Latest Updates
-
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು!
ಶೀತ, ಕೆಮ್ಮು ನಿವಾರಣೆಗೆ ರವೆ ಗಂಜಿ: ತೂಕ ಇಳಿಸೋದು ಕೂಡ ಬಹಳ ಸುಲಭ!
ಮನೆಯಲ್ಲಿ ಆರೋಗ್ಯಕರ ಊಟ, ತಿಂಡಿ ಮಾಡುವುದು ಅಂದ್ರೆ ಎಲ್ಲರಿಗೂ ಇಷ್ಟವಾಗುತ್ತೆ. ಹಾಗೆ ಆರೋಗ್ಯ ಕಾಪಾಡಿಕೊಳ್ಳಲು ಸಹ ಯಾವುದಾದರು ಖಾದ್ಯಗಳ ಮಾಡಿ ಸವಿಯೋದು ಕಾಮನ್. ಅದ್ರಲ್ಲೂ ಎಲ್ಲರು ಇಷ್ಟಪಟ್ಟು ಸವಿಯುವ ಹಾಗೆ ನಮ್ಮ ಆರೋಗ್ಯಕ್ಕೆ ಯಾವಾಗಲು ಬಹಳ ಉಪಯುಕ್ತ ಎನಿಸುವಂತಹ ಗಂಜಿಯನ್ನು ಸವಿಯುವುದು ಉತ್ತಮ ಅಭ್ಯಾಸ ಆಗಿರಲಿದೆ.
ಗಂಜಿಯನ್ನು ಹತ್ತಾರು ಬಗೆಯಲ್ಲಿ ಮಾಡಬಹುದು. ಹಾಗೆ ಎಲ್ಲಾ ಬಗೆಯೂ ಕೂಡ ಬಹಳ ರುಚಿಯ ಜೊತೆಗೆ ಆರೋಗ್ಯದ ಪಾಲಿಗೆ ಅಮೃತವಾಗಿರಲಿದೆ. ನಾವು ಅನ್ನದಿಂದ ಮಾಡುವ ಗಂಜಿಯಿಂದ ಹಿಡಿದು ಹತ್ತಾರು ಬಗೆ ನೋಡಿರುತ್ತೇವೆ. ಹಾಗೆ ತೂಕ ಇಳಿಸಲು, ತೂಕ ಹೆಚ್ಚಿಸಿಕೊಳ್ಳಲು, ನಿದ್ರೆ ಬರಲು, ದೇಹ ತಂಪಾಗಿಸಲು ಹೀಗೆ ವಿಧ ವಿಧದ ಗಂಜಿಗಳು ನಮ್ಮ ನಡುವೆ ಇವೆ.

ಆದ್ರೆ ನಾವಿಂದು ನಿಮ್ಮ ದೇಹವನ್ನು ಸುಸ್ಥಿತಿಯಲ್ಲಿಡುವ ಹಾಗೆ ಶೀತ, ಕೆಮ್ಮು ನಿವಾರಿಸುವಂತಹ ಶಕ್ತಿ ಹೊಂದಿರುವ ರವೆ ಗಂಜಿ ಕುರಿತಾಗಿ ತಿಳಿದುಕೊಳ್ಳೋಣ. ಅದ್ರಲ್ಲೂ ಬಾಣಂತಿಯರಿಗೆ ಈ ರವೆ ಗಂಜಿ ನೀಡುವುದು ನೋಡಿರಬಹುದು. ಇದು ದೇಹವನ್ನು ಸಮತೋಲನದಲ್ಲಿಡಲು ಸಹಕಾರಿಯಾಗಲಿದೆ. ಇನ್ನು ಇದು ಶೀತ ಕೆಮ್ಮು ಹೊಂದಿರುವ ಮಕ್ಕಳಿಗೆ ಮನೆ ಮದ್ದಾಗಲಿದೆ. ಹಾಗಾದ್ರೆ ಇದನ್ನು ಮಾಡುವ ವಿಧಾನವೇನು ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ.
ರವೆ ಗಂಜಿ ಮಾಡಲು ಯಾವೆಲ್ಲಾ ವಸ್ತುಗಳು ಬೇಕು? ರವೆ ಗಂಜಿ ಮಾಡುವುದು ಹೇಗೆ?, ರವೆ ಗಂಜಿ ಮಾಡಲು ಎಷ್ಟು ಸಮಯ ಹಿಡಿಯಲಿದೆ, ಯಾವ ರೀತಿ ಸಿದ್ದತೆ ಬೇಕಾಗುತ್ತದೆ ಎಂಬುದನ್ನು ತಿಳಿದುಕೊಳ್ಳೋಣ.
