Latest Updates
-
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು? -
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ! -
ಶ್ವಾಸಕೋಶದ ಆರೋಗ್ಯಕ್ಕೆ 7 ನಿಮಿಷದ ಬೆಳಗಿನ ಅಭ್ಯಾಸ: ಕಲುಷಿತ ಗಾಳಿಯಿಂದ ರಕ್ಷಣೆ ಪಡೆಯುವುದು ಹೇಗೆ? -
ಡೇಟಿಂಗ್ ಆಪ್ ಬಳಸುತ್ತೀರಾ? ಈ 'ರೆಡ್ ಫ್ಲ್ಯಾಗ್'ಗಳಿದ್ದರೆ ನೀವು ಹನಿಟ್ರ್ಯಾಪ್ ಬಲೆಗೆ ಬೀಳಬಹುದು! -
ವಿದ್ಯುತ್ ಬಿಲ್ ಚಿಂತೆಯೇ? ಪಿಎಂ ಸೂರ್ಯ ಘರ್ ಯೋಜನೆಯಲ್ಲಿ 5.75% ಬಡ್ಡಿಗೆ ಸೋಲಾರ್ ಪಡೆಯಿರಿ! -
ವಿಶ್ವ ಸ್ತನ್ಯಪಾನ ಸಪ್ತಾಹ: ಕೇವಲ 250 ರೂಪಾಯಿಯಲ್ಲಿ ತಾಯಂದಿರಿಗೆ ಸಿಗುತ್ತಾ ಪೂರ್ಣ ಪೋಷಣೆ? ಇಲ್ಲಿದೆ ಬೆಸ್ಟ್ ಡಯಟ್ ಪ್ಲಾನ್
ಹೊಸ ರುಚಿಯ ಬೀರಂಜಿ ರೈಸ್..! ಇದಕ್ಕಿಂತ ರುಚಿ ಬೇರೇನು ಇಲ್ಲ!!
ನೀವು ಅಡುಗೆಯಲ್ಲಿ ವಿಶೇಷ ಖಾದ್ಯಗಳ ಮಾಡಿ ಸವಿಯುವ ವಿಚಾರದಲ್ಲಿ ಯಾವಾಗಲು ಮುಂದೆ ಇರುವವರಾಗಿದ್ದರೆ ನೀವು ರೈಸ್‌ನಿಂದ ಮಾಡುವ ಹಲವು ಖಾದ್ಯಗಳನ್ನು ಮಾಡಿ ಸವಿದಿರುತ್ತೀರಿ. ಹಾಗೆ ಒಂದಲ್ಲಾ ಒಂದು ಖಾದ್ಯಗಳ ಮಾಡಿ ಸವಿಯುವುದು ನೋಡಬಹುದು. ಅದರಲ್ಲೂ ವಿಭಿನ್ನ ಬಿರಿಯಾನಿ, ಫ್ರೈಡ್ ರೈಸ್, ರೈಸ್ ಬಾತ್ ಹಾಗೆ ವಿವಿಧ ಬಗೆ ಬಗೆಯ ಖಾದ್ಯಗಳ ಮಾಡಿ ಸವಿಯುವುದು ನಿಮ್ಮ ಆಯ್ಕೆಗಳಲ್ಲಿ ಒಂದಾಗಿರಬಹುದು.
ಹಾಗೆ ನೀವು ಬಹುತೇಕ ಸಮಯ ಮಧ್ಯಾಹ್ನದ ಬಾಕ್ಸ್ ಹಾಗೆ ಬೆಳಗ್ಗೆ ತಿಂಡಿಗೂ ಒಂದೇ ರೀತಿಯ ಖಾದ್ಯ ಮಾಡಲು ಮುಂದಾಗುವುದು ಸಹ ಮಾಡಬಹುದು. ಅದರಲ್ಲೂ ನೀವು ರೈಸ್‌ನಿಂದ ಹೊಸ ರೀತಿ, ಹೊಸ ರುಚಿಯ ಖಾದ್ಯಗಳ ಮಾಡಿ ಸವಿಯುವ ಆಲೋಚನೆಯಲ್ಲಿದ್ದರೆ ನಾವಿಂದು ಹೊಸ ರೀತಿಯ ಖಾದ್ಯ ಮಾಡಿ ಸವಿಯುವ ಕುರಿತಾಗಿ ತಿಳಿದುಕೊಳ್ಳೋಣ.

