Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ರೆಸಿಪಿ: ತುಂಬಾನೇ ರುಚಿಯಾಗಿರುತ್ತೆ ಮೀನಿನ ಮೊಟ್ಟೆಯ ಫ್ರೈ
ಮೀನಿನ ಮೊಟ್ಟೆ ತುಂಬಾ ರುಚಿಯಾದ ತಿನಿಸು, ಆದರೆ ಅದನ್ನು ಮಾಡುವ ರೀತಿ ಗೊತ್ತಿರಬೇಕು. ಮೀನಿನ ಮೊಟ್ಟೆಯ ರೆಸಿಪಿಯನ್ನು ಹಲವಾರು ರುಚಿಯಲ್ಲಿ ಮಾಡಬಹುದು, ನಾವಿಲ್ಲಿ ಮೀನಿನ ಮೊಟ್ಟೆ ಫ್ರೈ ಮಾಡುವ ರೆಸಿಪಿ ನೀಡಿದ್ದೇವೆ ನೋಡಿ:

ಬೇಕಾಗುವ ಸಾಮಗ್ರಿ
ಮೀನಿನ ಮೊಟ್ಟೆ
1/2 ಚಮಚ ಅರಿಶಿಣ ಪುಡಿ
1/2 ಚಮಚ ಉಪ್ಪು
1 ಚಮಚ ನಿಂಬೆರಸ
ಇವುಗಳನ್ನು ಮಿಕ್ಸ್ ಮಾಡಿಡಿ.
ನಂತರ ಪ್ರೈ ಮಾಡಲು
2 ಈರುಳ್ಳಿ
ಶುಂಠಿ-ಬೆಳ್ಳುಳ್ಳಿ 2 ಚಮಚ
2-3 ಹಸಿ ಮೆಣಸು
1 ಚಮಚ ಮೆಣಸಿನ ಪುಡಿ (ಖಾರಕ್ಕೆ ತಕ್ಕಷ್ಟು ಬಳಸಿ)
1 ಚಮಚ ಕೊತ್ತಂಬರಿ ಪುಡಿ
1/ 2 ಚಮಚ ಅರಿಶಿಣ
2 ಹಣ್ಣಾದ ಟೊಮೆಟೊ
ಕರಿಬೇವು
ರುಚಿಗೆ ತಕ್ಕ ಉಪ್ಪು
ಕೊತ್ತಂಬರಿ ಸೊಪ್ಪು
ಎಣ್ಣೆ
ಮಾಡುವ ವಿಧಾನ:
- ಮೀನಿ ಮೊಟ್ಟೆಯನ್ನು ಮೆಲ್ಲನೆ ತೊಳೆದು ಒಂದು ಪ್ಲೇಟ್‌ಗೆ ಹಾಕಿ ಅದಕ್ಕೆ ಸ್ವಲ್ಪ ಅರಿಶಿಣ ಪುಡಿ, ರುಚಿಗೆ ತಕ್ಕ ಉಪ್ಪು, ಒಂದು ಚಮಚ ನಿಂಬೆಹಣ್ಣಿನ ರಸ ಹಾಕಿ ಮಿಕ್ಸ್ ಮಾಡಿ 15 -10 ನಿಮಿಷ ಇಡಿ.
- ಈಗ ಪ್ಯಾನ್‌ಗೆ ಎಣ್ಣೆ ಹಾಕಿ, ಎಣ್ಣೆ ಬಿಸಿಯಾದಾಗಅರಿಶಿಣ, ಉಪ್ಪು ಮಿಶ್ರ ಮಾಡಿಟ್ಟ ಮೀನಿನ ಮೊಟ್ಟೆ ಹಾಕಿ.
- ಎರಡೂ ಬದಿ 2-3 ನಿಮಿಷ ಫ್ರೈ ಮಾಡಿ ( ಮೊಟ್ಟೆ ಸಿಡಿಯದಿರಲು ಫೋರ್ಕ್ ಅಥವಾ ಚಿಕ್ಕ ನೈಫ್‌ನಿಂದ ಮೆಲ್ಲನೆ ಚುಚ್ಚಿ., ಮೊಟ್ಟೆ ಫ್ರೈಯಾದಾಗ ಅದನ್ನು ಮೆಲ್ಲನೆ ತೆಗೆದು ಒಂದು ತಟ್ಟೆಗೆ ಹಾಕಿ.
