Latest Updates
-
ಸೆಪ್ಟೆಂಬರ್ 15ರ ಲವ್ ರಾಶಿಫಲ: ನಿಮ್ಮ ಸಂಗಾತಿಯ ಮನ ಗೆಲ್ಲಲು ಈ 2 ನಿಮಿಷದ ಸೂತ್ರ ಬಳಸಿ! -
ಮಳೆಗಾಲದ ಎಚ್ಚರಿಕೆ: ಮುಂಬೈ-ಪುಣೆಯಲ್ಲಿ ಮನೆ ಸೋರಿಕೆ ತಡೆಯಲು 30 ನಿಮಿಷದ ಸಿಂಪಲ್ ಟಿಪ್ಸ್ -
ಅಡುಗೆಮನೆ ಬಜೆಟ್ ಏರಿಕೆ: ₹30 ಕ್ಕಿಂತ ಕಡಿಮೆ ವೆಚ್ಚದಲ್ಲಿ ಆರೋಗ್ಯಕರ ಪ್ರೋಟೀನ್ ಆಹಾರ ಪಡೆಯುವುದು ಹೇಗೆ? -
iOS 27 ಅಪ್ಡೇಟ್ ನಂತರ ಫೋನ್ ಬ್ಯಾಟರಿ ಬೇಗ ಖಾಲಿಯಾಗುತ್ತಿದೆಯೇ? ಗಾಬರಿಯಾಗಬೇಡಿ, ಈ ಟಿಪ್ಸ್ ಫಾಲೋ ಮಾಡಿ! -
ಗಣೇಶ ವಿಸರ್ಜನೆ: ಮೂರ್ತಿ ಹೊರುವಾಗ ಬೆನ್ನು ನೋವು ಕಾಡದಿರಲು ಈ ಸರಳ ಟಿಪ್ಸ್ ಪಾಲಿಸಿ -
ಸಣ್ಣ ಫ್ಲ್ಯಾಟ್ನಲ್ಲಿ ಗಣೇಶೋತ್ಸವ: ಅತಿಥಿಗಳಿಗಾಗಿ ಜಾಗ ಮತ್ತು ಸುರಕ್ಷತೆಗಾಗಿ ಈ 5 ಟಿಪ್ಸ್ ಫಾಲೋ ಮಾಡಿ -
ಗಣೇಶೋತ್ಸವದ ಪ್ರಸಾದ ಬೇಗ ಹಾಳಾಗುತ್ತಿದೆಯೇ? ಮೋದಕ ಮತ್ತು ಸಿಹಿ ತಿಂಡಿಗಳನ್ನು ತಾಜಾವಾಗಿಡಲು ಈ ಟಿಪ್ಸ್ ಪಾಲಿಸಿ! -
ಗಣೇಶೋತ್ಸವ 2026: ಲಾಲ್ಬಾಗ್ಚಾ ರಾಜನ ದರ್ಶನಕ್ಕೆ ಬೆಸ್ಟ್ ಟೈಮ್ ಯಾವುದು? ಮೆಟ್ರೋ ಮತ್ತು ಲೈವ್ ಅಪ್ಡೇಟ್ಸ್ ಇಲ್ಲಿದೆ! -
ಹಬ್ಬದ ಪೂಜೆಯ ವೇಳೆ ಮೊಣಕಾಲು ಮತ್ತು ಬೆನ್ನು ನೋವು ಕಾಡುತ್ತಿದೆಯೇ? ನೋವಿಲ್ಲದೆ ಪೂಜೆ ಮಾಡಲು ಇಲ್ಲಿದೆ 10 ನಿಮಿಷಗಳ ಸಿಂಪಲ್ ಟಿಪ್ಸ್! -
ಗಣೇಶೋತ್ಸವದ ಸೌಂಡ್ ಕಿರಿಕಿರಿ: ನೆರೆಹೊರೆಯವರ ಜೊತೆ ಜಗಳವಿಲ್ಲದೆ ನೆಮ್ಮದಿಯ ನಿದ್ರೆ ಪಡೆಯುವುದು ಹೇಗೆ?
ಸಿಹಿ ಸಿಹಿಯ ಚಿರೋಟಿ ಸವಿದು ನೋಡಿ..! ಮಾಡೋದು ಹೇಗೆ?