ನಾವಿಂದು ರುಚಿ ರುಚಿಯ ಘಮ ಘಮಿಸುವ ಬೀರಂಜಿ ರೈಸ್ ಕುರಿತು ತಿಳಿಯೋಣ. ಕೆಲವರು ಇದನ್ನು ಬ್ರಿಂಜಿ ರೈಸ್ ಅಂತಲೂ ಕರೆಯುತ್ತಾರೆ. ಬೆಳಗ್ಗೆ ತಿಂಡಿಗೆ ಹಾಗೆ ಮಧ್ಯಾಹ್ನದ ಬಾಕ್ಸ್‌ಗೂ ಇದು ಬಹಳಷ್ಟು ರುಚಿ ನೀಡಲಿದೆ. ಇದು ಬಿರಿಯಾನಿಯನ್ನು ಕೂಡ ಮೀರಿಸುವ ರುಚಿ ನೀಡಲಿದೆ. ಬೀರಂಜಿ ರೈಸ್ ಮಾಡುವ ವಿಧಾನವೇನು ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಈ ಬೀರಂಜಿ ರೈಸ್ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?, ಮಾಡುವ ವಿಧಾನವೇನು? ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಬೀರಂಜಿ ರೈಸ್ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?
- ಅಕ್ಕಿ
- ಏಲಕ್ಕಿ
- ಮರಾಠಿ ಮೊಗ್ಗು
- ಚಕ್ರ ಮೊಗ್ಗು
- ದಾಲ್ಚಿನ್ನಿ
- ಲವಂಗ
- ಮೆಣಸು
- ಜೀರಿಗೆ
- ಕೊತ್ತಂಬರಿ ಸೊಪ್ಪು
- ಬೆಣ್ಣೆ
- ಗೋಡಂಬಿ
- ಕರಿಬೇವು
- ಬೆಳ್ಳುಳ್ಳಿ
- ಹಸಿಮೆಣಸು
- ಈರುಳ್ಳಿ
- ತಾಜಾ ತೆಂಗಿನಕಾಯಿ
- ಎಣ್ಣೆ
- ಉಪ್ಪು
ಬೀರಂಜಿ ರೈಸ್ ಮಾಡುವುದು ಹೇಗೆ?
ಮೊದಲು ಒಂದು ಅಳತೆ ಕಪ್‌ನಲ್ಲಿ ಒಂದೂವರೆ ಕಪ್ ಬಾಸುಮತಿ ಅಕ್ಕಿ ತೆಗೆದುಕೊಳ್ಳಿ. ಹಾಗೆ ಇದಕ್ಕೆ ಅರ್ಧ ಕಪ್ ಸಾಮಾನ್ಯ ಅಕ್ಕಿಯನ್ನು ಮಿಕ್ಸ್ ಮಾಡಿಕೊಂಡು ಚೆನ್ನಾಗಿ ತೊಳೆದು ನಂತರ ನೀರಿನಲ್ಲಿ ಅರ್ಧ ಗಂಟೆ ನೆನೆಸಿಟ್ಟುಕೊಳ್ಳಿ. ಈಗ ಒಲೆ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ಜೀರಿಗೆ, ದನಿಯಾ ಕಾಳು, ಏಲಕ್ಕಿ, ಲವಂಗ, ಚಕ್ಕೆ, ಕಾಳು ಮೆಣಸು, ಮರಾಠಿ ಮೊಗ್ಗು ಹಾಗೆ ಚಕ್ರ ಮೊಗ್ಗನ್ನು ಎಣ್ಣೆ ಹಾಕಿಕೊಳ್ಳದೆ ಡ್ರೈ ಫ್ರೈ ಮಾಡಿಕೊಳ್ಳಿ.
