Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ಈ ಸಂಕ್ರಾಂತಿಗೆ ಕೇರಳ ಶೈಲಿಯ ಖಾರ ಪೊಂಗಲ್ ಮಾಡಿ! ಹಬ್ಬದ ಸಂಭ್ರಮ ಡಬಲ್
ಸಂಕ್ರಾಂತಿ ಹತ್ತಿರವಾಗಿದೆ. ದೇಶದಾದ್ಯಂತ ಸಂಕ್ರಾಂತಿಯನ್ನು ಆಚರಿಸಲಾಗುತ್ತದೆ. ಅದ್ರಲ್ಲೂ ಒಂದೊಂದು ಭಾಗದಲ್ಲಿ ಒಂದೊಂದು ಹೆಸರಿನಿಂದ ಸಂಕ್ರಾಂತಿ ಆಚರಣೆ ನೋಡಬಹುದು. ಸಂಕ್ರಾಂತಿ ಸಿಹಿ ಮತ್ತು ಖಾರ ಎರಡನ್ನು ಸಮನಾಗಿ ಸವಿಯುವ ಹಬ್ಬ ಎನ್ನಬಹುದು. ತಮಿಳುನಾಡಿನಲ್ಲಿ ಪೊಂಗಲ್ ಆಗಿ ವಿಶೇಷವಾಗಿ ಆಚರಿಸೋದು ಸಹ ಇದೆ. ಆದ್ರೆ ಎಲ್ಲಾ ಭಾಗದಲ್ಲೂ ಇದೇ ರೀತಿ ಆಚರಿಸುವುದಿಲ್ಲ.
ಹಾಗೆ ಸಂಕ್ರಾಂತಿಯಲ್ಲಿ ಪೊಂಗಲ್ ಮಾಡಿ ಸವಿಯೋದು ಎಲ್ಲರ ಮನೆಯ ಕಾಮನ್ ವಿಚಾರ. ಹಲವರು ಸಿಹಿ ಪೊಂಗಲ್ ಹಾಗೆ ಖಾರ ಪೊಂಗಲ್ ಮಾಡಿ ಸವಿಯುತ್ತಾರೆ. ಹಾಗೆ ತಮಿಳುನಾಡಿನ ಶೈಲಿಯ ಪೊಂಗಲ್ ನೀವು ಸಹ ಮಾಡಿ ಸವಿದಿರುತ್ತೀರಿ. ಆದ್ರೆ ನಾವಿಂದು ಕೇರಳ ಶೈಲಿಯ ಖಾರ ಪೊಂಗಲ್ ಮಾಡಿ ಸವಿಯುವ ಕುರಿತಾಗಿ ತಿಳಿದುಕೊಳ್ಳೋಣ.

ಕೇರಳ ವಿಶೇಷ ಖಾದ್ಯಗಳು ಹಾಗೆ ಸಂಪ್ರದಾಯಕ್ಕೆ ಹೆಸರುವಾಸಿ. ಕೇರಳದಲ್ಲಿ ಮಾಡುವ ಖಾರ ಪೊಂಗಲ್ ಎಲ್ಲರಿಗೂ ಇಷ್ಟವಾಗುತ್ತೆ. ಹಾಗೆ ಕೇರಳ ಬಗೆಯ ಬಗೆಯ ತಿನಿಸುಗಳಿಗೆ ಫೇಮಸ್. ನಾವಿಂದು ಸಂಕ್ರಾಂತಿ ಹಬ್ಬದಲ್ಲಿ ಕೇರಳ ಮಂದಿ ಮಾಡುವ ವಿಶೇಷ ರುಚಿಯ ಖಾರ ಪೊಂಗಲ್ ಮಾಡುವ ಕುರಿತಾಗಿ ತಿಳಿದುಕೊಳ್ಳೋಣ. ಖಾರ ಪೊಂಗಲ್ ಮಾಡುವುದು ಹೇಗೆ? ಮಾಡಲು ಯಾವೆಲ್ಲಾ ವಸ್ತುಗಳು ಬೇಕು? ಮಾಡುವ ವಿಧಾನವೇನು? ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ತಿಳಿದುಕೊಳ್ಳೋಣ.
ಕೇರಳ ಶೈಲಿ ಖಾರ ಪೊಂಗಲ್ ಮಾಡಲು ಬೇಕಾಗುವ ವಸ್ತುಗಳು
- ಅಕ್ಕಿ
- ಬೇಳೆ
- ತುಪ್ಪ
- ಶುಂಠಿ
- ಅರಶಿಣ
- ಜೀರಿಗೆ
- ಕಾಳು ಮೆಣಸು
- ಬೆಳ್ಳುಳ್ಳಿ
- ಗೋಡಂಬಿ
- ಒಣ ಮೆಣಸು
- ಕರಿಬೇವು
- ಕೊತ್ತಂಬರಿ ಸೊಪ್ಪು
- ಉಪ್ಪು
- ಎಣ್ಣೆ
- ತೆಂಗಿನಕಾಯಿ ಚೂರು
ಕೇರಳ ಶೈಲಿ ಖಾರ ಪೊಂಗಲ್ ಮಾಡುವುದು ಹೇಗೆ?
