Latest Updates
-
ಭಾರತ vs ಅಫ್ಘಾನಿಸ್ತಾನ ಪಂದ್ಯ: ಮ್ಯಾಚ್ ನೋಡುವಾಗ ಮನೆಯಲ್ಲಿ ಶಾಂತಿ ಕಾಪಾಡಲು ಈ ಟಿಪ್ಸ್ ಫಾಲೋ ಮಾಡಿ! -
ನಾಳೆ ನೀಟ್ ಮರುಪರೀಕ್ಷೆ: ಮಳೆಗಾಲದ ನಡುವೆ ಪರೀಕ್ಷೆಗೆ ಸಜ್ಜಾಗುವುದು ಹೇಗೆ? ಇಲ್ಲಿದೆ ಫೈನಲ್ ಚೆಕ್ಲಿಸ್ಟ್ -
ಪಿಎಂ-ಕಿಸಾನ್ ಹಣ ಜಮೆ: ರೈತರೇ, ಈ 2,000 ರೂಪಾಯಿಯಲ್ಲಿ ಆರೋಗ್ಯಕರ ಆಹಾರ ಖರೀದಿಸಿ, ಮಧುಮೇಹ ನಿಯಂತ್ರಿಸಿ! -
ಭಾರಿ ಗಾಳಿ-ಮಳೆಯ ಎಚ್ಚರಿಕೆ: ಜೂನ್ 20ರಂದು ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳನ್ನು ಮರೆಯದಿರಿ! -
ಮಳೆಗಾಲದಲ್ಲಿ ಅಂತರಾಷ್ಟ್ರೀಯ ಯೋಗ ದಿನ: ಹಿರಿಯರು ಸುರಕ್ಷಿತವಾಗಿ ಯೋಗ ಮಾಡುವುದು ಹೇಗೆ? -
ವಿಶ್ವ ಸಂಗೀತ ದಿನ: ಸಂಗಾತಿಯೊಂದಿಗೆ ಮರೆಯಲಾಗದ ಕ್ಷಣ ಕಳೆಯಲು ಇಲ್ಲಿದೆ ಸಿಂಪಲ್ ಪ್ಲಾನ್! -
ಮುಂಬೈನಲ್ಲಿ ತೀವ್ರ ನೀರಿನ ಅಭಾವ: ಬಿಎಂಸಿ ಕಠಿಣ ನಿಯಮಗಳ ನಡುವೆ ನೀರು ಉಳಿಸಲು ಈ ಟಿಪ್ಸ್ ಪಾಲಿಸಿ -
ಮಳೆಗಾಲದಲ್ಲಿ ಸಿಕಲ್ ಸೆಲ್ ಸಮಸ್ಯೆ: ಆರೋಗ್ಯ ಕಾಪಾಡಲು ಈ ಆಹಾರ ಕ್ರಮ ಪಾಲಿಸಿ, ನೋವು ದೂರವಿಡಿ! -
ಟೆಲಿಗ್ರಾಂ ಬ್ಯಾನ್: ಜೂನ್ 22ರವರೆಗೆ ಈ ಆಪ್ಗಳನ್ನು ಬಳಸಿ, ಇಲ್ಲದಿದ್ದರೆ ತೊಂದರೆ ಕಟ್ಟಿಟ್ಟ ಬುತ್ತಿ! -
ಮಳೆಗಾಲದಲ್ಲಿ 'ರನ್ ಫಾರ್ ಯೋಗ': ಜಾರುವ ರಸ್ತೆಯಲ್ಲಿ ಸುರಕ್ಷಿತವಾಗಿ ಓಡಲು ಈ ಟಿಪ್ಸ್ ಪಾಲಿಸಿ
ಮನೆಯಲ್ಲಿ ತರಕಾರಿ ಖಾಲಿ ಆಗಿದ್ಯಾ? ಈರುಳ್ಳಿಯಲ್ಲಿ ಈ ಗೊಜ್ಜು ಮಾಡಿ ಸಾಕು.!!