ರವೆ ಗಂಜಿ ಮಾಡಲು ಯಾವೆಲ್ಲಾ ವಸ್ತುಗಳು ಬೇಕು?
- ರವೆ
- ಏಲಕ್ಕಿ
- ಬೆಲ್ಲ
- ಶುಂಠಿ
ರವೆ ಗಂಜಿ ಮಾಡುವ ವಿಧಾನವೇನು?
ಮೊದಲು ಅಳತೆ ಕಪ್ನಲ್ಲಿ 1 ಕಪ್ ರವೆ ತೆಗೆದುಕೊಳ್ಳಿ ಅದನ್ನು ಒಂದು ಬೌಲ್ಗೆ ಹಾಕಿಕೊಂಡು ಇಟ್ಟುಕೊಳ್ಳಿ. ಈಗ ಒಂದು ಪಾತ್ರೆಗೆ ಬೆಲ್ಲ ಹಾಕಿ ಅದಕ್ಕೆ ನೀರು ಹಾಕಿ ಒಲೆ ಮೇಲೆ ಇಟ್ಟು ಕರಗಲು ಬಿಡಿ. ಇದು ಪಾಕವಾಗಬಾರದು, ಬೆಲ್ಲ ಕರಗಿದರೆ ಸಾಕು.
ಈಗ ಒಲೆ ಮೇಲೆ ಒಂದು ಬಾಣಲೆ ಉಟ್ಟು ಅದಕ್ಕೆ ಅಳತೆ ಮಾಡಿಕೊಂಡಿದ್ದ ರವೆ ಹಾಕಿಕೊಂಡು ಹುರಿದುಕೊಳ್ಳಬೇಕು. ನೀವು ತುಪ್ಪ ಹಾಕಿಕೊಂಡು ಸಹ ಹುರಿಯಬಹುದು. ಹಾಕದೆ ಹಾಗೆಯೇ ಹುರಿದುಕೊಳ್ಳಬಹುದು. ರವೆ ಚೆನ್ನಾಗಿ ಫ್ರೈ ಆಗಿ ಘಮ ಘಮ ಸುವಾಸನೆ ಬರಬೇಕು, ಅಥವಾ ರವೆ ಅರಳುವವರೆಗೂ ಹುರಿದುಕೊಳ್ಳಬೇಕು.
ಈಗ ರವೆಯ್ನು ಒಂದು ಪಾತ್ರೆಗೆ ಹಾಕಿ ಅದಕ್ಕೆ ರವೆ ಮುಳುಗುವಷ್ಟು ನೀರು ಹಾಕಿಕೊಳ್ಳಬೇಕು. ಹಾಗೆ ರವೆ ನೆನೆಯಲು ಬಿಡಿ. 5 ನಿಮಿಷದಲ್ಲಿ ರವೆ ನೆನೆಯಲಿದೆ. ಈಗ ಕರಗಿದ ಬೆಲ್ಲದ ನೀರಿಗೆ ಈ ರವೆಯನ್ನು ನೀರಿನ ಸಮೇತ ಹಾಕಿಕೊಂಡು ಬೇಯಲು ಬಿಡಿ.
ಇದು ಕುದಿಬರಲು ಆರಂಭಿಸಿದಾಗ ಅದಕ್ಕೆ ಏಲಕ್ಕಿ ಪುಡಿ, ಶುಂಠಿ ಪುಡಿ ಅಥವಾ ಜಜ್ಜಿಕೊಂಡು ಇದಕ್ಕೆ ಹಾಕಿಕೊಂಡು ಮಿಕ್ಸ್ ಮಾಡಿ. ಜೊತೆಗೆ ಚಿಟಿಕೆ ಉಪ್ಪು ಸಹ ಇದಕ್ಕೆ ಸೇರಿಸಿಕೊಳ್ಳಿ. ಹಾಗೆ 1 ನಿಮಿಷ ಸಣ್ಣ ಉರಿಯಲ್ಲಿ ಕುದಿಸಿ ಇಳಿಸಿಕೊಂಡರೆ ನಿಮ್ಮ ಮುಂದೆ ಆರೋಗ್ಯಕರ ರವೆ ಗಂಜಿ ಸಿದ್ದವಾಗಿರಲಿದೆ.



Click it and Unblock the Notifications
