Latest Updates
-
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ!
ಮನೆಯಲ್ಲಿ ಕೆಂಪು ಚಟ್ನಿ ಮಾಡಿದ್ರೆ ಎಲ್ಲಾ ತಿಂಡಿಗೂ ರುಚಿ ನೀಡುತ್ತೆ..!
ಬೆಳಗ್ಗೆ ತಿಂಡಿ ಮಾಡಿದ್ರೆ ಅದಕ್ಕೊಂದು ಚಟ್ನಿ, ಪಲ್ಯ, ಸಾಂಬಾರ್ ಹೀಗೆ ಯಾವುದಾದರು ಖಾದ್ಯ ಮಾಡಿ ಸವಿಯುವುದು ನೋಡಿರುತ್ತೇವೆ. ಆಗೆ ಇಡ್ಲಿ, ದೋಸೆ ಮಾಡಿದ್ರೆ ಅದಕ್ಕೊಂದು ಚಟ್ನಿ ಮಾಡೋದು ಕಾಮನ್, ಅದ್ರಲ್ಲೂ ಹೋಟೆಲ್, ರೆಸ್ಟೋರೆಂಟ್ಗಳಲ್ಲಿ ಅದ್ಭುತ ರುಚಿಯಲ್ಲಿ ಕೆಂಪು ಚಟ್ನಿ ನೀಡುತ್ತಾರೆ. ಮಸಾಲೆ ದೋಸೆ, ಇಡ್ಲಿ ಹಾಗೆ ಹಲವು ರೀತಿಯ ತಿಂಡಿಯ ಜೊತೆಗೆ ಈ ಕೆಂಪು ಚಟ್ನಿ ಸವಿಯಲು ನೀಡುವುದನ್ನು ನಾವು ನೋಡಿದ್ದೇವೆ.
ಈ ಕೆಂಪು ಚಟ್ನಿ ಎಲ್ಲಾ ತಿಂಡಿಗಳ ಸವಿಯಬಹುದು. ಹಾಗೆ ಮನೆಯಲ್ಲೂ ಕೂಡ ಈ ಕೆಂಪು ಚಟ್ನಿ ಮಾಡಿ ಸವಿಯಬಹುದು. ಹಾಗೆ ಈ ಚಟ್ನಿ ಊಟದ ಜೊತೆಗೂ ಕೂಡ ಅದ್ಭತ ರುಚಿ ನೀಡುವ ಕಾರಣ ಯಾವ ಸಮಯದಲ್ಲಿ ಬೇಕಾದರು ಮಾಡಬಹುದು. ಹಾಗೆ ಹಲವು ದಿನಗಳ ಕಾಲ ಈ ಚಟ್ನಿ ಇಟ್ಟು ಸವಿಯಬಹುದು. ಜೊತೆಗೆ ಇದನ್ನು ಮಾಡಲು ಕೆಲವೇ ವಸ್ತುಗಳ ಅಗತ್ಯವಿದ್ದು, ಸುಲಭವಾಗಿ ಮಾಡಿ ಮುಗಿಸಬಹುದು.

ಹೀಗಾಗಿ ನಾವು ಕೂಡ ಇಂದು ಈ ಸುಲಭದ ಕೆಂಪು ಚಟ್ನಿಯನ್ನು ಮನೆಯಲ್ಲೇ ಮಾಡುವುದು ಹೇಗೆ ಅನ್ನೋದನ್ನು ತಿಳಿದುಕೊಳ್ಳೋಣ. ಹಾಗೆ ಕೆಂಪು ಚಟ್ನಿ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವ ವಿಧಾನವೇನು? ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಕೆಂಪು ಚಟ್ನಿ ಮಾಡಲು ಯಾವೆಲ್ಲಾ ವಸ್ತುಗಳು ಬೇಕು?
- ಒಣ ಮೆಣಸು
- ಶುಂಠಿ
- ಬೆಳ್ಳುಳ್ಳಿ
- ಹುಣಸೆ ಹುಳಿ
- ಬೆಲ್ಲ
- ಎಣ್ಣೆ
- ಸಾಸಿವೆ
- ಇಂಗು
- ಧನಿಯಾ ಕಾಳು
- ಉಪ್ಪು
ಕೆಂಪು ಚಟ್ನಿ ಮಾಡುವ ವಿಧಾನವೇನು?
ಮೊದಲು ಒಂದು ಬೌಲ್ನಲ್ಲಿ ಒಣ ಮೆಣಸನ್ನು ನೆನೆಸಿಡಬೇಕು 20 ನಿಮಿಷ ನೆನೆಸಿ ಬಳಿಕ ಮೆಣಸನ್ನು ತೆಗೆದು ಬದಿಗಿಟ್ಟುಕೊಳ್ಳಿ. ಹಾಗೆ ಮೆಣಸು ನೆನೆಸಿದ ನೀರನ್ನು ಹಾಗೆ ಇಟ್ಟುಕೊಳ್ಳಿ. ಈಗ ಒಲೆ ಮೇಲೆ ಬಾಣಲೆ ಇಟ್ಟು ಅದಕ್ಕೆ ಒಂದು ಚಮಚ ಎಣ್ಣೆ ಹಾಕಿ ಬಳಿಕ ಬೆಳ್ಳುಳ್ಳಿ, ಶುಂಠಿ, ಧನಿಯಾ ಕಾಳು, ಹಾಕಿ ಫ್ರೈ ಮಾಡಿಕೊಳ್ಳಿ.
