Latest Updates
-
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು
ಹೆಸರು ಬೇಳೆ ಪಡ್ಡು ಮಾಡೋದು ಎಷ್ಟು ಸುಲಭ ಗೊತ್ತಾ? ಹೆಲ್ದಿ & ಸಿಕ್ಕಾಪಟ್ಟೆ ಟೇಸ್ಟಿ
ಬಾಯಲ್ಲಿ ನೀರೂರಿಸುವ ಗರಿಗರಿಯಾದ ಹೆಸರು ಬೇಳೆ ಪಡ್ಡು. ಇಡ್ಲಿ, ದೋಸೆ ಹಿಟ್ಟಿನಿಂದ ಮಾಡುವ ಪಡ್ಡುವಿನ ಬದಲು, ಹೆಸರು ಬೇಳೆಯಿಂದ ರುಚಿಕರವಾದ ಪಡ್ಡು ತಯಾರಿಸಬಹುದು. ಹೌದು, ಹೆಸರು ಬೇಳೆಯನ್ನು ಬಳಸಿ ರುಚಿಕರವಾದ ಪಡ್ಡು (Moong Dal Paddu) ತಯಾರಿಸಬಹುದು. ಇದು ಆರೋಗ್ಯಕ್ಕೂ ಒಳ್ಳೆಯದು. ಸಿಕ್ಕಾಪಟ್ಟೆ ಟೇಸ್ಟಿ ಆಗಿರುತ್ತದೆ. ಈ ಹೆಸರು ಬೇಳೆ ಪಡ್ಡು ಮಾಡೋದು ಎಷ್ಟು ಸುಲಭ ಗೊತ್ತಾ? ಈ ಸುಲಭ ಟ್ರಿಕ್ಸ್ ಬಳಸಿ ಮಾಡಿದ್ರೆ, ಹೆಸರು ಬೇಳೆ ಪಡ್ಡು ಸೂಪರ್. ಇನ್ನೇಕೆ ತಡ, ಬನ್ನಿ ಹೆಸರು ಬೇಳೆ ಪಡ್ಡು ಮಾಡುವ ವಿಧಾನವನ್ನು (Moong Dal Paddu Recipe) ತಿಳಿಯೋಣ.
ಪಡ್ಡು ಎಂದರೆ ಹಲವರಿಗೆ ಇಷ್ಟ. ಬೆಳಗಿನ ತಿಂಡಿಗೆ ಅಥವಾ ಸಂಜೆ ಸ್ನ್ಯಾಕ್ಸ್ಗೆ ಪಡ್ಡು ಸಾಮನ್ಯ. ಈ ಪಡ್ಡುಗೆ ಕಡಿಮೆ ಎಣ್ಣೆ ಬಳಸಿ ರುಚಿಕರವಾಗಿ ಮಾಡಬಹುದು. ಟೊಮೆಟೊ ಚಟ್ನಿಯೊಂದಿಗೆ ತಿಂದರೆ ಸಖತ್ ಆಗಿರುತ್ತದೆ. ಹೆಸರು ಬೇಳೆಯಿಂದ ಮಾಡಿದ ಪಡ್ಡುಗಳು ಬಹಳ ರುಚಿಯಾಗಿರುತ್ತವೆ ಮತ್ತು ಬೇಗನೆ ತಯಾರಿಸಬಹುದು. ಕೇವಲ ಕೆಲವೇ ನಿಮಿಷಗಳಲ್ಲಿ ಹೆಸರು ಬೇಳೆ ಪಡ್ಡು ಮಾಡಬಹುದು. ಇದು ಹೊರಗಡೆ ಅಥವಾ ಹೋಟೆಲ್‌ಗಿಂತ ರುಚಿಕರ ಮತ್ತು ಆರೋಗ್ಯಕರವಾಗಿರುತ್ತದೆ.

ಹೆಸರು ಬೇಳೆ ಪಡ್ಡು ತಯಾರಿಸಲು ಬೇಕಾಗುವ ಸಾಮಗ್ರಿಗಳು
• ಹೆಸರು ಬೇಳೆ - 1 ಕಪ್
• ಶುಂಠಿ - ಒಂದು ಸಣ್ಣ ತುಂಡು
• ಬಾಂಬೆ ರವೆ - 2 ಚಮಚ
• ಎಣ್ಣೆ - 1 ಚಮಚ
• ಸಾಸಿವೆ - ಅರ್ಧ ಚಮಚ
• ಈರುಳ್ಳಿ - 1
• ಹಸಿ ಮೆಣಸಿನಕಾಯಿ - 2
• ಕ್ಯಾರೆಟ್ - 1
• ಕರಿಬೇವು - ಸ್ವಲ್ಪ
• ಕೊತ್ತಂಬರಿ ಸೊಪ್ಪು - ಸ್ವಲ್ಪ
• ಜೀರಿಗೆ - 1 ಚಮಚ
• ಉಪ್ಪು - ರುಚಿಗೆ ತಕ್ಕಷ್ಟು.

