Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ಕೊತ್ತಂಬರಿ ಬೀಜದ ಚಟ್ನಿ ಮಾಡಿದ್ದೀರಾ? ಹೀಗೆ ಮಾಡಿದರೆ ಸೂಪರ್
ನೀವು ಕೊತ್ತಂಬರಿ ಬೀಜ ಹಾಕಿ ಚಟ್ನಿ ಮಾಡಿದ್ದೀರಾ? ಕೊತ್ತಂಬರಿ ಸೊಪ್ಪು ಹಾಕಿ ಚಟ್ನಿ ಮಾಡುವುದು ಸಹಜ, ಆದರೆ ಈ ಚಟ್ನಿ ಮಾತ್ರ ತುಂಬಾ ಭಿನ್ನ, ಇದರ ಟೇಸ್ಟ್ ತುಂಬಾ ಚೆನ್ನಾಗಿರುತ್ತದೆ. ಈ ಕೊತ್ತಂಬರಿ ಬೀಜದ ಚಟ್ನಿ ಮಾಡುವುದು ಹೇಗೆ ಎಂದು ನೋಡೋಣ:

ಬೇಕಾಗುವ ಸಾಮಗ್ರಿ
ಕೊತ್ತಂಬರಿ ಬೀಜ 2-3 ಚಮಚ
ಜೀರಿಗೆ 1/2 ಚಮಚ
ಕಾಯಿತುರಿ 1 ಕಪ್
ಸ್ವಲ್ಪ ಹುಣಸೆಹಣ್ಣು
ಉದ್ದಿನ ಬೇಳೆ ಸ್ವಲ್ಪ
ಕಡ್ಲೆಬೇಳೆಚಮಚ
ಬೆಳ್ಳುಳ್ಳಿ 5-6 ಎಸಳು
ಈರುಳ್ಳು 1 (ಚಿಕ್ಕ ಗಾತ್ರದ್ದು)
ಉಪ್ಪು
ಟೊಮೆಟೊ 1
ಹಸಿ ಮೆಣಸು 2
ಒಗ್ಗರಣೆ
1 ಚಮಚ ಎಣ್ಣೆ
ಸ್ವಲ್ಪ ಸಾಸಿವೆ
ಕರಿಬೇವು
ಮಾಡುವ ವಿಧಾನ
- ತವಾ ಬಿಸಿ ಮಾಡಿ ಅದರಲ್ಲಿ ಎಣ್ಣೆ ಹಾಕಿ ಹಸಿ ಮೆಣಸು ಫ್ರೈ ಮಾಡಿ ತೆಗೆದಿಡಿ
- ಈಗ ಅದೇ ಎಣ್ಣೆಯಲ್ಲಿ ಕಡ್ಲೆಬೇಳೆ, ಉದ್ದಿನ ಬಳೆ ಸ್ವಲ್ಪ ಹುರಿದು ಇಡಿ
- ತವಾದಲ್ಲಿ ಈರುಳ್ಳಿ ಎಸಳು ಹಾಕಿ ಅದನ್ನು ಕೂಡ ಫ್ರೈ ಮಾಡಿ ಇಡಿ
- ಈಗ ಕೊತ್ತಂಬರಿ ಬೀಜ ಹಾಕಿ ಅದನ್ನು ಕೂಡ ರೋಸ್ಟ್ ಮಾಡಿ (ತುಂಬಾ ಕಪ್ಪಗಾಗಲು ಬಿಡಬಾರದು, ಚಟ್ನಿ ಕಹಿ ಟೇಸ್ಟ್ ಬರುತ್ತದೆ)
- ಈಗ ಮಿಕ್ಸಿ ಜಾರ್ಗೆ ತೆಂಗಿನತುರಿ, ಹುರಿದು ಇಟ್ಟ ಎಲ್ಲಾ ಸಾಮಗ್ರಿ, ಸ್ವಲ್ಪ ಹುಣಸೆ ಹಣ್ಣು, ಟೊಮೆಟೊ, ಉಪ್ಪು ಸೇರಿಸಿ ರುಬ್ಬಿ.
ಈಗ ರುಬ್ಬಿದ ಚಟ್ನಿಗೆ ಒಗ್ಗರಣೆ ಹಾಕಿದರೆ ಭಿನ್ನ ರುಚಿಯ ಚಟ್ನಿ ರೆಡಿ. ಕೊತ್ತಂಬರಿ ಬೀಜ ಬಳಸಿ ಮಾಡುವ ಈ ಚಟ್ನಿ ಟ್ರೈ ಮಾಡಿ ನೋಡಿ ರುಚಿ ಸೂಪರ್ ಆಗಿರುತ್ತದೆ.
ರೆಸಿಪಿ 2
ಈ ರೀತಿಯೂ ಮಾಡಬಹುದು
1 ಚಮಚ ನೆಲಗಡಲೆ ಎಣ್ಣೆ
2 ಚಮಚ ಕೊತ್ತಂಬರಿ ಬೀಜ
1 ಚಮಚ ಉದ್ದಿನ ಬೇಳೆ
3-4 ಒಣ ಮೆಣಸು
ಚಿಕ್ಕ ಈರುಳ್ಳ 5
1/2 ಕಪ್ ತೆಂಗಿನತುರಿ
ಸ್ವಲ್ಪ ಹುಣಸೆಹಣ್ಣು
ಸ್ವಲ್ಪ ಬೆಲ್ಲ
ರುಚಿಗೆ ತಕ್ಕ ಉಪ್ಪು
ಒಗ್ಗರಣೆಗೆ
1 ಚಮಚ ನೆಲಗಡಲೆ ಎಣ್ಣೆ
ಸ್ವಲ್ಪ ಸಾಸಿವೆ
ಸ್ವಲ್ಪ ಕರಿಬೇವು
ಸ್ವಲ್ಪ ಉದ್ದಿನ ಬೇಳೆ
ಒಣ ಮೆಣಸು
ಮಾಡುವುದು ಹೇಗೆ?
ನೀವು ಕೊತ್ತಂಬರಿ ಬೀಜವನ್ನು ರೋಸ್ಟ್ ಮಾಡಿ
ಒಣ ಮೆಣಸು ರೋಸ್ಟ್ ಮಾಡಿ
ಉದ್ದಿನ ಬೇಳೆ ಸ್ವಲ್ಪ ರೋಸ್ಟ್ ಮಾಡಿ
ಈಗ ಎಲ್ಲಾ ಸಾಮಗ್ರಿ ಹಾಕಿ ರುಬ್ಬಿ ನಂತರ ಒಗ್ಗರಣೆ ಹಾಕಿದರೆ ಕೊತ್ತಂಬರಿ ಬೀಜದ
ಚಟ್ನಿ ರೆಡಿ.



Click it and Unblock the Notifications
