Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಬೆಳಗ್ಗೆ ತಿಂಡಿಗೆ ಕ್ಯಾಬೇಜ್ ರೈಸ್ ಮಾಡಿ..! 10 ನಿಮಿಷ ಸಾಕು..!
ನೀವು ಬೆಳಗ್ಗೆ ಸಮಯದಲ್ಲಿ ರೈಸ್‌ನಿಂದ ಮಾಡಿದ ಯಾವುದಾದರು ಖಾದ್ಯ ಸವಿಯಲು ಇಷ್ಟಪಟ್ಟರೆ ನೀವು ಪಲಾವ್, ಪುಳಿಯೋಗರೆ, ಚಿತ್ರಾನ್ನ, ರೈಸ್ ಬಾತ್ ಸೇರಿದಂತೆ ಹಲವು ಬಗೆಯ ಅನ್ನದಿಂದ ಮಾಡಿದ ಖಾದ್ಯಗಳ ಸವಿಯಲು ಮುಂದಾಗುತ್ತೀರಿ. ಹಾಗೆ ರೈಸ್‌ನಿಂದ ಮಾಡುವ ಎಲ್ಲಾ ಖಾದ್ಯಗಳು ಕೂಡ ರುಚಿ ರುಚಿಯಾಗಿರುವುದು ನೋಡಬಹುದು.
ಇನ್ನು ವಿಶೇಷ ರೀತಿಯಲ್ಲಿ ತರಕಾರಿಗಳ ಬಳಸಿ ಮಾಡುವಂತಹ ಒಂದಿಷ್ಟು ಖಾದ್ಯಗಳನ್ನು ಕೂಡ ಸವಿಯಬಹುದು. ಅದರಲ್ಲಿ ನಾವಿಂದು ಈ ಕ್ಯಾಬೇಜ್‌ನಿಂದ ಮಾಡುವ ರೈಸ್ ಕುರಿತಾಗಿ ತಿಳಿದುಕೊಳ್ಳೋಣ. ನೀವು ಕೋಸನ್ನು ಬಳಸಿ ಮಾಡುವ ಪಲ್ಯ ಸವಿದಿರುತ್ತೀರಿ. ಬೇಳೆ ಕಾಳುಗಳ ಸೇರಿಸಿ ಈ ಕೋಸಿನ ಪಲ್ಯ ಮಾಡಿದ್ರೆ ಎಲ್ಲರಿಗೂ ಇಷ್ಟವಾಗುತ್ತೆ.

ಆದ್ರೆ ಎಂದಾದರು ಈ ಕೋಸಿನಿಂದ ಮಾಡುವ ರೈಸ್ ರೆಸಿಪಿ ಸವಿದಿದ್ದೀಾ?, ಹೌದು ಕ್ಯಾಬೇಜ್ ಬಳಸಿ ಮಾಡುವಂತಹ ರೈಸ್ ರೆಸಿಪಿ ಸವಿಯಲು ಬಹಳ ರುಚಿಕರವಾಗಿಯೂ ಹಾಗೆ ಸುಲಭವಾಗಿಯೂ ಮಾಡಬಹುದಾದ ಒಂದು ರೆಸಿಪಿಯಾಗಿದೆ. ಹಾಗಾದ್ರೆ ನಾವಿಂದು ಬೆಳಗ್ಗೆ ತಿಂಡಿಗೆ ಈ ಕ್ಯಾಬೇಜ್ ರೈಸ್ ಮಾಡುವ ಕುರಿತಾಗಿ ತಿಳಿದುಕೊಳ್ಳೋಣ.
ತಿಂಡಿಗೆ ಕ್ಯಾಬೇಜ್ ರೈಸ್ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವ ವಿಧಾನವೇನು? ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಕ್ಯಾಬೇಜ್ ರೈಸ್ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?
- ಕೋಸು
- ಅನ್ನ
- ಹಸಿ ಮೆಣಸು
- ಜೀರಿಗೆ ಪುಡಿ
- ಕಸೂರಿ ಮೇಥಿ
- ಶುಂಠಿ ಬೆಳ್ಳುಳ್ಳಿ ಪೇಸ್ಟ್
- ಎಣ್ಣೆ
- ಅರಶಿಣ ಪುಡಿ
- ಈರುಳ್ಳಿ
- ಧನಿಯ
- ಗರಂ ಮಸಾಲೆ
- ಹಸಿ ಬಟಾಣಿ (ಇದ್ದರೆ ಬಳಸಿ)
- ಮೆಂತ್ಯ ಸೊಪ್ಪು
- ಖಾರದ ಪುಡಿ
- ಉಪ್ಪು
- ಕೊತ್ತಂಬರಿ ಸೊಪ್ಪು
ಕ್ಯಾಬೇಜ್ ರೈಸ್ ಮಾಡುವ ವಿಧಾನವೇನು?
