Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
5 ನಿಮಿಷಕ್ಕೆ ಬಿಸಿ ಬೇಳೆ ಬಾತ್ ಬೇಕಾ? ಈ ರೀತಿ ಮಸಾಲ ಪುಡಿ ಮಾಡಿಟ್ಟುಕೊಳ್ಳಿ!
ನೀವು ಮನೆಯಲ್ಲಿ ಇದ್ದಾಗ ಬೆಳಗ್ಗೆ ತಿಂಡಿಗೆ ಹಾಗೆ ಊಟದೊಂದಿಗೆ ಕೂಡ ಸವಿಯಲು ಹಲವು ಬಗೆಯ ಖಾದ್ಯಗಳ ಮಾಡುತ್ತೀರಿ. ಅದ್ರಲ್ಲೂ ಬೆಳಗ್ಗೆ ತಿಂಡಿ ಮಾಡುವುದು ಬಹಳ ತ್ರಾಸದಾಯಕ ಕೆಲಸ ಎಂದುಕೊಳ್ಳುವವರು ಹೆಚ್ಚು, ಬೆಳಗ್ಗೆ ತಿಂಡಿಗೆ ರುಚಿ ರುಚಿಯಾದ ರೈಸ್ನಿಂದ ಮಾಡಿದ ಖಾದ್ಯಗಳ ಸವಿಯೋಕೆ ಇಷ್ಟಪಡುವವರು ಹೆಚ್ಚು ಮಂದಿ ಸಿಗಬಹುದು. ಅವರಿಗೆ ಪಲಾವ್, ಚಿತ್ರಾನ್ನ, ರೈಸ್ ಬಾತ್, ಪುಳಿಯೋಗರೆ, ಫ್ರೈಡ್ ರೈಸ್, ಮಸಾಲ ರೈಸ್ಗಳು ಹೀಗೆ ಅನ್ನದಿಂದ ಮಾಡಿದ ಯಾವುದಾದರು ತಿಂಡಿ ಇಷ್ಟಪಡುತ್ತಾರೆ.
ಹಾಗೆ ಹೋಟೆಲ್ ಕ್ಯಾಂಟೀನ್ಗಳಿಗೆ ಭೇಟಿ ನೀಡಿದಾಗಲು ಅವರು ರೈಸ್ನಿಂದ ಮಾಡುವ ತಿಂಡಿಯನ್ನೇ ಸವಿಯಲು ಇಷ್ಟಪಡೋದು ನೋಡಬಹುದು. ಅದ್ರಲ್ಲಿ ಬಹಳಷ್ಟು ಜನರಿಗೆ ಇಷ್ಟವಾಗುವ ಸಿಬಿ ಬೇಳೆ ಬಾತ್ ಕೂಡ ಬಾಯಲ್ಲಿ ನೀರು ತರಿಸುವ ಖಾದ್ಯ. ಬೆಳಗ್ಗೆ ತಿಂಡಿಯ ಸಮಯಕ್ಕೆ ಬಿಸಿ ಬಿಸಿಯಾದ ಈ ಬೇಳೆ ಬಾತ್ ಅನ್ನು ಖಾರದ ಜೊತೆಗೆ ಸವಿಯಲು ನೀಡಿದರೆ ಎಲ್ಲರೂ ಇಷ್ಟಪಡುತ್ತಾರೆ.

ಇನ್ನು ಉಡುಪಿ ಹೋಟೆಲ್ ಸ್ಟೈಲ್ನಲ್ಲಿ ಘಮ ಘಮಿಸುವ ಬಿಸಿ ಬೇಳೆ ಬಾತ್ ನೀವು ಒಮ್ಮೆ ಸವಿದರೆ ಯಾವಾಗಲು ಇದನ್ನೇ ಮಾಡಿ ಸವಿಯಲು ಮುಂದಾಗೋದು ಖಚಿತ. ಆದ್ರೆ ಬಿಸಿ ಬೇಳೆ ಬಾತ್ ಮಾಡುವ ಕುರಿತಾಗಿ ಹಲವರಿಗೆ ತಿಳಿದಿರುವುದಿಲ್ಲ. ಮಾರುಕಟ್ಟೆಯಲ್ಲಿ ಸಿಗುವ ಬೇಳೆ ಬಾತ್ ಮಸಾಲ ತಂದು ಮಾಡಿಕೊಳ್ಳುತ್ತಾರೆ. ಆದ್ರೆ ಮನೆಯಲ್ಲೇ ನೀವು ಈ ಬಿಸಿ ಬೇಳೆ ಬಾತ್ ಮಸಾಲ ಪುಡಿ ಮಾಡಿಕೊಂಡಿದ್ದರೆ 5 ನಿಮಿಷದಲ್ಲಿ ಬೇಳೆ ಬಾತ್ ಮಾಡಿ ಸವಿಯಬಹುದು.
