Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಬೇಸಿಗೆಯ ಬೆಸ್ಟ್ ಫ್ರೆಂಡ್ ಈ ಸಾಬುದಾನಿ ಮೊಸರನ್ನ: ದೇಹಕ್ಕೆ ತಂಪು, ಕಣ್ತುಂಬ ನಿದ್ದೆ!!
ಬೇಸಿಗೆಯ ಸಮಯದಲ್ಲಿ ನೀವು ಊಟದ ತಿಂಡಿಯ ವಿಚಾರದಲ್ಲಿ ಬಹಳ ಜಾಗರೂಕರಾಗಿರುತ್ತೀರಿ. ಅದ್ರಲ್ಲೂ ವಿಶೇಷ ಖಾದ್ಯಗಳಿಗಿಂತಲೂ ದೇಹಕ್ಕೆ ತಂಪು ಎನಿಸುವಂತಹ ಹಲವು ರುಚಿಯ ಖಾದ್ಯಗಳ ಸವಿಯಲು ಇಷ್ಟಪಡುತ್ತೀರಿ. ಮಸಾಲೆ ಭರಿತ ತಿಂಡಿ, ಊಟವೆಂದರೆ ಬೇಸಿಗೆಯಲ್ಲಿ ನಿಮ್ಮ ದೇಹಕ್ಕೆ ದೊಡ್ಡ ಸಮಸ್ಯೆ ಉಂಟುಮಾಡಲು ಸಾಕು. ಹೀಗಾಗಿ ಈ ಸಮಯದಲ್ಲಿ ಬಹಳ ದ್ರಾವಣ ಇರುವ ಆಹಾರ ಪದಾರ್ಥ ಸವಿಯುವುದು ನೋಡಬಹುದು.
ಹಾಗೆ ಮಸಾಲೆಗಳಿಗಿಂತ ದೇಹಕ್ಕೆ ತಂಪು ನೀಡುವ ಹಲವು ಖಾದ್ಯಗಳ ಇಷ್ಟಪಡುವವರು ನೀವಾಗಿರಬಹುದು. ಹಾಗೆ ಮೊಸರು, ಮಜ್ಜಿಗೆ, ಜ್ಯೂಸ್‌ನಂತಹ ಖಾದ್ಯ ಹೆಚ್ಚಾಗಿ ಸೇವಿಸುವುದು ಕಾಮನ್. ಇನ್ನು ಈ ಖಾದ್ಯಗಳ ಸೇವನೆಯಿಂದ ದೇಹ ತಂಪಾಗಿಸಬಹುದು. ಹಾಗೆ ಎಲ್ಲರಿಗೂ ಇದು ಇಷ್ಟವಾಗುವ ಖಾದ್ಯ.

ನಾವಿಂದು ದೇಹಕ್ಕೆ ತಂಪು ನೀಡುವ ಹಾಗೆ ಹಲವು ಖಾದ್ಯಗಳ ಮಾಡುವುದು ಸಹ ಇದೆ. ನಾವಿಂದು ಬೆಳಗ್ಗೆ ತಿಂಡಿಯ ಸಮಯಕ್ಕೆ ದೇಹವು ತಂಪಾಗುವಂತಹ ರುಚಿ ರುಚಿಯ ಸಾಬುದಾನಿ ಮೊಸರನ್ನ ಮಾಡುವ ಕುರಿತು ತಿಳಿದುಕೊಳ್ಳೋಣ. ಈ ಸಾಬುದಾನಿ ಮೊಸರನ್ನವು ಎಲ್ಲರಿಗೂ ಅದ್ಭುತ ರುಚಿ ನೀಡಲಿದೆ.
ಹಾಗೆ ಈ ಸಾಬುದಾನಿಯಿಂದ ಹಲವು ಖಾದ್ಯ ಮಾಡಬಹುದಾದರು ಈ ಮೊಸರನ್ನ ನಿಮ್ಮ ದೇಹಕ್ಕೆ ತಂಪು ನೀಡಲಿದೆ. ಹಾಗಾದ್ರೆ ಇದನ್ನು ಮಾಡುವುದು ಹೇಗೆ, ಈ ಸಾಬುದಾನಿ ಮೊಸರನ್ನ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಸಾಬುದಾನಿ ಮೊಸರನ್ನು ಮಾಡಲು ಬೇಕಾಗುವ ಪದಾರ್ಥಗಳು
- ಸಾಬುದಾನಿ
- ಮೊಸರು
- ಜೀರಿಗೆ
- ಉಪ್ಪು
- ಎಣ್ಣೆ
- ಉದ್ದಿನ ಬೇಳೆ
- ಕಡಲೆ ಬೇಳೆ
- ಶೇಂಗಾ
- ಕರಿಬೇವು
ಸಾಬುದಾನಿ ಮೊಸರನ್ನು ಮಾಡುವ ಸರಿಯಾದ ವಿಧಾನವೇನು?
