Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ರೆಸ್ಟೋರೆಂಟ್ ರುಚಿಯ ಚಿಕನ್ ಫ್ರೈ..! 10 ನಿಮಿಷದಲ್ಲಿ ರೆಡಿ ಮಾಡಬಹುದು!
ಮಾಂಸಹಾರ ಪ್ರಿಯರಿಗೆ ಚಿಕನ್ ಅಂದ್ರೆ ಪಂಚಪ್ರಾಣ. ಚಿಕನ್ನಲ್ಲಿ ಹಲವು ವಿಧವಾದ ಬಗೆ ಬಗೆಯ ಖಾದ್ಯ ಮಾಡಬಹುದಾಗಿದೆ. ಹಾಗೆ ಚಿಕನ್ ಖಾದ್ಯ ಹಲವು ರೀತಿಯ ರುಚಿ ನೀಡಲಿದೆ. ಹೀಗಾಗಿ ಹಲವರಿಗೆ ಚಿಕನ್ ಖಾದ್ಯಗಳು ಬಹುಬೇಗ ಇಷ್ಟವಾಗುತ್ತೆ. ಇನ್ನು ಆರೋಗ್ಯದ ದೃಷ್ಟಿಯಲ್ಲಿ ಮಾಂಸಹಾರ ಉತ್ತಮವೇ ಆಗಿದ್ದರೂ ಇತ್ತೀಚಿಗೆ ಮಾಂಸಹಾರ ಒಂದಿಷ್ಟು ಸಮಸ್ಯೆ ತರುತ್ತಿರುವುದನ್ನು ಅಲ್ಲಗೆಳೆಯುವಂತಿಲ್ಲ.
ಇನ್ನು ರೆಸಿಪಿ ವಿಚಾರದಲ್ಲಿ ಚಿಕನ್ನಿಂದ ಕಬಾಬ್, ಫ್ರೈ, ಚಿಲ್ಲಿ ಫ್ರೈ, ಬಿರಿಯಾನಿ, ಸಾರು, ನಾಟಿ ಶೈಲಿಯ ಸಾರು, ಸ್ಪೈಸಿ ಚಿಕನ್, ರೋಸ್ಟ್ ಹತ್ತಾರು ಬಗೆಯ ಸವಿ ಇದೆ. ಹೋಟೆಲ್, ರೆಸ್ಟೋರೆಂಟ್ಗಳಲ್ಲಿ ನೀವು ಕೇಳಿರದ, ಸವಿದಿರದ ಖಾದ್ಯಗಳೇ ತುಂಬಿರುತ್ತವೆ. ಅಷ್ಟೊಂದು ವೆರೈಟಿ ಬಗೆಯನ್ನು ಚಿಕನ್ನಿಂದ ಮಾಡಬಹುದು.

ಹಾಗಾದ್ರೆ ನಾವಿಂದು ರೆಸ್ಟೋರೆಂಟ್ ರುಚಿಯಲ್ಲಿ ಚಿಕನ್ ಫ್ರೈ ಅನ್ನು ಮನೆಯಲ್ಲೇ ಮಾಡುವುದನ್ನು ನೋಡೋಣ. ಹಾಗೆ ಭಾನುವಾರ ನಿಮ್ಮ ಮನೆಯಲ್ಲಿ ಚಿಕನ್ ಮಾಡುವ ಉದ್ದೇಶವಿದ್ದರೆ ಈ ಖಾದ್ಯವನ್ನು ಒಮ್ಮೆ ಸವಿದು ನೋಡಿ. ಅದರ ರುಚಿ ಹೇಗಿರಲಿದೆ ಎಂಬುದನ್ನು ನೀವೆ ಪರೀಕ್ಷಿಸಿ. ಹಾಗಾದ್ರೆ ಈ ಚಿಕನ್ ಫ್ರೈ ಮಾಡುವುದು ಹೇಗೆ ತಿಳಿಯೋಣ.
ರೆಸ್ಟೋರೆಂಟ್ ರುಚಿಯ ಚಿಕನ್ ಫ್ರೈ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವ ವಿಧಾನವೇನು? ಮನೆಯಲ್ಲೇ ಮಾಡಬಹುದಾ?, ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಚಿಕನ್ ಫ್ರೈ ಮಾಡಲು ಬೇಕಾಗುವ ವಸ್ತುಗಳಿವು
- ಸ್ಕಿನ್ ಲೆಸ್ ಚಿಕನ್- ಅರ್ಧ ಕೆಜಿ
- ಈರುಳ್ಳಿ- 2
- ಹಸಿ ಮೆಣಸು
- ಒಣ ಮೆಣಸು
- ಎಣ್ಣೆ
- ತುಪ್ಪ
- ನಿಂಬೆ ಹಣ್ಣು
- ಕರಿಬೇವು
- ಶುಂಠಿ ಬೆಳ್ಳುಳ್ಳಿ ಪೇಸ್ಟ್
- ಏಲಕ್ಕಿ
- ಜೀರಿಗೆ
- ಧನಿಯಾ
- ಸೋಂಕಾಳು
- ಲವಂಗ
- ಚಕ್ಕೆ
- ಉಪ್ಪು
- ಕರಿಬೇವು
ಚಿಕನ್ ಫ್ರೈ ಮಾಡುವ ವಿಧಾನವೇನು?
