Latest Updates
-
ಮಾಸಿಕ ಶಿವರಾತ್ರಿ ಉಪವಾಸ: ಸುಸ್ತಾಗದಂತೆ ಇರಲು 6 ನಿಮಿಷದ ಸರಳ ವ್ಯಾಯಾಮ ಮತ್ತು ಟಿಪ್ಸ್ -
ಮನೆಯವರ ವಿರೋಧದ ನಡುವೆ ಮದುವೆ: ಅಲಹಾಬಾದ್ ಹೈಕೋರ್ಟ್ನಿಂದ ಜೋಡಿಗಳಿಗೆ ಸಿಕ್ಕಿತು ಭರ್ಜರಿ ರಕ್ಷಣೆ! -
ಮಳೆ ನಂತರ ದೆಹಲಿ-ಎನ್ಸಿಆರ್ನಲ್ಲಿ ಶುದ್ಧ ಗಾಳಿ: ನಿಮ್ಮ ಮನೆಯನ್ನು ಫ್ರೆಶ್ ಆಗಿಡಲು ಈ ಸರಳ ಟಿಪ್ಸ್ ಪಾಲಿಸಿ! -
ಯೋಗಿನಿ ಏಕಾದಶಿ: ಮಧುಮೇಹಿಗಳು ಉಪವಾಸ ಮಾಡುವಾಗ ಈ ಆರೋಗ್ಯ ಟಿಪ್ಸ್ ಮರೆಯದಿರಿ! -
ವಿಶ್ವ ಜನಸಂಖ್ಯಾ ದಿನ: ಉಚಿತ ಗರ್ಭನಿರೋಧಕಗಳು ಮತ್ತು ನಿಮ್ಮ ಗೌಪ್ಯತೆ ಬಗ್ಗೆ ತಿಳಿಯಲೇಬೇಕಾದ ಸತ್ಯಗಳು -
ಭಾರತ-ಇಂಗ್ಲೆಂಡ್ ಟಿ20 ಪಂದ್ಯದ ರೋಚಕತೆ ನಡುವೆ ಫಿಟ್ ಆಗಿರಲು ಈ 7 ನಿಮಿಷದ ಟಿಪ್ಸ್ ಮಿಸ್ ಮಾಡ್ಬೇಡಿ! -
ಮಳೆಗಾಲದ ಡೇಟಿಂಗ್: ಬಜೆಟ್ ಸ್ನೇಹಿ ಐಡಿಯಾಗಳು ಮತ್ತು ಸುರಕ್ಷಿತವಾಗಿರಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ಕೋಲ್ಕತ್ತಾದಲ್ಲಿ ಭಾರಿ ಮಳೆ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಟಿಪ್ಸ್ ಮಿಸ್ ಮಾಡಬೇಡಿ! -
ಮಳೆಗಾಲದಲ್ಲಿ ಹೊಟ್ಟೆಯ ಸಮಸ್ಯೆ ಕಾಡ್ತಿದೆಯಾ? ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ -
ಧಮಾಲ್ 4 ರಿಲೀಸ್: ಅಜಯ್ ದೇವಗನ್ ಕಾಮಿಡಿ ಹಬ್ಬಕ್ಕೆ ಫ್ಯಾಮಿಲಿ ಜೊತೆ ರೆಡಿಯಾಗಿ!
ಮಸಾಲ ಪಡ್ಡು ಮಾಡುವ ವಿಧಾನ! ರುಚಿ ರುಚಿ ತಿಂಡಿ ಇದು!
ಬೆಳಗ್ಗೆ ತಿಂಡಿ ಅಂದ್ರೆ ವಿಶೇಷವಾಗಿ ಏನಾದರು ಸವಿಯಬೇಕು ಅನ್ನೋದು ಎಲ್ಲರ ಬಯಕೆ ಆಗಿರಲಿದೆ. ಅದ್ರಲ್ಲೂ ವಿಶೇಷ ದಿನದಲ್ಲಿ ಅಥವಾ ಶುಭ ದಿನಗಳಲ್ಲಿ ವಿಶೇಷ ರುಚಿಯ ತಿಂಡಿ ಮಾಡಿ ಸವಿಯುವ ಕುರಿತು ನೀವೆಲ್ಲಾ ಆಲೋಚಿಸಿರಬಹುದು. ಹೀಗಾಗಿ ನಾವಿಂದು ಪಡ್ಡು ಮಾಡುವ ಕುರಿತು ತಿಳಿದುಕೊಳ್ಳೋಣ.