ಮೊದಲು ಅಕ್ಕಿ ಮತ್ತು ಬೇಳೆಯನ್ನು ನೀರಿನಲ್ಲಿ ಹಾಕಿ ತೊಳೆದುಕೊಳ್ಳಬೇಕು. ನಂತರ ನೀರಿನಿಂದ ತೆಗೆದು ಒಂದು ಕುಕ್ಕರ್ಗೆ ಹಾಕಿಕೊಳ್ಳಿ. ಹಾಗೆ ಕುಕ್ಕರ್ಗೆ ನೀರು ಹಾಕಬೇಕು. ಮುರು ಪಟ್ಟು ನೀರು ಹಾಕಿ. 1 ಕಪ್ ಅಕ್ಕಿ ಬೇಳೆಗೆ ಮೂರು ಕಪ್ ನೀರಿನ ಅಳತೆ ಮಾಡಿಕೊಳ್ಳಿ. ನಂತರ ಮುಚ್ಚಳ ಮುಚ್ಚಿ 1 ಅಥವಾ 2 ಸೀಟಿ ಹೊಡೆಸಿಕೊಳ್ಳಿ.
ನಂತರ ಮುಚ್ಚಳ ತೆಗೆದು ಒಮ್ಮೆ ಮಿಕ್ಸ್ ಮಾಡಿಕೊಳ್ಳಿ. ಈಗ ಒಲೆ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿ ಬಿಸಿ ಮಾಡಿ. ನಂತರ ಜೀರಿಗೆ, ಕಾಳು ಮೆಣಸು, ಗೋಡಂಬಿ ಹಾಕಿ ಬಿಸಿ ಮಾಡಿ. ಅನಂತರ ಹಸಿ ಮೆಣಸು, ಶುಂಠಿ, ಬೆಳ್ಳುಳ್ಳಿ, ಕರಿಬೇವು ಹಾಕಿ ನಂತರ ಅರಶಿಣ, ತೆಂಗಿನಕಾಯಿ ಚೂರುಗಳು ಹಾಕಿಕೊಂಡು ಫ್ರೈ ಮಾಡಿ.
ಈಗ ಈ ಒಗ್ಗರಣೆಯನ್ನು ಪೊಂಗಲ್ಗೆ ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ. ಉಪ್ಪು ರುಚಿ ನೋಡಿಕೊಂಡು ಕೊನೆಯಲ್ಲಿ ಮತ್ತೆ 1 ಸ್ಪೂನ್ ತುಪ್ಪ ಹಾಕಿಕೊಂಡು ಮಿಶ್ರಣ ಮಾಡಿಕೊಂಡರೆ ನಿಮ್ಮ ಮುಂದೆ ರುಚಿ ರುಚಿಯಾದ ಖಾರ ಪೊಂಗಲ್ ಸಿದ್ದವಾಗುತ್ತೆ. ನೀವು ಸಹ ಮನೆಯಲ್ಲಿ ಇದನ್ನು ಮಾಡಿ ಸವಿದು ನೋಡಿ. ನೀವು ಇದೇ ವಿಧಾನದಲ್ಲಿ ಸಿಹಿ ಪೊಂಗಲ್ ಸಹ ಮಾಡಬಹುದು. ಅದಕ್ಕೆ ಮೆಣಸಿನಕಾಯಿ ಹಾಗೆ ಶುಂಠಿ ಬದಲಾಗಿ ಬೆಲ್ಲ ಬಳಸಲಾಗುತ್ತದೆ. ಆದ್ರೆ ಖಾರ ಪೊಂಗಲ್ ಬೆಳಗಿನ ತಿಂಡಿಯ ಸಮಯದಕ್ಕೆ ಬಹಳ ರುಚಿ ನೀಡಲಿದೆ.
ಈ ರೀತಿಯ ಪೊಂಗಲ್ ಅನ್ನು ಕೇರಳದಲ್ಲಿ ಹೆಚ್ಚಾಗಿ ನೋಡಬಹುದು. ಇದರ ರುಚಿಗೆ ಮನೆ ಮಂದಿಯಲ್ಲ ಮನಸೋಲೋದು ಖಚಿತ. ನೀವು ಕೂಡ ಈ ಸಂಕ್ರಾಂತಿಯಲ್ಲಿ ಈ ಪೊಂಗಲ್ ಮಾಡಿ ಸವಿದು ನೋಡಿ.



Click it and Unblock the Notifications
