Latest Updates
-
ಗುರು ಮನೆಯಲ್ಲಿ ಸೂರ್ಯನ ಅಬ್ಬರ! ವೃಷಭ ಸೇರಿ ಈ ರಾಶಿಗಳಿಗೆ ಶುಭ ಫಲ.. ಯಾರಿಗೆ ಲಾಭ? ಯಾರಿಗೆ ನಷ್ಟ? -
ಯುಗಾದಿ ಯಾವಾಗ ಆಚರಿಸುತ್ತಾರೆ? ಇಲ್ಲಿದೆ ದಿನಾಂಕ, ಶುಭ ಮುಹೂರ್ತ, ಸಮಯದ ಕುರಿತ ಸಂಪೂರ್ಣ ಮಾಹಿತಿ -
10 ರೂಪಾಯಿಯಲ್ಲಿ ಬಾಯಿ ಚಪ್ಪರಿಸಿ ಸವಿಯು ಚಟ್ನಿ ಮಾಡಿ! ಇಲ್ಲಿದೆ ಹೊಸ ಬಗೆಯ ರೆಸಿಪಿ! -
ಈ ರೀತಿ ಟೊಮೆಟೊ ಸೆಟ್ ದೋಸೆ! ಹಿಟ್ಟು ರುಬ್ಬುವ ಅವಶ್ಯಕತೆಯಿಲ್ಲ.. ಬ್ಯಾಚುಲರ್ಗಳಿಗೆ ಬೆಸ್ಟ್, ತೂಕ ಇಳಿಕೆಗೆ ಸೂಪರ್! -
ಸಂಬಂಧಿಕರ ಮಾತುಗಳನ್ನು ನಿರ್ಲಕ್ಷಿಸಬೇಡಿ! ಸ್ನೇಹಿತರಿಂದ ಪೂರ್ಣ ಸಹಕಾರ -
March 16 Horoscope: ಹಣಕಾಸು ವಿಚಾರವಾಗಿ ಎಚ್ಚರದಿಂದ ವ್ಯವಹರಿಸಿ! -
ಯುಗಾದಿ ಹಬ್ಬದ ಸಿಹಿಗೆ ಮಾಡಿ ರವೆ ಉಂಡೆ: ಇಲ್ಲಿದೆ ಸುಲಭದ ವಿಧಾನ -
ಕುಂಭ ರಾಶಿಯಲ್ಲಿ ಅಪರೂಪದ ಮಹಾಲಕ್ಷ್ಮಿ ಯೋಗ: ಈ ರಾಶಿಯವರ ಹಣ, ಸಂಪತ್ತು ವೃದ್ಧಿಗೆ ಶುಭ ಸಮಯ! -
ಬ್ರೇಕ್ಫಾಸ್ಟ್ಗೆ ಮಸಾಲೆ ವಾಂಗೀಬಾತ್ ಮಾಡಿ: ಇಲ್ಲಿದೆ ಸುಲಭದ ವಿಧಾನ -
ಗ್ಯಾಸ್ ಹೆಚ್ಚು ದಿನ ಬಾಳಿಕೆ ಬರಬೇಕಾ? ಈ ಟಿಪ್ಸ್ ಫಾಲೋ ಮಾಡಿ, ಗ್ಯಾಸ್ ಲೀಕ್ ಪತ್ತೆ ಮಾಡೋದು ಸಹ ಸುಲಭ!
ಮನೆಯಲ್ಲಿ 1 ಮಾವಿನ ಹಣ್ಣು ಇದ್ದರೆ ಈ ರೆಸಿಪಿ ಮಾಡಿ: ಇಡ್ಲಿ, ದೋಸೆ ಜೊತೆ ಅದ್ಭುತ ರುಚಿ
ಮಾರುಕಟ್ಟೆಗೆ ತೆರಳುವ ಮೊದಲೇ ನಿಮಗೆ ಮಾವಿನ ಹಣ್ಣಿನ ಸುವಾಸನೆ ಮೂಗಿಗೆ ಹೊಡೆಯುತ್ತೆ. ಈಗ ಮಾವಿನ ಹಣ್ಣಿನ ಸೀಸನ್ ಆರಂಭಗೊಂಡಿದೆ. ಬಹುತೇಕ ಎಲ್ಲಾ ಕಡೆ ಮಾವಿನ ಹಣ್ಣಿನ ಬಹಳ ದೊಡ್ಡ ಮಾರ್ಕೆಟ್ ಸೃಷ್ಟಿಯಾಗಿದೆ. ಆದರಲ್ಲೂ ನೀವು ಯಾವುದೇ ಹಣ್ಣಿನ ಅಂಗಡಿ ನೋಡಿದರೂ ಅಲ್ಲೂ ಮಾವಿನ ಹಣ್ಣು ಇದ್ದೇ ಇರುತ್ತೆ. ನಾಟಿ ಮಾವಿನಿಂದ ಹಿಡಿದು ದುಬಾರಿ ಹಣ್ಣುಗಳು ಬಾಯಲ್ಲಿ ನೀರು ತರಿಸುತ್ತವೆ.
