Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ಒಂದು ಗ್ಲಾಸ್ ಮಜ್ಜಿಗೆ ಇದ್ರೆ ರುಚಿ ರುಚಿಯ ಇಡ್ಲಿ ಮಾಡಿ! ಇಲ್ಲಿದೆ ವಿಭಿನ್ನ ರೆಸಿಪಿ
ಇಡ್ಲಿ ಅಂದ್ರೆ ಎಲ್ಲರಿಗೂ ಇಷ್ಟವಾಗುವ ತಿಂಡಿ. ಬೆಳಗ್ಗೆ ಈ ಇಡ್ಲಿ ಸವಿಯುವುದು ಇಡೀ ದಿನ ಚಟುವಟಿಕೆಯಿಂದ ಇರಲು ಸಹಾಯ ಮಾಡಲಿದೆ. ಇಡ್ಲಿಯಲ್ಲಿನ ಹೆಚ್ಚು ಫೈಬರ್ ಅಂಶ ಇರಲಿದೆ. ಹಾಗೆ ಕಡಿಮೆ ಎಣ್ಣೆಯನ್ನು ಬಳಸಿಕೊಂಡು ಮಾಡುವುದರಿಂದ ಎಲ್ಲರ ಆರೋಗ್ಯದ ದೃಷ್ಟಿಯಿಂದಲೂ ಸಹ ಇದು ಬಹಳ ಉತ್ತಮವಾಗಿದೆ. ಬೆಳಗ್ಗೆ ತಿಂಡಿಗೆ ವಿವಿಧ ಬಗೆಯ ಇಡ್ಲಿ ತಿನಿಸನ್ನು ಸವಿದಿರುತ್ತೀರಿ.
ಇಡ್ಲಿಯಲ್ಲೂ ಹತ್ತಾರು ಬಗೆಗಳಿವೆ. ತಟ್ಟೆ ಇಡ್ಲಿ, ಕಪ್ ಇಡ್ಲಿ, ಮಲ್ಲಿಗೆ ಇಡ್ಲಿ, ಹತ್ತಿಯಂತಹ ಮೃದುವಾದ ರವೆ ಇಡ್ಲಿ ಸೇರಿ ಹಲವು ಬಗೆಯಲ್ಲಿ ಇಡ್ಲಿ ಮಾಡಬಹುದು. ಹಾಗೆ ಸಿರಿ ಧಾನ್ಯಗಳ ಬಳಸಿಕೊಂಡು ಮಾಡುವ ಇಡ್ಲಿಗಳು ಕೂಡ ಎಲ್ಲರಿಗೂ ಇಷ್ಟವಾಗುವ ರೆಸಿಪಿಗಳಲ್ಲಿ ಒಂದಾಗಿವೆ. ಹಾಗೆ ನಾವಿಂದು ಇಡ್ಲಿಗಳಲ್ಲಿ ವಿಶೇಷ ರೀತಿಯಲ್ಲಿ ಮಾಡುವ ಹೊಸ ರೀತಿ ಇಡ್ಲಿ ಕುರಿತು ತಿಳಿದುಕೊಳ್ಳೋಣ.
ಇಡ್ಲಿ ಮಾಡುವ ಹಲವು ವಿಧಾನದಲ್ಲಿ ನಾವಿಂದು ಮಜ್ಜಿಗೆ ಇಡ್ಲಿ ಮಾಡುವ ಕುರಿತಾಗಿ ತಿಳಿದುಕೊಳ್ಳೋಣ. ಮಜ್ಜಿಗೆ ಇಡ್ಲಿ ಮೃದುವಾಗಿ ಹಾಗೆ ರುಚಿ ರುಚಿಯಾಗಿ ಇರಲಿದೆ. ಹೀಗಾಗಿ ಸುಲಭವಾಗಿ ಮಾಡಬಹುದಾದ ಮತ್ತು ಎಲ್ಲರಿಗೂ ಇಷ್ಟವಾಗುವಂತಹ ಈ ವಿಶೇಷ ರುಚಿಯ ಇಡ್ಲಿ ಮಾಡುವ ಕುರಿತು ತಿಳಿಯೋಣ. ಮಜ್ಜಿಗೆ ಇಡ್ಲಿ ಮಾಡಲು ಯಾವೆಲ್ಲಾ ವಸ್ತುಗಳು ಬೇಕು? ಮಾಡುವ ವಿಧಾನವೇನು?, ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಲ್ಲಿ ತಿಳಿದುಕೊಳ್ಳೋಣ.
ಮಜ್ಜಿಗೆ ಇಡ್ಲಿ ಮಾಡಲು ಯಾವೆಲ್ಲಾ ವಸ್ತುಗಳು ಬೇಕು?
- ರವೆ
- ಮಜ್ಜಿಗೆ
- ಅವಲಕ್ಕಿ
- ಸೋಡಾ
- ಉಪ್ಪು
- ಎಣ್ಣೆ
ಮಜ್ಜಿಗೆ ಇಡ್ಲಿ ಮಾಡುವ ವಿಧಾನವೇನು?