ಮೊದಲು ಚಿಕನ್ ಚೆನ್ನಾಗಿ ತೊಳೆದು ಸ್ವಲ್ಪ ಅರಶಿನ ಪುಡಿ ಹಚ್ಚಿ ಇಟ್ಟುಕೊಳ್ಳಿ. ಈಗ ಒಲೆ ಮೇಲೆ ಒಂದು ಪಾನ್ ಒಟ್ಟು ಅದಕ್ಕೆ ಒಣ ಮೆಣಸು, ಧನಿಯಾ ಕಾಳು, ಚಕ್ಕೆ, ಲವಂಗ, ಏಲಕ್ಕಿ, ಓಂಕಾಳು ಹಾಕಿಕೊಂಡಿ ಚೆನ್ನಾಗಿ ಫ್ರೈ ಮಾಡಿಕೊಳ್ಳಿ. ಬಳಿಕ ಒಲೆ ಆಫ್ ಮಾಡಿಕೊಂಡು ಫ್ರೈ ಮಾಡಿಕೊಂಡ ಮಸಾಲೆಯನ್ನು ಮಿಕ್ಸಿ ಜಾರ್ಗೆ ಹಾಕಿಕೊಳ್ಳಿ.
ಮಿಕ್ಸಿ ಜಾರ್ಗೆ ಹಾಕಿಕೊಂಡು ಚೆನ್ನಾಗಿ ರುಬ್ಬಿಕೊಳ್ಳಿ. ಪುಡಿ ಪುಡಿಯಾಗಿ ರುಬ್ಬಿಕೊಳ್ಳಿ. ಈಗ ಒಲೆ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಮತ್ತು ತುಪ್ಪ ಹಾಕಿಕೊಳ್ಳಿ, ನಂತರ ಇದಕ್ಕೆ ಜೀರಿಗೆ, ಈರುಳ್ಳಿ ಹಾಕಿ 3 ನಿಮಿಷ ಫ್ರೈ ಮಾಡಿಕೊಳ್ಳಿ. ಇದಾದ ಬಳಿಕ ಕರಿಬೇವು, ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ 30 ಸೆಕೆಂಡ್ ಫ್ರೈ ಮಾಡಿ.
ಮನೆಯಲ್ಲೇ ಕೆಎಫ್ಸಿ ಚಿಕನ್ ಮಾಡಬಹುದು..! ಎಷ್ಟು ಸುಲಭದ ರೆಸಿಪಿ ಗೊತ್ತಾ?
ಈಗ ತೊಳೆದುಕೊಂಡಿರುವ ಚಿಕನ್ ಪೀಸ್ ಅನ್ನು ಇದಕ್ಕೆ ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿ. ಇದಕ್ಕೆ ಉಪ್ಪು ಹಾಕಿ ಎಲ್ಲಾ ವಸ್ತು ಬೆರೆತುಕೊಳ್ಳುವಂತೆ ಮಿಕ್ಸ್ ಮಾಡಿ ನಂತರ 5 ನಿಮಿಷ ಬೇಯಲು ಬಿಡಿ. ಆಗಾಗ ಕೈ ಆಡಿಸುತ್ತಾ ಇರಿ. 5 ನಿಮಿಷದ ಬಳಿಕ ಇದಕ್ಕೆ ಮಿಕ್ಸಿಯಲ್ಲಿ ರುಬ್ಬಿದ ಮಸಾಲೆ ಪುಡಿಯನ್ನು ಇದಕ್ಕೆ ಹಾಕಿ ಕಲಸಿಕೊಳ್ಳಿ.
ಈ ಮಸಾಲೆಗೆ ಚಿಕನ್ ಪೀಸ್ ಜೊತೆ ಚೆನ್ನಾಗಿ ಬೆರೆಯುವಂತೆ ಮಾಡಿಕೊಳ್ಳಿ. 2 ನಿಮಿಷ ಬಳಿಕ ಇದಕ್ಕೆ ಸ್ವಲ್ಪ ನಿಂಬೆ ಹಣ್ಣಿನ ರಸ ಹಾಕಿ ಮಿಕ್ಸ್ ಮಾಡಿ. ನಂತರ ಮುಚ್ಚಳ ಮುಚ್ಚಿ ಸುಮಾರು 5 ನಿಮಿಷ ಬೇಯಿಸಿಕೊಳ್ಳಿ. ಆಗಾಗ ಕೈ ಆಡಿಸುತ್ತಾ ಇರಿ. ಇಷ್ಟಾದರೆ ನಿಮ್ಮ ಮುಂದೆ ಚಿಕನ್ ಫ್ರೈ ರೆಡಿಯಾಗುತ್ತದೆ. ನೀವು ಸಹ ಮನೆಯಲ್ಲಿ ಈ ಫ್ರೈ ಮಾಡಿ ನೋಡಿ.



Click it and Unblock the Notifications
