Latest Updates
-
ಸಂಬಂಧಗಳ ಆತಂಕ ಕಾಡ್ತಿದೆಯಾ? ನೆಮ್ಮದಿ ನೀಡುವ ಉಚಿತ ಸಹಾಯವಾಣಿಗಳು -
IMD ಮಳೆ ಮುನ್ಸೂಚನೆ: ಬಾಲ್ಕನಿ ಸುರಕ್ಷತೆಗೆ ಈ ಕ್ರಮಗಳನ್ನು ಪಾಲಿಸಿ -
ಆರೋಗ್ಯಕರ ಆಹಾರ ಪದ್ಧತಿ: ಬೇಸಿಗೆಯಲ್ಲಿ ಲವಲವಿಕೆಯಿಂದ ಇರಲು ಹೀಗೆ ಮಾಡಿ -
ಅನುಷ್ಕಾ ಶರ್ಮಾ ಸ್ಟೇಡಿಯಂ-ಕೋರ್ ಲುಕ್: ಕ್ರಿಕೆಟ್ ಸೀಸನ್ನ ಹೊಸ ಕ್ರೇಜ್ -
ಇಂದಿನ ರಾಶಿ ಭವಿಷ್ಯ: ನಿಮ್ಮ ಜೀವನದಲ್ಲಿ ಕಾದಿದೆ ಅಚ್ಚರಿಯ ಬದಲಾವಣೆ! -
ಅಹಮದಾಬಾದ್ ದೋಸೆ ಹಿಟ್ಟಿನ ಆತಂಕ: ನಿಮ್ಮ ಮಕ್ಕಳ ಆರೋಗ್ಯಕ್ಕೆ ಈ ಎಚ್ಚರಿಕೆ ಅಗತ್ಯ! -
ಫಿಟ್ನೆಸ್ ಕ್ರೇಜ್: ಮನೆಯಲ್ಲೇ ಫಿಟ್ ಆಗಿರೋದು ಹೇಗೆ? -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ!
ಹಬ್ಬಕ್ಕೆ ಮಾಡಿ ಗೋಧಿ ಪಾಯಸ: ಚೂರು ಉಳಿಯದಂತೆ ಖಾಲಿ ಮಾಡೋಡು ಖಚಿತ!
ಹಬ್ಬ ಅಂದ್ರೆ ಸಿಹಿ ಮಾಡೋದು ಸಾಮಾನ್ಯ. ಊಟದ ರುಚಿ ಹೆಚ್ಚಾಗಬೇಕು ಅಂದ್ರೆ ಯಾವುದಾದರು ಒಂದು ಸಿಹಿ ಮಾಡಿರಲೇಬೇಕು. ಹಾಗೆ ಈ ಸಿಹಿಯು ಎಲ್ಲರಿಗೂ ಇಷ್ಟವಾಗುವಂತಿರಬೇಕು. ಬಹಳಷ್ಟು ಸಿಹಿ ತಿಂಡಿಗಳ ನಡುವೆಯೂ ಪಾಯಸ ಸಂಪ್ರದಾಯ ಎಂಬಂತೆ ಮಾಡಲಾಗುತ್ತೆ. ಅದ್ರಲ್ಲೂ ವಿಶೇಷ ಬಗೆಯ ಪಾಯಸಗಳನ್ನು ಸವಿಯೋಕೆ ಎಲ್ಲರಿಗೂ ಇಷ್ಟವಾಗುತ್ತೆ.
ಈ ಯುಗಾದಿಯ ಸಮಯದಲ್ಲಿ ವಿಭಿನ್ನ ರೀತಿಯ ಪಾಯಸ ಮಾಡುವ ಕುರಿತು ನಾವು ತಿಳಿಯೋಣ. ಅದ್ರಲ್ಲೂ ದೇವಾಲಯಗಳಲ್ಲಿ ನೀಡುವಂತಹ ಬಾಯಲ್ಲಿ ನೀರು ತರಿಸುವ ಗೋಧಿ ಪಾಯಸ ಅಂದ್ರೆ ಎಲ್ಲರಿಗೂ ಇಷ್ಟವಾಗುತ್ತೆ. ಹಬ್ಬದ ರಂಗು ಮತ್ತಷ್ಟು ಹೆಚ್ಚಿಸಬೇಕಾದರೆ ಈ ಗೋಧಿ ಪಾಯಸ ಮಾಡಿ ಸವಿಯೋದನ್ನು ನಾವಿಂದು ತಿಳಿಯೋಣ. ಹಾಗಾದ್ರೆ ಈ ಪಾಯಸ ಮಾಡುವುದು ಹೇಗೆ? ಅನ್ನೋದನ್ನು ತಿಳಿದುಕೊಳ್ಳೋಣ.
ಗೋಧಿ ಪಾಸಯ ಎಲ್ಲರಿಗೂ ಇಷ್ಟವಾಗುವ ಹಾಗೆ ಆರೋಗ್ಯದ ದೃಷ್ಟಿಯಿಂದಲೂ ಸಹ ಇದು ಬಹಳ ಉತ್ತಮವಾಗಿರಲಿದೆ. ನೀವು ಸಹ ಮನೆಯಲ್ಲಿ ಇದನ್ನು ಸುಲಭವಾಗಿ ಮಾಡಿ ಸವಿಯಬಹುದು. ಹೀಗಾಗಿ ಈ ಹಬ್ಬದ ಸಮಯದಲ್ಲಿ ಈ ಗೋಧಿ ಪಾಯಸ ಮಾಡುವುದು ಬಾಯಲ್ಲಿ ನೀರು ತರಿಸುತ್ತೆ. ಹಾಗೆ ಚೂರು ಉಳಿಯದಂತೆ ಖಾಳಿಯಾಗುತ್ತೆ. ಈ ಗೋಧಿ ಪಾಯಸ ಮಾಡಲು ಯಾವೆಲ್ಲಾ ವಸ್ತುಗಳು ಬೇಕು? ಮಾಡುವ ವಿಧಾನವೇನು? ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ತಿಳಿದುಕೊಳ್ಳೋಣ.