ಒಲೆ ಮೇಲೆ ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಅಥವಾ ತುಪ್ಪ ಹಾಕಿಕೊಂಡು ಬಿಸಿ ಮಾಡಿ ಬಳಿಕ ಜೀರಿಗೆ, ಈರುಳ್ಳಿ, ಹಸಿ ಮೆಣಸು, ಹಾಕಿಕೊಂಡು ಫ್ರೈ ಮಾಡಿಕೊಳ್ಳಿ. ಬಳಿಕ ಕಸೂರಿ ಮಥಿ, ಶುಂಠಿ ಬೆಳ್ಳುಳ್ಳಿ ಪೇಸ್ಟ್ ಕೂಡ ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ. ಅರ್ಧ ನಿಮಿಷ ಬಿಟ್ಟು ಈಗ ಹೆಚ್ಚಿಕೊಂಡಿರುವ ಕೋಸನ್ನು ಹಾಕಿಕೊಳ್ಳಿ.
ಈಗ ಹಸಿ ಬಟಾಣಿ ಹಾಕಿ 4 ನಿಮಿಷಗಳ ಕಾಲ ಚೆನ್ನಾಗಿ ಫ್ರೈ ಮಾಡಿಕೊಳ್ಳಿ. ಈಗ ಜೀರಿಗೆ ಪುಡಿ, ಖಾರದ ಪುಡಿ, ಅರಶಿಣ, ಧನಿಯ ಪುಡಿ ಹಾಕಿ 1 ನಿಮಿಷ ಫ್ರೈ ಮಾಡಿ. ಈಗ ಉಪ್ಪು ಸಹ ಹಾಕಿಕೊಳ್ಳಿ. ನಂತರ ಚೆನ್ನಾಗಿ ಮಿಕ್ಸ್ ಮಾಡುತ್ತಾ ಇರಿ. ಹಾಗೆ ಮೆಣಸಿನ ಪುಡಿ, ಸೋಯಾ ಸಾಸ್ ಅಥವ ಹುಣಸೆ ಹುಳಿಯನ್ನು ಹಾಕಿಕೊಂಡು ಮತ್ತೆ ಮಿಕ್ಸ್ ಮಾಡಿಕೊಳ್ಳಿ.
ಈಗ ಉರಿ ಸಣ್ಣಗೆ ಇಟ್ಟುಕೊಂಡು ಮೊದಲೇ ಮಾಡಿಟ್ಟಿರುವ ಅನ್ನವನ್ನು ಹುಡಿ ಹುಡಿಯಾಗಿ ಮಾಡಿಕೊಂಡು ಬಾಣಲೆಗೆ ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಹಾಗೆ ಕೊತ್ತಂಬರಿ ಸೊಪ್ಪು ಇದ್ದರೆ ಹಾಕಿಕೊಂಡು ಮತ್ತೆ ಮಿಕ್ಸ್ ಮಾಡಿಕೊಳ್ಳಿ. ಹಾಗೆ ನಿಮ್ಮಲ್ಲಿ ಮೊಟ್ಟೆ ಇದ್ದರೆ ಒಂದು ಮೊಟ್ಟೆ ಕೂಡ ಇದಕ್ಕೆ ಒಡೆದು ಹಾಕಿಕೊಳ್ಳಬಹುದು. ಇದರಿಂದ ಈ ರೈಸ್‌ನ ರುಚಿ ದುಪ್ಪಟ್ಟಾಗುತ್ತೆ. ಇಲ್ಲದಿದ್ದರೂ ಶುದ್ದ ಸಸ್ಯಹಾರಿ ಖಾದ್ಯವಾಗಿಯೂ ಮಾಡಿಕೊಳ್ಳಬಹುದು.
ನೀವು ಈ ರೈಸ್ ಜೊತೆಗೆ ಮೊದಲು ಕ್ಯಾಪ್ಸಿಕಂ, ಕ್ಯಾರೆಟ್ ಕೂಡ ಹಾಕಿಕೊಳ್ಳಬಹುದು. ಅನ್ನ ಹಾಕಿದ ಬಳಿಕ 1 ನಿಮಿಷ ಬಿಸಿ ಮಾಡಿಕೊಂಡರೆ ಸಾಕು. ಇಷ್ಟಾದರೆ ನಿಮ್ಮ ಮುಂದೆ ರುಚಿ ರುಚಿಯ ಕ್ಯಾಬೇಜ್ ರೈಸ್ ರೆಡಿಯಾಗುತ್ತೆ. ಬೆಳಗ್ಗೆ ತಿಂಡಿಗೆ ಇದು ಅದ್ಭುತ ರುಚಿ ನೀಡಲಿದೆ. ನೀವು ಸಹ ಇದನ್ನೊಮ್ಮೆ ಮನೆಯಲ್ಲಿ ಟ್ರೈ ಮಾಡಿ.



Click it and Unblock the Notifications