ಬೆಳಗ್ಗೆ ತಿಂಡಿಗೆ ನೀವು ಚಟ್ನಿ, ಪಲ್ಯ, ಗೊಜ್ಜು, ಸಾಂಬಾರ್ ಹೀಗೆ ಯಾವುದಾದರೊಂದು ಖಾದ್ಯದ ಜೊತೆಗೆ ತಿಂಡಿಯನ್ನು ಸವಿಯಲು ಮುಂದಾಗುವುದು ನೋಡಬಹುದು. ಹಾಗೆ ಈ ಸಮಯದಲ್ಲಿ ಆಯಾ ತಿಂಡಿಗೆ ಸರಿಹೊಂದುವಂತಹ ಖಾದ್ಯಗಳ ಮಾಡಿ ಸವಿಯುವುದೇ ಹೆಚ್ಚು. ಹೀಗಿರುವಾಗ ಬೆಳಗ್ಗೆ ತಿಂಡಿ ಮಾಡಿದ ಬಳಿಕ ಅದನ್ನು ಸವಿಯಲು ಏನು ಮಾಡುವುದು ಎಂಬ ಪ್ರಶ್ನೆಯಂತು ಗೃಹಿಣಿಯರಿಗೆ ಕಾಡುತ್ತಲೇ ಇರುತ್ತೆ.
ಹೀಗಾಗಿ ಯಾವುದಾದರು ತರಕಾರಿ ಬಳಸಿ ಚಟ್ನಿ, ಪಲ್ಯದಂತಹ ರೆಸಿಪಿ ಮಾಡುವುದು ಸಾಮಾನ್ಯ. ಆದ್ರೆ ಮನೆಯಲ್ಲಿ ಯಾವುದೇ ತರಕಾರಿ ಇಲ್ಲ ಅಂದುಕೊಳ್ಳಿ ಆಗ ಏನು ಮಾಡಬೇಕು? ತರಕಾರಿ ಇಲ್ಲದೇ ಇದ್ದಾಗಲು ಸುಲಭದ ತೆಂಗಿನಕಾಯಿಯ ಚಟ್ನಿ ಮಾಡಿ ಸವಿಯುವುದು ನೋಡಬಹುದು. ಹಾಗೆ ತರಕಾರಿ ಇದ್ದಾಗ ವಿವಿಧ ರೀತಿ ಪಲ್ಯಗಳ ಮಾಡಿ ಸವಿಯುವುದು ಕೂಡ ನೋಡಬಹುದು.

ಆದ್ರೆ ನಾವಿಂದು ತರಕಾರಿ ಇಲ್ಲದಾಗ ತಿಂಡಿಯ ಜೊತೆಗೆ ಅದರಲ್ಲು ಚಪಾತಿ, ಇಡ್ಲಿ, ದೋಸೆ, ಪೂರಿ ಜೊತೆಗೂ ಕೂಡ ಸವಿಯಬಹುದಾದ ಸುಲಭ ಈರುಳ್ಳಿ ಮಸಾಲೆಯನ್ನು ಮಾಡುವುದು ಹೇಗೆ ಅನ್ನೋದನ್ನು ತಿಳಿದುಕೊಳ್ಳೋಣ. ಈ ರೀತಿ ಈರುಳ್ಳಿ ಮಸಾಗೆ ಯಾವುದೇ ತರಕಾರಿಯ ಅಗತ್ಯವಿಲ್ಲ. ಹಾಗೆ ಮಾಡೋದಕ್ಕೆ ಹೆಚ್ಚು ಸಮಯವೂ ಹಿಡಿಯುವುದಿಲ್ಲ.
ಹಾಗಾದ್ರೆ ನಾವಿಂದು ತರಕಾರಿ ಬಳಸದೆ ಈ ಈರುಳ್ಳಿ ಮಸಾಲೆ ಗೊಜ್ಜು ಮಾಡುವುದು ಹೇಗೆ ಅನ್ನೋದನ್ನು ತಿಳಿದುಕೊಳ್ಳೋಣ. ಹಾಗೆ ಈ ಈರುಳ್ಳಿ ಮಸಾಲೆ ಗೊಜ್ಜು ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವ ವಿಧಾನವೇನು? ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ಇಲ್ಲಿ ತಿಳಿದುಕೊಳ್ಳೋಣ.
ಈರುಳ್ಳಿ ಮಸಾಲೆ ಗೊಜ್ಜು ಮಾಡಲು ಬೇಕಾಗುವ ವಸ್ತುಗಳು
- ಈರುಳ್ಳಿ
- ಟೊಮೆಟೋ
- ಜೀರಿಗೆ
- ಸಾಸಿವೆ
- ಖಾರದ ಪುಡಿ
- ಗರಂ ಮಸಾಲೆ
- ಅರಶಿಣ ಪುಡಿ
- ಕರಿಬೇವು
- ಹಸಿ ಮೆಣಸು
- ಕೊತ್ತಂಬರಿ ಸೊಪ್ಪು
- ಎಣ್ಣೆ
- ರುಚಿಗೆ ತಕ್ಕಷ್ಟು ಉಪ್ಪು
ಈರುಳ್ಳಿ ಮಸಾಲೆ ಗೊಜ್ಜು ಮಾಡುವ ವಿಧಾನವೇನು?
