 2 ನಿಮಿಷದ ಬಳಿಕ ಇದಕ್ಕೆ ಅಕ್ಕಿ ತೆಗೆದುಕೊಂಡು ಗ್ಲಾಸ್ನಲ್ಲಿ ಎರಡರಷ್ಟು ನೀರು ಹಾಕಿಕೊಂಡು ಕುದಿಯಲು ಬಿಡಿ. ಹಾಗೆ ಈಗ ನೆನೆಸಿಟ್ಟ ಅಕ್ಕಿಯನ್ನು ನೀರಿನಿಂದ ತೆಗೆದು ಇದಕ್ಕೆ ಹಾಕಿಕೊಳ್ಳಿ.
ಈಗ ನಿಧಾನವಾಗಿ ಅಕ್ಕಿಯನ್ನು ಮಿಕ್ಸ್ ಮಾಡಿಕೊಳ್ಳಿ. ನಂತರ ಮುಚ್ಚಳ ಮುಚ್ಚಿ 2 ಸೀಟಿ ಹೊಡೆಯಲು ಬಿಡಿ. ಹಾಗೆ ಕುಕ್ಕರ್ ಸಂಪೂರ್ಣ ತಣ್ಣಗಾಗಲು ಬಿಟ್ಟು ಮುಚ್ಚಳ ತೆರೆದು ಮತ್ತೊಮ್ಮೆ ಮಿಕ್ಸ್ ಮಾಡಿಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ಮೆಂತ್ಯ ರೈಸ್ ಬಾತ್ ರೆಡಿಯಾಗುತ್ತದೆ. ನೀವು ಸಹ ಮನೆಯಲ್ಲಿ ಇದನ್ನು ಒಮ್ಮೆ ಟ್ರೈ ಮಾಡಿ ನೋಡಿ.



Click it and Unblock the Notifications