ಹಾಗೆ ಮಾವಿನ ಹಣ್ಣಿನ ಹಲವು ರೀತಿ ಖಾದ್ಯಗಳ ಮಾಡಿ ಸವಿಯುವುದು ನೀವು ಸಹ ತಿಳಿದಿರುತ್ತೀರಿ. ಮಾವಿನ ಹಣ್ಣಿನ ಸಾಂಬಾರ್ ಮಾಡುವುದು ಈಗ ಕಾಮನ್, ಈಗ ಎಲ್ಲರಿಗೂ ಅಚ್ಚು ಮೆಚ್ಚಿನ ಮಾವಿನ ಹುಳಿ ಎನ್ನಬಹುದು. ಹಾಗೆ ಮಾವಿನ ಕೂಟು, ಪಲ್ಯ, ಉಪ್ಪಿನಕಾಯಿ ಹೀಗೆ ಎಲ್ಲಾ ಖಾದ್ಯಗಳ ಜೊತೆಗೆ ನಾವಿಂದು ನಾವಿಂದು ಮಾವಿನ ಹಣ್ಣಿನಿಂದ ಮಾಡುವ ಚಟ್ನಿ ಕುರಿತು ತಿಳಿಯೋಣ.

ನೀವು ಮಾವಿನಕಾಯಿಯಿಂದ ಅದ್ಭುತ ರುಚಿಯ ಚಟ್ನಿ ಮಾಡಿ ಸವಿದಿರಬಹುದು. ಹಾಗೆ ಈ ಚಟ್ನಿ ಎಲ್ಲಾ ತಿಂಡಿಯ ಜೊತೆಗೆ ಹಾಗೆ ಊಟಕ್ಕೂ ಕೂಡ ಇದು ಅದ್ಭುತ ರುಚಿ ನೀಡಲಿದೆ. ಹಾಗಾದ್ರೆ ನಾವಿಂದು ಮಾವಿನ ಹಣ್ಣಿನಿಂದ ಮಾಡುವ ಚಟ್ನಿಯ ಕುರಿತಾಗಿ ತಿಳಿದುಕೊಳ್ಳೋಣ. ಈ ಮಾವಿನ ಹಣ್ಣಿನ ಚಟ್ನಿಯು ಅದ್ಭುತ ರುಚಿ ನೀಡಲಿದೆ.
ಹಾಗಾದ್ರೆ ಈ ಮಾವಿನ ಹಣ್ಣಿನ ಚಟ್ನಿ ಮಾಡುವುದು ಹೇಗೆ? ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?, ಮಾಡಲು ಎಷ್ಟು ಸಮಯ ಬೇಕಾಗುತ್ತದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಮಾವಿನ ಹಣ್ಣಿನ ಚಟ್ನಿ ಮಾಡಲು ಯಾವೆಲ್ಲಾ ವಸ್ತುಗಳು ಬೇಕು?
- ಮಾವಿನ ಹಣ್ಣು
- ತೆಂಗಿನಕಾಯಿ
- ಹಸಿರು ಮೆಣಸು
- ಬೆಳ್ಳುಳ್ಳಿ
- ಅರಶಿಣ ಪುಡಿ
- ಕೊತ್ತಂಬರಿ
- ಶುಂಠಿ
- ಜೀರಿಗೆ
- ಉಪ್ಪು
- ಎಣ್ಣೆ
- ಸಾಸಿವೆ
- ಕೆಂಪು ಮೆಣಸು
- ಕರಿಬೇವು
ಮಾವಿನ ಹಣ್ಣಿನ ಚಟ್ನಿ ಮಾಡುವ ವಿಧಾನವೇನು?