ನಂತರ ನೆನೆಸಿಕೊಂಡಿದ್ದ ಒಣ ಮೆಣಸನ್ನು ಸಹ ಇದಕ್ಕೆ ಹಾಕಿಕೊಂಡು ಚೆನ್ನಾಗಿ ಫ್ರೈ ಮಾಡಿಕೊಳ್ಳಿ. ಸುಮಾರು 20 ಒಣ ಮೆಣಸು ಬಳಸಿಕೊಂಡು ಮಾಡಿಕೊಳ್ಳಿ. 2 ನಿಮಿಷ ಚೆನ್ನಾಗಿ ಫ್ರೈ ಮಾಡಿದ ಬಳಿಕ ಒಲೆ ಆಫ್ ಮಾಡಿಕೊಂಡು ತಣ್ಣಗಾಗಲು ಬಿಡಿ. ಈ ಮಸಾಲೆಗಳು ತಣ್ಣಗಾದ ಬಳಿಕ ಒಂದು ಮಿಕ್ಸಿ ಜಾರ್ ತೆಗೆದುಕೊಂಡು ಅದಕ್ಕೆ ಹಾಕಿ ಬಳಿಕ ನೆನೆಸಿಟ್ಟ ಹುಣಸೆ ಹುಳಿ, ಅರ್ಧ ಚಮಚ ಬೆಲ್ಲ, ರುಚಿಗೆ ಉಪ್ಪು ಹಾಕಿಕೊಂಡು ಪೇಸ್ಟ್ ಮಾಡಿ.
ಒಣ ಮೆಣಸು ನೆನೆಸಿ ಇಟ್ಟ ನೀರಿನ್ನು ಸ್ವಲ್ಪ ಹಾಕಿಕೊಂಡು ಇದನ್ನು ನುಣ್ಣಗೆ ರುಬ್ಬಿಕೊಳ್ಳಬೇಕು. ನಂತರ ಒಂದು ಬೌಲ್ಗೆ ಈ ಪೇಸ್ಟ್ ಹಾಕಿಟ್ಟುಕೊಳ್ಳಿ. ಅನಂತರ ಮತ್ತೆ ಬಾಣಲೆ ಒಲೆ ಮೇಲೆ ಇಟ್ಟು ಅದಕ್ಕೆ 5 ಸ್ಪೂನ್ ಎಣ್ಣೆ ಹಾಕಿ ಬಳಿಕ ಸಾಸಿವೆ, ಇಂಗು ಹಾಕಿ, ಬಳಿಕ ರುಬ್ಬಿಕೊಂಡಿರುವ ಮೆಣಸಿನ ಪೇಸ್ಟ್ ಅನ್ನು ಇದಕ್ಕೆ ಹಾಕಿ ಮಿಕ್ಸ್ ಮಾಡಿಕೊಳ್ಳಿ.
ಸಣ್ಣ ಉರಿಯಲ್ಲಿ ಈ ಚಟ್ನಿ ಗಟ್ಟಿ ಆಗುವವರೆಗೂ ಫ್ರೈ ಮಾಡಿ ಸುಮಾರು 5 ನಿಮಿಷದಲ್ಲಿ ಎಣ್ಣೆ ಅಂಶ ಬಿಟ್ಟುಕೊಳ್ಳಲಿದೆ. ಹಾಗೆ ಬಣ್ಣ ಕೆಂಪಾಗುತ್ತದೆ. ಇಷ್ಟಾದರೆ ಚಟ್ನಿ ರೆಡಿಯಾಗಿದೆ ಎಂದರ್ಥ. ನಂತರ ಒಲೆ ಆಫ್ ಮಾಡಿ ಬೌಲ್ಗೆ ಹಾಕಿ ತಣ್ಣಗಾಗಲು ಬಿಡಿ. ನಂತರ ಗಾಳಿ ಹೋಗದಂತೆ ಗಟ್ಟಿಯಾಗಿ ಮುಚ್ಚಳ ಹಾಕಿ ಬಾಕ್ಸ್ನಲ್ಲಿ ಈ ಚಟ್ನಿ ಇಟ್ಟರೆ ತಿಂಗಳ ಕಾಲ ಇಡಬಹುದು. ಖಾರ ನಿಮ್ಮ ಇಚ್ಛೆಗೆ ಅನುಸಾರವಾಗಿ ಬಳಸಬಹುದು. ನೀವು ಕೂಡ ಮನೆಯಲ್ಲಿ ಒಮ್ಮೆ ಇದನ್ನು ಟ್ರೈ ಮಾಡಿ ನೋಡಿ.



Click it and Unblock the Notifications
