Latest Updates
-
ತಾಯಂದಿರ ದಿನದ ಗೊಂದಲವೇ? ಅಮ್ಮ ಮತ್ತು ಅತ್ತೆ ಇಬ್ಬರನ್ನೂ ಖುಷಿಪಡಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಅಮೆಜಾನ್ ಸೇಲ್ ಶುರು: ನಿಮ್ಮ ಬಾಲ್ಕನಿಯನ್ನು ಸುಂದರ ತೋಟವನ್ನಾಗಿಸಲು ಮಿಸ್ ಮಾಡ್ಬೇಡಿ ಈ ಬೆಸ್ಟ್ ಡೀಲ್ಸ್! -
ಬಿಸಿಲ ಧಗೆಯಿಂದ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಪಾನೀಯಗಳೇ ಮದ್ದು! -
ಅಮ್ಮನಿಗೆ ಕೊನೆಯ ನಿಮಿಷದಲ್ಲಿ ಗಿಫ್ಟ್ ಕೊಡಬೇಕಾ? ಈ ಟ್ರಿಕ್ಸ್ ಫಾಲೋ ಮಾಡಿ, ಅಮ್ಮನ ಮುಖದಲ್ಲಿ ನಗು ಮೂಡಿಸಿ! -
ಬಿಸಿಗಾಳಿಯ ಎಚ್ಚರಿಕೆ: ಮಧ್ಯಾಹ್ನ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪು ನಿಮ್ಮ ಆರೋಗ್ಯಕ್ಕೆ ಕುತ್ತು ತರಬಹುದು! -
ಬಿಸಿಗಾಳಿಯ ನಡುವೆ ಮದುವೆ ಸಂಭ್ರಮ: ಅತಿಥಿಗಳ ಸುರಕ್ಷತೆಗಾಗಿ ನೀವು ಮಾಡಲೇಬೇಕಾದ ಬದಲಾವಣೆಗಳಿವು! -
ಬಿಸಿಗಾಳಿಯ ಅಬ್ಬರ ಶುರು: ನಿಮ್ಮ ಮನೆ ತಂಪಾಗಿರಲು ಮತ್ತು ಗಿಡಗಳನ್ನು ಉಳಿಸಲು ಈ ಸೀಕ್ರೆಟ್ ಟಿಪ್ಸ್ ಮಿಸ್ ಮಾಡ್ಬೇಡಿ! -
ಸುಡುವ ಬಿಸಿಲಿಗೆ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಆಹಾರ ಕ್ರಮ ಪಾಲಿಸಿ! -
ಮದರ್ಸ್ ಡೇ 2026: ಅಮ್ಮನಿಗೆ ಸರ್ಪ್ರೈಸ್ ನೀಡಲು ಈ ವೈರಲ್ ಟ್ರೆಂಡ್ಸ್ ಫಾಲೋ ಮಾಡಿ, ಮಿಸ್ ಮಾಡ್ಬೇಡಿ! -
ಅಮ್ಮನಿಗೆ ಈ ಬಾರಿ ವಿಶೇಷ ಉಡುಗೊರೆ: ತಾಯಂದಿರ ದಿನದಂದು 20 ನಿಮಿಷದ ಯೋಗದ ಮ್ಯಾಜಿಕ್!
ಫೇಮಸ್ ಮೇಲುಕೋಟೆ ಅಯ್ಯಂಗಾರ್ ಪುಳಿಯೋಗರೆ ಮಾಡೋದು ಹೇಗೆ? ಈ ಸ್ವಾದ ಸವಿದು ನೋಡಿ!
ನೀವು ಬೆಳಗ್ಗೆ ತಿಂಡಿಗಾಗಿ ವಿವಿಧ ಬಗೆಯ ತಿಂಡಿ ಮಾಡಿ ಸವಿದಿರುತ್ತೀರಿ. ಅದರಲ್ಲೂ ಬೆಳಗ್ಗೆ ಸಮಯದಲ್ಲಿ ರುಚಿ ರುಚಿಯಾದ ತಿಂಡಿ ಇದ್ದರೆ ಆ ದಿನ ಬಹಳ ನೆಮ್ಮದಿ ತರಬಹುದು. ಇನ್ನು ಬೆಳಗ್ಗೆ ನೀವು ರೈಸ್‌ನಿಂದ ಮಾಡುವಂತಹ ಹಲವು ರೀತಿಯ ಖಾದ್ಯಗಳ ಮಾಡಿ ಸವಿಯುವುದು ಕಾಮನ್. ಅದ್ರಲ್ಲೂ ಹೆಚ್ಚಾಗಿ ಪಲಾವ್, ಚಿತ್ರಾನ್ನ, ಪುಳಿಯೋಗರೆ ಎಲ್ಲರಿಗೂ ಫೇವರಿಟ್.
