Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ದೇಹ ಕೂಲ್ ಆಗಿಸುವ ಹೆಸರು ಕಾಳಿನ ಹಾಲು: ಮಕ್ಕಳಿಗೂ ನೀಡಬಹುದು!
ದೇಹ ಬಹಳ ಉಷ್ಣವಾಗಿದ್ದರೆ ತಂಪಾಗಿಸಲು ನೀವು ಹಲವು ರೀತಿ ಖಾದ್ಯಗಳ ಮಾಡಿ ಸವಿಯಲು ಮುಂದಾಗುತ್ತೀರಿ. ಅದರಂತೆ ದೇಹ ತಂಪಾಗಿಸಲು ಜ್ಯೂಸ್‌ಗಳು, ಖಾದ್ಯಗಳು ನಿಮಗೆ ಬಹಳ ಪ್ರಯೋಜನಕಾರಿಯಾಗಲಿವೆ. ಅದ್ರಲ್ಲೂ ಈ ಬೇಸಿಗೆಯ ಸಮಯದಲ್ಲಿ ನಿಮ್ಮ ದೇಹ ತಂಪಾಗಿಸಲು ಹಲವು ರೀತಿಯ ಖಾದ್ಯಗಳು ಸಹಕಾರಿಯಾಗಲಿವೆ.
ಹಾಗೆ ದೇಹ ತಂಪಾಗಿಸುವ ಹಲವು ಖಾದ್ಯಗಳ ಪೈಕಿ ನಾವಿಂದು ಹೆಸರು ಕಾಳಿನಿಂದ ಮಾಡುವ ಜ್ಯೂಸ್ ಕುರಿತು ತಿಳಿದುಕೊಳ್ಳೋಣ. ಹೆಸರು ಕಾಳು ನಿಮ್ಮ ದೇಹಕ್ಕೆ ತಂಪು ನೀಡುತ್ತೆ. ಹಾಗೆ ಹೆಸರು ಕಾಳು ನಿಮಗೆ ಬಹಳ ಪ್ರಯೋಜನಕಾರಿಯಾಗಲಿದೆ. ಇದರಲ್ಲಿನ ಫೈಬರ್ ಅಂಶ ನಿಮ್ಮ ಜೀರ್ಣಕ್ರಿಯೆಗೆ ಉತ್ತಮ. ಹಾಗೆ ತೂಕ ಇಳಿಸಲು, ಮಧುಮೇಹವನ್ನು ನಿಯಂತ್ರಣದಲ್ಲಿಡಲು ಇದು ಸಹಕಾರಿಯಾಗಲಿದೆ.

ಇದರಲ್ಲಿನ ಪೊಟ್ಯಾಷಿಯಂ ಹಾಗೆ ಮೆಗ್ನೇಷಿಯಂ ಇರುವ ಕಾರಣ ಇದು ಹೃದಯದ ಆರೋಗ್ಯಕ್ಕೆ ಇದು ಬಹಳ ಉತ್ತಮ. ಆದ್ರೆ ನಾವಿಂದು ದೇಹ ತಂಪಾಗಿರುವಂತಹ ಹಲವು ಜ್ಯೂಸ್‌ಗಳ ಪೈಕಿ ಈ ಹೆಸರು ಕಾಳಿನ ಜ್ಯೂಸ್ ಒಮ್ಮೆಯಾದರು ಕುಡಿದು ನೋಡಿ. ಹಾಗಾದ್ರೆ ಈ ಹೆಸರು ಕಾಳಿನ ಜ್ಯೂಸ್ ಮಾಡುವುದು ಹೇಗೆ? ಮಾಡಲು ಯಾವೆಲ್ಲಾ ವಸ್ತುಗಳು ಬೇಕು? ಮಾಡಲು ಎಷ್ಟು ಸಮಯ ಹಿಡಿಯಲಿದೆ ಅನ್ನೋದನ್ನು ಇಲ್ಲಿ ತಿಳಿದುಕೊಳ್ಳೋಣ.
ಹೆಸರು ಕಾಳಿನ ಜ್ಯೂಸ್ ಮಾಡಲು ಯಾವೆಲ್ಲಾ ವಸ್ತುಗಳು
ಬೇಕು?
- ಹೆಸರು ಕಾಳು
- ಬೆಲ್ಲ
- ಏಲಕ್ಕಿ
- ಹಾಲು
- ತೆಂಗಿನಕಾಯಿ
ಹೆಸರು ಕಾಳಿನ ಜ್ಯೂಸ್ ಮಾಡುವುದು ಹೇಗೆ?
ಮೊದಲಿಗೆ ಹೆಸರು ಕಾಳನ್ನು ಬೌಲ್‌ನಲ್ಲಿ ಹಾಕಿ ನೀರು ಹಾಕಿ ತೊಳೆದುಕೊಂಡು ಬಳಿಕ ಹೆಸರುಕಾಳನ್ನು ನೀರಿನಿಂದ ತೆಗೆದಿಡಿ. ಈಗ ಒಲೆ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ಹೆಸರುಕಾಳನ್ನು ಹಾಕಿಕೊಂಡು ಚೆನ್ನಾಗಿ ಹುರಿದುಕೊಳ್ಳಬೇಕು. 2ರಿಂದ 3 ನಿಮಿಷ ಚೆನ್ನಾಗಿ ಹುರಿದುಕೊಳ್ಳಿ. ನಂತರ ಈ ಹೆಸರು ಕಾಳುಗಳನ್ನು ತಣ್ಣಗಾಗಲು ಬಿಡಿ.
