Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ಬಿಸಿ ಬಿಸಿಯ ಬೋಂಡಾ ಸೂಪ್ ಮಾಡೋದು ಹೇಗೆ ಗೊತ್ತಾ? ಇಲ್ಲಿದೆ ರೆಸಿಪಿ
ನೀವು ಸ್ನ್ಯಾಕ್ಸ್ ಏನಾದರು ಸವಿಯುವ ಉದ್ದೇಶದಿಂದ ಅಥವಾ ಯಾವುದಾದರು ಕೆಲಸದ ಮೇಲೆ ನಗರಕ್ಕೆ ಬಂದರೆ ಹೋಟೆಲ್ಗೆ ತೆರಳುತ್ತೀರಿ. ಮಧ್ಯಾಹ್ನದ ಸಮಯ ಹಾಗೆ ಸಂಜೆಯ ಸಮಯದಲ್ಲಿ ಹೋಟೆಲ್ಗೆ ಹೋದರೆ ಬಹುತೇಕರು ಸ್ನ್ಯಾಕ್ಸ್ ಆಗಿ ಬೋಂಡಾ ಸೂಪ್ ಸವಿಯಲು ಇಷ್ಟಪಡುತ್ತಾರೆ. ಅದ್ಭುತ ರುಚಿಯಲ್ಲಿ ಬೋಂಡಾ ಸವಿದು ಸೂಪ್ ಕುಡಿಯಲು ಇಷ್ಟಪಡುತ್ತಾರೆ.
ಎಲ್ಲರಿಗೂ ಇದರ ರುಚಿ ಇಷ್ಟವಾಗುತ್ತದೆ. ಹೀಗಾಗಿ ಕೆಲವರು ಮನೆಯಲ್ಲಿ ಟಿಫ್ಗೆ ಅಥವಾ ಸಂಜೆ ಸಮಯದಲ್ಲಿ ಈ ಖಾದ್ಯ ಸವಿಯಲು ಮುಂದಾಗುತ್ತಾರೆ. ನಾವಿಂದು ಹೋಟೆಲ್ ರುಚಿಯ ಈ ಬೋಂಡಾ ಸೂಪ್ ಮನೆಯಲ್ಲೇ ಮಾಡಿ ಮನೆ ಮಂದಿಯಲ್ಲ ಕುಳಿತು ಸವಿಯುವುದು ಹೇಗೆ ಎಂಬುದನ್ನು ತಿಳಿದುಕೊಳ್ಳೋಣ.

ಅದರಲ್ಲೂ ಬೋಂಡಾ ಸೂಪ್ ಸವಿಯುವುದು ಅಂದ್ರೆ ಮಕ್ಕಳಿಗೂ ಕೂಡ ಬಹಳ ಇಷ್ಟ. ಹೀಗಿರುವಾಗ ಹೋಟೆಲ್ಗೆ ಹೋಗದೆಯೇ ಮನೆಯಲ್ಲೇ ಈ ಬೋಂಡಾ ಸೂಪ್ ಮಾಡಿ ಸವಿಯಿರಿ, ಹಾಗಾದ್ರೆ ನಾವಿಂದು ಹೋಟೆಲ್ ರುಚಿಯ ಬೋಂಡಾ ಸೂಪ್ ಮನೆಯಲ್ಲೇ ಮಾಡುವ ವಿಧಾನ ತಿಳಿದುಕೊಳ್ಳೋಣ. ಬೋಂಡಾ ಸೂಪ್ ಮಾಡುವ ವಿಧಾನವೇನು? ಬೋಂಡಾ ಸೂಪ್ ಮಾಡಲು ಯಾವೆಲ್ಲಾ ವಸ್ತುಗಳು ಬೇಕು? ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ಇಲ್ಲಿ ತಿಳಿಯೋಣ.
ಬೋಂಡಾ ಸೂಪ್ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?
- ಉದ್ದಿನ ಬೇಳೆ
- ಹಸಿ ಮೆಣಸು
- ಕಾಳು ಮೆಣಸು
- ಶುಂಠಿ
- ತೆಂಗಿನಕಾಯಿ
- ಸೋಡಾ
- ಉಪ್ಪು
- ಎಣ್ಣೆ
- ಕರಿಬೇವು
- ಟೊಮೆಟೋ
- ಈರುಳ್ಳಿ
- ಹೆಸರು ಬೇಳೆ
- ಅರಶಿಣದ ಪುಡಿ
- ಜೀರಿಗೆ
- ಇಂಗು
- ಕೊತ್ತಂಬರಿ ಸೊಪ್ಪು
- ನಿಂಬೆ ಹಣ್ಣಿನ ರಸ
- ಬೆಳ್ಳುಳ್ಳಿ
ಬೋಂಡಾ ಸೂಪ್ ಮಾಡುವ ವಿಧಾನ
ಮೊದಲು ಉದ್ದಿನ ಬೇಳೆ ತೊಳೆದು ನೆನೆಸಿಡಬೇಕು. 4 ಗಂಟೆಯಾದರು ನೆನೆಸಿಡಬೇಕು. ಮೊದಲು ಸೂಪ್ ಮಾಡುವುದು ಹೇಗೆ ನೋಡೋಣ. ಒಂದು ಬೌಲ್ನಲ್ಲಿ ಹೆಸರು ಬೇಳೆ ತೊಳೆದು ನೆನೆಸಿಡಿ. ನಂತರ ಒಂದು ಕುಕ್ಕರ್ಗೆ ಹೆಸರು ಬೇಳೆ ಹಾಕಿ ಅದು ಮುಚ್ಚುವಷ್ಟು ನೀರು ಹಾಕಿ, ಅರಶಿಣ, ಎಣ್ಣೆ ಹಾಕಿ ಮುಚ್ಚಳ ಮುಚ್ಚಿ 3 ಸೀಟಿ ಹೊಡೆಸಿಕೊಳ್ಳಬೇಕು.
