Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಹಯಗ್ರೀವ ತಿಂಡಿ ಮಾಡೋದು ಹೇಗೆ? ಹಬ್ಬಕ್ಕೆ ಇದೇ ಸ್ಪೆಷಲ್...!
ಹಿಂದೂ ಪುರಾಣಗಳಲ್ಲಿ ಪ್ರತಿಯೊಂದು ಹಬ್ಬಕ್ಕೂ ಅದರದ್ದೇ ಆದ ಪ್ರಾಮುಖ್ಯತೆ, ಪುರಾಣ ಕಥೆ ಇದೆ. ಹಾಗೆ ಆ ಆಚರಣೆಗಳ ಹಿಂದೆ ಕಾರಣಗಳು ಸಹ ಇರುತ್ತವೆ. ಇನ್ನು ಶ್ರಾವಣ ಮಾಸ ಆರಂಭವಾದರೆ ಹಬ್ಬಗಳು ಆರಂಭವಾಗುತ್ತದೆ. ಹಬ್ಬಗಳಲ್ಲಿ ಪೂಜೆ, ದೇವಾಲಯ ಭೇಟಿ ಹೀಗೆ ಹಲವು ಕಾರ್ಯಗಳು ನಡೆಯುತ್ತವೆ. ಇನ್ನು ಹಬ್ಬ ಅಂದ್ರೆ ಅಲ್ಲಿ ಊಟ, ತಿಂಡಿಯೂ ವಿಶೇಷವಾಗಿರುತ್ತೆ.
ಇನ್ನು ಹಬ್ಬದಲ್ಲಿ ಪೂಜೆಗೆ ನೈವೇದ್ಯ ಮಾಡಲು ಬಳಸುವ ಹಯಗ್ರೀವ ನೋಡಿರುತ್ತೀರಿ, ಅದರ ರುಚಿ ಅಂದರೆ ಎಲ್ಲರಿಗೂ ಇಷ್ಟವಾಗುತ್ತೆ. ಹಯಗ್ರೀವ ಮಾಡಿ ಹಬ್ಬದ ಊಟದಲ್ಲಿ ಸವಿಯೋದು ಸಹ ಇದೆ. ಆದ್ರೆ ಹಲವು ದೇವಾಲಯದಲ್ಲಿ ಈ ಹಯಗ್ರೀವ ಪ್ರಸಾದವಾಗಿ ನೀಡಲಾಗುತ್ತದೆ. ಇನ್ನು ವಿಷ್ಣುವಿನ ಕುದುರೆಯೊಂದರ ಹೆಸರು ಸಹ ಹಯಗ್ರೀವ.

ಆದ್ರೆ ಈ ಹಯಗ್ರೀವ ನೈವೇದ್ಯಕ್ಕೆ ಅತ್ಯುತ್ತಮ ಪ್ರಸಾದವಂತೆ. ಹೀಗಾಗಿ ನಾವಿಂದು ಈ ಹಯಗ್ರೀವ ಮಾಡುವುದು ಹೇಗೆ ಎಂಬುದನ್ನು ನೋಡೋಣ. ಹಯಗ್ರೀವ ಮಾಡಲು ಬೇಕಾಗುವ ಪದಾರ್ಥಗಳೇನು? ಹಯಗ್ರೀವ ಮಾಡುವುದು ಹೇಗೆ? ಮಾಡುವ ವಿಧಾನವೇನು? ಎಷ್ಟು ಸಮಯ ಹಿಡಿಯಲಿದೆ? ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಹಯಗ್ರೀವ ಮಾಡಲು ಬೇಕಾಗುವ ಪದಾರ್ಥಗಳು
- ಕಡ್ಲೆಬೇಳೆ - 1 ಕಪ್
- ಬೆಲ್ಲ - 1 ಕಪ್
- ಒಣಕೊಬ್ಬರಿ - ಕಾಲು ಕಪ್
- ಲವಂಗ - 2
- ಏಲಕ್ಕಿ - 2
- ತುಪ್ಪ -1 ಟೇಬಲ್ ಸ್ಪೂನ್
- ಗಸಗಸೆ -1 ಟೀ ಸ್ಪೂನ್
ಹಯಗ್ರೀವ ಮಾಡುವುದು ಹೇಗೆ?