ಹಬ್ಬದಲ್ಲಿ ಸಿಹಿ ಮಾಡಿ ಸವಿಯೋದು ಸಾಮಾನ್ಯ. ಅದ್ರಲ್ಲೂ ಯಾವಾಗು ಮಾಡುವ ಸಿಹಿಗಿಂತಲು ಅಪರೂಪಕ್ಕೆ ಮಾಡಿ ಸವಿಯುವ ಸಿಹಿಗಳು ಅಂದ್ರೆ ಎಲ್ಲರಿಗೂ ಇಷ್ಟವಾಗುತ್ತೆ. ಹಾಗೆ ರುಚಿ ರುಚಿ ಖಾದ್ಯಗಳಲ್ಲಿ ಚಿರೋಟಿ ಕೂಡ ಒಂದು. ಚಿರೋಟಿಯನ್ನು ಸಿಹಿ ಹಾಲಿನ ಜೊತೆಗೆ ಸವಿಯುತ್ತಿದ್ದರೆ ಅದರ ರುಚಿಯೇ ಬೇರೆ. ಬೇಕರಿಗಳಲ್ಲಿ ಸಿಗುವಂತಹ ಚಿರೋಟಿಯನ್ನು ನೀವು ಕೂಡ ತಂದು ಸವಿದಿರಬಹುದು.
ಅದ್ರಲ್ಲೂ ಮನೆಯಲ್ಲಿ ಯಾವುದಾದರು ವಿಶೇಷ ದಿನಗಳಿದ್ದರೆ, ಹಬ್ಬವಿದ್ದರೆ, ಪೂಜೆ ಏನಾದರು ಇದ್ದರೆ ಈ ದಿನ ಚಿರೋಟಿ ಅಂತಹ ವಿಶೇಷ ಸಿಹಿ ಮಾಡಿ ಸವಿಯುವುದು ನೋಡಬಹುದು. ಈ ಚಿರೋಟಿ ಸಿಹಿ ಎಲ್ಲರಿಗೂ ಇಷ್ಟವಾಗುತ್ತೆ. ಹಾಗಾದ್ರೆ ಇದನ್ನು ಮನೆಯಲ್ಲಿ ಮಾಡೋದು ಹೇಗೆ ಗೊತ್ತಾ?

ಸಿಹಿ ಸಿಹಿ ಚಿರೋಟಿಯನ್ನು ಮನೆಯಲ್ಲಿಯೇ ಮಾಡಿ ಸವಿಯಬಹುದು. ಹಾಗಾದ್ರೆ ಚಿರೋಟಿ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವ ವಿಧಾನವೇನು? ಎಷ್ಟು ಸಮಯ ಹಿಡಿಯಲಿದೆ ಎನ್ನುವುದನ್ನು ತಿಳಿದುಕೊಳ್ಳೋಣ.
ಚಿರೋಟಿ ಸಿಹಿ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?
- ಚಿರೋಟಿ
- ಅಕ್ಕಿ ಹಿಟ್ಟು
- ಬೆಣ್ಣೆ
- ಸಕ್ಕರೆ
- ಎಣ್ಣೆ
ಚಿರೋಟಿ ಸಿಹಿ ಮಾಡುವುದು ಹೇಗೆ?
ಮೊದಲಿಗೆ ಒಂದು ಅಳತೆ ಕಪ್ನಲ್ಲಿ ಒಂದು ಕಪ್ ಚಿರೋಟಿ ರವೆ ತೆಗೆದುಕೊಂಡು ಬೌಲ್ಗೆ ಹಾಕಿಕೊಳ್ಳಿ. ಇದಕ್ಕೆ 3 ಸ್ಪೂನ್ ಅಂಗಡಿ ಬೆಣ್ಣೆ ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ. ಬೆಣ್ಣೆ ಪೂರ್ಣವಾಗಿ ರವೆಯಲ್ಲಿ ಬೆರೆಯಬೇಕು. ಈಗ ಮುಕ್ಕಾಲು ಕಪ್ ನೀರು ತೆಗೆದುಕೊಂಡು ನಿಧಾನವಾಗಿ ಹಾಕಿಕೊಳ್ಳುತ್ತಾ ಮಿಕ್ಸ್ ಮಾಡಿಕೊಳ್ಳಿ.
ನಂತರ ಸ್ವಲ್ಪ ನೀರು ಹಾಕಿ ಮತ್ತೆ ಹಿಟ್ಟನ್ನು ಕಲಸಿಕೊಳ್ಳಿ. ಈ ಹಿಟ್ಟು ಮೃದುವಾಗಿ ಬರಬೇಕು. ಇದು ಚಪಾತಿ ಹಿಟ್ಟಿನ ಹದಕ್ಕೆ ಬರಬೇಕು. ಮತ್ತೆ ಒಂದು ಬೌಲ್ಗೆ ಕಪ್ ಬೆಣ್ಣೆ ಹಾಕಿ 2 ಸ್ಪೂನ್ ಅಕ್ಕಿ ಹಿಟ್ಟು ಹಾಕಿ ಸ್ಪೂನ್ನಲ್ಲಿ ಮಿಕ್ಸ್ ಮಾಡಿಕೊಳ್ಳಿ. ಇದು ಕ್ರೀಮ್ ರೀತಿ ಬರಬೇಕು. ನಂತರ ಇದನ್ನು ತೆಗೆದು ಬದಿಗಿಟ್ಟುಕೊಳ್ಳಿ.
