Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
10 ರೂಪಾಯಿ ಪಾರ್ಲೆ ಜಿ ಬಿಸ್ಕೇಟ್ನಲ್ಲಿ ಜಾಮೂನ್ ಮಾಡಿ.! ಎಷ್ಟು ಸುಲಭ ಗೊತ್ತಾ?
ನೀವು ಬಿಸ್ಕೇಟ್ನಿಂದ ಒಂದಿಷ್ಟು ರುಚಿ ರುಚಿಯ ಖಾದ್ಯಗಳ ಮಾಡಿ ಸವಿದಿರಬಹುದು. ಅದ್ರಲ್ಲೂ ಬಿಸ್ಕೇಟ್ನಿಂದ ಕೇಕ್, ಬೋಂಡಾ, ಬಜ್ಜಿ, ಮಸಾಲ ಮಂಡಕ್ಕಿಯೊಂದಿಗೆ ಬೆರೆಸಲು, ಹಾಗೆ ಸ್ವೀಟ್ ಕಾರ್ನ್ ಜೊತೆ ಸವಿಯಲು ಸೇರಿ ಹಲವು ರೀತಿಯ ಖಾದ್ಯಗಳನ್ನು ನೀವು ಕೂಡ ಸವಿದಿರುತ್ತೀರಿ. ಅದ್ರಲ್ಲೂ ಹೆಚ್ಚಾಗಿ ಪಾರ್ಲೆ ಜಿ ಬಿಸ್ಕೇಟ್ನಿಂದ ಒಂದಿಷ್ಟು ತಿಂಡಿಗಳನ್ನು ಮಾಡಿ ಸವಿಯಬಹುದು ಎಂಬುದು ನಿಮಗೂ ಕೂಡ ತಿಳಿದಿದೆ.
ಈ ಬಿಸ್ಕೇಟ್ನಿಂದ ಎಂದಾದ್ರು ಅದ್ಭುತವಾಗ ಜಾಮೂನ್ ಮಾಡಿ ಸವಿದಿದ್ದೀರಾ? ಹೌದು ಜಾಮೂನ್ ಎಲ್ಲರಿಗೂ ಇಷ್ಟವಾಗುವ ಸಿಹಿ ಪದಾರ್ಥ. ಮನೆಯಲ್ಲಿ ವಿಶೇಷ ದಿನಗಳು, ಹಬ್ಬಗಳಿದ್ದಾಗ ಎಲ್ಲರು ಮಾಡಿ ಸವಿಯುತ್ತಾರೆ. ಬಹಳ ಕಡಿಮೆ ಸಮಯದಲ್ಲಿ ಕಡಿಮೆ ವಸ್ತುಗಳ ಬಳಸಿಕೊಂಡು ಮಾಡಿ ಸವಿಯಬಹುದಾಗಿರೋದ್ರಿಂದ ಎಲ್ಲರಿಗೂ ಇಷ್ಟವಾಗುತ್ತೆ.

ಇನ್ನು ಪಾರ್ಲೆ ಜಿ ಬಿಸ್ಕೇಟ್ನಿಂದ ಎಂದಾದ್ರು ಈ ಜಾಮೂನ್ ಮಾಡಿ ಸವಿದಿದ್ದೀರಾ? ಈ ಬಿಸ್ಕೆಟ್ನಲ್ಲಿ ಮಾಡುವ ಜಾಮೂನ್ ಅದ್ಭುತ ರುಚಿ ನೀಡಲಿದೆ. ನೀವು ಸಹ ಒಮ್ಮೆ ಇದನ್ನು ಮಾಡಿ ಸವಿದರೆ ಪದೇ ಪದೇ ಮಾಡಿ ಸವಿಯಲು ಮುಂದಾಗೋದು ಖಚಿತ ಹಾಗಾದ್ರೆ ಪಾರ್ಲೆ ಜಿ ಬಿಸ್ಕೇಟ್ನಿಂದ ರುಚಿ ರುಚಿಯ ಜಾಮೂನ್ ಮಾಡುವುದು ಹೇಗೆ ಅನ್ನೋದನ್ನು ನೋಡೋಣ.
ಪಾರ್ಲೆ ಜಿ ಬಿಸ್ಕೇಟ್ನಿಂದ ಜಾಮೂನ್ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?, ಮಾಡುವ ವಿಧಾನವೇನು? ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಪಾರ್ಲೆ ಜಿ ಬಿಸ್ಕೇಟ್ನಿಂದ ಜಾಮೂನ್ ಮಾಡಲು ಯಾವೆಲ್ಲಾ ವಸ್ತು ಬೇಕು?
- ಬಿಸ್ಕೇಟ್ - 3
- ಹಾಲು
- ಗೋಧಿ ಹಿಟ್ಟು
- ಸಕ್ಕರೆ
- ಏಲಕ್ಕಿ ಪುಡಿ
- ಎಣ್ಣೆ
ಪಾರ್ಲೆ ಜಿ ಬಿಸ್ಕೇಟ್ನಿಂದ ಜಾಮೂನ್ ಮಾಡುವುದು ಹೇಗೆ?