- ಈಗ ಒಂದು ಪ್ಯಾನ್‌ಗೆ ಎಣ್ಣೆ ಹಾಕಿ ಬಿಸಿ ಮಾಡಿ ಅದಕ್ಕೆ ಚಿಕ್ಕದಾಗಿ ಕತ್ತರಿಸಿದ ಎರಡು ಈರುಳ್ಳಿ ಹಾಕಿ, ಅದು ಕಂದು ಬಣ್ಣಕ್ಕೆ ಬರುವವರೆಗೆ ಫ್ರೈ ಮಾಡಿ.
- ನಂತರ ಶುಂಠಿ, ಬೆಳ್ಳುಳ್ಳಿ, ಹಸಿ ಮೆಣಸು ಸೇರಿಸಿ 5 ನಿಮಿಷ ಫ್ರೈ ಮಾಡಿ, ಕರಿಬೇವು ಹಾಕಿ, ನಂತರ ಅರ್ಧ ಚಮಚ ಅರಿಶಿಣ ಪುಡಿ, ಖಾರದ ಪುಡಿ, 1 ಚಮಚ ಕೊತ್ತಂಬರಿ ಪುಡಿ, ಸ್ವಲ್ಪ ಗರಂ ಮಸಾಲ ಹಾಕಿ ಫ್ರೈ ಮಾಡಿ, ನಂತರ ಟೊಮೆಟೊ ಹಾಕಿ, ಟೊಮೆಟೊ ಪೇಸ್ಟ್ ರೀತಿಯಾದಾಗ ಫ್ರೈ ಮಾಡಿಟ್ಟ ಮೊಟ್ಟೆಯನ್ನು ಹಾಕಿ ಅದನ್ನು ಸೌಟ್‌ನಿಂದ ಪುಡಿ-ಪುಡಿ ಮಾಡಿ ಮಿಕ್ಸ್ ಮಾಡಿದರೆ ಮೀನಿನ ಮೊಟ್ಟೆ ಫ್ರೈ ರೆಡಿ. ನಂತರ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ ಮೀನಿನ ಮೊಟ್ಟೆ ಫ್ರೈ ರೆಡಿ.
ಸಲಹೆ: ಮೊಟ್ಟೆಯನ್ನು ಪುಡಿ ಪುಡಿಮಾಡಬಹುದು ಅಥವಾ ಪೀಸ್ ಪೀಸ್ ರೀತಿ ಬಳಸಬಹುದು.
ಮೀನಿನ ಮೊಟ್ಟೆಯ ಪ್ರಯೋಜನಗಳು
* ಇದರಲ್ಲಿ ಒಮೆಗಾ 3 ತುಂಬಾನೇ ಇದೆ, ಅಲ್ಲದೆ ಇದರಲ್ಲಿ ವಿಟಮಿನ್ ಡಿ, ಬಿ12,
ಪ್ರೊಟೀನ್ ಇರುವುದರಿಂದ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು.
* ಮೀನಿನ ಮೊಟ್ಟೆಯಲ್ಲಿ ಪ್ರೊಟೀನ್ ಅತ್ಯಧಿಕವಿದೆ.
* ಇದರಲ್ಲಿ ಕೊಲೆಸ್ಟ್ರಾಲ್ ಅತ್ಯಧಿಕವಿದೆ, ಆದ್ದರಿಂದ ಅತಿಯಾಗಿ ತಿನ್ನಬೇಡಿ.
* ಇದರಲ್ಲಿ ಒಮೆಗಾ 3 ಕೊಬ್ಬಿನಂಶವಿರುವುದರಿಂದ ರಕ್ತ ಹೆಪ್ಪುಗಟ್ಟುವುದನ್ನು
ತಡೆಗಟ್ಟುವಲ್ಲಿ ಸಹಕಾರಿ, ಉರಿಯೂತದ ಸಮಸ್ಯೆ ಕಡಿಮೆ ಮಾಡುತ್ತದೆ, ರಕ್ತದೊತ್ತಡ
ನಿಯಂತ್ರಣದಲ್ಲಿಡಲು ಸಹಕಾರಿ.
* ಈ ಮೀನಿನ ಮೊಟ್ಟೆ ಕೀಟೋ ಫ್ರೆಂಡ್ಲಿ ಆಗಿದ್ದು ಮೈ ತೂಕ ಹೆಚ್ಚಾಗುವುದಿಲ್ಲ.



Click it and Unblock the Notifications