ಸಾಮಾನ್ಯ ಪಡ್ಡು ನೀವು ಸಹ ಮಾಡಿ ಸವಿದಿರುತ್ತೀರಿ. ಆದ್ರೆ ನಾವಿಂದು ಮಸಾಲೆ ಭರಿತ ಖಾರ ಖಾರವಾದ ರುಚಿಯ ಪಡ್ಡು ಮಾಡುವ ಕುರಿತು ಹೇಳಲಿದ್ದೇವೆ. ಅದ್ರಲ್ಲೂ ಬೆಳಗ್ಗೆ ತಿಂಡಿಗೆ ಈ ಖಾದ್ಯ ಬಹಳ ವಿಶೇಷ ಎನಿಸಲಿದೆ. ಇನ್ನು ಮಕ್ಕಳಿಗೆ ಈ ಪಡ್ಡು ಅಂದ್ರೆ ಬಹಳ ಇಷ್ಟವಾಗಲಿದೆ. ಪಡ್ಡು ಸವಿಯಲು ಯಾವುದಾದರು ಚಟ್ನಿ ಇದ್ದರೆ ಅದರ ರುಚಿಯೇ ಬೇರೆ.

ಇನ್ನು ಹಬ್ಬದ ಸಮಯದಲ್ಲಿ ಇದು ಎಲ್ಲರ ಇಷ್ಟದ ಖಾದ್ಯ ಆಗಲಿದೆ. ಹಾಗೆ ಪಿತೃಪಕ್ಷದ ಸಮಯದಲ್ಲಿ ಕೂಡ ಇದನ್ನು ಮಾಡಲಾಗುತ್ತದೆ. ಪೂರ್ವಜರಿಗೆ ಇದು ಇಷ್ಟವಾಗುವ ತಿಂಡಿ ಹೀಗಾಗಿ ಬಹುತೇಕರ ಮನೆಯಲ್ಲಿ ಇದನ್ನು ಮಾಡಲಾಗುತ್ತೆ. ನಾವು ಕೂಡ ಈ ಮಸಾಲ ಪಡ್ಡು ಮಾಡುವುದು ಹೇಗೆ ಅನ್ನೋದನ್ನು ತಿಳಿದುಕೊಳ್ಳೋಣ.
ಮಸಾಲ ಪಡ್ಡು ಮಾಡಲು ಯಾವೆಲ್ಲಾ ವಸ್ತುಗಳು ಬೇಕು? ಮಾಡುವ ವಿಧಾನವೇನು? ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ.
ಮಸಾಲ ಪಡ್ಡು ಮಾಡಲು ಯಾವೆಲ್ಲಾ ವಸ್ತುಗಳು ಬೇಕು?
- ಅಕ್ಕಿ
- ಉದ್ದಿನ ಬೇಳೆ
- ಕಡಲೆ ಬೇಳೆ
- ಮೆಂತ್ಯ
- ಈರುಳ್ಳಿ
- ಕರಿಬೇವು
- ಕೊತ್ತಂಬರಿ
- ಹಸಿ ಮೆಣಸು
- ಸೋಡಾ
- ಉಪ್ಪು
- ಎಣ್ಣೆ
ಮಸಾಲ ಪಡ್ಡು ಮಾಡುವುದು ಹೇಗೆ?
ಮೊದಲು 2 ಕಪ್ ಅಕ್ಕಿ ತೆಗೆದುಕೊಳ್ಳಿ. ಅನ್ನು ಬೌಲ್‌ಗೆ ಹಾಕಿ ಅದಕ್ಕೆ ಅರ್ಧ ಕಪ್ ಉದ್ದಿನ ಬೇಳೆ, ಕಡಲೆ ಬೇಳೆ, ಮೆಂತ್ಯ ಹಾಕಿ ಚೆನ್ನಾಗಿ ತೊಳೆದು ನೀರು ಹಾಕಿ 6 ಗಂಟೆಗಳ ಕಾಲ ನೆನೆಯಲು ಇಡಬೇಕು. 6 ಗಂಟೆಯ ಬಳಿಕ ಎಲ್ಲಾ ಒಟ್ಟಿಗೆ ಹಾಕಿಕೊಂಡಿರುವ ವಸ್ತುವನ್ನು ರುಬ್ಬಿಕೊಳ್ಳಬೇಕು. ತರಿ ತರಿಯಾಗಿ ರುಬ್ಬಿಕೊಳ್ಳಿ, ಇಡ್ಲಿಗೆ ರುಬ್ಬಿದಂತೆ ರುಬ್ಬಿಕೊಳ್ಳಿ.
