Latest Updates
-
ಐಟಿಆರ್ ಗಡುವು ಮಿಸ್ ಆಯ್ತಾ? ದಂಡ ತಪ್ಪಿಸಲು ಈಗಲೇ ಈ ಕೆಲಸ ಮಾಡಿ, ಆರ್ಥಿಕ ನಷ್ಟದಿಂದ ಪಾರಾಗಿ! -
ಕರ್ನಾಟಕದಲ್ಲಿ ಭಾರಿ ಮಳೆ: ನಿಮ್ಮ ಮನೆ ಮತ್ತು ಕುಟುಂಬವನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಪೀನಟ್ ಬಟರ್ನಲ್ಲಿ ವಿಷಕಾರಿ ಶಿಲೀಂಧ್ರ? ನಿಮ್ಮ ಆರೋಗ್ಯ ಕಾಪಾಡಲು ಈ ವಿಷಯಗಳನ್ನು ಮರೆಯದಿರಿ -
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು? -
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ! -
ಶ್ವಾಸಕೋಶದ ಆರೋಗ್ಯಕ್ಕೆ 7 ನಿಮಿಷದ ಬೆಳಗಿನ ಅಭ್ಯಾಸ: ಕಲುಷಿತ ಗಾಳಿಯಿಂದ ರಕ್ಷಣೆ ಪಡೆಯುವುದು ಹೇಗೆ?
ಹುಳಿ ಬಂದ ಹಿಟ್ಟು ಎಸೆಯದೆ ಈ ರೀತಿ ದೋಸೆ ಮಾಡಿ..! ಹೇಗೆ ಮಾಡಬೇಕು ಗೊತ್ತಾ?
ಬೇಸಿಗೆ ಬಂದರೆ ಅಡುಗೆಗಳು ಬಹುಬೇಗ ಕೆಡಲು ಆರಂಭವಾಗುತ್ತವೆ. ಬೇಸಿಗೆಯ ಸಮಯದಲ್ಲಿ ಆಹಾರ ಕೆಡದಂತೆ ಕಾಪಾಡುವುದೇ ದೊಡ್ಡ ಸವಾಲಿನ ಕೆಲಸ ಆಗಿರಲಿದೆ. ಅದರಲ್ಲೂ ಬೇಸಿಗೆಯಲ್ಲಿ ಉಳಿದ ಆಹಾರಗಳನ್ನು ಮಾರನೆ ದಿನ ಸವಿಯಲು ಉಳಿಸುವುದು ಬಹಳ ಕಷ್ಟ. ಹಾಗೆ ದೋಸೆ , ಇಡ್ಲಿಗೆ ನಾವು ಮಾಡುವಂತಹ ಹಿಟ್ಟು ಉಳಿದರೆ ಅಥವಾ ಹಿಂದಿನ ದಿನ ಹಿಟ್ಟು ಮಾಡಿಟ್ಟರೆ ಅದು ಹುಳಿ ಬರುವುದು ನೋಡಬಹುದು. ಈ ರೀತಿ ಹುಳಿಯಾದ ಹಿಟ್ಟಿನಿಂದ ಇಡ್ಲಿ ಅಥವಾ ದೋಸೆ ಮಾಡಿದರೆ ಅಷ್ಟೊಂದು ರುಚಿಯಾಗಿರುವುದಿಲ್ಲ.
ಹಿಟ್ಟು ಚೆನ್ನಾಗಿ ಉಬ್ಬಿ ಬಂದರೆ ದೋಸೆ, ಇಡ್ಲಿ ಚೆನ್ನಾಗಿ ಬರುತ್ತದೆ. ಆದ್ರೆ ಒಂದು ವೇಳೆ ಹುಳಿ ಬಂದರೆ ತಿಂಡಿ ಅಷ್ಟೊಂದು ರುಚಿಯಾಗಿರುವುದಿಲ್ಲ. ಆದ್ರೆ ಬೇಸಿಗೆಯಲ್ಲಿ ಹಿಟ್ಟು ಹುಳಿಯಾದರೆ ಏನು ಮಾಡಬೇಕು. ಹುಳಿಯಾದ ಹಿಟ್ಟಿನಿಂದ ಯಾವ ರೀತಿ ದೋಸೆ ಮಾಡಬೇಕು ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.

ಹುಳಿ ಬಂದ ಹಿಟ್ಟನ್ನು ಕೆಲವರು ತಿಂಡಿ ಮಾಡದೆ ಎಸೆಯುತ್ತಾರೆ. ಆದ್ರೆ ಹುಳಿಯಾದ ಹಿಟ್ಟಿನಿಂದ ಹೇಗೆ ದೋಸೆ ಮಾಡಬೇಕು?, ಈ ಹಿಟ್ಟಿಗೆ ಏನು ಹಾಕಬೇಕು? ದೋಸೆ ಮಾಡುವ ವಿಧಾನವೇನು ಎಂಬುದನ್ನು ತಿಳಿದುಕೊಳ್ಳೋಣ.
ಹುಳಿ ಬಂದ ಹಿಟ್ಟಿನಿಂದ ದೋಸೆ ಮಾಡಲು ಬೇಕಾಗುವ ಪದಾರ್ಥಗಳು
- ಹುಳಿ ಬಂದ ಹಿಟ್ಟು
- ರವೆ - 1 ಕಪ್
- ಮೈದಾ
- ಉಪ್ಪು
- ಶುಂಠಿ
- ಹಸಿ ಮೆಣಸಿನಕಾಯಿ
- ಕ್ಯಾರೆಟ್
- ಈರುಳ್ಳಿ
- ಜೀರಿಗೆ
- ಕರಿಬೇವು
- ಕೊತ್ತಂಬರಿ ಸೊಪ್ಪು
- ಎಣ್ಣೆ
ಹುಳಿ ಬಂದ ಹಿಟ್ಟಿನಿಂದ ದೋಸೆ ಮಾಡುವ ವಿಧಾನವೇನು?
