Latest Updates
-
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ
ಹುರುಳಿಕಾಳಿನ ಚಟ್ನಿ: ಸಿಂಪಲ್ ರೆಸಿಪಿ, ಆದರೆ ರುಚಿ ಸಿಂಪಲ್ ಅಲ್ವೇ ಅಲ್ಲ
ನೀವು ಹುರುಳಿಕಾಳಿನ ಚಟ್ನಿ ಮಾಡಿದ್ದೀರಾ, ಇಲ್ಲಾಂದ್ರೆ ಟ್ರೈ ಮಾಡಿ ನೋಡಿ, ಸೂಪರ್ ರುಚಿಯಾಗಿರುತ್ತೆ, ಅಲ್ಲದೆ ಈ ಚಟ್ನಿಯಿಂದ ಆರೋಗ್ಯಕ್ಕೂ ಅಷ್ಟೊಂದು ಪ್ರಯೋಜನಗಳಿವೆ. ಈ ಚಟ್ನಿ ರೆಸಿಪಿ ಸಿಂಪಲ್ ಆದರೆ ಟೇಸ್ಟ್ ಅಲ್ಲ ಬನ್ನಿ ಇದನ್ನು ಮಾಡುವುದು ಹೇಗೆ ಎಂದು ನೋಡೋಣ:

ಬೇಕಾಗುವ ಸಾಮಗ್ರಿ
ಅರ್ಧ ಕಪ್ ತೆಂಗಿನ ತುರಿ
1/4ಕಪ್ ಹುರುಳಿಕಾಳು
(ಹುರುಳಿಕಾಳನ್ನು ನೀವು ತೊಳೆದು ಒಣಗಿಸಿ ಇಟ್ಟಿರಿ)
ಸ್ವಲ್ಪ ಹುಣಸೆ ಹಣ್ಣು (ಹುಣಸೆಹಣ್ಣಿನ ಬೀಜದ ಗಾತ್ರದಷ್ಟು ಎರಡು ಸಲ ಹಾಕಿದರೆ
ಸಾಕಾಗುತ್ತೆ)
3-4 ಹಸಿ ಮೆಣಸು
1 ಈರುಳ್ಳಿ
ರುಚಿಗೆ ತಕ್ಕ ಉಪ್ಪು
ಒಗ್ಗರಣೆಗೆ
1 ಚಮಚ ಎಣ್ಣೆ
ಸ್ವಲ್ಪ ಸಾಸಿವೆ
ಸ್ವಲ್ಪ ಕರಿಬೇವು
ಮಾಡುವ ವಿಧಾನ
ನೀವು ಹುರುಳಿಕಾಳನ್ನು ಒಂದು ತವಾದಲ್ಲಿ ಹಾಕಿ ರೋಸ್ಟ್ ಮಾಡಿ,ಹುರುಳಿ ಕಾಳು
ಹುರಿದಾಗ ಒಳ್ಳೆಯ ಸುವಾಸನೆ ಬರುತ್ತದೆ ಅಲ್ಲಿಯವರೆಗೆ ರೋಸ್ಟ್ ಮಾಡಿ.
ಈಗ ಅದನ್ನು ಮಿಕ್ಸಿ ಜಾರ್ಗೆ ಸೇರಿಸಿ
ತೆಂಗಿನ ತುರಿ, ಹುಣಸೆಹಣ್ಣು, ಉಪ್ಪು, ಮೆಣಸು ಹಾಕಿ ರುಬ್ಬಿ
ನಂತರ ಒಗ್ಗರಣೆ ಹಾಕಿದರೆ ಹುರುಳಿಕಾಳಿನ ಚಟ್ನಿ ರೆಡಿ.
ಇತರ ಸಲಹೆ
ಹುರುಳಿಕಾಳಿನ ಚಟ್ನಿಗೆ ನೀವು ಹಸಿ ಮೆಣಸು ಬದಲಿಗೆ ಒಣ ಮೆಣಸು ಹಾಕಬಹುದು.
ಈ ಚಟ್ನಿ ಗಂಜಿ ಅಥವಾ ಅನ್ನಕ್ಕೆ ತರಿತರಿ ರುಬ್ಬಿದರೆ ಚೆನ್ನಾಗಿರುತ್ತದೆ.
ದೋಸೆ, ಇಡ್ಲಿಗೆ ನುಣ್ಣನೆ ರುಬ್ಬಿ
ಹುರುಳಿಕಾಳಿನ ಪ್ರಯೋಜನಗಳು
ಹುರುಳಿಕಾಳಿಗೆ ಮಧುಮೇಹ ನಿಯಂತ್ರಿಸುವ ಶಕ್ತಿ ಇದೆ
ಇದು ಕಾರ್ಬೋಹೈಡ್ರೇಟ್ ನಿಧಾನವಾಗಿ ಜೀರ್ಣವಾಗುವಂತೆ ಮಾಡುತ್ತದೆ, ಇದರಿಂದ
ಮಧುಮೇಹಿಗಳಿಗೆ ಅತ್ಯುತ್ತಮವಾದ ಆಹಾರವಾಗಿದೆ.
ಇದರಲ್ಲಿ Antioxidants ಅಧಿಕವಿದೆ: ಇದರಿಂದ ಶರೀರದಲ್ಲಿ ರೋಗ ನಿರೋಧಕ ಶಕ್ತಿ
ಹೆಚ್ಚಿಸಲು ತುಂಬಾನೇ ಸಹಕಾರಿ.
ಮೂತ್ರ ಚೆನ್ನಾಗಿ ಹೋಗಲು ಸಹಾಯ ಮಾಡುತ್ತದೆ: ವಾರಕ್ಕೆ ಎರಡು ಬಾರಿಯಾದರೂ
ಹುರುಳಿಕಾಳು ಸೇವಿಸಬೇಕು, ಇದು ಮೂತ್ರದ ಮೂಲಕ ಕಶ್ಮಲವನ್ನು ಹೊರ ಹಾಕಲು ಸಹಾಯ
ಮಾಡುತ್ತದೆ. ಇದರಿಂದ ಕಿಡ್ನಿ ಸ್ಟೋನ್ ಉಂಟಾಗುವುದನ್ನು ತಡೆಗಟ್ಟಲು ಸಹಕಾರಿ.
ಅಸ್ತಮಾ ರೋಗಿಗಳಿಗೆ ಒಳ್ಳೆಯದು: ಹುರುಳಿಕಾಳು ಅಸ್ತಮಾ ರೋಗಿಗಳಿಗೆ ತುಂಬಾನೇ
ಪ್ರಯೋಜನಕಾರಿ, ಇದು ಉಸಿರಟದ ತೊಂದರೆ ಉಂಟಾಗದಂತೆ ತಡೆಗಟ್ಟಲು ಸಹಾಯ
ಮಾಡುತ್ತದೆ.



Click it and Unblock the Notifications