ಇನ್ನೊಂದು ಕಡೆ ನೆನೆಸಿಟ್ಟಿರುವ ಉದ್ದಿನ ವೇಳೆಯನ್ನು ನುಣ್ಣಗೆ ರುಬ್ಬಿಕೊಳ್ಳಬೇಕು. ಮಿಕ್ಸಿಗೆ ಹಾಕಿ ಸ್ವಲ್ಪವೇ ನೀರು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ಈ ಹಿಟ್ಟನ್ನು ಒಂದು ಬೌಲ್ಗೆ ಹಾಕಿ ಇದಕ್ಕೆ ಸಣ್ಣದಾಗಿ ಹೆಚ್ಚಿರುವ ತೆಂಗಿನಕಾಯಿ, ಶುಂಠಿ, ಹಸಿ ಮೆಣಸು, ಚಿಟಿಕೆ ಸೋಡಾ, ಉಪ್ಪು ಸೇರಿಸಿಕೊಂಡು ಕಲಸಿಕೊಳ್ಳಬೇಕು. ನಂತರ ಇದನ್ನು ಬದಿಗಿಟ್ಟುಕೊಳ್ಳಿ.
ಈಗ ಕುಕ್ಕರ್ನಲ್ಲಿದ್ದ ಹೆಸರು ಬೇಳೆಯ ತೆಗೆದು ಸ್ವಲ್ಪ ಪುಡಿ ಮಾಡಿ. ನಂತರ ಒಲೆ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿಕೊಂಡು ಜೀರಿಗೆ, ಇಂಗು, ಕಾಳು ಮೆಣಸಿನ ಪುಡಿ, ಹಸಿ ಮೆಣಸು, ಬೆಳ್ಳುಳ್ಳಿ, ಶುಂಠಿ, ಕರಿಬೇವು ಹಾಕಿ ಒಂದು ನಿಮಿಷ ಚೆನ್ನಾಗಿ ಫ್ರೈ ಮಾಡಿ. ಈಗ ಟೊಮೆಟೋ ಹಾಕಿಕೊಂಡು 1 ನಿಮಿಷ ಫ್ರೈ ಮಾಡಿ. ಹಾಗೆ ಇದಕ್ಕೆ ಅರಶಿಣ ಪುಡಿ ಹಾಗೂ ಕುಕ್ಕರ್ನಲ್ಲಿ ಬೇಯಿಸಿದ ಹೆಸರು ಬೇಳೆ ಇದಕ್ಕೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ, ನೀರು ಬೇಕಿದ್ದರೆ ಹಾಕಿ ಮಿಶ್ರಣ ಮಾಡಿ. ಕುದಿಯಲು ಬಿಡಿ. ಇದು 5 ನಿಮಿಷ ಕುದಿಯಬೇಕು.
ಇಗ ಬೋಂಡಾ ಮಾಡಿಕೊಳ್ಳಿ. ಒಂದು ಬಾಣಲೆ ಒಲೆ ಮೇಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿಕೊಂಡು ಕಾಯಲು ಬಿಡಿ. ಈಗ ರೆಡಿ ಮಾಡಿಕೊಂಡಿರುವ ಹಿಟ್ಟನ್ನು ತೆಗೆದುಕೊಂಡು ಯಾವ ಗಾತ್ರಕ್ಕೆ ಬೇಕೋ ಆ ಗಾತ್ರಕ್ಕೆ ಉಂಡೆ ಮಾಡಿ ನಿಧಾನಕ್ಕೆ ಎಣ್ಣೆಯಲ್ಲಿ ಬಿಡಿ. ಹಿಟ್ಟು ಕೈಗೆ ಹಿಡಿಯುತ್ತಿದ್ದರೆ ನೀರಿಗೆ ಅದ್ದಿಕೊಳ್ಳಿ. ಈ ವಿಧಾನದಲ್ಲಿ ಬೋಂಡಾ ಕರಿದುಕೊಳ್ಳಿ.
ನಂತರ ಒಂದು ಬೌಲ್ಗೆ ಬೋಂಡಾ ಹಾಕಿ ಅದರ ಮೇಲೆ ಬಿಸಿ ಬಿಸಿ ಸೂಪ್ ಹಾಕಿಕೊಂಡು ಸವಿಯಲು ನೀಡಿದರೆ ನಿಮ್ಮ ಮುಂದೆ ಬೋಂಡಾ ಸೂಪ್ ರೆಡಿಯಾಗುತ್ತದೆ, ನೀವು ಕೂಡ ಮನೆಯಲ್ಲಿ ಇದನ್ನು ಮಾಡಿ ನೋಡಿ.



Click it and Unblock the Notifications