ಮೊದಲಿಗೆ ಹುಳಿ ಬಂದ ಹಿಟ್ಟನ್ನು ತೆಗೆದುಕೊಳ್ಳಿ. ಹಾಗೆ ಇನ್ನೊಂದು ಬೌಲ್‌ನಲ್ಲಿ ರವೆ ತೆಗೆದುಕೊಂಡು ಅದಕ್ಕೆ ನೀರು ಹಾಕಿ ನೆನೆಯಲು ಬಿಡಿ. 10 ನಿಮಿಷ ಬಿಟ್ಟು ನೆನೆಯಲು ಬಿಟ್ಟಿದ್ದ ರವೆಯನ್ನು ಒಂದು ಮಿಕ್ಸಿ ಜಾರ್‌ಗೆ ಹಾಕಿಕೊಂಡು ರುಬ್ಬಿಕೊಳ್ಳಿ. ನುಣ್ಣಗೆ ರುಬ್ಬಿದ ಹಿಟ್ಟನ್ನು ಒಂದು ಬೌಲ್‌ಗೆ ಹಾಕಿಕೊಳ್ಳಿ. ನಂತರ ಹುಳಿ ಬಂದಿರುವ ಹಿಟ್ಟಿಗೆ ಈ ರವೆ ಹಿಟ್ಟನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ.
ಹಾಗೆ 2 ಸ್ಪೂನ್ ಮೈದಾ ಹಿಟ್ಟನ್ನು ಕೂಡ ಸೇರಿಸಿಕೊಂಡು, ಅದಕ್ಕೆ ಉಪ್ಪು ಹಾಕಿಕೊಂಡು ಕೈಯಿಂದ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಅನಂತರ ಶುಂಠಿ ಹಾಗೆ ತುರಿದ ಕ್ಯಾರೆಟ್, ಸಣ್ಣದಾಗಿ ಹೆಚ್ಚಿಕೊಂಡಿರುವ ಹಸಿ ಮೆಣಸಿನಕಾಯಿ, ಈರುಳ್ಳಿ ಸೇರಿಸಿ ಮತ್ತೆ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಹಾಗೆ ಮತ್ತೆ ಜೀರಿಗೆ, ಕೊತ್ತಂಬರಿ ಸೊಪ್ಪು, ಹಾಗೆ ಸಣ್ಣದಾಗಿ ಹೆಚ್ಚಿದ ಕರಿಬೇವು ಹಾಕಿಕೊಂಡು ಮತ್ತೆ ಮಿಶ್ರಣ ಮಾಡಿ.
ಈ ವೇಳೆ ಹಿಟ್ಟು ದಪ್ಪವಾಗಿದ್ದರೆ ಸ್ವಲ್ಪ ನೀರು ಸಹ ಹಾಕಿಕೊಂಡು ಮಿಕ್ಸ್ ಮಾಡಿ. ಈಗ ಒಲೆ ಮೇಲೆ ಕಾವಲಿ ಇಟ್ಟು ಕಾಯಲು ಬಿಡಿ. ಹಾಗೆ ಎಣ್ಣೆ ಹಚ್ಚಿಕೊಂಡು ನಂತರ ದೋಸೆ ಹಿಟ್ಟನ್ನು ಸುರಿದುಕೊಳ್ಳಿ. ಹಾಗೆ ಮೇಲೆ ಎಣ್ಣೆ ಹಚ್ಚಿಕೊಂಡು ಎರಡೂ ಕಡೆ ರೋಸ್ಟ್ ಮಾಡಿಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ದೋಸೆ ರೆಡಿಯಾಗುತ್ತದೆ. ಹುಳಿಯಾದ ಹಿಟ್ಟನ್ನು ಈ ರೀತಿಯಾಗಿ ಹೊಸದಾಗಿ ಮಿಶ್ರಣ ಮಾಡಿ ದೋಸೆ ಮಾಡಿ.
ಈ ರೀತಿ ಮಾಡಿದ ದೋಸೆ ಸ್ವಲ್ಪವೂ ಹುಳಿ ಬರುವುದಿಲ್ಲ. ಹಾಗೆ ನಯವಾಗಿ, ಮೃದುವಾಗಿ ಈ ದೋಸೆ ಬರಲಿದೆ. ನೀವು ಸಹ ಈ ದೋಸೆ ಮಾಡಿ ನೋಡಿ. ಹಾಗೆ ಹುಳಿಯಾದ ಹಿಟ್ಟನ್ನು ಎಸೆಯುವ ಬದಲಾಗಿ ಈ ರೀತಿ ಪರಿವರ್ತಿಸಿ ಮತ್ತೆ ದೋಸೆ ಮಾಡಬಹುದು. ಸುಲಭವಾಗಿ ಮಾಡುವ ಜೊತೆಗೆ ಬಹಳ ರುಚಿಯಾಗಿ ಮಾಡಬಹುದು. ನೀವು ಸಹ ಟ್ರೈ ಮಾಡಿ ನೋಡಿ.



Click it and Unblock the Notifications