Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ಮೊಟ್ಟೆಗಿಂತ ರುಚಿಕರ ಪನ್ನೀರ್ ಬುರ್ಜಿ ಮಸಾಲೆ ಮಾಡಿ ನೋಡಿ..! ಮಾಡೋದು ಹೇಗೆ?
ನೀವು ಊಟಕ್ಕೆ ಎಗ್ ಬುರ್ಜಿ ಮಾಡಿ ಸವಿದಿರುತ್ತೀರಿ. ಎಗ್ ಬುರ್ಜಿ ಮಾಡೋದು ತುಂಬಾನೆ ಸುಲಭ ಎಂಬ ಕಾರಣಕ್ಕೆ ಎಲ್ಲರು ಮಾಡಿ ಸವಿಯಲು ಮುಂದಾಗುತ್ತಾರೆ. ಹಾಗೆ ಎಗ್ ಬುರ್ಜಿಯನ್ನ ಮಕ್ಕಳು ಕೂಡ ತಿನ್ನೋಕೆ ಮುಂದಾಗುತ್ತಾರೆ. ಊಟದ ಜೊತೆಗೆ ಮಾತ್ರವಲ್ಲ ತಿಂಡಿ ಜೊತೆಗೂ ಎಗ್ ಬುರ್ಜಿ ಬೊಂಬಾಟ್ ರುಚಿ ನೀಡುತ್ತೆ. ಹಾಗೆ ನೀವು ಸಸ್ಯಹಾರಿಹಾರಿಗಳಾಗಿದ್ದರೆ ಅಥವಾ ಮೊಟ್ಟೆ ತಿನ್ನಲ್ಲ ಅನ್ನೋರು ಕೂಡ ಎಗ್ ಬುರ್ಜಿ ರುಚಿಯಲ್ಲೇ ಪನ್ನೀರ್ ಬುರ್ಜಿ ಮಾಡಿ ಸವಿದು ನೋಡಿ.
ನೀವು ಪನ್ನೀರ್ ಬಳಸಿ ಎಷ್ಟು ವಿಧವಾದ ಖಾದ್ಯ ಮಾಡಿ ಸವಿದಿರುತ್ತೀರಿ. ಆದ್ರೆ ಪನ್ನೀರ್ ಬಳಸಿ ಎಗ್ ಬುರ್ಜಿಯಂತಹ ರುಚಿಕರವಾದ ಬುರ್ಜಿ ಮಾಡುವುದು ನಿಮಗೆ ಗೊತ್ತಾ? ಬೆಳಗ್ಗೆ ಚಪಾತಿ, ದೋಸೆ, ಇಡ್ಲಿ ಹೀಗೆ ಯಾವುದೇ ತಿಂಡಿಯ ಜೊತೆಗೆ ಊಟಕ್ಕೂ ಕೂಡ ಈ ಪನ್ನೀರ್ ಬುರ್ಜಿ ಮಾಡಬಹುದು. ಇದು ಮೊಟ್ಟೆ ಬುರ್ಜಿಗಿಂತಲೂ ರುಚಿಕರವಾಗಿರುತ್ತೆ.

ಹಾಗಾದ್ರೆ ನಾವಿಂದು ಈ ಪನ್ನೀರ್ ಬುರ್ಜಿ ಮಾಡುವ ಕುರಿತಂತೆ ತಿಳಿದುಕೊಳ್ಳೋಣ. ಈ ಪನ್ನೀರ್ ಬುರ್ಜಿ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಪನ್ನೀರ್ ಬುರ್ಜಿ ಮಾಡುವ ವಿಧಾನವೇನು?, ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಪನ್ನೀರ್ ಬುರ್ಜಿ ಮಾಡಲು ಯಾವೆಲ್ಲಾ ಪದಾರ್ಥಗಳು
- ಪನ್ನೀರ್ (ತುರಿದುಕೊಂಡಿರುವುದು)
- ಟೊಮೆಟೋ
- ಈರುಳ್ಳಿ
- ಜೀರಿಗೆ
- ಖಾರದ ಪುಡಿ
- ಅರಶಿಣ
- ಶುಂಠಿ ಬೆಳ್ಳುಳ್ಳಿ ಪೇಸ್ಟ್
- ಗರಂ ಮಸಾಲೆ
- ಅರಶಿಣ
- ಕೊತ್ತಂಬರಿ ಸೊಪ್ಪು
- ಎಣ್ಣೆ
- ಉಪ್ಪು
ಪನ್ನೀರ್ ಬುರ್ಜಿ ಮಾಡುವ ವಿಧಾನವೇನು?