ಅದರಲ್ಲೂ ಪುಳಿಯೋಗರೆಯನ್ನು ಎಲ್ಲರು ಇಷ್ಟಪಟ್ಟು ಸವಿಯುತ್ತಾರೆ. ಹತ್ತು ಹಲವು ಬಗೆಯಲ್ಲಿ ಈ ಪುಳಿಯೋಗರೆ ಮಾಡಬಹುದು, ಎಂಬುದನ್ನು ನೀವು ಕೂಡ ತಿಳಿದಿದ್ದೀರಿ. ಮುಖ್ಯವಾಗಿ ಉಡುಪಿ ಹೋಟೆಲ್ ಶೈಲಿಯ ಪುಳಿಯೋಗರೆ ಹಾಗೆ ಅಯ್ಯಂಗಾರ್ ಶೈಲಿಯ ಪುಳಿಯೋಗರೆ ಬಹಳ ಫೇಮಸ್. ಈಗ ಪುಳಿಯೋಗರೆ ಮಾಡೋದು ಕೂಡ ಬಹಳ ಸುಲಭ.

ಅದರಲ್ಲೂ ಮೇಲುಕೋಟೆ ಪುಳಿಯೋಗರೆ ಇಡೀ ಕರ್ನಾಟದಲ್ಲಿಯೇ ಫೇಮಸ್, ಇಂತಹ ರುಚಿಯ ಪುಳಿಯೋಗರೆ ನೀವು ಒಮ್ಮೆ ಸವಿದರೆ ನಿತ್ಯವು ತಿಂಡಿಗೆ ಇದೇ ಖಾದ್ಯ ಮಾಡಿ ಸವಿಯಲು ಮುಂದಾಗುವುದು ಖಚಿತ. ಹಾಗಾದ್ರೆ ನಾವಿಂದು ಈ ಮೇಲುಕೋಟೆ ಪುಳಿಯೋಗರೆ ಮಾಡುವುದು ಹೇಗೆ? ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?, ಮಾಡುವ ವಿಧಾನವೇನು? ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಮೇಲುಕೋಟೆ ಪುಳಿಯೋಗರೆ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?
- ಒಣ ಮೆಣಸು
- ಕಾಳು ಮೆಣಸು
- ಕಡಲೆ ಬೇಳೆ
- ಉದ್ದಿನ ಬೇಳೆ
- ಕಪ್ಪು ಎಳ್ಳು
- ಜೀರಿಗೆ
- ಸಾಸಿವೆ
- ಕರಿಬೇವು
- ತುಪ್ಪ
- ಎಣ್ಣೆ
- ಉಪ್ಪು
- ಧನಿಯ ಕಾಳು
- ಒಣ ಕೊಬ್ಬರಿ
- ಹುಣಸೆ ಹುಳಿ
- ಅರಶಿಣ
- ಕಡಲೆಬೀಜ
ಮೇಲುಕೋಟೆ ಪುಳಿಯೋಗರೆ ಮಾಡುವ ವಿಧಾನವೇನು?
ಮೊದಲು ಬಾಣಲೆಗೆ ಎಣ್ಣೆ ಹಾಕಿಕೊಂಡು ಅದಕ್ಕೆ ಒಣ ಮೆಣಸು, ಹಾಕಿಕೊಂಡು ಚೆನ್ನಾಗಿ ಹುರಿದುಕೊಳ್ಳಬೇಕು. ನಂತರ ಮೆಣಸು ತೆಗೆದಿಟ್ಟು ಅದೇ ಬಾಣಲೆಗೆ ಮತ್ತೆ ಕೊತ್ತಂಬರಿ ಕಾಳು ಹಾಕಿಕೊಂಡು ಫ್ರೈ ಮಾಡಿ. 2 ನಿಮಿಷದ ಬಳಿಕ ದನಿಯಾ ಕಾಳು ತೆಗೆದಿಟ್ಟು ನಂತರ ಇದಕ್ಕೆ ಸ್ವಲ್ಪ ಕಡಲೆ ಬೇಳೆ ಹಾಕಿಕೊಂಡು ಅರ್ಧ ನಿಮಿಷ ಬಿಟ್ಟು ಉದ್ದಿನ ಬೇಳೆ ಇದಕ್ಕೆ ಸೇರಿಸಿ 1 ನಿಮಿಷ ಫ್ರೈ ಮಾಡಿ.
ನಂತರ ಇದಕ್ಕೆ ಕರಿಮೆಣಸು ಹಾಕಿ ಅರ್ಧ ನಿಮಿಷ ಬಿಟ್ಟು ನಂತರ ಮೆಂತ್ಯ, ಜೀರಿಗೆ, ಸಾಸಿವೆ ಹಾಕಿಕೊಂಡು ಚೆನ್ನಾಗಿ ಫ್ರೈ ಮಾಡಿಕೊಳ್ಳಿ. 2ರಿಂದ3 ನಿಮಿಷದ ಬಳಿಕ ಎಲ್ಲಾ ವಸ್ತುಗಳನ್ನು ತೆಗೆದು ಬೌಲ್‌ಗೆ ಹಾಕಿಟ್ಟುಕೊಳ್ಳಿ. ನಂತರ ಖಾಲಿ ಬಾಣಲೆಗೆ ಕರಿಬೇವು ಹಾಕಿ ಫ್ರೈ ಮಾಡಿ ತೆಗೆದಿಟ್ಟು ಈಗ ಕರಿ ಎಳ್ಳು ಹಾಕಿ ಫ್ರೈ ಮಾಡಿಕೊಂಡು ತೆಗೆದಿಟ್ಟುಕೊಳ್ಳಿ. ನಂತರ ಒಣ ಕೊಬ್ಬರಿ ಹಾಕಿ ಫ್ರೈ ಮಾಡಿ ತೆಗೆದಿಟ್ಟುಕೊಳ್ಳಿ.
