Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ಊಟದೊಂದಿಗೆ ಅದ್ಭುತ ರುಚಿಯ ಕ್ಯಾರೆಟ್ ಉಪ್ಪಿನಕಾಯಿ ಮಾಡಿ! 10 ನಿಮಿಷದಲ್ಲಿ ರೆಡಿ!
ನೀವು ಮಧ್ಯಾಹ್ನದ ಊಟ ಇಲ್ಲವೆ ರಾತ್ರಿ ಊಟದೊಂದಿಗೆ ಸವಿಯಲು ರುಚಿ ರುಚಿಯಾದ ಖಾದ್ಯಗಳ ಮಾಡಿರುತ್ತಿರಿ. ಚಟ್ನಿ, ಪಲ್ಯ, ಗ್ರೇವಿ, ಹಪ್ಪಳ, ಮೆಣಸು, ಹೀಗೆ ಹತ್ತಾರು ಬಗೆಯ ಖಾದ್ಯಗಳಿರುವುದು ಸಾಮಾನ್ಯ. ಅದರ ಜೊತೆಗೆ ಬಹಿತೇಕ ಮಂದಿ ಉಪ್ಪಿನಕಾಯಿ ಬಳಸುತ್ತಾರೆ. ಊಟದೊಂದಿಗೆ ಯಾವುದಾದರು ಉಪ್ಪಿನಕಾಯಿ ಇದ್ದರೆ ಆ ಊಟದ ರುಚಿ ದುಪ್ಪಟ್ಟಾಗೋದು ನೋಡಬಹುದು.
ಉಪ್ಪಿನಕಾಯಿಯಲ್ಲೂ ಈಗ ಹತ್ತಾರು ಬಗೆಗಳು ಬಂದಿವೆ. ಮಾರುಕಟ್ಟೆಯಲ್ಲಿ ಹಲವು ರೀತಿ ಉಪ್ಪಿನಕಾಯಿ ಸಿಗುತ್ತದೆ. ಅದ್ರಲ್ಲೂ ನಾನ್ ವೆಜ್ ಉಪ್ಪಿನಕಾಯಿಗಳು ಸಹ ಗಮನ ಸೆಳೆಯುತ್ತವೆ, ಮಾವಿನಕಾಯಿ ಉಪ್ಪಿನಕಾಯಿ, ನಿಂಬೆ ಕಾಯಿ, ತರಕಾರಿ ಬಳಸಿ ಮಾಡುವ ಉಪ್ಪಿನಕಾಯಿಗಳು ಬಹಳ ಫೇಮಸ್ ಆಗಿವೆ.

ಆದ್ರೆ ನಾವಿಂದು ವಿಶೇಷ ರೀತಿಯಲ್ಲಿ ಮನೆಯಲ್ಲೇ ಕುಳಿತು ಸುಲಭದ ಕ್ಯಾರೆಟ್ ಉಪ್ಪಿನಕಾಯಿ ಮಾಡುವ ಕುರಿತಾಗಿ ತಿಳಿದುಕೊಳ್ಳೋಣ. ಕ್ಯಾರೆಟ್ ಬಳಸಿ ಮಾಡುವ ಹಲವು ಖಾದ್ಯಗಳ ಪೈಕಿ ಈ ಉಪ್ಪಿನಕಾಯಿ ಬಹಳ ರುಚಿ ನೀಡಲಿದೆ. ಅದ್ರಲ್ಲೂ ಉಪ್ಪಿನಕಾಯಿ ಮಾಡಿ ಸವಿದರೆ ಊಟದೊಂದಿಗೆ ರುಚಿ ದುಪ್ಪಟ್ಟಾಗಲಿದೆ.
ಹಾಗಾದ್ರೆ ಈ ಕ್ಯಾರೆಟ್ ಉಪ್ಪಿನಕಾಯಿ ಮಾಡುವುದು ಹೇಗೆ?, ಮಾಡಲು ಯಾವೆಲ್ಲಾ ಪದಾರ್ಥ ಬೇಕು?, ಮಾಡುವ ವಿಧಾನವೇನು ಎಂಬುದನ್ನು ತಿಳಿದುಕೊಳ್ಳೋಣ.
ಕ್ಯಾರೆಟ್ ಉಪ್ಪಿನಕಾಯಿ ಮಾಡಲು ಯಾವೆಲ್ಲಾ ವಸ್ತುಗಳು ಬೇಕು?