ಮೊದಲು ಒಂದು ಕುಕ್ಕರ್ ಒಲೆ ಮೇಲೆ ಇಟ್ಟು ಅದಕ್ಕೆ ಎರಡು ಕಪ್ ನೀರು ಹಾಕಿಕೊಳ್ಳಿ. ಈಗ ನೀರು ಬಿಸಿ ಮಾಡಿಕೊಳ್ಳಿ. ನೀರು ಬಿಸಿಯಾದಾಗ ಅದಕ್ಕೆ 1 ಕಪ್ ಕಡಲೆ ಬೇಳೆ ತೊಳೆದುಕೊಂಡು ಈ ಕುಕ್ಕರ್‌ಗೆ ಹಾಕಿ. ಬಳಿಕ ಮುಚ್ಚಳ ಮುಚ್ಚಿ 4 ಸೀಟಿ ಹೊಡೆಸಿಕೊಳ್ಳಿ, ಈಗ ಕುಕ್ಕರ್ ತಣ್ಣಗಾಗಲು ಬಿಟ್ಟು ನಂತರ ಅದರಲ್ಲಿ ಬೆಂದಿರುವ ಕಡಲೇ ಬೇಳೆಯನ್ನು ಬಿಟ್ಟು ನೀರು ಹೊರಗೆ ಹಾಕಿ.
ಈಗ ಮತ್ತೊಂದು ಪಾತ್ರೆಯ ಒಲೆ ಮೇಲೆ ಇಟ್ಟು 1 ಕಪ್ ಪುಡಿ ಮಾಡಿದ ಬೆಲ್ಲವನ್ನು ಹಾಕಿಕೊಂಡು ಬೆಲ್ಲ ಕರಗಲು ಸ್ವಲ್ಪ ನೀರು ಸಹ ಹಾಕಿ ಕರಗಲು ಬಿಡಿ. ಒಂದು ಎಳೆಯ ಪಾಕ ಎನ್ನುವಂತಹ ಹದಕ್ಕೆ ಬರುವಂತೆ ಇದನ್ನು ಮಾಡಿಕೊಳ್ಳಿ. ಬೆಲ್ಲ ಕರಗಿದ ಬಳಿಕ ಪುಡಿ ಏಲಕ್ಕಿ, ಲವಂಗ ಜಾಕಿ ಮಿಕ್ಸ್ ಮಾಡಿ. ನಂತರ ಇದಕ್ಕೆ ಬೇಯಿಸಿಕೊಂಡಿರುವ ಕಡಲೆ ಬೇಳೆ ಹಾಕಿ ಮಿಕ್ಸ್ ಮಾಡಿ.
ಈ ಬೇಳೆಯನ್ನ ಸುಮಾರು 5 ನಿಮಿಷ ಬೆಲ್ಲದ ಪಾಕದಲ್ಲಿ ಬೇಯಲು ಬಿಡಬೇಕು. ಆಗಾಗ ಕೈ ಆಡಿಸುತ್ತಿರಿ. ಈಗ ಒಂದು ಸಣ್ಣ ಪಾತ್ರೆ ಒಲೆ ಮೇಲೆ ಇಟ್ಟು ಅದಕ್ಕೆ ತುಪ್ಪ, ಒಣ ಕೊಬ್ಬರಿ ಪೀಸ್‌ಗಳು ಅಥವಾ ತುರಿದ ಕಾಯಿಯನ್ನು ಹಾಕಿ ತುಪ್ಪದಲ್ಲಿ ಒಂದು ನಿಮಿಷ ಫ್ರೈ ಮಾಡಿ, ನಂತರ ಕೊನೆಯಲ್ಲಿ ಗಸೆಗಸೆ ಹಾಕಿ ಬಿಸಿ ಮಾಡಿಕೊಂಡು ಬಾಣಲೆಯಲ್ಲಿರುವ ಬೆಲ್ಲದ ಪಾಕದಲ್ಲರುವ ಕಡಲೆ ಬೇಳೆಗೆ ಹಾಕಿ ಮಿಕ್ಸ್ ಮಾಡಿ.
ನಂತರ ನಿಧಾನವಾಗಿ ಮಿಕ್ಸ್ ಮಾಡಿಕೊಳ್ಳಿ. ಈ ವೇಳೆ ಒಲೆ ಆಫ್ ಮಾಡಿಕೊಂಡಿರಿ. ಇಷ್ಟಾದರೆ ನಿಮ್ಮ ಮುಂದೆ ನೈವೇದ್ಯಕ್ಕೆ ಈ ಹಯಗ್ರೀವ ರೆಡಿಯಾಗುತ್ತದೆ. ಈ ಪ್ರಸಾದವನ್ನು ನೀವು ಸಹ ಮನೆಯಲ್ಲಿ ಒಮ್ಮೆ ಟ್ರೈ ಮಾಡಿ ನೋಡಿ, ಇದನ್ನು ಊಟದಲ್ಲಿ ಸಿಹಿಯಾಗಿಯೂ ಬಳಸಬಹುದು, ಆರೋಗ್ಯಕ್ಕೂ ಬಹಳ ಒಳ್ಳೆಯ ಖಾದ್ಯ ಇದಾಗಿದೆ.



Click it and Unblock the Notifications