ಮೊದಲು ಒಂದು ಬಾಣಲೆ ಒಲೆ ಮೇಲೆ ಇಟ್ಟು ಅದಕ್ಕೆ ಅಳತೆ ಕಪ್‌ನಲ್ಲಿ ಸಾಬೂದಾನಿ ತೆಗೆದುಕೊಂಡು ಬಾಣಲೆಗೆ ಹಾಕಿ. ನಂತರ ಚೆನ್ನಾಗಿ ಫ್ರೈ ಮಾಡಿಕೊಳ್ಳಿ. ಸಣ್ಣ ಉರಿಯಲ್ಲು ಹುರಿದು ಬೌಲ್‌ಗೆ ಹಾಕಿಟ್ಟುಕೊಳ್ಳಿ. ಈಗ ಈ ಸಾಬುದಾನಿಗೆ ನೀರು ಹಾಕಿ ತೊಳೆದುಕೊಳ್ಳಿ. ನಂತರ ಒಂದು ಬೌಲ್‌ನಲ್ಲಿ ಸ್ವಲ್ಪ ಮೊಸರು ಹಾಕಿ ಉಪ್ಪು ಹಾಕಿ 1 ಕಪ್ ನೀರು ಹಾಕಿ ಮಿಕ್ಸ್ ಮಾಡಿಕೊಳ್ಳಿ.
ಈಗ ಮೊಸರು ಹಾಗೂ ಸಾಬುದಾನಿಯನ್ನು ಒಂದೇ ಪಾತ್ರೆಗೆ ಹಾಕಿ ಇಟ್ಟುಕೊಳ್ಳಿ. ಈ ರೀತಿ ಹಾಕಿ ಸುಮಾರು 5ರಿಂದ 6 ಗಂಟೆಯಾದರು ನೆನೆಯಲು ಬಿಡಬೇಕು. ಇದಕ್ಕೆ ಹಿಂದಿನ ದಿನ ರಾತ್ರಿಯೇ ನೆನೆಸಿಟ್ಟರೆ ಉತ್ತಮ. ನಂತರ ಈಗ ಬಾಣಲೆ ಒಲೆ ಮೇಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿ ಕಾಯಲು ಬಿಡಿ. ನಂತರ ಇದಕ್ಕೆ ಸಾಸಿವೆ, ಜೀರಿಗೆ, ಉದ್ದಿನ ಬೇಳೆ, ಶೇಂಗಾ, ಕಡಲೆ ಬೇಳೆ ಹಾಕಿಕೊಂಡು ಫ್ರೈ ಮಾಡಿ.
ಹಾಗೆ ಹಸಿ ಮೆಣಸು, ಟೊಮೆಟೋ ಹಾಕಿ ಫ್ರೈ ಮಾಡಿಕೊಳ್ಳಿ. ಹಾಗೆ ಕರಿಬೇವು ಹಾಕಿ ಮಿಕ್ಸ್ ಮಾಡಿಕೊಳ್ಳಿ. ಈಗ ಈ ಒಗ್ಗರಣೆಯನ್ನು ಬೌಲ್‌ನಲ್ಲಿರುವ ಮೊಸರು ಸಾಬುದಾನಿಯೊಂದಿಗೆ ಮಿಕ್ಸ್ ಮಾಡಿಕೊಳ್ಳಿ. ಹಾಗೆ 1 ಸ್ಪೂನ್ ಸಕ್ಕರೆ ಹಾಕಿ ಮಿಕ್ಸ್ ಮಾಡಿ. ಹಾಗೆ ಉಪ್ಪು ರುಚಿ ನೋಡಿ ಕಡಿಮೆ ಇದ್ದರೆ ಹಾಕಿಕೊಳ್ಳಿ. ಇಷ್ಟಾದರೆ ರುಚಿ ರುಚಿಯ ಸಾಬುದಾನಿ ಮೊಸರನ್ನ ಸಿದ್ದವಾಗುತ್ತೆ. ನೀವು ಕೂಡ ಮನೆಯಲ್ಲಿ ಇದನ್ನೊಮ್ಮೆ ಮಾಡಿ ನೋಡಿ. ಅದರ ರುಚಿ ಸವಿದರೆ ನಿತ್ಯ ಇದನ್ನೇ ಸವಿಯಲು ಮುಂದಾಗುತ್ತೀರಿ.



Click it and Unblock the Notifications