ಈಗ ಈ ಎಲ್ಲಾ ಪದಾರ್ಥವನ್ನು ತಣ್ಣಗಾಗಲು ಬಿಟ್ಟು ನಂತರ ಒಂದು ಮಿಕ್ಸಿ ಜಾರ್ ತೆಗೆದುಕೊಂಡು ಅದಕ್ಕೆ ಹಾಕಿ ಬಳಿಕ ಪುಡಿ ಮಾಡಿಟ್ಟುಕೊಳ್ಳಿ. ನಂತರ ಒಲೆ ಮೇಲೆ ಇಂದು ಕುಕ್ಕರ್ ಇಟ್ಟುಕೊಂಡು ಅದಕ್ಕೆ 2 ಸ್ಪೂನ್ ಬೆಣ್ಣೆ ಹಾಕಿಕೊಂಡು ಕರಗಲು ಬಿಡಿ. ನಂತರ ಈ ಬೆಣ್ಣೆಗೆ ಗೋಡಂಬಿ ಹಾಕಿ ಹುರಿಯಿರಿ ಹಾಗೆ ಇದಕ್ಕೆ ದಾಲ್ಚಿನ್ನಿ ಎಲೆ, ಬೆಳ್ಳುಳ್ಳಿ ಸಣ್ಣದಾಗಿ ಹೆಚ್ಚಿ ಹಾಕಿಕೊಳ್ಳಿ. ಈಗ ಹಸಿ ಮೆಣಸು, ಕರಿಬೇವು ಹಾಕಿ ರೋಸ್ಟ್ ಮಾಡಿಕೊಳ್ಳಿ.
ಈಗ ಈರುಳ್ಳಿ ಕೂಡ ಸಣ್ಣೆದಾಗಿ ಹೆಚ್ಚಿ ಇದಕ್ಕೆ ಹಾಕಿಕೊಳ್ಳಿ. ಈಗ ಫ್ರೈ ಮಾಡಿದ ಬಳಿಕ ಅಳತೆ ಕಪ್‌ನಲ್ಲಿ ನೆನೆಸಿಟ್ಟಿದ್ದ ಅಕ್ಕಿಯನ್ನು ಹಾಕಿ, ಹಾಗೆ ಇದರ ಜೊತೆಗೆ ಕೊತ್ತಂಬರಿ ಸೊಪ್ಪು, ತೆಂಗಿನಕಾಯಿ ತುರಿ ಸಹ ಹಾಕಿ 2 ನಿಮಿಷ ಫ್ರೈ ಮಾಡಿಕೊಳ್ಳಿ. ಹಾಗೆ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಅಳತೆ ಕಪ್‌ನಲ್ಲಿ 2 ಕಪ್ ಅಕ್ಕಿಗೆ ಮೂರುವರೆ ಕಪ್ ನೀರು ಹಾಕಿಕೊಳ್ಳಬೇಕು. ಅಂದರೆ ಅರ್ಧ ಕಪ್ ಕಡಿಮೆ ಹಾಕಿ ಮಿಕ್ಸ್ ಮಾಡಿಕೊಳ್ಳಿ. ಹಾಗೆ ಕುಕ್ಕರ್ ಮುಚ್ಚಳ ಮುಚ್ಚಿ 1 ಸೀಟಿ ಹೊಡೆಯಲು ಬಿಡಿ.
ಒಂದು ಸೀಟೀ ಹೊಡೆದ ಬಳಿಕ ತಣ್ಣಗಾಗಲು ಬಿಡಿ. ಇಷ್ಟಾದ ಬಳಿಕ ನಾವು ಕುಕ್ಕರ್ ಮುಚ್ಚಳ ತೆಗೆದು ಒಮ್ಮೆ ಮಿಕ್ಸ್ ಮಾಡಿಕೊಂಡರೆ ರುಚಿ ರುಚಿಯ ಈ ಬೀರಂಜಿ ರೈಸ್ ರೆಡಿಯಾಗುತ್ತೆ.



Click it and Unblock the Notifications