Latest Updates
-
ಐಟಿಆರ್ ಗಡುವು ಮಿಸ್ ಆಯ್ತಾ? ದಂಡ ತಪ್ಪಿಸಲು ಈಗಲೇ ಈ ಕೆಲಸ ಮಾಡಿ, ಆರ್ಥಿಕ ನಷ್ಟದಿಂದ ಪಾರಾಗಿ! -
ಕರ್ನಾಟಕದಲ್ಲಿ ಭಾರಿ ಮಳೆ: ನಿಮ್ಮ ಮನೆ ಮತ್ತು ಕುಟುಂಬವನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಪೀನಟ್ ಬಟರ್ನಲ್ಲಿ ವಿಷಕಾರಿ ಶಿಲೀಂಧ್ರ? ನಿಮ್ಮ ಆರೋಗ್ಯ ಕಾಪಾಡಲು ಈ ವಿಷಯಗಳನ್ನು ಮರೆಯದಿರಿ -
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು? -
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ! -
ಶ್ವಾಸಕೋಶದ ಆರೋಗ್ಯಕ್ಕೆ 7 ನಿಮಿಷದ ಬೆಳಗಿನ ಅಭ್ಯಾಸ: ಕಲುಷಿತ ಗಾಳಿಯಿಂದ ರಕ್ಷಣೆ ಪಡೆಯುವುದು ಹೇಗೆ?
ಸುಲಭವಾಗಿ ಅಕ್ಕಿ ನಿಪ್ಪಟ್ಟು ಮಾಡೋದು ಹೇಗೆ ಗೊತ್ತಾ? 10 ನಿಮಿಷದಲ್ಲಿ ಮಾಡಬಹುದು!
ಮನೆಯಲ್ಲೇ ಮಾಡಿದ ಕರಿದ ತಿಂಡಿಗಳು ಅಂದ್ರೆ ಎಲ್ಲರಿಗೂ ಇಷ್ಟವಾಗುತ್ತೆ. ಅದರಲ್ಲೂ ಮನೆಯಲ್ಲಿ ಮಾಡಿದ ಚಕ್ಕುಲಿ, ನಿಪ್ಪಟ್ಟು ಅಂದ್ರೆ ಎಲ್ಲರಿಗೂ ಪ್ರಿಯವಾಗುತ್ತೆ. ಮಕ್ಕಳಂತು ಇಷ್ಟಪಟ್ಟು ಸವಿಯೋದು ಖಚಿತ. ಹಾಗೆ ಈ ನಿಪ್ಪಟ್ಟು ಬಹಳ ಹಳೆಯ ಕರಿದ ತಿಂಡಿ. ಸಂಜೆ ಟೀ ಕಾಫಿ ಸಮಯದಲ್ಲಿ ಈ ನಿಪ್ಪಟ್ಟು ಸವಿಯಲು ಬಹಳ ರುಚಿ ನೀಡುತ್ತೆ.
ನಿಪ್ಪಟ್ಟು ಬಹಳ ಹಿಂದಿನಿಂದಲೂ ಮನೆ ಮನೆಯಲ್ಲಿ ಮಾಡಿಕೊಂಡು ಬಂದಿರುವ ತಿಂಡಿಯಾಗಿದೆ. ಹಬ್ಬವಿರಲಿ, ಶುಭ ದಿನಗಳಿರಲಿ ಹೀಗೆ ಹಲವು ಸಮಯದಲ್ಲಿ ಈ ನಿಪ್ಪಟ್ಟು ಮಾಡಿಯೇ ಮಾಡುತ್ತೀರಿ. ಅದರಲ್ಲೂ ರಸ್ತೆ ಬದಿಯಲ್ಲಿ ಸಿಗುವಂತಹ ಗರಿ ಗರಿ ನಿಪ್ಪಟ್ಟು ನೆನೆದರೆ ಬಾಯಲ್ಲಿ ನೀರು ಬರುತ್ತದೆ. ಈ ನಿಪ್ಪಟ್ಟನ್ನು ಹಲವು ಬಗೆಯಲ್ಲಿ ಮಾಡುವುದು ನೋಡಬಹುದು.

ಈ ನಿಪ್ಪಟ್ಟು ಬಹಳ ರುಚಿ ರುಚಿಯಾಗಿ ಸವಿಯಲು ಸಿಗುತ್ತವೆ. ನಿಪ್ಪಟ್ಟನ್ನು ಬಹಳ ಸುಲಭವಾಗಿ ಮಾಡುವಂತಹ ವಿಧಾನವೂ ಇದೆ. ಅದರಲ್ಲೂ ಅಕ್ಕಿ ಹಿಟ್ಟಿನಿಂದ ಮಾಡುವ ನಿಪ್ಪಟ್ಟು ಅದ್ಭುತ ರುಚಿ ನೀಡಲಿದೆ. ಹಾಗಾದ್ರೆ ನಾವಿಂದು ಈ ಅಕ್ಕಿ ಹಿಟ್ಟಿನಿಂದ ಮಾಡುವಂತಹ ಸುಲಭ ನಿಪ್ಪಟ್ಟಿನ ಕುರಿತು ತಿಳಿದುಕೊಳ್ಳೋಣ. ಈ ಅಕ್ಕಿ ನಿಪ್ಪಟ್ಟು ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವ ವಿಧಾನವೇನು? ಎಷ್ಟು ಸಮಯ ಹಿಡಿಯಲಿದೆ ಎನ್ನುವುದನ್ನು ಇಂದು ತಿಳಿದುಕೊಳ್ಳೋಣ.