ಹೀಗಾಗಿ ನಾವಿಂದು ಈ ಬಿಸಿ ಬೇಳೆ ಬಾತ್ ಮಸಾಲ ಪುಡಿ ಮಾಡುವ ವಿಧಾನ ಕುರಿತು ತಿಳಿಯೋಣ. ಈ ಬಿಸಿ ಬೇಳೆ ಬಾತ್ ಪುಡಿ ಮಾಡಲು ಯಾವೆಲ್ಲಾ ವಸ್ತುಗಳು ಬೇಕು? ಯಾವ ಪ್ರಮಾಣದಲ್ಲಿ ಮಸಾಲೆ ಬಳಸಬೇಕು ಎಂಬೆಲ್ಲಾ ಕುರಿತಾಗಿ ನಾವಿಲ್ಲಿ ತಿಳಿದುಕೊಳ್ಳೋಣ.
ಬಿಸಿ ಬೇಳೆ ಬಾತ್ಗೆ ಮಸಾಲ ಪುಡಿ ಮಾಡಲು ಅಗತ್ಯ ವಸ್ತುಗಳು
- ಇಂಗು
- ಮೆಂತ್ಯ
- ಕಾಳು ಮೆಣಸು
- ಏಲಕ್ಕಿ
- ಲವಂಗ
- ಚಕ್ಕೆ
- ಜೀರಿಗೆ
- ಧನಿಯಾ ಕಾಳು
- ಗಸೆಗಸೆ
- ಕೊಬ್ಬರಿ ತುರಿ
- ಅರಶಿಣ
- ಒಣ ಮೆಣಸು
- ಎಣ್ಣೆ
- ಕರಿಬೇವು
ಬಿಸಿ ಬೇಳೆ ಬಾತ್ಗೆ ಮಸಾಲ ಪುಡಿ ಮಾಡುವ ವಿಧಾನವೇನು?
ಮೊದಲು ಒಂದು ಬಾಣಲೆ ಒಲೆ ಮೇಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿಕೊಂಡು ಬಿಸಿಯಾಗಲು ಬಿಡಿ. ಅನಂತರ ಇದಕ್ಕೆ ಇಂಗು, ಮೆಂತ್ಯ ಕಾಳು, ಕಾಳು ಮೆಣಸು ಹಾಕಿ ಹುರಿದುಕೊಳ್ಳಬೇಕು. ಅನಂತರ ಕಾಲು ಕಪ್ ಕಡಲೆ ಬೇಳೆ ಕಮತ್ತು ಉದ್ದಿನ ಬೇಳೆ ಸಮಾನ ಪ್ರಮಾಣದಲ್ಲಿ ಹಾಕಿ ಫ್ರೈ ಮಾಡಿಕೊಳ್ಳಬೇಕು. ಸಣ್ಣ ಉರಿಯಲ್ಲಿ 2 ನಿಮಿಷ ಹುರಿದುಕೊಳ್ಳಿ.
ಈಗ ಗರಂ ಚಕ್ಕೆ, ಲವಂಗ, ಏಲಕ್ಕಿ ಸಹ ಹಾಕಿ ಹುರಿದುಕೊಳ್ಳಿ. ನಂತರ ಕೊನೆಯಲ್ಲಿ ಜೀರಿಗೆ, ಧನಿಯಾ ಕಾಳು ಸಹ ಹಾಕಿಕೊಂಡು 1 ನಿಮಿಷ ಹುರಿದುಕೊಳ್ಳಿ. ಈಗ ಒಣ ಕೊಬ್ಬರಿ ತುರಿ, 2 ಚಮಚ ಗಸೆಗಸೆ ಹಾಕಿ 1 ನಿಮಿಷ ಹುರಿಯಿರಿ. ನಂತರ ಒಲೆ ಆಫ್ ಮಾಡಿ ಈ ಎಲ್ಲಾ ಪದಾರ್ಥ ತಣ್ಣಗಾಗಲು ಮತ್ತೊಂದು ಪಾತ್ರೆಗೆ ಹಾಕಿಟ್ಟುಕೊಳ್ಳಿ.
ಈಗ ಬಾಣಲೆಯಲ್ಲಿ ಖಾರಕ್ಕೆ ಬೇಕಾದಷ್ಟು ಒಣ ಮೆಣಸು ಸಹ ಹಾಕಿ ಹುರಿದುಕೊಳ್ಳಿ. ಇದರ ಜೊತೆಗೆ ಕರಿಬೇವು 1 ಸ್ಪೂನ್ ಎಣ್ಣೆ ಕೂಡ ಹಾಕಿ ಹುರಿದುಕೊಳ್ಳಿ. ಇಷ್ಟಾದ ಬಳಿಕ ತಣ್ಣಗಾಗಲು ಬಿಡಿ. ಈಗ ಮಿಕ್ಸಿ ಜಾರ್ ತೆಗೆದುಕೊಂಡು ಅದಕ್ಕೆ ಹುರಿದುಕೊಂಡಿರುವ ಪ್ರತಿಯೊಂದು ವಸ್ತುಗಳನ್ನು ಸಹ ಹಾಕಿಕೊಂಡು ಪುಡಿ ಮಾಡಿಕೊಳ್ಳಬಹುದು. ಇಷ್ಟಾದರೆ ನಿಮ್ಮ ಮುಂದೆ ಬಿಸಿ ಬೇಳೆ ಬಾತ್ ಪುಡಿ ಸಿದ್ದವಾಗುತ್ತೆ. ಇದನ್ನು ಬೇಕಾದಾಗ ನೀವು ಬಳಸಬಹುದು.



Click it and Unblock the Notifications