ಈಗ ಹಿಟ್ಟನ್ನು ಚೆನ್ನಾಗಿ ಮಿಕ್ಸ್ ಮಾಡಿಕೊಂಡು ಮುಚ್ಚಳ ಮುಚ್ಚಿ 2 ಗಂಟೆಗಳ ಕಾಲ ಬಿಡಿ. ಈಗ ಸಣ್ಣ ಈರುಳ್ಳಿ ಹೆಚ್ಚಿಕೊಳ್ಳಿ. ಈಗ ಒಲೆ ಮೇಲೆ ಬಾಣಲೆ ಇಟ್ಟು ಅದಕ್ಕೆ ಹಸಿ ಮೆಣಸು, ಕರಿಬೇವು, ಈರುಳ್ಳಿ ಎಲ್ಲವನ್ನು ಸಣ್ಣದಾಗಿ ಹೆಚ್ಚಿಕೊಂಡು ಇದಕ್ಕೆ ಹಾಕಿ ಫ್ರೈ ಮಾಡಿ ತೆಗೆದಿಟ್ಟುಕೊಳ್ಳಿ.
ಈ ಎಲ್ಲಾ ಪದಾರ್ಥಗಳು ತಣ್ಣಗಾಗಲು ಬಿಡಿ. ಸಂಪೂರ್ಣ ತಣ್ಣಗಾದ ಬಳಿಕ ಈಗ ಹಿಟ್ಟಿಗೆ ಈ ಪದಾರ್ಥಗಳ ಹಾಕಿಕೊಂಡು ಬಳಿಕ ಉಪ್ಪು, ಸಕ್ಕರೆ, ಕೊತ್ತಂಬರಿ ಸೊಪ್ಪು ಹಾಕಿ ಮಿಕ್ಸ್ ಮಾಡಿಕೊಳ್ಳಿ. ನಂತರ ಚಿಟಿಕೆಯಷ್ಟು ಸೋಡಾ ಕೂಡ ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ. ನಂತರ ಪಡ್ಡು ಮಾಡುವ ಕಾವಲಿಯನ್ನು ಒಲೆ ಮೇಲೆ ಇಟ್ಟು ಚೆನ್ನಾಗಿ ಕಾಯಲು ಬಿಡಿ.
ಕಾವಲಿ ಕಾದ ಬಳಿಕ ಮುಕ್ಕಾಲು ಭಾಗದಷ್ಟು ಹಿಟ್ಟು ಹಾಕಿಕೊಳ್ಳಿ ಎರಡೂ ಕಡೆ ಕಾಯಿಸಿಕೊಂಡ ಬಳಿಕ ಪಡ್ಡುಗಳನ್ನು ತೆಗೆದುಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ರುಚಿ ರುಚಿಯ ಮಸಾಲ ಪಡ್ಡು ರೆಡಿಯಾಗಲಿದೆ. ಇದಕ್ಕೊಂದು ಶೇಂಗಾ ಚಟ್ನಿ ಇಲ್ಲವೆ ತೆಂಗಿನಕಾಯಿ ಚಟ್ನಿ ಮಾಡಿದ್ರೆ ರುಚಿ ಅದ್ಭುತವಾಗಿರಲಿದೆ. ಹಾಗೆ ಈ ತಿಂಡಿಯ ರುಚಿ ಒಮ್ಮೆ ಸವಿದರೆ ಎಲ್ಲರು ಇಷ್ಟಪಡೋದು ಖಚಿತ. ಹಾಗೆ ಎಲ್ಲರು ಮತ್ತೆ ಮತ್ತೆ ಸವಿಯಬೇಕು ಎನಿಸುವ ತಿಂಡಿ ಇದು. ನೀವು ಸಹ ಹಬ್ಬದ ಸಮಯದಲ್ಲಿ ಅಥವಾ ಪಿತೃಪಕ್ಷದಂದು ಇದನ್ನು ಮಾಡಿ ನೋಡಿ.



Click it and Unblock the Notifications