Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ತಿಂಡಿ, ಊಟಕ್ಕೆ ಗೊಡ್ಡು ಖಾರ: ಇದಕ್ಕಿಂತ ಬೆಸ್ಟ್ ರುಚಿ ಮತ್ತೊಂದಿಲ್ಲ ಇಲ್ಲ!
ನೀವು ನಿತ್ಯ ಬೆಳಗ್ಗೆ ತಿಂಡಿ ಹಾಗೂ ಊಟದ ಸಮಯದಲ್ಲಿ ಅನ್ನದೊಂದಿಗೆ ಸವಿಯಲು ಹಲವು ರೀತಿಯ ಖಾದ್ಯಗಳ ಮಾಡಿ ಸವಿಯುವುದು ಕಾಮನ್. ಅದ್ರಲ್ಲೂ ರುಚಿ ರುಚಿಯ ರೆಸಿಪಿಗಳಾದ, ಸಾಂಬಾರ್, ಸಾರು, ಚಟ್ನಿ, ಗ್ರೇವಿ ಹೀಗೆ ಹತ್ತು ಹಲವು ಖಾದ್ಯಗಳ ಮಾಡಿ ಸವಿಯೋದನ್ನು ಇಷ್ಟಪಡುತ್ತೀರಿ. ಆದ್ರೆ ಊಟದ ಸಮಯಕ್ಕೆ ನಿಮ್ಮ ನಾಲಿಗೆ ರುಚಿ ಹೆಚ್ಚಿಸುವಂತಹ ವಸ್ತುವೊಂದಿದ್ದರೆ ಊಟದ ರುಚಿ ಮತ್ತಷ್ಟು ಹೆಚ್ಚಾಗೋದು ಖಚಿತ.
ಹೀಗಾಗಿ ಅನ್ನದೊಂದಿಗೆ ಸವಿಯುವಂತಹ ಗೊಡ್ಡು ಖಾರ ಮಾಡುವ ಕುರಿತಾಗಿ ನಾವಿಂದು ತಿಳಿದುಕೊಳ್ಳೋಣ. ಉತ್ತರ ಕರ್ನಾಟಕ ಭಾಗದಲ್ಲಿ ಅದ್ಭುತವಾಗಿ ಮಾಡಿ ಸವಿಯುವ ಈ ಗೊಡ್ಡು ಖಾರ ಎಲ್ಲರಿಗೂ ಇಷ್ಟವಾಗುತ್ತೆ. ಅನ್ನದೊಂದಿಗೆ ಕಲಸಿಕೊಂಡು ಸವಿಯುವುದು ಹಾಗೆ, ರೊಟ್ಟಿಯೊಂದಿಗೂ ಇದನ್ನು ಸವಿಯುತ್ತಾರೆ.

ಇದು ಖಾರವಾಗಿರುವ ಕಾರಣ ನಿಮ್ಮ ಬಾಯಿ ರುಚಿ ಹೆಚ್ಚಿಸುತ್ತೆ. ಹಾಗೆ ರುಚಿ ಕೂಡ ಅದ್ಭುತ. ಹಾಗೆ ಅನ್ನೊಂದಿಗೆ ಕಲಸಿಕೊಂಡು ಇದನ್ನು ಸವಿಯುತ್ತಾರೆ, ಉತ್ತರ ಕಾರ್ನಾಟಕ ಭಾಗದಲ್ಲಿ ಗೊಡ್ಡು ಖಾರ ಬಹಳ ಫೇಮಸ್. ಹಾಗಾದ್ರೆ ನಾವಿಂದು ಮನೆಯಲ್ಲಿಯೇ ಈ ಗೊಡ್ಡು ಖಾರ ಮಾಡಿ ಸವಿಯುವ ಕುರಿತು ತಿಳಿದುಕೊಳ್ಳೋಣ.
ಗೊಡ್ಡು ಖಾರ ಮಾಡಲು ಬೇಕಾಗುವ ವಸ್ತುಗಳು,
ಒಣ ಮೆಣಸು
ಎಣ್ಣೆ
ಉಪ್ಪು
ಈರುಳ್ಳಿ
ಬೆಲ್ಲ
ಬೆಳ್ಳುಳ್ಳಿ
ಹುಣಸೆ ಹುಳಿ
ಜೀರಿಗೆ
ಕರಿಬೇವು
ಕೊತ್ತಂಬರಿ ಸೊಪ್ಪು
ಗೊಡ್ಡು ಖಾರ ಮಾಡುವ ವಿಧಾನವೇನು?
