Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಮಾದಲ ಕಾಯಿ ಚಿತ್ರಾನ್ನ ಎಂದಾದರು ಮಾಡಿದ್ದೀರಾ? ಅದರ ರುಚಿ ಸವಿದು ನೋಡಿ!
ಬೆಳಗ್ಗೆ ತಿಂಡಿಗೆ ನೀವು ಸುಲವಾಗಿ ಮಾಡುವ ಹಲವು ತಿಂಡಿಗಳನ್ನು ಟ್ರೈ ಮಾಡಿರುತ್ತೀರಿ. ಅದರಲ್ಲೂ ಅನ್ನ ಬಳಸಿ ಮಾಡುವ ಹಲವು ಖಾದ್ಯಗಳೆಂದರೆ ಬಹಳ ಇಷ್ಟಪಡುತ್ತಾರೆ. ನೀವು ರೈಸ್‌ನಿಂದ ಮಾಡುವ ಚಿತ್ರಾನ್ನ, ಪಲಾವ್, ರೈಸ್ ಬಾತ್, ಪುಳಿಯೋಗರೆ ಮಾಡುವುದು ನೋಡಬಹುದು. ಅದರಲ್ಲೂ ಹಿಂದಿನ ದಿನ ಅನ್ನ ಉಳಿದರೆ ಅದನ್ನು ಚಿತ್ರಾನ್ನ ಮಾಡುವುದು ಕಾಮನ್.
ಈ ಚಿತ್ರಾನ್ನ ಹಲವು ರೀತಿಯಲ್ಲಿ ಮಾಡಬಹುದು. ವಿವಿಧ ಬಗೆಯ ಚಿತ್ರಾನ್ನ ಎಲ್ಲರಿಗೂ ಇಷ್ಟವಾಗುತ್ತೆ. ಅದರಲ್ಲೂ ವಿಶೇಷ ಚಿತ್ರಾನ್ನಗಳು ಹಲವರ ಬಾಯಲ್ಲಿ ನೀರು ತರಿಸಲಿದೆ. ಅದರಲ್ಲೂ ನೀವು ಬಗೆ ಬಗೆಯ ಚಿತ್ರಾನ್ನಗಳ ಸವಿದಿರಬಹುದು. ಆದ್ರೆ ನಾವಿಂದು ಸುಲಭವಾಗಿ ಮಾಡುವಂತಹ ಹಾಗೆ ಮಾದಳ ಕಾಯಿ ಚಿತ್ರಾನ್ನ ಸವಿಯುವ ಕುರಿತು ತಿಳಿಯೋಣ.

ನಿಂಬೆ ಹಣ್ಣಿನ ಬದಲಾಗಿ ನಾವಿಂದು ಮಾದಳ ಕಾಯಿಯಲ್ಲಿ ಚಿತ್ರಾನ್ನ ಮಾಡುವ ಕುರಿತು ತಿಳಿಯೋಣ. ಚಿತ್ರಾನ್ನವನ್ನು ಮಾಡಲು ಹಲವು ರೀತಿ ವಿಧಗಳಿದ್ದರು ನೀವು ಈ ಮಾದಳ ಕಾಯಿಯ ಚಿತ್ರಾನ್ನ ಸವಿದರೆ ಅದರ ರುಚಿಗೆ ಮರುಳಾಗುತ್ತೀರಿ. ಈ ಕಾಯಿಯನ್ನು, ಹೇರಳೆಕಾಯಿ, ಮಹಾಫಲ, ಮಾದಲ ಹೀಗೆ ಹತ್ತಾರು ಹೆಸರಿನಿಂದ ಕರೆಯಲಾಗುತ್ತದೆ.
ಹಾಗಾದ್ರೆ ಮಾದಲ ಕಾಯಿ ಚಿತ್ರಾನ್ನ ಮಾಡುವುದು ಹೇಗೆ? ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?, ಮಾಡುವ ವಿಧಾವೇನು? ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಮಾದಲ ಕಾಯಿ ಚಿತ್ರಾನ್ನ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?
- ಮಾದಲ ಕಾಯಿ
- ಉದ್ದಿನ ಬೇಳೆ
- ಕಡಲೆ ಬೇಳೆ
- ಸಾಸಿವೆ
- ಜೀರಿಗೆ
- ಇಂಗು
- ಕರಿಬೇವು
- ಹಸಿ ಮೆಣಸಿನಕಾಯಿ
- ಕೆಂಪು ಮೆಣಸು
- ಈರುಳ್ಳಿ
- ಅರಿಶಿನ ಪುಡಿ
- ತೆಂಗಿನ ಕಾಯಿ
- ಕೊತ್ತಂಬರಿ ಸೊಪ್ಪು
- ಸಕ್ಕರೆ
- ಎಣ್ಣೆ
- ಉಪ್ಪು
ಮಾದಲ ಕಾಯಿ ಚಿತ್ರಾನ್ನ ಮಾಡುವ ವಿಧಾನವೇನು?