ಕ್ಯಾರೆಟ್
ಖಾರದ ಪುಡಿ
ಒಣ ಮೆಣಸು
ಸಾಸಿವೆ
ಜೀರಿಗೆ
ಮೆಂತ್ಯಕಾಳು
ಇಂಗು
ಕರಿಬೇವು
ಅರಶಿಣ
ಎಣ್ಣೆ
ಉಪ್ಪು
ಕ್ಯಾರೆಟ್ ಉಪ್ಪಿನಕಾಯಿ ಮಾಡುವ ಸುಲಭದ ವಿಧಾನ
ಮೊದಲು ಕ್ಯಾರೆಟ್ ಅನ್ನು ತೊಳೆದು ಸಿಪ್ಪೆ ತೆಗೆದುಕೊಂಡು ಸಣ್ಣದಾಗಿ ಹೆಚ್ಚಿಟ್ಟುಕೊಳ್ಳಿ. ನಂತರ ಹೆಚ್ಚಿದ ಈ ಕ್ಯಾರೆಟ್ಗೆ 1 ಸ್ಪೂನ್ ಉಪ್ಪು ಹಾಕಿಟ್ಟುಕೊಳ್ಳಿ. ಅನಂತರ ಒಂದು ನಿಂಬೆಹಣ್ಣನ್ನು ಕತ್ತರಿಸಿ ಅದರ ರಸವನ್ನು ಹಿಂಡಿ ಈ ಕ್ಯಾರೆಟ್ಗೆ ಹಾಕಿ ಮಿಶ್ರಣ ಮಾಡಿಕೊಳ್ಳಿ.
ಅನಂತರ ಒಲೆ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ಒಂದು ಚಮಚ ಸಾಸಿವೆ, ಜೀರಿಗೆ, ಮೆಂತ್ಯ ಕಾಳು ಹಾಕಿ ಹುರಿದುಕೊಳ್ಳಿ. ನಂತರ ಎಲ್ಲಾ ಪದಾರ್ಥ ತೆಗೆದು ಒಂದು ಬೌಲ್ಗೆ ಹಾಕಿಟ್ಟುಕೊಳ್ಳಿ.
ಈಗ ಅದೇ ಬಾಣಲೆಗೆ ಒಣ ಮೆಣಸು ಹಾಕಿ ಗರಿ ಗರಿಯಾಗಿ ಹುರಿದುಕೊಳ್ಳಿ. ಈಗ ಒಂದು ಮಿಕ್ಸಿ ಜಾರ್ ತೆಗೆದುಕೊಂಡು ಹುರಿದ ಒಣ ಮೆಣಸು ಹಾಗೆ ಮೊದಲು ಹುರಿದುಕೊಂಡಿದ್ದ ಎಲ್ಲಾ ಪದಾರ್ಥಗನ್ನು ಸಹ ಇದಕ್ಕೆ ಹಾಕಿಕೊಂಡು ನುಣ್ಣಗೆ ಪುಡಿ ಮಾಡಿಕೊಳ್ಳಬೇಕು. ಹೀಗೆ ಪುಡಿ ಮಾಡಿದ ಬಳಿಕ ಅದನ್ನು ಕ್ಯಾರೆಟ್ ಹಾಕಿರುವ ಪಾತ್ರೆಗೆ ಹಾಕಿಕೊಳ್ಳಬೇಕು.
ಈಗ ಮತ್ತೆ ಒಲೆ ಮೇಲೆ ಬಾಣಲೆ ಇಟ್ಟು ಎಣ್ಣೆ ಹಾಕಿ ಬಳಿಕ ಸಾಸಿವೆ, ಅರಶಿಣ, ಇಂಗು, ಕರಿಬೇವು ಹಾಕಿ ಸಣ್ಣ ಒಗ್ಗರಣೆ ಮಾಡಿಕೊಂಡು ಈ ಉಪ್ಪಿನಕಾಯಿಗೆ ಸೇರಿಸಿ ಮತ್ತೆ ಮಿಕ್ಸ್ ಮಾಡಿಕೊಂಡರೆ ನಿಮ್ಮ ಮುಂದೆ ರುಚಿ ರುಚಿಯಾದ ಕ್ಯಾರೆಟ್ ಉಪ್ಪಿನಕಾಯಿ ಸಿದ್ದವಾಗುತ್ತೆ. ನೀವು ಕೂಡ ಮನೆಯಲ್ಲಿ ಇದನ್ನು ಮಾಡಿ ಸವಿದು ನೋಡಿ. ಹಲವು ದಿನಗಳ ಕಾಲ ಇದನ್ನು ಇಟ್ಟು ಸವಿಯಬಹುದು. ಹಾಗೆ ಇದೇ ವಿಧಾನ ಬಳಸಿ ನೀವು ಹಲವು ತರಕಾರಿಗಳಿಂದಲೂ ಉಪ್ಪಿನಕಾಯಿ ಮಾಡಿ ಸವಿಯಬಹುದು.



Click it and Unblock the Notifications