ಈಗ ಒಂದು ಮಿಕ್ಸಿ ಜಾರ್ಗೆ ಅರ್ಧ ಕಪ್ ಸಕ್ಕರೆ ಹಾಕಿ ಪುಡಿ ಮಾಡಿಕೊಂಡು ಅದನ್ನು ಕೂಡ ತೆಗೆದಿಟ್ಟುಕೊಳ್ಳಿ. ಈಗ ಹಿಟ್ಟನ್ನು ಮತ್ತೆ ಮಿಕ್ಸ್ ಮಾಡಿಕೊಂಡು ನಿಂಬೆ ಹಣ್ಣಿಗಿಂತ ದೊಡ್ಡದಾದ ಉಂಡೆಗಳಾಗಿ ಕಟ್ಟಿಕೊಳ್ಳಿ. ಈಗ ಚಪಾತಿ ಮಣೆಯಲ್ಲಿ ಒಣ ಹಿಟ್ಟು ಸವರಿ ಈ ಹಿಟ್ಟು ಲಟ್ಟಿಸಿಕೊಳ್ಳಿ. ಚಪಾತಿಯಂತೆ ತೆಳುವಾಗಿ ದೊಡ್ಡದಾಗಿ ಲಟ್ಟಿಸಿಕೊಳ್ಳಿ.
ಈಗ ಲಟ್ಟಿಸಿಕೊಂಡ ಪದಾರ್ಥಕ್ಕೆ ಮೊದಲು ರೆಡಿ ಮಾಡಿದ್ದ ಬೆಣ್ಣೆ ಮಿಶ್ರಣವನ್ನು ನಿಧಾನವಾಗಿ ಸವರಿಕೊಳ್ಳಿ. ಬೆಣ್ಣೆಯನ್ನು ಸಂಪೂರ್ಣ ಒಂದು ಬದಿ ಹಚ್ಚಿದ ಬಳಿಕ ಅದರ ಮೇಲೆ ಮತ್ತೊಂದು ಚಪಾತಿಯಂತಹ ರಚನೆಯ ಹಿಟ್ಟನ್ನು ಇಟ್ಟು ಅದರ ಮೇಲೆಯೂ ಬೆಣ್ಣೆ ಸವರಿಕೊಳ್ಳಿ. ಎಷ್ಟು ಲೇಯರ್ ಹಿಟ್ಟು ಇದೆಯೋ ಅಷ್ಟನ್ನು ಒಂದರ ಮೇಲೆ ಒಂದರಂತೆ ಇಟ್ಟು ಬೆಣ್ಣೆ ಸವರಿಕೊಳ್ಳಿ.
ಈಗ ಒಂದು ಕಡೆಯಿಂದ ಅದನ್ನು ರೋಲ್ ಮಾಡಬೇಕು. ಒಂದು ಕೋಲಿನಂತಹ ಆಕಾರಕ್ಕೆ ಬಂದಾಗ ದೊಡ್ಡ ಗಾತ್ರದ ಶಂಕರಪಾಳಿಯಂತೆ ಕತ್ತರಿಸಿಕೊಳ್ಳಿ. ನಂತರ ಒಂದೊಂದೇ ಕತ್ತರಿಸಿದ ಹಿಟ್ಟನ್ನು ಸ್ವಲ್ಪ ವಡೆಯಂತೆ ತಟ್ಟಿಕೊಳ್ಳಿ. ಕಜ್ಜಾಯದ ಗಾತ್ರಕ್ಕೆ ತಟ್ಟಿಕೊಂಡು ಬಳಿಕ ಇದನ್ನು ಬಾಣಲೆಯಲ್ಲಿನ ಎಣ್ಣೆಯಲ್ಲಿ ಇಳಿಬಿಡಬೇಕು. ಹಾಗೆ ಮೇಲೆ ಬಿಸಿ ಎಣ್ಣೆಯನ್ನು ಸುರಿಯುತ್ತಾ ಇರಬೇಕು. ಹೀಗೆ ಒಂದೊಂದಾಗಿ ಫ್ರೈ ಮಾಡಿಕೊಳ್ಳಬೇಕು. ಎರಡೂ ಕಡೆ ಫ್ರೈ ಮಾಡಿಕೊಂಡ ಬಳಿಕ ತೆಗೆದು ಬದಿಗಿಟ್ಟುಕೊಳ್ಳಿ.
5 ನಿಮಿಷ ಬಿಟ್ಟು ಅದರ ಮೇಲೆ ಸಕ್ಕರೆ ಪುಡಿಯನ್ನು ಹರಡಿಕೊಂಡರೆ ನಿಮ್ಮ ಮುಂದೆ ಚಿರೋಟಿ ಸಿಹಿ ಸಿದ್ದಾಗುತ್ತೆ. ನೀವು ಕೂಡ ಮನೆಯಲ್ಲಿ ಈ ರೀತಿ ಮಾಡಿ ನೋಡಿ.



Click it and Unblock the Notifications