ಈಗ ಎಲ್ಲಾ ಹೆಸರು ಕಾಳುಗಳನ್ನು ಒಂದು ಮಿಕ್ಸಿ ಜಾರ್‌ಗೆ ಹಾಕಿಕೊಂಡು ನುಣ್ಣಗೆ ಪುಡಿ ಮಾಡಿಕೊಳ್ಳಿ. ಪುಡಿ ಮಾಡಿದ ಬಳಿಕ ಈ ಕಾಳಿಗೆ ಸ್ವಲ್ಪ ತೆಂಗಿನಕಾಯಿ ಹೆಚ್ಚಿಕೊಂಡು ಹಾಕಿ. ಹಾಗೆ ಅನಂತರ ಸ್ವಲ್ಪ ಬೆಲ್ಲದ ಪುಡಿ ಅಥವಾ ಬೆಲ್ಲ ಸ್ವಲ್ಪ ನೀರು, ಏಲಕ್ಕಿ ಹಾಕಿಕೊಂಡು ಮಿಕ್ಸ್ ಮಾಡಿ ಮತ್ತೆ 2 ಸುತ್ತು ರುಬ್ಬಿಕೊಳ್ಳಿ. ಮತ್ತೆ ಸ್ವಲ್ಪ ನೀರು ಹಾಕಿ ಮತ್ತೆ ರುಬ್ಬಿಕೊಳ್ಳಬೇಕು.
ಈಗ ರುಬ್ಬಿದ ಈ ಮಿಶ್ರಣವನ್ನು ಒಂದು ಪಾತ್ರೆಗೆ ಹಾಕಿ ಮತ್ತೆ ಸ್ವಲ್ಪ ನೀರು ಹಾಕಿ ಮಿಕ್ಸ್ ಮಾಡಿಕೊಂಡು 1 ಕಪ್ ಹಾಲು ಹಾಕಿಕೊಳ್ಳಿ, ಹಾಗೆ ಮಿಕ್ಸ್ ಮಾಡಿಕೊಳ್ಳಿ. ನೀವು ಇದನ್ನು ಜರಡಿ ಹಿಡಿದು ಕುಡಿಯಲು ಬಳಸಬಹುದು. ಕುಡಿಯುವ ಮುನ್ನ ಇದಕ್ಕೆ ಸಬ್ಜ ಬೀಜಗಳು, ಡ್ರೈ ಫ್ರೂಟ್ಸ್ ಸಹ ಹಾಕಿಕೊಂಡು ಕುಡಿಯಬಹುದು. ಫ್ರಿಡ್ಜ್‌ನಲ್ಲಿ ಇಟ್ಟು ತಣ್ಣಗೆ ಮಾಡಿಕೊಂಡು ಕೂಡ ನೀವು ಕುಡಿಯಬಹುದು.
ಈ ಹೆಸರು ಕಾಳಿನ ಹಾಲು ಬಹಳ ತಂಪು ನೀಡಲಿದೆ. ಹಾಗೆ ನಿಮ್ಮ ಆರೋಗ್ಯ ಸುಧಾರಿಸಲಿದೆ. ಅದ್ರಲ್ಲೂ ನಿಮ್ಮ ದೇಹ ಬಹಳ ಉಷ್ಣತೆಯಿಂದ ಕೂಡಿದ್ದರೆ ಈ ಹೆಸರು ಕಾಳಿನ ಹಾಲು ಕುಡಿದು ನೋಡಿ. ಒಂದೆರಡು ದಿನದಲ್ಲಿ ನಿಮಗೆ ತಂಪೆನಿಸಲಿದೆ. ದೇಹ ಸಮತೋಲನದಿಂದ ಕೂಡಿರಲಿದೆ. ಇದರ ಹಲವು ಆರೋಗ್ಯಕರ ಪ್ರಯೋಜನಗಳು ನಿಮ್ಮ ದೈನಂದಿನ ಕೆಲಸ ಕಾರ್ಯಗಳಲ್ಲಿ ಹೊಸ ರೀತಿ ಚೈತನ್ಯ ತರಲಿದೆ. ನಿಮಗೆ ಎಷ್ಟು ಪ್ರಮಾಣದಲ್ಲಿ ಬೇಕೋ ಅಷ್ಟು ಮಾಡಿಕೊಳ್ಳಬಹುದು. ಬೆಳಗ್ಗೆ ಖಾಲಿ ಹೊಟ್ಟೆಗೆ ಇಲ್ಲವೆ ರಾತ್ರಿ ಊಟದ ಬಳಿಕವೂ ಇದನ್ನು ಸೇವಿಸಬಹುದು.



Click it and Unblock the Notifications