ಹೆಸರು ಬೇಳೆ ಪಡ್ಡು ಮಾಡುವ ವಿಧಾನ
ಮೊದಲಿಗೆ, ಹೆಸರು ಬೇಳೆಯನ್ನು ಒಂದು ಪಾತ್ರೆಯಲ್ಲಿ ಹಾಕಿ ಚೆನ್ನಾಗಿ ತೊಳೆಯಿರಿ. ಅದಕ್ಕೆ ನೀರು ಹಾಕಿ ಸುಮಾರು 2 ಗಂಟೆಗಳ ಕಾಲ ನೆನೆಸಿಡಿ. ನಂತರ ಈರುಳ್ಳಿ, ಹಸಿ ಮೆಣಸಿನಕಾಯಿ, ಕರಿಬೇವು ಮತ್ತು ಕೊತ್ತಂಬರಿ ಸೊಪ್ಪನ್ನು ಸಣ್ಣಗೆ ಕತ್ತರಿಸಿಕೊಳ್ಳಿ. ಕ್ಯಾರೆಟ್ ಅನ್ನು ಸಿಪ್ಪೆ ತೆಗೆದು ತುರಿದುಕೊಳ್ಳಿ. ಈಗ ನೆನೆಸಿದ ಹೆಸರು ಬೇಳೆಯಿಂದ ನೀರನ್ನು ಸಂಪೂರ್ಣವಾಗಿ ತೆಗೆದು ಮಿಕ್ಸರ್ ಜಾರ್‌ಗೆ ಹಾಕಿ. ಅದಕ್ಕೆ ಶುಂಠಿ ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ. ಈ ಮಿಶ್ರಣಕ್ಕೆ ಬಾಂಬೆ ರವೆ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ ಪಕ್ಕಕ್ಕೆ ಇಡಿ.

ಈಗ ಒಂದು ಪಾತ್ರೆಯಲ್ಲಿ ಎಣ್ಣೆ ಬಿಸಿ ಮಾಡಿ, ಸಾಸಿವೆ ಹಾಕಿ. ಸಾಸಿವೆ ಚಟಪಟ ಎಂದ ನಂತರ, ಅದನ್ನು ಹೆಸರು ಬೇಳೆ ಮಿಶ್ರಣಕ್ಕೆ ಸೇರಿಸಿ. ನಂತರ ಈರುಳ್ಳಿ, ಹಸಿಮೆಣಸಿನಕಾಯಿ, ಕರಿಬೇವು, ಕೊತ್ತಂಬರಿ ಸೊಪ್ಪು, ತುರಿದ ಕ್ಯಾರೆಟ್, ಜೀರಿಗೆ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಪಡ್ಡು ಮಾಡುವ ಮಣೆಯನ್ನು ಬಿಸಿ ಮಾಡಿ, ಪ್ರತಿಯೊಂದು ಅಚ್ಚಿನಲ್ಲಿ ಸ್ವಲ್ಪ ಎಣ್ಣೆ ಹಾಕಿ. ಹೆಸರು ಬೇಳೆ ಮಿಶ್ರಣಕ್ಕೆ ಅಡುಗೆ ಸೋಡಾ ಸೇರಿಸಿ ಚೆನ್ನಾಗಿ ಕಲಸಿ. ಬಿಸಿಯಾದ ಅಚ್ಚುಗಳಲ್ಲಿ ಸ್ವಲ್ಪ ಸ್ವಲ್ಪವಾಗಿ ಹಿಟ್ಟನ್ನು ಹಾಕಿ ಮಧ್ಯಮ ಉರಿಯಲ್ಲಿ ಬೇಯಿಸಿ. ಒಂದು ಬದಿಯಲ್ಲಿ ಕೆಂಪಗಾದ ನಂತರ, ಇನ್ನೊಂದು ಬದಿಗೆ ತಿರುಗಿಸಿ ಬೇಯಿಸಿ. ಎರಡೂ ಬದಿಗಳಲ್ಲಿ ಬೆಂದ ನಂತರ ಪಡ್ಡುಗಳನ್ನು ತೆಗೆಯಿರಿ. ಇವುಗಳನ್ನು ಚಟ್ನಿ ಅಥವಾ ಸಾಸ್‌ನೊಂದಿಗೆ ಬಿಸಿ ಬಿಸಿಯಾಗಿ ಸವಿಯಿರಿ.



Click it and Unblock the Notifications