ಮೊದಲು ಒಂದು ಬಾಣಲೆ ಒಲೆ ಮೇಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿಕೊಂಡು ಎಣ್ಣೆ ಕಾದ ಬಳಿಕ ಜೀರಿಗೆ, ಸಣ್ಣದಾಗಿ ಹೆಚ್ಚಿಕೊಂಡಿರುವ ಈರುಳ್ಳಿ, ಹಸಿ ಮೆಣಸು, ಹಾಕಿಕೊಂಡು ಫ್ರೈ ಮಾಡಿಕೊಳ್ಳಿ. ನಂತರ ಇದಕ್ಕೆ ಶುಂಠಿ ಬೆಳ್ಳುಳ್ಳಿ ಪೇಸ್ಟ್, ಟೊಮೆಟೋ ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ. ಇದು ಚೆನ್ನಾಗಿ ಫ್ರೈ ಮಾಡಿಕೊಳ್ಳಿ.
ಈ ಟೊಮೆಟೋ ಬೇಗ ಬೇಯಲು ಉಪ್ಪು ಹಾಕಿಕೊಂಡು ಮಿಕ್ಸ್ ಮಾಡಿ. ಈಗ ತುರಿದುಕೊಂಡಿದ್ದ ಪನ್ನೀರ್ ಹಾಕಿಕೊಳ್ಳಿ, ಹಾಗೆ ಖಾರಕ್ಕೆ ಅಗತ್ಯದಷ್ಟು ಖಾರದ ಪುಡಿ, ಅರಶಿಣ, ಗರಂ ಮಸಾಲೆ ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳುತ್ತಾ ಚೆನ್ನಾಗಿ ಕಲಸಿಕೊಳ್ಳಿ. ಹಾಗೆ 2 ಸ್ಪೂನ್ ನೀರು ಹಾಕಿಕೊಂಡು ಮಸಾಲೆ ಹಿಡಿಯುವಂತೆ ಕಲಸಿಕೊಳ್ಳಿ.
ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಹಾಕಿ ಒಂದೆರಡು ಸುತ್ತು ತಿರುಗಿಸಿಕೊಂಡು ಒಲೆ ಆಫ್ ಮಾಡಿಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ಎಗ್ ಬುರ್ಜಿ ರುಚಿಯ ಪನ್ನೀರ್ ಬುರ್ಜಿ ರೆಡಿಯಾಗುತ್ತೆ. ಇದನ್ನು ಮಾಡುವುದು ಕೂಡ ಬಹಳ ಸುಲಭ. ಹಾಗೆ ರುಚಿ ಕೂಡ ಫಸ್ಟ್ ಕ್ಲಾಸ್. ನೀವು ಕೂಡ ಮನೆಯಲ್ಲಿ ಇದನ್ನೊಮ್ಮೆ ಟ್ರೈ ಮಾಡಿ ನೋಡಿ.
ಈ ಪನ್ನೀರ್ ಬುರ್ಜಿ ಯಾವುದೇ ತಿಂಡಿ ಇರಲಿ ಅಥವಾ ಊಟದ ಜೊತೆಗೆ ಸವಿಯಲು ಬಹಳ ರುಚಿ ನೀಡಲಿದೆ. ಒಮ್ಮೆ ಇದನ್ನು ಮಾಡಿ ಸವಿದರೆ ಎಲ್ಲರು ನಾಲಗೆ ಚಪ್ಪರಿಸಿ ಸವಿಯುತ್ತಾರೆ, ಹಾಗೆ ಪದೇ ಪದೇ ಮಾಡಿ ಸವಿಯಲು ಮುಂದಾಗೋದು ಪಕ್ಕ.



Click it and Unblock the Notifications