ಮೊದಲು ಬಾಣಲೆ ಒಲೆ ಮೇಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿಕೊಂಡು ಕಡಲೆ ಬೀಜ ಹಾಕಿಕೊಂಡು ಫ್ರೈ ಮಾಡಿಕೊಳ್ಳಿ. ನಂತರ ಕಡಲೆ ಬೀಜ ಎತ್ತಿಟ್ಟುಕೊಂಡು ಅದೇ ಬಾಣಲೆಗೆ ಕಡಲೆ ಬೇಳೆ, ಉದ್ದಿನ ಬೇಳೆ, ಸಾಸಿವೆ, ಜೀರಿಗೆ ಹಾಕಿಕೊಂಡು ಬಳಿಕ ಇಂಗು ಹಾಕಿ ಫ್ರೈ ಮಾಡಿ. 30 ಸೆಕೆಂಡ್ ಬಳಿಕ ಇದಕ್ಕೆ ಕರಿಬೇವು, ಈರುಳ್ಳಿ ಹಾಕಿ ಫ್ರೈ ಮಾಡಿಕೊಳ್ಳಿ.
ನಂತರ ಉಪ್ಪು, ಮೆಣಸಿನ ಪುಡಿ, ಅರಶಿಣ ಹಾಕಿಕೊಂಡು ಸಣ್ಣ ಉರಿಯಲ್ಲಿ ಫ್ರೈ ಮಾಡಲು ಬಿಡಿ. ಈಗ ಶುಂಠಿ ತುರಿದುಕೊಂಡು ಇದಕ್ಕೆ ಹಾಕಿಕೊಳ್ಳಿ. ಇಷ್ಟಾದರೆ ಗೊಜ್ಜು ರೆಡಿಯಾಗುತ್ತದೆ. ನೀವು ಈ ಗೊಜ್ಜನ್ನು ರೆಡಿ ಮಾಡಿ ಒಲೆ ಆಫ್ ಮಾಡಿಕೊಂಡು ಕೆಳಗೆ ಇಳಿಸಿಕೊಳ್ಳಿ. ಈಗ ಮಾದಲ ಕಾಯಿಯ ರಸವನ್ನು ನಿಮಗೆ ಎಷ್ಟು ಅಷ್ಟನ್ನು ಹಿಂಡಿಕೊಂಡು ಮಿಕ್ಸ್ ಮಾಡಿ.
ಹಾಗೆ ಮೊದಲು ಹುರಿದುಕೊಂಡಿದ್ದ ಕಡಲೆ ಬೀಜವನ್ನು ಕೂಡ ಇದಕ್ಕೆ ಹಾಕಿ ಮಿಕ್ಸ್ ಮಾಡಿ. ಈಗ ಕೊನೆಯದಾಗಿ ಮೊದಲು ಮಾಡಿಟ್ಟ ಅನ್ನವನ್ನು ಇದಕ್ಕೆ ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ಈ ರುಚಿ ರುಚಿಯ ಮಾದಲ ಕಾಯಿ ಚಿತ್ರಾನ್ನ ರೆಡಿಯಾಗುತ್ತದೆ. ನೀವು ಕೂಡ ಬೆಳಗ್ಗೆ ತಿಂಡಿಗೆ ಇದನ್ನು ಮಾಡಿ ನೋಡಿ. ಬೆಳಗ್ಗೆ ತಿಂಡಿಗೆ ಈ ಸುಲಭದ ರೆಸಿಪಿ ಮಾಡಿ ಸವಿದು ನೋಡಿ. ಸಾಮಾನ್ಯ ಚಿತ್ರಾನ್ನಕ್ಕಿಂತ ಇದು ಬಹಳ ವಿಶೇಷ ರುಚಿ ನೀಡಲಿದೆ. ಮಾಡೋದು ಕೂಡ ಬಹಳ ಸುಲಭ. ಇದಕ್ಕೆ ಕೊನೆಯಲ್ಲಿ ರುಚಿಗೆ ಕೊತ್ತಂಬರಿ ಸೊಪ್ಪು ಹಾಕಿಕೊಳ್ಳಬಹುದು, ಹಾಗೆ ತೆಂಗಿನಕಾಯಿ ತುರಿ ಕೂಡ ಹಾಕಿ ಮಿಕ್ಸ್ ಮಾಡಿಕೊಳ್ಳಬಹುದು. ಹಾಕದೆ ಇದ್ದರೂ ಇದರ ರುಚಿ ದುಪ್ಪಟ್ಟಾಗಿರಲಿದೆ.



Click it and Unblock the Notifications