ಈಗ ಒಂದು ಮಿಕ್ಸಿ ಜಾರ್ ತೆಗೆದುಕೊಂಡು ಒಣ ಕೊಬ್ಬರಿ ಒಂದನ್ನು ಬಿಟ್ಟು ಉಳಿದೆಲ್ಲಾ ಮಸಾಲೆಗಳನ್ನು ಸಹ ಹಾಕಿಕೊಂಡು ರುಬ್ಬಿಕೊಳ್ಳಬೇಕು. ಪುಡಿಯನ್ನು ಒಂದು ಬೌಲ್‌ಗೆ ಹಾಕಿದ ಬಳಿಕ ಈಗ ಕೊಬ್ಬರಿಯನ್ನು ಕೂಡ ಮಿಕ್ಸಿ ಜಾರ್‌ನಲ್ಲಿ ಹಾಕಿ ಪುಡಿ ಮಾಡಿಕೊಂಡು ಅದೇ ಬೌಲ್‌ಗೆ ಹಾಕಿ ಎಲ್ಲವನ್ನು ಮಿಕ್ಸ್ ಮಾಡಿ. ಇಷ್ಟಾದರೆ ಪುಳಿಯೋಗರೆ ಪುಡಿ ರೆಡಿಯಾಗುತ್ತದೆ.
ಈಗ ಬಾಣಲೆಯೊಂದಕ್ಕೆ ಸುಮಾರು ಕಾಲು ಕೆಜಿ ಹುಣಸೆ ಹುಳಿ ನೆನೆಸಿ ದಪ್ಪವಾದ ಹುಳಿ ತೆಗೆದು ಅದನ್ನು ಬಾಣಲೆಗೆ ಹಾಕಿ ಕುದಿಯಲು ಬಿಡಿ. ಈಗ ಬೆಲ್ಲ. ಅರಶಿಣ, ಉಪ್ಪು ಹಾಕಿ ಮಿಕ್ಸ್ ಮಾಡಿ ಇದು ಗಟ್ಟಿಯಾಗಲು ಬಿಡಿ. 2 ನಿಮಿಷ ಬಿಟ್ಟು ತುಪ್ಪ ಹಾಕಿ 3 ನಿಮಿಷ ಕುದಿಯಲು ಬಿಡಿ. ಒಟ್ಟು 15 ನಿಮಿಷ ಕುದಿಯಲು ಬಿಟ್ಟರೆ ಇದು ಗೊಜ್ಜಾಗುತ್ತೆ.
ಈಗ ಈ ಹುಳಿ ಗೊಜ್ಜನ್ನು ತೆಗೆದಿಟ್ಟು, ಮತ್ತೆ ಅದೇ ಬಾಣಲೆಗೆ ಎಣ್ಣೆ ಹಾಕಿಕೊಂಡು ಸಾಸಿವೆ, ಕಡಲೆ ಬೇಳೆ, ಉದ್ದಿನ ಬೇಳೆ, ಹಾಕಿ ಫ್ರೈ ಮಾಡಿ. ಎಣ್ಣೆ ಹೆಚ್ಚಾಗಿ ಬಳಸಿ. ನಂತರ ಕಡಲೆ ಬೀಜ ಸಹ ಹಾಕಿ ಫ್ರೈ ಮಾಡಿ. 2 ನಿಮಿಷದ ಬಳಿಕ ಇಂಗು, ಅರಶಿಣ, ಎಳ್ಳು, ಒಣ ಕೊಬ್ಬರಿ ಹಾಕಿ ಮಿಕ್ಸ್ ಮಾಡಿ. ಈ ಗೊಜ್ಜನ್ನು ಈಗ ಬಾಣಲೆಯಲ್ಲಿನ ಹುಳಿಯ ಮಿಕ್ಸ್‌ಗೆ ಹಾಕಿಕೊಳ್ಳಿ. ನಂತರ ಮೊದಲೇ ಮಾಡಿದ್ದ ಪುಡಿಯನ್ನು ಕೂಡ ಇದಕ್ಕೆ ಹಾಕಿ ಮಿಕ್ಸ್ ಮಾಡಿದರೆ ಪುಳಿಯೋಗರೆ ಗೊಜ್ಜು ಸಿದ್ದವಾಗಲಿದೆ. ಬಳಿಕ ಇದಕ್ಕೆ ರೈಸ್ ಹಾಕಿದರೆ ರುಚಿ ರುಚಿಯ ಅಯ್ಯಂಗಾರ್ ಪುಳಿಯೋಗರೆ ಸಿದ್ದವಾಗಲಿದೆ.



Click it and Unblock the Notifications