ಮೊದಲು ಎರಡು ಕಪ್ ರವೆ ಹಾಗೂ ಮುಕ್ಕಾಲು ಕಪ್ ಅವಲಕ್ಕಿ, 1 ಕಪ್ ಮಜ್ಜಿಗೆ ತೆಗೆದುಕೊಳ್ಳಿ. ಮೊದಲಿಗೆ ಈ ಅವಲಕ್ಕಿಯನ್ನ ಒಂದು ಮಿಕ್ಸಿ ಜಾರ್‌ಗೆ ಹಾಕಿ ಪುಡಿ ಮಾಡಿಕೊಳ್ಳಿ. ಇದನ್ನು ಒಂದು ಬೌಲ್‌ಗೆ ಹಾಕಿಡಿ. ಈಗ ಎರಡು ಕಪ್ ರವೆಗೆ ಅದಕ್ಕೆ ಅವಲಕ್ಕಿ ಪುಡಿಯನ್ನು ಸೇರಿಸಿ. ಈಗ ಒಂದು ಕಪ್ ಮಜ್ಜಿಗೆಯನ್ನು ಸ್ವಲ್ಪ ಸ್ವಲ್ಪ ಹಾಕಿಕೊಳ್ಳುತ್ತಾ ಮಿಕ್ಸ್ ಮಾಡುತ್ತಾ ಇರಿ.
ಇಡ್ಲಿ ಹಿಟ್ಟಿನ ಹದಕ್ಕೆ ಬರುವರೆಗೂ ಮಿಕ್ಸ್ ಮಾಡಿ. 1 ಕಪ್ ಮಜ್ಜಿಗೆ ಹಾಕಿದ ಬಳಿಕ ಗಟ್ಟಿಯಾಗಿರುವ ಹಿಟ್ಟಿಗೆ ನೀರು ಹಾಕಿ ಹದ ಮಾಡಿ. ಇಡ್ಲಿ ಹಿಟ್ಟಿನದ ಹದಕ್ಕೆ ಇದು ಬರಬೇಕು. ಹಾಗೆ ಇದಕ್ಕೆ ರುಚಿಗೆ ತಕ್ಕಷ್ಟು ಉಪ್ಪು, ಚಿಟಿಕೆ ಅಡುಗೆ ಸೋಡಾ, ನಿಂಬೆ ರಸ ಬೇಕಿದ್ದರೆ ಹಿಂಡಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು. ನಂತರ ಇದಕ್ಕೆ ಮುಚ್ಚಳ ಮುಚ್ಚಿ 10 ನಿಮಿಷ ಆದರೂ ಹಾಗೆ ಬಿಡಿ.
ಮತ್ತೆ ಮುಚ್ಚಳ ತೆಗೆದು ನೋಡಿ. ಇದು ಗಟ್ಟಿಯಾಗಿದ್ದರೆ ಮತ್ತೆ ಸ್ವಲ್ಪ ನೀರು ಹಾಕಿ ಮಿಕ್ಸ್ ಮಾಡಿ. ಇದು ಇಡ್ಲಿ ಹಿಟ್ಟಿನ ಹದಕ್ಕೆ ಬಂದಿರಬೇಕು. ಈಗ ಇಡ್ಲಿ ಅಚ್ಚುಗಳಿಗೆ ಎಣ್ಣೆ ಸವರಿಕೊಂಡು ನಿಧಾನವಾಗಿ ಇಡ್ಲಿ ಹಿಟ್ಟು ಹಾಕಿಕೊಳ್ಳಿ. ಆದ್ರೆ ಇಡ್ಲಿ ಕುಕ್ಕರ್ ಒಲೆ ಮೇಲೆ ಇಟ್ಟ ಅದು ಬಿಸಿಯಾದ ಬಳಿಕ ಈ ಇಡ್ಲಿ ಅಚ್ಚುಗಳನ್ನು ಅದರೊಳಗೆ ಇಡಬೇಕು. ಅನಂತರ 12ರಿಂದ 15 ನಿಮಿಷ ಬೇಯಿಸಿಕೊಂಡರೆ ಸಾಕಾಗುತ್ತದೆ. ನೀವು ಸಹ ಒಮ್ಮೆ ಮನೆಯಲ್ಲಿ ಈ ರೀತಿಯಾಗಿ ಇಡ್ಲಿ ಮಾಡಿ ಸವಿದು ನೋಡಿ.
ಇದು ಬಹಳ ಮೃದುವಾಗಿ ಬರಲಿದೆ. ಈ ಇಡ್ಲಿ ಮಾಡಲು ಹಿಂದಿನ ದಿನ ಹಿಟ್ಟು ಮಾಡಿಕೊಳ್ಳಬೇಕು ಎಂಬುದಿಲ್ಲ. ಥಟ್ ಅಂತ ಈ ಇಡ್ಲಿ ಮಾಡಿ ಸವಿಯಬಹುದು. ನೀವು ಸಹ ಮನೆಯಲ್ಲಿ ಈ ಇಡ್ಲಿ ಮಾಡಿ ಸವಿದು ನೋಡಿ.
ಹಾಗೆ ಅರ್ಧ ಗಂಟೆಯಲ್ಲಿ ರವೆ ಇಡ್ಲಿ ಮಾಡುವ ವಿಧಾನ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ



Click it and Unblock the Notifications