ಮಾವಿನ ಹಣ್ಣನ್ನು ಚೆನ್ನಾಗಿ ತೊಳೆದು ಸಿಪ್ಪೆ ತೆಗೆದು ಬೇಡವಾದ ಅಂಶವನ್ನು ತೆಗೆದು ಕತ್ತರಿಸಿಕೊಂಡು ಇಟ್ಟುಕೊಳ್ಳಿ. ಒಂದು ಮಿಕ್ಸಿ ಜಾರ್ ತೆಗೆದುಕೊಂಡು ಅದಕ್ಕೆ ಮಾವಿನ ಹಣ್ಣು, ತೆಂಗಿನಕಾಯಿ, ಈರುಳ್ಳಿ, ಹಸಿ ಮೆಣಸು, ಬೆಳ್ಳುಳ್ಳಿ, ಕೊತ್ತಂಬರಿ ಸೊಪ್ಪು, ಜೀರಿಗೆ ಮತ್ತು ಉಪ್ಪು ಸೇರಿಸಿಕೊಂಡು ತರಿ ತರಿಯಾದ ಹಾಗೆ ಒರಟಾದ ಪೇಸ್ಟ್ ಮಾಡಿಕೊಳ್ಳಿ. ನೀರು ಹಾಕಿಕೊಳ್ಳದೆ ರುಬ್ಬಿಕೊಳ್ಳಬೇಕು.
ನಂತರ ಇದನ್ನು ಒಂದು ಬೌಲ್ಗೆ ಹಾಕಿಟ್ಟುಕೊಳ್ಳಿ. ಈಗ ಈ ಚಟ್ನಿಗೆ ಒಂದು ಒಗ್ಗರಣೆ ಮಾಡಿಕೊಳ್ಳಿ. ಒಲೆ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿ ಬಳಿಕ ಸಾಸಿವೆ, ಜೀರಿಗೆ, ಕರಿಬೇವು, ಉದ್ದಿನ ಬೇಳೆ, ಶುಂಠಿ ಹಾಕಿ ಒಗ್ಗರಣೆ ಮಾಡಿಕೊಳ್ಳಿ. ನಂತರ ಇದನ್ನು ಮಾವಿನ ಹಣ್ಣಿನ ಚಟ್ನಿಯೊಂದಿಗೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಇಷ್ಟಾದರೆ ನಿಮ್ಮ ಮುಂದೆ ಸವಿಯಲು ಮಾವಿನ ಹಣ್ಣಿನ ಚಟ್ನಿ ಸಿದ್ದವಾಗುತ್ತದೆ. ಇದನ್ನು ನೀವು ಬಹಳ ಸುಲಭವಾಗಿ ಎಲ್ಲಾ ಖಾದ್ಯದೊಂದಿಗೆ ಸವಿಯಬಹುದು.
ಅದರಲ್ಲೂ ಚಪಾತಿ, ಇಡ್ಲಿ, ದೋಸೆ, ಅನ್ನದೊಂದಿಗೂ ಕೂಡ ಸವಿಯಲು ಇದು ಬಹಳ ರುಚಿ ನೀಡಲಿದೆ. ನೀವು ಸಹ ಮನೆಯಲ್ಲಿ ಈ ಮಾವಿನ ಸೀಸನ್ನಲ್ಲಿ ಸವಿದು ನೋಡಿ. ಇದು ನಿಮಗೂ ಸಹ ರುಚಿ ನೀಡುವುದಲ್ಲದೆ ಬಹಳ ಇಷ್ಟವಾಗುವುದರಲ್ಲಿ ಅನುಮಾನವಿಲ್ಲ. ಹಾಗೆ ಇದನ್ನು ಮಾಡಲ ಬಹಳ ಸಮಯವೂ ಬೇಕಾಗಿಲ್ಲ. ನೀವು ಕೂಡ ಸುಲಭವಾಗಿ ಮಾಡಬಹುದು. ಮಾವಿನ ಸೀಸನ್ ಮುಗಿಯುವ ಮುನ್ನ ಈ ಚಟ್ನಿ ಮಾಡಿ ಸವಿದು ನೋಡಿ.



Click it and Unblock the Notifications