ಮೊದಲಿಗೆ ಬಿಸ್ಕೇಟ್ಗಳನ್ನು ಬಿಡಿಸಿ ಒಂದು ಪಾತ್ರೆಗೆ ಹಾಕಿಕೊಂಡು ಒಲೆ ಮೇಲೆ ಇಟ್ಟುಕೊಳ್ಳಿ. ನಂತರ ಅದಕ್ಕೆ ಕಾಲು ಲೀಟರ್ ಹಾಲು ಹಾಕಿಕೊಳ್ಳಿ. ಅನಂತರ ಸಣ್ಣ ಉರಿಯಲ್ಲಿ ಬೆಯಲು ಬಿಡಿ. ಇದು ಬಿಸ್ಕೇಟ್ ಪುಡಿಯಾಗುವಂತೆ ಕಲಸಿಕೊಳ್ಳಿಕೊಳ್ಳಿ. ಮೊದಲೇ ಬಿಸ್ಕೇಟ್ ಅನ್ನು ಪುಡಿ ಮಾಡಿಯೂ ಇದಕ್ಕೆ ಬಳಸಬಹುದು. ಇದು ಪುಡಿಯಾಗುತ್ತಾ ಹೋದಂತೆ ಗಟ್ಟಿಯಾಗಲು ಆರಂಭಿಸಲಿದೆ.
ಈಗ ಸ್ವಲ್ಪ ಗೋಧಿ ಹಿಟ್ಟು ಹಾಕಿ ಕಲಸಿಕೊಳ್ಳಿ. ಗೋಧಿ ಹಿಟ್ಟು ಚೆನ್ನಾಗಿ ಮಿಕ್ಸ್ ಆದಾಗ 2 ಸ್ಪೂನ್ ತುಪ್ಪ ಹಾಕಿಕೊಂಡು ಮತ್ತೆ ಮಿಕ್ಸ್ ಮಾಡಿ ಸಣ್ಣ ಉರಿಯಲ್ಲಿ ಮಿಶ್ರಣ ಮಾಡುತ್ತಲೇ ಇರಿ. ಇದು ಹೋಳಿಗೆ ಮಾಡುವ ಹೂರ್ಣದಂತೆ ಬರುವವರೆಗೂ ಮಿಕ್ಸ್ ಮಾಡುತ್ತಲೇ ಇರಿ. ಇಷ್ಟಾದ ಬಳಿಕ ಒಲೆ ಆಫ್ ಮಾಡಿಕೊಂಡು ಇಳಿಸಿಕೊಳ್ಳಿ.
ಈಗ ಈ ಹಿಟ್ಟು ಸ್ವಲ್ಪ ತಣ್ಣಗಾಗಲು ಬಿಡಿ. ಈ ಸಮಯದಲ್ಲಿ ಒಲೆ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ಸ್ವಲ್ಪ ಸಕ್ಕರೆ ಹಾಕಿ ಸ್ವಲ್ಪ ನೀರು ಸಹ ಹಾಕಿಕೊಂಡು ಕರಗಲು ಬಿಡಿ, ಹಾಗೆ ಇದಕ್ಕೆ ಏಲಕ್ಕಿ ಪುಡಿ ಹಾಕಿ ಮಿಶ್ರಣ ಮಾಡಿ. ಸಕ್ಕರೆ ಸ್ವಲ್ಪ ಕರಗಿದರೆ ಸಾಕಾಗುತ್ತದೆ. ಹೀಗೆ ಪಾಕ ಮಾಡಿಕೊಂಡು ತೆಗೆದಿಟ್ಟುಕೊಳ್ಳಿ.
ಈಗ ಹಿಟ್ಟನ್ನು ಮತ್ತೊಮ್ಮೆ ಹದ ಮಾಡಿ, ಸಣ್ಣ ಸಣ್ಣ ಉಂಡೆಗಳ ಮಾಡಿಕೊಳ್ಳಿ. ಅಷ್ಟು ಹಿಟ್ಟನ್ನು ಉಂಡೆ ಮಾಡಿಕೊಳ್ಳಿ. ನಂತರ ಬಾಣಲೆಯಲ್ಲಿ ಎಣ್ಣೆ ಹಾಕಿ ಈ ಉಂಡೆಗಳ ಹಾಕಿ ಫ್ರೈ ಮಾಡಿಕೊಳ್ಳಿ. ಜಾಮೂನ್ ಮಾಡಿದಂತೆಯೇ ವಿಧಾನದಲ್ಲಿ ಫ್ರೈ ಮಾಡಿಕೊಂಡು ಸಕ್ಕರೆ ಪಾಕದಲ್ಲಿ ಹಾಕಿಬಿಡಿ. ಪಾಕ ಸ್ವಲ್ಪ ಬಿಸಿ ಇರುವಾಗ ಹಾಕಿಕೊಂಡು 5 ನಿಮಿಷ ಹಾಗೆಯೇ ಬಿಡಿ. ಪಾಕ ಹೀರಿಕೊಂಡ ಬಳಿಕ ಇದನ್ನು ಸವಿಯಲು ನೀಡಬಹುದು. ನೀವು ಸಹ ಒಮ್ಮೆ ಮನೆಯಲ್ಲಿ ಇದನ್ನು ಮಾಡಿ ನೋಡಿ.



Click it and Unblock the Notifications