ಗೋಧಿ ಪಾಯಸ ಮಾಡಲು ಯಾವೆಲ್ಲಾ ವಸ್ತುಗಳು ಬೇಕು?
- ಗೋಧಿ ಕಡಿ
- ತೆಂಗಿನಕಾಯಿ ತುರಿ
- ಬೆಲ್ಲದ ಪುಡಿ
- ಉಪ್ಪು
- ಏಲಕ್ಕಿ ಪುಡಿ
- ತುಪ್ಪ
- ಗೋಡಂಬಿ
ಗೋಧಿ ಪಾಯಸ ಮಾಡುವ ಸುಲಭದ ವಿಧಾನವೇನು?
ಮೊದಲು ಒಂದು ಬೌಲ್‌ಗೆ 2 ಕಪ್ ಗೋಧಿ ಕಡಿ ಹಾಕಿಕೊಂಡು 2ರಿಂದ 3 ಬಾರಿ ತೊಳೆದು ಅನಂತರ ಕುಕ್ಕರ್‌ಗೆ ಹಾಕಿ ಅಳತೆಯಲ್ಲಿ ನೀರು ಹಾಕಿಕೊಂಡು ಮುಚ್ಚಳ ಮುಚ್ಚಿ 4 ಸೀಟಿ ಹೊಡೆಯಲು ಬಿಟ್ಟು ಒಲೆ ಆಫ್ ಮಾಡಿ ಕುಕ್ಕರ್ ತಣ್ಣಗಾಗಲು ಬಿಡಿ. ಅನಂತರ ಗೋಧಿ ಕಡಿಯನ್ನು ಒಮ್ಮೆ ಮಿಕ್ಸ್ ಮಾಡಿ ಇಟ್ಟುಕೊಳ್ಳಿ. ಇದು ಬೇಳೆಯಂತೆ ಆಗಿರಬೇಕು.
ಈಗ ಒಂದು ಮಿಕ್ಸಿ ಜಾರ್ ತೆಗೆದುಕೊಂಡು ಅದಕ್ಕೆ ತುರಿದುಕೊಂಡ ತೆಂಗಿನಕಾಯಿ ತುರಿ ಹಾಕಿಕೊಂಡು ಅದಕ್ಕೆ ನೀರು ಹಾಕಿ ನುಣ್ಣಗೆ ರುಬ್ಬಿಕೊಂಡು ಜರಡಿ ಹಿಡಿದು ಹಾಲನ್ನು ತೆಗೆದುಕೊಳ್ಳಿ. 2 ಕಪ್ ಹಾಲು ಮಾಡಿಕೊಳ್ಳಿ. ಈಗ ಒಲೆ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ 1 ಕಪ್ ತುರಿದ ಬೆಲ್ಲ ಹಾಕಿ ನೀರು ಹಾಕಿ ಕರಗಲು ಬಿಡಿ. ಬೆಲ್ಲ ಕರಗಿದ ಬಳಿಕ ಜರಡಿ ಹಿಡಿದು ಬೆಲ್ಲದ ನೀರು ತೆಗೆದುಕೊಳ್ಳಿ.
ಈಗ ಒಲೆ ಮೇಲೆ ಪಾಯಸ ಮಾಡಲು ಒಂದು ಪಾತ್ರೆ ಇಟ್ಟು ಅದಕ್ಕೆ ಬೆಲ್ಲದ ನೀಡು ಹಾಕಿಕೊಂಡು ಬಳಿಕ ಬೇಯಿಸಿಕೊಂಡಿದ್ದ ಗೋಧಿ ಕಡಿ ಹಾಕಿ ಉಪ್ಪು ಹಾಕಿ ಮಿಕ್ಸ್ ಮಾಡಿಕೊಳ್ಳಿ. ಚೆನ್ನಾಗಿ ಬೆಲ್ಲದ ನೀರಿನೊಂದಿಗೆ ಬೆರೆಯಬೇಕು. ಈಗ ಕಾಯಿ ಹಾಲನ್ನು ಇದಕ್ಕೆ ಹಾಕಿ ಸಣ್ಣಗೆ ಕುದಿಬರಲು ಬಿಡಿ. ಇದಕ್ಕೆ ಏಲಕ್ಕಿ ಪುಡಿ ಹಾಕಿ ಮಿಕ್ಸ್ ಮಾಡಿ ಒಲೆ ಆಫ್ ಮಾಡಿಕೊಳ್ಳಿ. ಕೊನೆಯಲ್ಲಿ ತುಪ್ಪದಲ್ಲಿ ಹುರಿದ ಗೋಡಂಬಿ ಹಾಕಿ ಫ್ರೈ ಮಾಡಿ ಇದಕ್ಕೆ ಹಾಕಿದರೆ ನಿಮ್ಮ ಮುಂದೆ ರುಚಿ ರುಚಿಯ ಗೋಧಿ ಕಡಿ ಪಾಯಸ ಸಿದ್ದವಾಗುತ್ತೆ. ನೀವು ಕೂಡ ಈ ಯುಗಾದಿಯಲ್ಲಿ ಈ ಗೋಧಿ ಕಡಿ ಪಾಯಸ ಮಾಡಿ ನೋಡಿ. ಚೂರು ಉಳಿಯದಂತೆ ಖಾಲಿ ಮಾಡೋದು ಖಚಿತ.



Click it and Unblock the Notifications