ಮೊದಲಿಗೆ ಒಂದು ಈರುಳ್ಳಿಯನ್ನು ಚೆನ್ನಾಗಿ ಸುಟ್ಟುಕೊಳ್ಳಬೇಕು. ಈಗ ಒಲೆ ಮೇಳೆ ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿ ಬಳಿಕ ಜೀರಿಗೆ ಬೆಳ್ಳುಳ್ಳಿ, ಕರಿಬೇವು ಹಾಕಿ ಬಿಸಿ ಮಾಡಿಕೊಳ್ಳಿ. ನಂತರ ಇದಕ್ಕೆ ಕೊತ್ತಂಬರಿ ಸೊಪ್ಪು ಹಾಗೆ ಒಣ ಮೆಣಸು ಹಾಕಿಕೊಳ್ಳಿ. ಬ್ಯಾಡಗಿ ಮೆಣಸು ಹಾಗೆ ಗುಂಟೂರು ಮೆಣಸು ಹಾಕಿಕೊಂಡು ಫ್ರೈ ಮಾಡಿ.
1 ನಿಮಿಷದ ಬಳಿಕ ಈಗ ಸುಟ್ಟಿರುವ ಈರುಳ್ಳಿ ಸಿಪ್ಪೆ ತೆಗೆದು ಇಟ್ಟುಕೊಳ್ಳಿ. ಈಗ ಒಂದು ಮಿಕ್ಸಿ ಜಾರ್‌ಗೆ ಎಲ್ಲಾ ಮೆಣಸಿಗಳನ್ನು ಹಾಕಿಕೊಂಡು , ರುಚಿಗೆ ತಕ್ಕಷ್ಟು ಉಪ್ಪು ಸಹ ಹಾಕಿಕೊಳ್ಳಿ ನಂತರ ರುಬ್ಬಿಕೊಳ್ಳಬೇಕು. ನೀರು ಹಾಕದೆಯೇ ರುಬ್ಬಬೇಕು. ರುಬ್ಬಿ ಪುಡಿ ಮಾಡಿದ ಬಳಿಕ ಈಗ ಹುರಿದುಕೊಂಡಿದ್ದ ಉಳಿದ ಎಲ್ಲಾ ವಸ್ತುಗಳನ್ನು ಕೂಡ ಹಾಕಿಕೊಳ್ಳಿ. ಹಾಗೆ ಸಿಪ್ಪೆ ತೆಗೆದ ಈರುಳ್ಳಿ, ಬೆಲ್ಲ, ಹುಣಸೆ ಹುಳಿ ಸಹ ಹಾಕಿಕೊಂಡು 2 ಸ್ಪೂನ್ ಅಡುಗೆ ಎಣ್ಣೆ ಸಹ ಇದಕ್ಕೆ ಹಾಕಿ ರುಬ್ಬಿಕೊಳ್ಳಿ.
ಇದು ಉಂಡೆ ಕಟ್ಟಲು ಬರುವಂತಹ ಹದಕ್ಕೆ ಬರಬೇಕು. ನುಣ್ಣಗೆ ರುಬ್ಬಿಕೊಂಡು ತೆಗೆದು ಒಂದು ತಟ್ಟೆಗೆ ಹಾಕಿಕೊಳ್ಳಿ. ಅಂಟು ಅಂಟಾಗಿ ಬಂದ ನಂತರ ಇದನ್ನು ಉಂಡೆ ಕಟ್ಟಿಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ಗೊಡ್ಡು ಖಾರ ಸಿದ್ದವಾಗುತ್ತೆ. ನೀವಿದನ್ನು ಊಟದೊಂದಿಗೆ ಅದ್ರಲ್ಲೂ ತುಪ್ಪ ಬೆರೆಸಿಕೊಂಡು ಊಟಕ್ಕೆಕ ಕುಳಿತರೆ ಬಾಯಲ್ಲಿ ನೀರು ಬರುತ್ತೆ. ಹಾಗೆ ಇದನ್ನು ಒಂದು ತಿಂಗಳ ಕಾಲ ಇಟ್ಟು ಸವಿಯಬಹುದು. ನೀವು ಕೂಡ ಮನೆಯಲ್ಲಿ ಅನ್ನದೊಂದಿಗೆ ಅಥವಾ ತಿಂಡಿಯೊಂದಿಗೆ ಸವಿಯಲು ಈ ಖಾದ್ಯ ಮಾಡಿ ನೋಡಿ.
ಒಂದು ಬಾಕ್ಸ್‌ನಲ್ಲಿ ಹಾಕಿಟ್ಟುಕೊಂಡರೆ ಇದು ಬಹುಬೇಗ ಕೆಡುವುದಿಲ್ಲ. ನೀವು ಯಾವಾಗಲು ಇದನ್ನು ಸವಿಯಲು ಬಳಸಬಹುದು, ನೀವು ಕೂಡ ಇದನ್ನು ಮಾಡಿ ಸವಿದು ನೋಡಿ.



Click it and Unblock the Notifications