ಅಕ್ಕಿ ಹಿಟ್ಟಿನ ನಿಪ್ಪಟ್ಟು ಮಾಡಲು ಬೇಕಾಗು ವಸ್ತುಗಳು
- ಅಕ್ಕಿ ಹಿಟ್ಟು -1 ಕಪ್
- ಕಡಲೆ ಹಿಟ್ಟು - ಕಾಲು ಕಪ್
- ಹುರಿಗಡ್ಲೆ - ಕಾಲು ಕಪ್
- ಹುರಿದ ಕಡಲೆಕಾಯಿ ಬೀಜ- ಕಾಲು ಕಪ್
- ತುಪ್ಪ
- ಬಿಳಿ ಎಳ್ಳು
- ಖಾರದ ಪುಡಿ
- ಜೀರಿಗೆ
- ಕರಿಬೇವಿನ ಸೊಪ್ಪು
- ಉಪ್ಪು
- ಎಣ್ಣೆ
ಅಕ್ಕಿ ಹಿಟ್ಟಿನ ನಿಪ್ಪಟ್ಟು ಮಾಡುವುದು ಹೇಗೆ?
ಮೊದಲಿಗೆ ಒಂದು ಮಿಕ್ಸಿ ಜಾರ್ ತೆಗೆದುಕೊಂಡು ಅದಕ್ಕೆ ಹುರಿದುಕೊಂಡು ಸಿಪ್ಪೆ ತೆಗೆದಿರುವಂತಹ ಕಡಲೆ ಬೀಜವನ್ನು ಹಾಕಿಕೊಳ್ಳಿ, ಹಾಗೆ ಹುರಿಗಡಲೆ, ಕರಿಬೇವು ಹಾಕಿಕೊಂಡು ತರಿತರಿಯಾಗಿ ಪುಡಿ ಮಾಡಿಕೊಳ್ಳಿ. ಈಗ ಒಂದು ಬೌಲ್‌ನಲ್ಲಿ ಅಕ್ಕಿ ಹಿಟ್ಟು, ಕಡಲೆ ಹಿಟ್ಟು ಮಿಕ್ಸ್ ಮಾಡಿ, ಹಾಗೆ ತರಿತರಿಯಾಗಿ ರುಬ್ಬಿಕೊಂಡಿರುವ ಪದಾರ್ಥಗಳನ್ನು ಈ ಬೌಲ್‌ಗೆ ಹಾಕಿ.
ಹಾಗೆ ಬಿಳಿ ಎಳ್ಳು, ಖಾರದ ಪುಡಿ, ತುಪ್ಪ ಹಾಕಿ ಸ್ವಲ್ಪ ಮಿಕ್ಸ್ ಮಾಡಿಕೊಳ್ಳಿ. ಹಾಗೆ ಸ್ವಲ್ಪ ಸ್ವಲ್ಪ ನೀರು ಹಾಕಿಕೊಳ್ಳುತ್ತಾ ಹಿಟ್ಟನ್ನು ಹದ ಮಾಡಿಕೊಳ್ಳಿ.ಚಪಾತಿ ಹಿಟ್ಟಿನ ಹದದಂತೆ ಬರುವಷ್ಟು ಹಿಟ್ಟನ್ನು ಹದ ಮಾಡಿಕೊಳ್ಳಬೇಕು. ಹೀಗಾಗಿ ಸ್ವಲ್ಪವೇ ನೀರು ಹಾಕಿಕೊಳ್ಳುತ್ತಾ ಮಿಕ್ಸ್ ಮಾಡುತ್ತಾ ಇರಬೇಕು. ನಂತರ ಈ ಹಿಟ್ಟನ್ನು ಮುಚ್ಚಿ ಇಡಿ.
ಈಗ ಒಲೆ ಮೇಲೆ ಬಾಣಲೆ ಇಟ್ಟು ಎಣ್ಣೆ ಹಾಕಿ ಎಣ್ಣೆ ಬಿಸಿಯಾಗಲು ಬಿಡಿ. ಉರಿ ಸಣ್ಣದಾಗಿಯೇ ಇಟ್ಟುಕೊಳ್ಳಿ. 5 ನಿಮಿಷದ ಬಳಿಕ ಹಿಟ್ಟನ್ನು ಸಣ್ಣ ಉಂಡೆಯಾಗಿ ತೆಗೆದುಕೊಂಡು ಯಾವ ಗಾತ್ರಕ್ಕೆ ಬೇಕೋ ಆ ಗಾತ್ರಕ್ಕೆ ತಟ್ಟಿಕೊಳ್ಳಿ. ನಂತರ ನಿಧಾನವಾಗಿ ಎಣ್ಣೆಗೆ ಬಿಟ್ಟುಕೊಂಡು ಕರಿದುಕೊಳ್ಳಿ. 2ರಿಂದ 3 ನಿಪ್ಪಟ್ಟನ್ನು ಒಟ್ಟಿಗೆ ಮಾಡಬಹುದು.
ಒಂದು ಭಾಗ ಕರಿದ ಬಳಿಕ ಮತ್ತೊಂದು ಭಾಗವನ್ನೂ ಕರಿದುಕೊಳ್ಳಬೇಕು. 5 ನಿಮಿಷ ಕರಿದುಕೊಂಡರೆ ಸಾಕು. ನಂತರ ಎಣ್ಣೆಯಿಂದ ತೆಗೆದು ಜರಡಿಯಲ್ಲಿ ಹಾಕಿಡಿ. ಇಷ್ಟಾದರೆ ನಿಮ್ಮ ಮುಂದೆ ಅಕ್ಕಿ ಹಿಟ್ಟಿನ ನಿಪ್ಪಟ್ಟು ಸವಿಯಲು ಸಿದ್ದವಾಗುತ್ತೆ. ನೀವು ಕೂಡ ಒಮ್ಮೆ ಟ್ರೈ ಮಾಡಿ.



Click it and Unblock the Notifications