ಮೊದಲು ಬಾಣಲೆಗೆ ಎಣ್ಣೆ ಹಾಕಿಕೊಡು ಬಿಸಿ ಮಾಡಿಕೊಳ್ಳಿ. ನಂತರ ಇದಕ್ಕೆ ಸಾಸಿವೆ, ಜೀರಿಗೆ ಹಾಕಿ ನಂತರ ಕರಿಬೇವು, ಹಸಿ ಮೆಣಸು ಹಾಕಿಕೊಂಡು ಫ್ರೈ ಮಾಡಿ. ನಂತರ ಸಣ್ಣದಾಗಿ ಸ್ಲೈಸ್ ಮಾಡಿಕೊಂಡಿರುವ ಈರುಳ್ಳಿ, ಹಾಗೆ ಉಪ್ಪು ಹಾಕಿ 2 ನಿಮಿಷ ಫ್ರೈ ಮಾಡಿಕೊಳ್ಳಿ. ಕಾಲು ಕೆಜಿ ಈರುಳ್ಳಿ ತೆಗೆದುಕೊಂಡರೆ 3ರಿಂದ 4 ಜನಕ್ಕೆ ಇದು ಸಾಕಾಗುತ್ತದೆ.
ಈಗ ಒಂದು ಟೊಮೆಟೋವನ್ನು ಕೂಡ ಸಣ್ಣದಾಗಿ ಹೆಚ್ಚಿ ಹಾಕಿಕೊಳ್ಳಿ. ಅನಂತರ ಇದಕ್ಕೆ ಖಾರದ ಪುಡಿ, ಗರಂ ಮಸಾಲೆ, ಅರಶಿಣ ಕೂಡ ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು. ಹೀಗೆ ಮಿಕ್ಸ್ ಮಾಡಿಕೊಳ್ಳುವಾಗ ಮತ್ತೆ ರುಚಿಗೆ ಉಪ್ಪು, ಹಾಗೆ ತಳ ಹಿಡಿಯದಂತೆ ತಿರುಗಿಸುತ್ತಾ ಇರಿ. ಸಣ್ಣ ಉರಿಯಲ್ಲಿ ಒಲೆ ಉಟ್ಟುಕೊಳ್ಳಿ. ಒಟ್ಟು 2ರಿಂದ 3 ನಿಮಿಷ ಫ್ರೈ ಮಾಡಿಕೊಳ್ಳಬೇಕು.
3 ನಿಮಿಷದ ಬಳಿಕ ಸಣ್ಣದಾಗಿ ಹೆಚ್ಚಿಕೊಂಡಿರುವ ಕೊತ್ತಂಬರಿ ಸೊಪ್ಪನ್ನು ಇದಕ್ಕೆ ಹಾಕಿಕೊಂಡು ಮಿಕ್ಸ್ ಮಾಡಿಕೊಂಡರೆ ನಿಮ್ಮ ಮುಂದೆ ಈರುಳ್ಳಿ ಮಸಾಲೆ ಗೊಜ್ಜು ರೆಡಿಯಾಗುತ್ತದೆ. ಇದಕ್ಕೆ ಯಾವ ತರಕಾರಿಯ ಅಗತ್ಯವೂ ಇಲ್ಲ, ಹಾಗೆ ಹೆಚ್ಚು ವಸ್ತುಗಳು ಕೂಡ ಬೇಕಾಗಿಲ್ಲ. ಯಾವುದೇ ತಿಂಡಿಯ ಜೊತೆಗೆ ಸವಿಯಲು ಇದು ಬಹಳ ರುಚಿ ನೀಡಲಿದೆ. ನೀವು ಕೂಡ ಮನೆಯಲ್ಲಿ ಇಂತಹದೊಮದು ಮಸಾಲೆ ಗೊಜ್ಜು ಮಾಡಿ ತಿಂಡಿಯ ಜೊತೆಗೆ ಸವಿದು ನೋಡಿ. ಅದರ ರುಚಿಗೆ ನೀವು ಪದೇ ಪದೇ ಮಾಡುತ್ತೀರಿ. ಊಟದ ಜೊತೆಗೂ ಸವಿಯಲು ಇದು ರುಚಿ ನೀಡಲಿದೆ.



Click it and Unblock the Notifications